ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..!
ನಮಗೆ ಇಷ್ಟವಾಗುವ ಬಣ್ಣ ಒಂದೋ ಎರಡೋ ಇರಬಹುದು. ಆದರೆ, ಆ ಬಣ್ಣ ನಮಗೆ ಒಪ್ಪುತ್ತದೆಯೇ? ಅದೃಷ್ಟ ತಂದುಕೊಡುತ್ತದೆಯೇ? ಎಂಬ ಬಗ್ಗೆ ತಿಳಿದುಕೊಂಡಿರುವುದಿಲ್ಲ. ನಿಮಗೆ ಗೊತ್ತಿರಲಿ ಕೆಲವು ಬಣ್ಣಗಳು ರಾಶಿಚಕ್ರಗಳಿಗನುಸಾರವಾಗಿ ಅದೃಷ್ಟವನ್ನು ತಂದುಕೊಟ್ಟರೆ, ಮತ್ತೆ ಕೆಲವು ಬಣ್ಣಗಳು ದುರದೃಷ್ಟವನ್ನು ಹೊತ್ತು ತರುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಬಣ್ಣಗಳ ಆಯ್ಕೆಯಲ್ಲಿ ತುಸು ಜಾಗ್ರತೆ ವಹಿಸುವುದು ಒಳ್ಳೆಯದು. ಹಾಗಾದರೆ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ ಎಂಬುದರ ಬಗ್ಗೆ ನೋಡೋಣ.
ಒಬ್ಬೊಬ್ಬರಿಗೆ ಒಂದೊಂದು ಫೇವರಿಟ್ ಬಣ್ಣಗಳು ಇರುತ್ತವೆ. ಬಣ್ಣ ಎಂದರೆ ಹಾಗೆ ತಟ್ಟನೆ ಆಕರ್ಷಿಸುವಂತಹ ವಸ್ತು. ಪ್ರತಿ ಬಣ್ಣಗಳಿಗೂ ಅದರದ್ದೇ ಆದ ಶಕ್ತಿಯೂ ಇರುತ್ತದೆ. ಒಬ್ಬರಿಗೆ ಇಷ್ಟವಾದ ಬಣ್ಣ ಮತ್ತೊಬ್ಬರಿಗೆ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದರ ಜೊತೆಗೆ ಒಬ್ಬರಿಗೆ ಒಪ್ಪುವ ಬಣ್ಣ ಮತ್ತೊಬ್ಬರಿಗೆ ಒಪ್ಪುತ್ತದೆ ಎಂಬುದೂ ಅಷ್ಟೇ ಕಷ್ಟ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಣ್ಣದಲ್ಲೂ ಅದೃಷ್ಟ ಇರುತ್ತದೆ.
ಜ್ಯೋತಿಷ್ಯದ ಪ್ರಕಾರ ನಿಮಗೆ ಯಶಸ್ಸು ಬೇಕೆಂದರೆ ನಿಮ್ಮ ರಾಶಿಗೆ ಅನುಸಾರವಾಗಿ ಬಣ್ಣವನ್ನು ಆಯ್ಕೆ ಮಾಡಿಕೊಂಡು ಅದನ್ನು ಪಾಲಿಸಿದರೆ, ಆ ಬಣ್ಣವು ನಿಮಗೆ ಸಕಾರಾತ್ಮಕ ಅಂಶವನ್ನು ತಂದುಕೊಡುವುದಲ್ಲದೆ, ಸಮಸ್ಯೆಗಳನ್ನು ದೂರ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಲಾಗಿದೆ.
ಮೇಷ ರಾಶಿ
ಈ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದ್ದು, ಕೆಂಪು ಬಣ್ಣ ಇವರಿಗೆ ಯಾವಾಗಲೂ ಅದೃಷ್ಟವನ್ನು ತಂದುಕೊಡುತ್ತದೆ. ಕೆಂಪು ಬಣ್ಣವು ನಮ್ಮೊಳಗೆ ಹುದುಗಿರುವ ಶಕ್ತಿಯನ್ನು ಹೊರತರುತ್ತದೆ. ಜೊತೆಗೆ ಬಿಳಿ, ನಿಂಬೆ ಹಸಿರು ಅಥವಾ ಹಸಿರು ಬಣ್ಣವು ಒಪ್ಪಿತವಾಗುತ್ತದೆ.
ವೃಷಭ ರಾಶಿ
ಇದು ಪೃಥ್ವಿ ತತ್ವ ರಾಶಿಯಾಗಿದ್ದು, ಇದರ ಶುಭ ಬಣ್ಣ ಹಸಿರು. ಹಳದಿ ಮತ್ತು ಹಳದಿ ಬಣ್ಣವನ್ನು ಸೇರಿಸಿದರೆ ಬರುವ ಬಣ್ಣ ಶುಭ ತರುತ್ತದೆ. ಕಣ್ಣಿಗೆ ಶಾಂತತೆಯನ್ನು ಕೊಡುವ ಹಸಿರು ಬಣ್ಣ, ಪ್ರಕೃತಿಯ ಪ್ರತೀಕವಾಗಿದೆ. ಆದರೆ, ಇವರು ಮುಖ್ಯವಾಗಿ ಕೆಂಪು ಬಣ್ಣದಿಂದ ದೂರ ಇರಬೇಕು.
ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?
ಮಿಥುನ ರಾಶಿ
ಈ ರಾಶಿಯವರಿಗೆ ಹಳದಿ ಬಣ್ಣ ಶುಭವಾಗಿದೆ. ಇವರು ಬಹಳ ಬುದ್ಧಿವಂತರು ಹಾಗೂ ಸೃಜನಶೀಲರಾಗಿರುತ್ತಾರೆ. ಹಳದಿಯು ಬುದ್ಧಿವಂತಿಕೆ, ಮನಸ್ಸು ಮತ್ತು ಪ್ರೇರಣಾತ್ಮಕ ವಿಚಾರಗಳ ಪ್ರತೀಕವಾಗಿದೆ. ಈ ಬಣ್ಣವನ್ನು ನೀವು ಬಳಸಿದರೆ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಕಾಣುವುದಲ್ಲದೆ, ಸದಾ ಧನಾತ್ಮಕ ಚಿಂತನೆಯನ್ನು ಹೊಂದಿರುತ್ತೀರಿ.
ಕರ್ಕಾಟಕ ರಾಶಿ
ಚಂದ್ರನಿಂದ ಪ್ರಭಾವಿತವಾದ ಈ ರಾಶಿಯವರಿಗೆ ಮಾನಸಿಕ ಸಮಸ್ಯೆ ಸದಾ ಇರುತ್ತದೆ. ಹೀಗಾಗಿ ಇವರಿಗೆ ಬಿಳಿ ಬಣ್ಣ ಹೆಚ್ಚು ಸಹಕಾರಿ. ಇದು ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಶಕ್ತಿಯನ್ನು ಕೊಡುತ್ತದೆ.
ಸಿಂಹ ರಾಶಿ
ಈ ರಾಶಿಯ ಅಧಿಪತಿ ಸೂರ್ಯ ಗ್ರಹವಾಗಿದ್ದು, ಇವರು ಆತ್ಮವಿಶ್ವಾಸದ ಮೇಲೆ ಸಮಾಜದಲ್ಲಿ ಸ್ಥಾನವನ್ನು ಪಡೆದಿರುತ್ತಾರೆ. ತಾಮ್ರ ಇಲ್ಲವೇ ಬಂಗಾರದ ಬಣ್ಣವು ಇವರಿಗೆ ಒಪ್ಪಿತವಾಗುವುದಲ್ಲದೆ, ಭಾಗ್ಯಶಾಲಿಯೂ ಆಗುತ್ತದೆ.
ಕನ್ಯಾ ರಾಶಿ
ಈ ರಾಶಿಯವರಿಗೆ ಅಚ್ಚ ಕಂದು ಹಾಗೂ ನೀಲಿ ಬಣ್ಣಗಳು ಶುಭ ತರುತ್ತವೆ. ಈ ಬಣ್ಣಗಳನ್ನು ಶುಭ ಕಾರ್ಯಗಳ ಸಂದರ್ಭದಲ್ಲಿ ಬಳಸಿದರೆ ಉತ್ತಮ. ಇದು ಆತ್ಮ ವಿಶ್ವಾಸವನ್ನು ತರುವುದಲ್ಲದೆ, ಜೀವನದ ಪ್ರತಿ ಹಂತದಲ್ಲೂ ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ.
ತುಲಾ ರಾಶಿ
ಈ ರಾಶಿಯವರಿಗೆ ಗುಲಾಬಿ ಬಣ್ಣವು ಶುಭಕಾರಕವಾಗಿವೆ. ಈ ಬಣ್ಣವು ಸೌಭಾಗ್ಯದ ಪ್ರತೀಕವಾಗಿದೆ. ಅಲ್ಲದೆ, ತಿಳಿ ಹಳದಿ ಬಣ್ಣವೂ ಒಳ್ಳೆಯದನ್ನು ಮಾಡುತ್ತದೆ.
ಇದನ್ನು ಓದಿ: ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಶುಭ ತರುವ ಬಣ್ಣ ಮೆರೂನ್ ಆಗಿದೆ. ಕಪ್ಪು ಬಣ್ಣವೂ ಇವರಿಗೆ ಶುಭಕಾರಕವೇ ಆಗಿದೆ. ಈ ರಾಶಿಯವರು ಸದಾ ಉತ್ಸಾಹಶೀಲರಾಗಿರುತ್ತಾರೆ. ಹೀಗಾಗಿ ಕಪ್ಪು ಮತ್ತು ಮೆರೂನ್ ಶಾಂತಿದಾಯಕವಾಗುತ್ತದೆ.
ಧನು ರಾಶಿ
ನೇರಳೆ ಬಣ್ಣವು ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಇದು ವಿಲಾಸಿ ಮತ್ತು ಭೋಗದ ಬಣ್ಣವಾಗಿದ್ದು, ಇವರ ಪ್ರಬುದ್ಧ ನಡೆಗೆ ಸಹಕಾರಿಯಾಗಿ ಕೆಲಸ ಮಾಡುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಎಂದೂ ನಿರಾಶೆಯನ್ನು ಹುಟ್ಟಿಸುವುದಿಲ್ಲ.
ಮಕರ ರಾಶಿ
ಈ ರಾಶಿಯವರಿಗೆ ಕಪ್ಪು ಮತ್ತು ನೀಲಿ ಬಣ್ಣವು ಒಳ್ಳೆಯದಾಗುತ್ತದೆ. ಕಾರಣ ಇದು ಶನಿದೇವರಿಗೆ ಪ್ರಿಯವಾದ ಬಣ್ಣಗಳಾಗಿವೆ. ಹೀಗಾಗಿ ಇವರು ಕಪ್ಪು, ಕಂದು, ಬೂದು ಹಾಗೂ ಖಾಕಿ ಬಣ್ಣಗಳು ಸಹ ರಕ್ಷಿಸುವುದಲ್ಲದೆ ಯಶಸ್ಸಿನ ದಾರಿಯನ್ನು ತೆರೆಯುತ್ತದೆ.
ಇದನ್ನು ಓದಿ: ಈ ಐದು ರಾಶಿಯವರು ನೆಚ್ಚಿನ ಮಡದಿಯಾಗುತ್ತಾರೆ!
ಕುಂಭ ರಾಶಿ
ಈ ರಾಶಿಯವರು ಸಫಲರಾಗಲು ತಿಳಿ ನೀಲಿ ಹಾಗೂ ಆಕಾಶ ನೀಲಿ ಬಣ್ಣಗಳು ಬಹಳ ಒಳ್ಳೆಯದು. ಈ ಬಣ್ಣಗಳನ್ನು ಉಪಯೋಗಿಸುವುದರಿಂದ ಎಲ್ಲ ಕಡೆ ಯಶಸ್ಸನ್ನು ಗಳಿಸಬಹುದು. ನೀಲಿ ಬಣ್ಣವು ಪ್ರಗತಿ ಹಾಗೂ ಸಕಾರಾತ್ಮಕ ಪರಿವರ್ತನದ ಬಣ್ಣವಾಗಿರುವುದಲ್ಲದೆ, ಸದಾ ಆರೋಗ್ಯವಾಗಿಡಲಿದೆ.
ಮೀನ ರಾಶಿ
ಈ ರಾಶಿಯವರಿಗೆ ಕಿತ್ತಳೆ, ಹಳದಿ ಹಾಗೂ ಕೇಸರಿ ಬಣ್ಣಗಳು ಶುಭಕಾರವಾಗಿವೆ. ಈ ಬಣ್ಣಗಳು ಇವರಿಗೆ ನೆಮ್ಮದಿ ಜೊತೆಗೆ ಯಶಸ್ಸಿನ ಎತ್ತರಕ್ಕೆ ಕೊಂಡೊಯ್ಯಬಲ್ಲದು.