ಡೋರ್ ಮ್ಯಾಟ್ ಮೇಲಿರೋ Welcome ಬದಲಿಸ್ಬಹುದು ನಿಮ್ಮ ಭವಿಷ್ಯ
ಮನೆಯ ಮುಖ್ಯ ದ್ವಾರದಲ್ಲಿ ಡೋರ್ ಮ್ಯಾಟ್ ಹಾಕುವ ಮೊದಲು ಕೆಲ ವಿಷ್ಯಗಳನ್ನು ತಿಳಿಯುವ ಅಗತ್ಯವಿದೆ. ಅದ್ರಲ್ಲೂ ವೆಲ್ ಕಂ ಅಂತ ಬರೆದಿರುವ ಡೋರ್ ಮ್ಯಾಟ್ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುವ ಸಾಧ್ಯತೆ ಇದೆ.

ಮೇನ್ ಡೋರ್ ನಲ್ಲಿ ಡೋರ್ ಮ್ಯಾಟ್
ಮನೆಯ ಮೇನ್ ಡೋರ್ ಬಳಿ ನಾವು ಮ್ಯಾಟ್ ಹಾಕಿರ್ತೇವೆ. ಮನೆಯ ಮುಖ್ಯ ದ್ವಾರ ಆಕರ್ಷಕವಾಗಿ ಕಾಣಲಿ ಎನ್ನುವ ಕಾರಣಕ್ಕೆ ಡೋರ್ ಮ್ಯಾಟ್ ಹಾಕ್ತೇವೆ. ಇದೆ ಕಾರಣಕ್ಕೆ ಸುಂದರವಾಗಿರುವ, ಆಕರ್ಷಕ ಡೋರ್ ಮ್ಯಾಟ್ ಖರೀದಿ ಮಾಡ್ತೇವೆ.
ವಾಸ್ತು ಶಾಸ್ತ್ರದ ಜೊತೆ ಸಂಬಂಧ
ಮನೆಯಲ್ಲಿ ಬಳಸುವ ಪ್ರತಿಯೊಂದು ವಸ್ತು ವಾಸ್ತು ಶಾಸ್ತ್ರದ ಜೊತೆ ನಂಟು ಹೊಂದಿದೆ. ನೀವು ಬಳಸುವ ಡೋರ್ ಮ್ಯಾಟ್ ಕೂಡ ನಿಮ್ಮ ಮನೆಯ ಪರಿಸ್ಥಿತಿಯನ್ನು ಹದಗೆಡಿಸಬಹುದು. ವಾಸ್ತು ಶಾಸ್ತ್ರವು ಅದನ್ನು ಶಕ್ತಿಯ ಹರಿವಿನೊಂದಿಗೆ ಸಂಪರ್ಕಿಸುತ್ತದೆ. ಮನೆಯಲ್ಲಿ ಸದಾ ಗಲಾಟೆ, ಒತ್ತಡ, ಆರ್ಥಿಕ ಸಂಕಷ್ಟಕ್ಕೆ ಡೋರ್ ಮ್ಯಾಟ್ ಕೂಡ ಕಾರಣ ಆಗಿರಬಹುದು.
ವೆಲ್ ಕಂ ಡೋರ್ ಮ್ಯಾಟ್
ಮನೆ ಮುಂದೆ ವೆಲ್ ಕಂ ಬೋರ್ಡ್ ಹಾಕಿದಂತೆ ವೆಲ್ ಕಂ ಅಂತ ಬರೆದಿರುವ ಡೋರ್ ಮ್ಯಾಟ ಬಳಸೋದು ಸರ್ವೇ ಸಾಮಾನ್ಯ. ಮನೆಗೆ ಬರುವ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸುವ ಒಂದು ವಿಧಾನ ಇದು. ಇದು ಮನೆಯ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅದ್ರ ಜೊತೆ ನಿಮ್ಮ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ.
ರಬ್ಬರ್ ಡೋರ್ ಮ್ಯಾಟ್ ಬಳಸಬೇಡಿ
ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿ ಎರಡನ್ನೂ ಮನೆಯೊಳಗೆ ಪ್ರವೇಶ ಮಾಡಲು ಡೋರ್ ಮ್ಯಾಟ್ ಕಾರಣವಾಗುತ್ತದೆ. ಮನೆಯ ಮುಂದೆ ಯಾವುದೇ ಕಾರಣಕ್ಕೂ ರಬ್ಬರ್ ಡೋರ್ ಮ್ಯಾಟ್ ಬಳಸಬೇಡಿ. ಧನಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶ ಮಾಡುವುದನ್ನು ಇದು ತಡೆಯುತ್ತದೆ. ನಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಕಾರಣವಾಗುತ್ತದೆ.
ಕಪ್ಪು ಅಕ್ಷರದ ಡೋರ್ ಮ್ಯಾಟ್
ವೆಲ್ ಕಂ ಇಲ್ಲವೆ ಸ್ವಾಗತ ಎಂದು ಕಪ್ಪು ಅಕ್ಷರದಲ್ಲಿ ಬರೆದಿರುವ ಡೋರ್ ಮ್ಯಾಟ್ ಬಳಸಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಇದು ಅಶುಭ. ಮನೆಯ ನೆಮ್ಮದಿ, ಶಾಂತಿಯನ್ನು ಇದು ಹಾಳು ಮಾಡುತ್ತದೆ.
ಯಾವ ಬಣ್ಣದ ಮ್ಯಾಟ್ ಬೆಸ್ಟ್
ಮನೆ ಮುಖ್ಯ ದ್ವಾರಕ್ಕೆ ನೀವು ಕಂದು, ಹಸಿರು, ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ವೆಲ್ ಕಂ ಎಂದು ಬರೆದಿರುವ ಡೋರ್ ಮ್ಯಾಟ್ ಗಳನ್ನು ಬಳಸಬೇಕು. ಇದು ಮನೆಗೆ ಮಂಗಳಕರ. ಡೋರ್ ಮ್ಯಾಟ್ ಆಯ್ಕೆ ಮಾಡುವ ಮೊದಲು ಅದರ ಆಕಾರವನ್ನು ಗಮನಿಸಿ. ಆಯತಾಕಾರದ ಡೋರ್ಮ್ಯಾಟ್ ಹಾಕಿದ್ರೆ ನೆಮ್ಮದಿ ಕಾಣಬಹುದು.
ವೆಲ್ ಕಂ ಡೋರ್ ಮ್ಯಾಟ್ ಮೇಲೆ ನಿಂತಾಗ ಇದನ್ನು ಪಾಲಿಸಿ
ಮನೆಯ ಮುಖ್ಯ ದ್ವಾರದ ಮುಂದೆ ವೆಲ್ ಕಂ ಡೋರ್ ಮ್ಯಾಟ್ ಹಾಕಿದ್ರೆ ನೀವು ಕೆಲ ಎಚ್ಚರಿಕೆ ತೆಗೆದುಕೊಳ್ಳಬೇಕು. ಡೋರ್ ಮ್ಯಾಟ್ ಮೇಲೆ ನಿಂತು ಸಕಾರಾತ್ಮಕ ಮಾತನಾಡಬೇಕು. ಶುಭ ಪದಗಳನ್ನು ಬಳಕೆ ಮಾಡಬೇಕು. ಮ್ಯಾಟ್ ಮೇಲೆ ನಿಂತು ನಕಾರಾತ್ಮಕವಾಗಿ ಆಲೋಚನೆ ಮಾಡಿದ್ರೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.

