ಈ ನಾಲ್ಕು ರಾಶಿಯವರು ಅತ್ಯುತ್ತಮ ಪ್ರೇಮಿಯಾಗಬಲ್ಲರು!
ಪ್ರೀತಿಯಲ್ಲಿ ಬಿದ್ದಾಗ ಎಲ್ಲರೂ ಉತ್ತಮ ಪ್ರೇಮಿಗಳೇ. ಅವರು ತಮ್ಮ ಸಂಗಾತಿಯನ್ನು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿ ಟ್ರೀಟ್ ಮಾಡುತ್ತಿರುತ್ತಾರೆ. ಹಾಗಿದ್ದೂ, ಜ್ಯೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಗಳು ಪ್ರೀತಿಯಲ್ಲಿ ಅತ್ಯುತ್ತಮರು.
ಪ್ರೀತಿ(Love) ಎಂಬುದು ಜಗತ್ತಿನ ಅತಿ ವಿಶೇಷ ಭಾವನೆ. ಅದನ್ನನುಭವಿಸುವುದೇ ಒಂದು ವರ. ಪ್ರೀತಿಯಾದಾಗ ಒಬ್ಬೊಬ್ಬರು ಒಂದೊಂದು ರೀತಿ ತೋರ್ಪಡಿಸಬಹುದು. ಒಟ್ನಲ್ಲಿ ಪ್ರೇಮಿಗೆ ಅದು ಬಹಳ ವಿಶೇಷ ಭಾವನೆಯನ್ನೇ ತರುತ್ತದೆ. ಹಾಗಿದ್ದೂ, ಕೆಲ ರಾಶಿಯವರು(zodiac signs) ತೋರುವ ಪ್ರೀತಿಯ ರೀತಿ ಬಹಳ ವಿಭಿನ್ನ. ಅವರು ಅತ್ಯುತ್ತಮ ಪ್ರೇಮಿಯಾಗಬಲ್ಲರು ಎನ್ನುತ್ತದೆ ಜ್ಯೋತಿಷ್ಯ. ಈ ರಾಶಿಗಳು ಪ್ರೇಮಿಯಾಗಿ ಸಿಕ್ಕರೆ ಅದು ನಿಮ್ಮ ಅದೃಷ್ಟ(luck)ವೇ ಆಗಿರಬೇಕು. ಅವರನ್ನು ಜತನದಿಂದ ನೋಡಿಕೊಳ್ಳಿ. ಅಂದ ಹಾಗೆ, ಬೆಸ್ಟ್ ಲವರ್ಸ್ ಎನಿಸಿಕೊಳ್ಳುವ ಈ ನಾಲ್ಕು ರಾಶಿಗಳು ಯಾವುವು ನೋಡೋಣ.
ತುಲಾ ರಾಶಿ(Libra)
ತುಲಾ ರಾಶಿಯವರು ತಮ್ಮ ಪ್ರೀತಿಪಾತ್ರರಲ್ಲಿ ಹೇಗೆ ವಿಶೇಷ ಭಾವನೆ ಮೂಡಿಸಬೇಕೆಂದು ತಿಳಿದಿದ್ದಾರೆ ಮತ್ತು ಹಾಗೆ ಮಾಡಲು ಯಾವುದೇ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ತುಲಾ ರಾಶಿಯ ಪ್ರೇಮಿಗಳ ದೊಡ್ಡ ಶಕ್ತಿ ಎಂದರೆ ಅವರ ಪಾಲುದಾರರನ್ನು ಪ್ರಶಂಸಿಸುವ, ಅವರ ಕೆಲಸಗಳನ್ನು ಮೌಲ್ಯೀಕರಿಸುವ, ಪ್ರೋತ್ಸಾಹಿಸುವ ಮತ್ತು ಪ್ರೇರೇಪಿಸುವ ಸಾಮರ್ಥ್ಯ. ತಮ್ಮ ಸಂಗಾತಿಗೆ ಪ್ರೀತಿಯನ್ನು ಪ್ರದರ್ಶಿಸಲು ಬಂದಾಗ, ಅವರು ಸೂಕ್ತವಾದ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ಸಂಗಾತಿಯ ಪ್ರತಿ ಕೌಶಲ್ಯವನ್ನೂ, ಪ್ರತಿಯೊಂದು ಉತ್ತಮ ಕೆಲಸವನ್ನೂ ಮೆಚ್ಚುತ್ತಾರೆ. ಅವರಿಗೆ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹಿಸುತ್ತಾರೆ. ಜೊತೆಯಾಗಿ ಇರುವ, ಜೊತೆಯಾಗಿ ಬೆಳೆವ ಕನಸು ಬಿತ್ತುತ್ತಾರೆ. ಜೊತೆಗೆ, ಸಂಗಾತಿಯ ಎಲ್ಲ ಕಷ್ಟಗಳನ್ನೂ ಬಹಳ ಸುಲಭವಾಗಿಸುತ್ತಾರೆ. ಇವರಿಗೆ ಪ್ರೀತಿ ಎಂದರೆ ಕೇವಲ ಪಾರ್ಕು, ಪಿಚ್ಚರು ಎಂದು ಸುತ್ತುವುದಲ್ಲ. ಭಾವನಾ ಸಾಂಗತ್ಯಕ್ಕೆ ಒತ್ತು ಕೊಡುತ್ತಾರೆ.
ಈ ನಾಲ್ಕು ರಾಶಿಗಳ ಕೋಪ ತಡಕೊಳ್ಳೋದು ಬಲು ಕಷ್ಟ!
ಸಿಂಹ(Leo)
ಸಿಂಹ ರಾಶಿಯವರು ನೋಡಿದರೆ ಜೋರೆನಿಸುತ್ತಾಕೆ. ಆದರೂ ಅವರ ಪ್ರೀತಿ ಬಹಳ ಸುಂದರವಾಗಿರುತ್ತದೆ. ಅವರು ತಮ್ಮ ಸಂಗಾತಿಯನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತಾರೆ. ಸಂಗಾತಿಯ ವಿಷಯದಲ್ಲಿ ಸಂಪೂರ್ಣ ಅಹಂ ಬಿಡುತ್ತಾರೆ. ಸಂಗಾತಿ ಕಾಲು ನೋವೆಂದರೆ ಒತ್ತಲೂ ಹಿಂಜರಿಯುವುದಿಲ್ಲ, ಗೆದ್ದಾಗ ತಲೆ ಮೇಲೆ ಕೂರಿಸಿಕೊಳ್ಳಲೂ ಮರೆಯುವವರಲ್ಲ. ಸಿಂಹ ರಾಶಿಯವರು ತಮ್ಮ ಸಂಗಾತಿಗಾಗಿ ಎಲ್ಲವನ್ನೂ ಮಾಡಲು ಬಯಸುತ್ತಾರೆ, ಅದು ತ್ಯಾಗ ಮಾಡುವುದಾದರೂ ಸಹ. ನೀವು ಸಿಂಹ ರಾಶಿಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ, ಯಾವುದೇ ಕಾರಣಕ್ಕೂ ಅವರಿಂದ ದೂರಾಗಬೇಡಿ. ಅವರ ಪ್ರಬುದ್ಧ ಪ್ರೀತಿಯನ್ನು ಸಂಪೂರ್ಣ ಅನುಭವಿಸಿ.
ಧನು ರಾಶಿ(Sagittarius)
ಧನು ರಾಶಿ ಕೂಡ ಅದ್ಭುತ ಪ್ರೇಮಿ. ಅವರ ಸುಂದರ ನಡವಳಿಕೆಗಳು ಮತ್ತು ಪ್ರೀತಿಯ ಹೇಳಿಕೆಗಳು ಎಂಥವರ ಮನಸ್ಸನ್ನೂ ಗೆಲ್ಲುತ್ತವೆ. ಜೊತೆಗೆ, ಅವರ ವ್ಯಕ್ತಿತ್ವವೇ ಬಹಳ ಚೇತೋಹಾರಿಯಾಗಿದ್ದು ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಒಮ್ಮೆ ಅವರು ನಿಮ್ಮೊಂದಿಗೆ ಪ್ರೀತಿಯಲ್ಲಿ ಬಿದ್ದರೆ, ನೀವು ಅರ್ಹವಾದ ಎಲ್ಲವನ್ನೂ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಅವರು ಕೆಲವೊಮ್ಮೆ ಕಠೋರವಾಗಿರಬಹುದು, ಆದರೆ ಅದು ಅವರು ಅತೃಪ್ತರಾದಾಗ ಮಾತ್ರ; ಇಲ್ಲದಿದ್ದರೆ, ಅವರು ಮಹಾನ್ ಪ್ರೇಮಿಯ ಎಲ್ಲ ಗುಣಗಳನ್ನು ಹೊಂದಿದ್ದಾರೆ. ಸಂಗಾತಿಯ ನಿರೀಕ್ಷೆಗಳಿಗಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ. ಯಾರಿಗೂ ನೋವಾಗದಂತೆ ನಡೆದುಕೊಳ್ಳುತ್ತಲೇ ವೈಯಕ್ತಿಕ ಬೆಳವಣಿಗೆಯ ಕಡೆಗೂ ಗಮನ ಹರಿಸುತ್ತಾರೆ.
Vastu Tips: ಈ ಆರು ಗಿಡಗಳು ಮನೆಯಲ್ಲಿದ್ರೆ ಜೇಬಿಗೆ ಹಣ ಸೇರೋದು ಗ್ಯಾರಂಟಿ!
ಕುಂಭ ರಾಶಿ(Aquarius)
ಕುಂಭ ರಾಶಿಯವರು ಕೆಲವೊಮ್ಮೆ ಬಹಳ ಅಂತರ್ಮುಖಿಯಾಗಿರುತ್ತಾರೆ. ಅವರು ಪ್ರೀತಿಯನ್ನು ತೋರಿಸುವ ವಿಧಾನವು ಇತರರಿಗಿಂತ ಭಿನ್ನವಾಗಿದೆ, ಅದಕ್ಕಾಗಿಯೇ ಅವರನ್ನು ಅತ್ಯುತ್ತಮ ಪ್ರೇಮಿಗಳೆಂದು ಪರಿಗಣಿಸಲಾಗುತ್ತದೆ. ಅವರು ತಮ್ಮ ಪ್ರೇಮಿಗಳಿಗೆ ಹೇಳದಿದ್ದರೂ ಸಹ ವರ್ತನೆಯಲ್ಲಿ ತೋರಿಸುತ್ತಾರೆ. ಕುಂಭ ರಾಶಿಯವರು ಸಂಗಾತಿಯ ಸರಿಸಮಾನಕ್ಕೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ. ಅವರು ತೋರಿಸಿಕೊಳ್ಳುವುದಕ್ಕಿಂತ ಹೆಚ್ಚು ಪ್ರೀತಿಸುತ್ತಿರುತ್ತಾರೆ. ವ್ಯಕ್ತಪಡಿಸಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹೆಚ್ಚಿನ ಬಾರಿ ಅವರು ಬರವಣಿಗೆ, ಕಲೆ, ಇನ್ಯಾವುದೇ ಮಾಧ್ಯಮದ ಮೂಲದ ನೇರವಾಗಿ ಹೇಳುವುದಕ್ಕಿಂತ ಚೆನ್ನಾಗಿ ಪ್ರೀತಿ ತೋರಿಸುತ್ತಾರೆ.