ನಿಮ್ಮ ರಾತ್ರಿಯ ನಿದ್ರೆಯಲ್ಲಿ ಬೆಳಗಿನ ಜಾವದಲ್ಲಿ ಈ ಕನಸುಗಳನ್ನು ಕಂಡರೆ ಖಚಿತವಾಗಿಯೂ ನಿಮಗೆ ಹಣ ಮಾಡುವ ಯೋಗವಿದೆ ಎಂದೇ ಅರ್ಥ.

ಸ್ವಪ್ನಶಾಸ್ತ್ರಭಾರತದಲ್ಲಿ ಪ್ರಬುದ್ಧವಾಗಿ ಬೆಳೆದಿದೆ. ಪ್ರತಿಯೊಂದು ಪಂಚಾಂಗವೂ ಸಾಮಾನ್ಯವಾಗಿ ಸ್ವಪ್ನಫಲವನ್ನು ವಿವರಿಸುತ್ತದೆ. ಹೆಚ್ಚಾಗಿ ನಮ್ಮ ಕನಸಿನ ಅರ್ಥ ನಮಗೆ ಆಗಿರುವುದಿಲ್ಲ. ಆದರೆ ಪ್ರತೀ ಕನಸಿಗೂ ಅದರದೇ ಅರ್ಥ ಹಾಗೂ ಫಲ ಇರುತ್ತದೆ.

Add Asianetnews Kannada as a Preferred SourcegooglePreferred

ಬಹುತೇಕ ಸಮಯದಲ್ಲಿ ನಾವು ನಿದ್ರೆ ಮಾಡುವಾಗ ಒಂದು ಹಂತದಲ್ಲಿ ಕನಸು ಬೀಳುವುದು ಸಹಜವಾಗಿದೆ. ಕೆಲವು ಮನಸ್ಸಿಗೆ ಮುದ ನೀಡುವ ಕನಸಾಗಿದ್ದರೆ, ಕೆಲವು ಆತಂಕ ಹೆಚ್ಚಿಸುವ ಕನಸೂ ಆಗಿರಬಹುದು. ಹಲವು ಬಾರಿ ಕನಸ್ಸಿನಲ್ಲಿ ಕೆಲವು ವಸ್ತುಗಳನ್ನು ಕಂಡರೆ ಇನ್ನೂ ಕೆಲವು ಬಾರಿ ಕೆಲವು ಘಟನೆಗಳು ಕಣ್ಣ ಮುಂದೆ ಹಾದು ಹೋದಂತೆ ಭಾಸವಾಗುತ್ತದೆ.

ಸ್ವಪ್ನಶಾಸ್ತ್ರದ ಪ್ರಕಾರ, ಪ್ರತಿ ಕನಸಿನಲ್ಲಿ ಕೆಲವು ಚಿಹ್ನೆಗಳು ಅಡಗಿವೆ. ಇದು ಮುಂಬರುವ ಘಟನೆಗಳನ್ನು ಸೂಚಿಸುತ್ತದೆ. ಸ್ವಪ್ನಶಾಸ್ತ್ರದಲ್ಲಿ, ಪ್ರತಿ ಕನಸಿಗೆ ಸಂಬಂಧಿಸಿದ ಅರ್ಥವನ್ನು ಹೇಳಲಾಗಿದೆ. ಇದರಲ್ಲಿ ಹಣದ ಲಾಭ, ಯಶಸ್ಸಿನಂತಹ ಶುಭ ಘಟನೆಗಳನ್ನು ಸೂಚಿಸುವ ಇಂತಹ ಶುಭ ಕನಸುಗಳ ಬಗ್ಗೆಯೂ ತಿಳಿಸಲಾಗಿದೆ.

ಮಹಾಭಾರತ ಯುದ್ಧದಲ್ಲಿ ಹೋರಾಡಿದ ರಾಕ್ಷಸರ ಬಗ್ಗೆ ನಿಮಗೆ ಗೊತ್ತೆ? ...

ಶುಭ ಸ್ವಪ್ನಗಳು :

ಕನಸಿನಲ್ಲಿ ಕುದುರೆ ಸವಾರಿ: ಕನಸ್ಸಿನಲ್ಲಿ ನೀವು ಕುದುರೆ ಸವಾರಿ ಮಾಡುವುದನ್ನು ನೋಡಿದ್ರೆ ನಿಮ್ಮ ಮುಂಬರುವ ಜೀವನವು ತುಂಬಾ ಸಂತೋಷವಾಗುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಕುದುರೆ ವೇಗವಾಗಿ ಓಡುವುದನ್ನು ಕಂಡರೆ ನೀವು ಕೆಲವು ಪ್ರಮುಖ ಕೆಲಸಗಳಲ್ಲಿ ಸುಲಭವಾಗಿ ಯಶಸ್ಸನ್ನು ಪಡೆಯಲಿದ್ದೀರಿ ಎಂದರ್ಥ. ಕನಸಿನಲ್ಲಿ ನೀವು ಕುದುರೆ ಸವಾರಿ ಮಾಡುತ್ತಾ ಇದ್ದರೆ, ಅದು ನಿಮ್ಮ ಲೈಂಗಿಕ ಆಕಾಂಕ್ಷೆಗಳನ್ನು ಸಾಧಿಸುತ್ತೀರಿ ಹಾಗೂ ಹಣ ಮಾಡುವ ಅಭಿಲಾಷೆಯನ್ನು ಪೂರೈಸಿಕೊಳ್ಳುತ್ತೀರಿ ಎಂಬುದಾಗಿದೆ.

ಹೆಡೆ ಬಿಚ್ಚಿದ ಹಾವು : ಕನಸ್ಸಿನಲ್ಲಿ ಹೆಡೆ ಬಿಚ್ಚಿ ತಲೆದೂಗುತ್ತಿರುವ ಹಾವನ್ನು ಕಂಡರೆ ಇದು ಶೀಘ್ರದಲ್ಲೇ ಹಠಾತ್ ಹಣವನ್ನು ಪಡೆಯುವುದನ್ನು ಸೂಚಿಸುತ್ತದೆ. ಮುದುಡಿ ಮಲಗಿದ ಹಾವನ್ನು ಕಂಡರೆ ಹೆಚ್ಚಿನ ಉಪಯೋಗವಿಲ್ಲ. ಹಾಗೂ ಅದು ನಿಮ್ಮ ಲೈಂಗಿ ಕದೌರ್ಬಲ್ಯದ ಸೂಚಕವೂ ಇದ್ದೀತು.

ಹೊಸ ಬಟ್ಟೆಗಳನ್ನು ಧರಿಸುವುದು: ಹೊಸದಾಗಿ ಅಂಗಡಿಯಿಂದ ತಂದ ಬಟ್ಟೆಗಳನ್ನು ಧರಿಸುತ್ತಿದ್ದರೆ, ಅದು ಉತ್ತಮ ಭವಿಷ್ಯವನ್ನು ಸೂಚಿಸುತ್ತದೆ. ಅದರಲ್ಲಿ ಸಂತೋಷ ಮತ್ತು ಸಮೃದ್ಧಿ ಎರಡೂ ಕಂಡುಬರುತ್ತವೆ. ಸ್ವಲ್ಪ ಹಣ ಖರ್ಚಾಗಬಹುದು, ಆದರೆ ಆನಂದ ಖಚಿತ. ದೂರ ಪ್ರಯಾಣ ಮಾಡಬಹುದು.

ಪತಿ-ಪತ್ನಿ ಕಲಹಕ್ಕೆ ವಾಸ್ತು ಕಾರಣ..? ...

ಮರ ಹತ್ತುವುದು: ಕನಸ್ಸಿನಲ್ಲಿ ನೀವು ಮರ ಹತ್ತುತ್ತಿರುವುದನ್ನು ಕಂಡರೆ ಅನಿರೀಕ್ಷಿತ ಮೂಲಗಳಿಂದ ಧನಪ್ರಾಪ್ತಿಯಾಗುವ ಸಂಕೇತವಿದು. ಮರವು ಒಣಗಿರಬಾರದು, ಹಸಿರಾಗಿರಬೇಕು. ಹಾಗೇ ಅದು ಮುಳ್ಳಿನಿಂದ ಕೂಡಿದ ಮರವೂ ಆಗಿರಬಾರದು. ಹುಣಿಸೆ ಮರ ಆಗಿರಬಾರದು. 

ನೃತ್ಯಗಾರ್ತಿ: ಕನಸ್ಸಿನಲ್ಲಿ ಯಾರಾದರೂ ನರ್ತಕಿ ನೃತ್ಯ ಮಾಡುವುದನ್ನು ಕಂಡರೆ ಇದು ಹಣದ ಲಾಭವನ್ನು ಸೂಚಿಸುತ್ತದೆ. ನರ್ತಕಿಯು ನೀವೇ ಆಗಿದ್ದರೆ, ಹೆಚ್ಚಿನ ಧನಲಾಭ ಹಾಗೂ ನೀವು ನರ್ತಕಿಯನ್ನು ನೋಡುತ್ತಿದ್ದರೆ ಅಲ್ಪ ಧನಲಾಭ.

ನೀರನ್ನು ಕುಡಿಯುವುದು ಅಥವಾ ನೀರಿನ ಮೇಲೆ ನಡೆಯುವುದು: ಕನಸ್ಸಿನಲ್ಲಿ ನೀರು ಕುಡಿಯುವ ದೃಶ್ಯವನ್ನು ಕಂಡರೆ ನಿಮ್ಮ ಹಳೆಯ ಬಾಕಿ ಹಣವನ್ನು ಹಿಂತಿರುಗಿಸುವಿರಿ. ಒಂದರ್ಥದಲ್ಲಿ ಸಾಲ ತೀರಿಸುವಿರಿ. ಅದೇ ಸಮಯದಲ್ಲಿ, ಸ್ವತಃ ನೀರಿನ ಮೇಲೆ ನಡೆಯುವುದನ್ನು ನೋಡುವುದರಿಂದ ಉತ್ತಮ ಯಶಸ್ಸಿನ ಅಥವಾ ಸ್ಥಾನವನ್ನು ಸಾಧಿಸುವ ಬಲವಾದ ಯೋಗದ ಸಂಕೇತವಾಗಿರಬಹುದು. ನೀವು ಹಣ ಸಾಲ ಕೊಡುವ ಸ್ಥಿತಿಗೆ ಬರುತ್ತೀರಿ ಎಂಬ ಸಂಕೇತವಿದು.

ಕನಸಿನಲ್ಲಿ ಜೇನುಗೂಡು: ಕನಸ್ಸಿನಲ್ಲಿ ಜೇನುಗೂಡನ್ನು ನೋಡುವುದು ಕೂಡಾ ಆಕಸ್ಮಿಕ ಧನಪ್ರಾಪ್ತಿ ಆಗುವುದನ್ನು ಸೂಚಿಸುತ್ತದೆ.

ಕನಸಿನಲ್ಲಿ ದೇವತೆಯನ್ನು ನೋಡುವುದು: ಕನಸ್ಸಿನಲ್ಲಿ ದೇವತೆಯನ್ನು ಕಾಣುವುದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ. ಇದು ಅಪಾರ ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯುವ ಸಂಕೇತವಾಗಿದೆ.

ಯಾವ ಜನ್ಮರಾಶಿಯವರಿಗೆ ಯಾವ ಥರದ ರೊಮ್ಯಾನ್ಸ್ ಇಷ್ಟ? ...

ಕನಸಿನಲ್ಲಿ ದೀಪವನ್ನು ನೋಡುವುದು: ಕನಸ್ಸಿನಲ್ಲಿ ದೀಪ ಉರಿಯುತ್ತಿರುವುದನ್ನು ಕಂಡರೆ ಇದು ಕೆಲವು ದೊಡ್ಡ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವ ಸಂಕೇತವಾಗಿದೆ. ಈ ಕನಸನ್ನು ಅನೇಕ ವಿಷಯಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ.