Powerful Zodiac Signs: ಕೆಲವು ರಾಶಿಚಕ್ರ ಚಿಹ್ನೆಗಳು ಮಾತ್ರ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಂಡೆಯಂತೆ ಬಲವಾಗಿರುತ್ತವೆ. ಆದ್ದರಿಂದ ಈ ಲೇಖನದಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಸಖತ್ ಪವರ್‌ಫುಲ್ ಎಂಬುದನ್ನು ನಾವಿಂದು ನೋಡಬಹುದು.    

ನಾವೆಲ್ಲರೂ ಜೀವನದಲ್ಲಿ ಅಡೆತಡೆಗಳು ಮತ್ತು ಸವಾಲುಗಳನ್ನು ಎದುರಿಸುತ್ತೇವೆ. ಆದರೆ ಆ ಕಠಿಣ ಸಂದರ್ಭಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದು ನಾವು ಯಾರೆಂದು ವ್ಯಾಖ್ಯಾನಿಸುತ್ತದೆ. ನಾವೆಲ್ಲರೂ ಬಲಶಾಲಿ ಮತ್ತು ಶಕ್ತಿಶಾಲಿಯಾಗಲು ಬಯಸುತ್ತೇವೆ. ಏಕೆಂದರೆ ಜಗತ್ತಿನಲ್ಲಿ ಯಾವಾಗಲೂ ತಮ್ಮ ಛಾಪನ್ನು ಮೂಡಿಸುವವರು ಬಲಿಷ್ಠರೇ.

ನಮ್ಮ ವ್ಯಕ್ತಿತ್ವದ ಲಕ್ಷಣಗಳು ಮತ್ತು ಗುಣಗಳು ನಾವು ಯಾರೆಂದು ನಿರ್ಧರಿಸುತ್ತವೆ. ಅಂದಹಾಗೆ ವ್ಯಕ್ತಿಗೆ ಶಕ್ತಿಯು ಅವರ ದೃಢನಿಶ್ಚಯ, ಇಚ್ಛಾಶಕ್ತಿ, ಅಧಿಕಾರ ಮತ್ತು ಸೂಕ್ಷ್ಮತೆಯಿಂದ ಬರುತ್ತದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳ ವ್ಯಕ್ತಿತ್ವಗಳನ್ನು ವಿಶ್ಲೇಷಿಸುವಾಗ ವಿಶೇಷವಾಗಿ ಕೆಲವು ರಾಶಿಚಕ್ರ ಚಿಹ್ನೆಗಳು ಮಾತ್ರ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಂಡೆಯಂತೆ ಬಲವಾಗಿರುತ್ತವೆ. ಆದ್ದರಿಂದ ಈ ಲೇಖನದಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ಸಖತ್ ಪವರ್‌ಫುಲ್ ಎಂಬುದನ್ನು ನಾವಿಂದು ನೋಡಬಹುದು.

ಸಿಂಹ ರಾಶಿ

ಕಾಡಿನ ರಾಜ ಸಿಂಹದಿಂದ ಪ್ರತಿನಿಧಿಸಲ್ಪಡುವ ಸಿಂಹ ರಾಶಿಯವರು ನಾಯಕನ ಗುಣಗಳೊಂದಿಗೆ ಜನಿಸುತ್ತಾರೆ. ಸಿಂಹವನ್ನು ಹೇಗೆ ಪಳಗಿಸಲು ಸಾಧ್ಯವಿಲ್ಲವೋ ಈ ರಾಶಿಯವರನ್ನು ಸಹ ಯಾರೂ ಪಳಗಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಇವರು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಬಲಿಷ್ಠರಾಗಿರುತ್ತಾರೆ. ಹಾಗೆಯೇ ಜಗತ್ತನ್ನು ತಮ್ಮ ಆಜ್ಞೆಗೆ ತಕ್ಕಂತೆ ಕುಣಿಸುವುದು ಹೇಗೆಂದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇವರ ಆಕರ್ಷಕ ವ್ಯಕ್ತಿತ್ವ ಮತ್ತು ಆಲೋಚನಾ ಸಾಮರ್ಥ್ಯವು ಇವರನ್ನು ತುಂಬಾ ಬಲಿಷ್ಠರನ್ನಾಗಿ ಮಾಡುತ್ತದೆ. ಇವರು ತುಂಬಾ ಉದಾರಿಗಳು. ಇದೇ ಅವರನ್ನು ಎಲ್ಲರಿಗೂ ಪ್ರಿಯರಾಗಿರುವಂತೆ ಮಾಡುತ್ತದೆ. ಇವರ ಮೇಲೆ ಎಸೆಯಲ್ಪಟ್ಟ ಯಾವುದೇ ಕಲ್ಲುಗಳನ್ನು ಮೆಟ್ಟಿಲು ಕಲ್ಲುಗಳಾಗಿ ಪರಿವರ್ತಿಸುವ ಸಾಮರ್ಥ್ಯ ಇವರಲ್ಲಿದೆ.

ಮಕರ ರಾಶಿ
ಮಕರ ರಾಶಿಯವರು ಶಿಸ್ತಿನ ಗ್ರಹವಾದ ಶನಿಯಿಂದ ಆಳಲ್ಪಡುತ್ತಾರೆ. ಇವರ ದೃಢನಿಶ್ಚಯ ಮತ್ತು ಪರಿಶ್ರಮ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಇವರು ಯಾವಾಗಲೂ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ತುಂಬಾ ಶ್ರಮಶೀಲರು ಮತ್ತು ಯಾವಾಗಲೂ ಎಲ್ಲರನ್ನೂ ಹುರಿದುಂಬಿಸುತ್ತಾರೆ. ಇವರು ಎಂದಿಗೂ ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಕುಗ್ಗುವುದಿಲ್ಲ ಮತ್ತು ತಮ್ಮ ಗುರಿ ಹಾಗೂ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ತಮ್ಮ ಸರ್ವಸ್ವವನ್ನೂ ನೀಡಲು ಸಿದ್ಧರಿರುತ್ತಾರೆ. ಅದಕ್ಕಾಗಿಯೇ ಇವರ ಶಕ್ತಿ ಅಳೆಯಲಾಗದು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಯಶಸ್ವಿ, ಶಕ್ತಿಶಾಲಿ ವ್ಯಕ್ತಿಗಳು. ಇವರ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ತುಂಬಾ ದುಷ್ಟ ಜನರ ಮನಸ್ಸನ್ನು ಕೂಡ ಹೇಗೆ ಓದುವುದು ಮತ್ತು ಇತರರನ್ನು ನಿಯಂತ್ರಿಸಿ ಬಯಸಿದ್ದನ್ನು ಪಡೆಯುವುದು ಹೇಗೆ ಎಂದು ತಿಳಿದಿದ್ದಾರೆ. ಇದು ಅವರನ್ನು ತುಂಬಾ ಶಕ್ತಿಶಾಲಿಗಳನ್ನಾಗಿ ಮಾಡುತ್ತದೆ. ಇವರು ಒಮ್ಮೆ ಏನನ್ನಾದರೂ ನಿರ್ಧರಿಸಿದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ವೃಷಭ ರಾಶಿ
ವೃಷಭ ರಾಶಿಯವರು ಹಠಮಾರಿಗಳು ಮತ್ತು ಬಲವಾದ ಇಚ್ಛಾಶಕ್ತಿಯುಳ್ಳವರು. ಇವರು ಭಾವನಾತ್ಮಕವಾಗಿ ತುಂಬಾ ಶಕ್ತಿಶಾಲಿಗಳು. ಇವರು ಪ್ರೀತಿ, ಮೌಲ್ಯವನ್ನು ತಿಳಿದಿದ್ದಾರೆ ಮತ್ತು ಅದನ್ನು ಪಡೆಯಲು ಹೋರಾಡಲು ಕೂಡ ಸಿದ್ಧರಿರುತ್ತಾರೆ. ಇವರ ಇದೇ ಗುಣ ತಮ್ಮ ದಾರಿಯಲ್ಲಿ ಬರುವ ಯಾರಾದರೂ ಎದುರಿಸಲಾಗದಂತಹ ಶತ್ರುವನ್ನಾಗಿ ಮಾಡುತ್ತದೆ. ಇವರು ಎಂದಿಗೂ ಕಷ್ಟಕರ ಸಂದರ್ಭಗಳಿಂದ ದೂರ ಸರಿಯುವುದಿಲ್ಲ. ಬದಲಾಗಿ ತಮ್ಮ ಮನಸ್ಸಿನ ಬಲದಿಂದ ಅವುಗಳನ್ನು ಜಯಿಸಿ ಮೇಲೆ ಬರುತ್ತಾರೆ.

ಮೇಷ ರಾಶಿ
ಮೇಷ ರಾಶಿಯ ಮಹಿಳೆಯರು ಸೃಜನಶೀಲರು, ಶಕ್ತಿಯುತರು ಮತ್ತು ಬಲಶಾಲಿಗಳು. ಇವರು ಯಾವುದಾದರೂ ವಿಷಯದ ಬಗ್ಗೆ ಉತ್ಸುಕರಾಗಿದ್ದರೆ ಯಶಸ್ಸನ್ನು ಗುರಿಯಾಗಿಸಿಕೊಳ್ಳುತ್ತಾರೆ. ತಮ್ಮದೇ ಆದ ರೀತಿಯಲ್ಲಿ ಶಕ್ತಿಶಾಲಿಗಳಾಗಿರುತ್ತಾರೆ. ತಮ್ಮನ್ನು ತಾವು ಇತರರಿಗಿಂತ ಉತ್ತಮಗೊಳಿಸಿಕೊಳ್ಳುವುದು ಹೇಗೆಂದು ತಿಳಿದಿದ್ದಾರೆ. ಇವರು ಬಯಸಿದ್ದನ್ನು ಪಡೆಯುವವರೆಗೂ ನಿಲ್ಲುವುದಿಲ್ಲ. ನಿಜವಾಗಿಯೂ ಇವರು ಆಳಲು ಹುಟ್ಟಿದ್ದಾರೆ.