Asianet Suvarna News Asianet Suvarna News

ಬ್ರಹ್ಮಾಂಡದ ಕೃಪೆ ಇವ್ರ ಮೇಲಿದೆ; ಭಾರೀ ಪ್ರತಿಭೆ ಇರೋ ಅದೃಷ್ಟಶಾಲಿಗಳು ಈ ರಾಶಿಯವ್ರು!

ಕೆಲ ಜನರಲ್ಲಿ ಹುಟ್ಟಾ ಕೌಶಲ, ಪ್ರತಿಭೆಯನ್ನು ಗುರುತಿಸಬಹುದು. ಅವರ ಮುಂದಾಳುತ್ವದ ಗುಣ, ಶಿಕ್ಷಣ, ಮಾನವೀಯತೆಗಾಗಿ ತುಡಿಯುವ ಗುಣ, ಕಲಾತ್ಮಕತೆ ಮುಂತಾದ ಗುಣಗಳು ಸಮಾಜಕ್ಕೆ ನೆರವಾಗುವಂತಿರುತ್ತವೆ. ಈ ಜನರಲ್ಲಿ ಜನ್ಮಜಾತವಾಗಿ ಪ್ರತಿಭೆ ಮೇಳೈಸಿರುವುದಕ್ಕೆ ಅವರ ರಾಶಿಯೇ ಕಾರಣ.
 

These 4 zodiac signs have most talents as per astrology
Author
First Published Nov 12, 2023, 5:44 PM IST

“ಹುಟ್ಟಾ ಕಲಾವಿದʼ ಎನ್ನುವ ಮಾತನ್ನು ಕೇಳಿರಬಹುದು. ಜನ್ಮಜಾತವಾಗಿ ಪ್ರತಿಭೆಯನ್ನು ಪಡೆದುಕೊಂಡು ಬಂದಿರುವವರಿಗೆ ಈ ಮಾತನ್ನು ಹೇಳಲಾಗುತ್ತದೆ. ಕೆಲವರು ಶಾಲೆ-ಕಾಲೇಜಿನ ಔಪಚಾರಿಕ ಶಿಕ್ಷಣ ಇಲ್ಲದೆಯೂ ಹಲವು ರೀತಿಯಲ್ಲಿ ಪ್ರತಿಭಾನ್ವಿತರಾಗಿರುತ್ತಾರೆ. ಉತ್ತಮ ವಾತಾವರಣ ಇಲ್ಲದೆಯೂ ಅತ್ಯುತ್ತಮ ಅರಿವನ್ನು ಹೊಂದಿರುತ್ತಾರೆ. ಪ್ರತಿಭೆ ಮತ್ತು ಕೌಶಲದಿಂದ ಮಿಂಚುತ್ತಾರೆ. ಜ್ಞಾನ, ಕಲೆ ಮತ್ತು ಪ್ರತಿಭೆಗೆ ಜನ್ಮರಾಶಿಯ ಕೊಡುಗೆ ಹೆಚ್ಚು. ಎಲ್ಲ ರಾಶಿಗಳ ಜನರಲ್ಲೂ ಒಂದಲ್ಲ ಒಂದು ರೀತಿಯ ಕೌಶಲ, ಪ್ರತಿಭೆ ಇದ್ದೇ ಇರುತ್ತದೆ. ಆದರೆ, ಕೆಲವು ರಾಶಿಗಳ ಜನರಲ್ಲಿ ಮಾತ್ರ ಇವು ವಿಶೇಷವಾಗಿರುತ್ತವೆ. ವ್ಯಕ್ತಿಗತ ಪ್ರಯತ್ನ ಇದ್ದಿರಬಹುದಾದರೂ ಬ್ರಹ್ಮಾಂಡದ ಚೈತನ್ಯವೂ ಇವರ ಜತೆಗೆ ಇರುವುದರಿಂದ ವಿಶೇಷ ರೀತಿಯಲ್ಲಿ ಜೀವನವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಗಳ ಜನರಲ್ಲಿ ಅತ್ಯುತ್ತಮ ಕೌಶಲ ಕಾಣಬಹುದು. 

ಮೇಷ (Aries): ನಾಯಕತ್ವದ (Leadership) ಗುಣದಲ್ಲೂ ವಿಶಿಷ್ಟ ಪ್ರತಿಭೆಯಿದೆ. ರಾಶಿಚಕ್ರದ ಪೈಕಿ ಮೇಷ ರಾಶಿಗೆ ಪ್ರಥಮ ಸ್ಥಾನ. ನಾಯಕತ್ವದ ವಿಚಾರದಲ್ಲೂ ಹಾಗೇ. ಯಾವ ರೀತಿ ಮುಂದಾಳುತ್ವ ವಹಿಸಬೇಕು ಎನ್ನುವುದು ಇವರಿಗೆ ಗೊತ್ತು. ಇದು ಹೇಳಿಕೇಳಿ ಧೈರ್ಯ (Courage) ಮತ್ತು ಮುನ್ನುಗ್ಗುವ ರಾಶಿ. ಈ ರಾಶಿಯ ಜನರಲ್ಲಿ ಸಿಕ್ಕಾಪಟ್ಟೆ ದೈಹಿಕ ಸಾಮರ್ಥ್ಯವೂ ಇರುತ್ತದೆ. ಸ್ಪರ್ಧಾತ್ಮಕ ಮನೋಭಾವವೂ ತೀವ್ರವಾಗಿರುತ್ತದೆ. ನೈಸರ್ಗಿಕವಾಗಿ ನಾಯಕತ್ವದ ಗುಣ ಹೊಂದಿರುವ ಇವರು, ಯಾವುದೇ ಕಾರ್ಯದ ಆರಂಭಕ್ಕೆ (Initiative) ಹಿಂಜರಿಯುವುದಿಲ್ಲ. ಧೈರ್ಯ, ಅಚಲ ನಿರ್ಧಾರ, ಗುರಿಯ ಕಡೆಗಿನ ದೃಢವಾದ ನೋಟ ಇವರ ಪ್ರತಿಭೆಗಳು (Talents). ಯಶಸ್ವಿ ಉದ್ಯಮಿಗಳು, ಕ್ರೀಡಾಪಟುಗಳು, ಅನ್ವೇಷಣಾ ಕ್ಷೇತ್ರದವರು ಮೇಷ ರಾಶಿಗೆ ಸೇರಿದವರಾಗಿದ್ದಾರೆ.  

ದೀಪಾವಳಿ ಶುಭ ಸಮಯದಲ್ಲಿ ನಿಮ್ಮ ನಿಮ್ಮ ರಾಶಿಗೆ ಹೊಂದುವ ಬಟ್ಟೆ ಧರಿಸಿ, ಲಕ್ ನಿಮ್ಮದಾಗಿಸಿಕೊಳ್ಳಿ

ಸಿಂಹ (Leo): ಕ್ರಿಯಾಶೀಲತೆ (Creativity) ಮತ್ತು ಅತ್ಯಂತ ಬಲವಾದ ಸ್ವ-ಅಭಿವ್ಯಕ್ತಿ (Self Expression) ಸಿಂಹ ರಾಶಿಗೆ ಸೇರಿದ ಜನರ ಪ್ರಬಲ ತಾಕತ್ತು. ಇವರ ಪ್ರತಿಭೆ ಕಲೆ, ಮನೋರಂಜನೆ ವಲಯದಲ್ಲಿ ಬೆಳಗುತ್ತದೆ. ವರ್ಚಸ್ಸು ಮತ್ತು ಪ್ರದರ್ಶನಕ್ಕೆ ಅವಕಾಶ ಇರುವ ಯಾವುದೇ ಕ್ಷೇತ್ರದಲ್ಲಿ ಇವರು ಮಿಂಚುತ್ತಾರೆ. ಸಿಕ್ಕಾಪಟ್ಟೆ ಪ್ಯಾಷನೇಟ್‌ (Passionate) ಆಗಿರುವ ಇವರು, ಎಂದಿಗೂ ಉತ್ಸಾಹ ಕಳೆದುಕೊಳ್ಳುವುದಿಲ್ಲ. ಸಮಾಜದ ಕೇಂದ್ರಬಿಂದುವಾಗುವ ಪ್ರಬಲ ಇಚ್ಛೆ ಇವರಿಗಿರುತ್ತದೆ. ಇದಕ್ಕೆ ಪೂರಕವಾಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಇವರಿಗೆ ಗೊತ್ತು. ಕಲಾವಿದರು, ನಟರು ಸೇರಿದಂತೆ ಮನೋರಂಜನೆ ವಲಯದ ಹಲವು ಸಾಧಕರು ಸಿಂಹ ರಾಶಿಗೆ ಸೇರಿದ್ದಾರೆ.

ಧನು (Sagittarius): ಅತ್ಯಂತ ಸಾಹಸಿ (Adventure) ಮನೋಭಾವ, ಸ್ವತಂತ್ರ (Free) ಧೋರಣೆಯ ಧನು ರಾಶಿಯ ಜನ ಹೊಸ ಹೊಸ ಅನ್ವೇಷಣೆಯ ಆಸಕ್ತರಾಗಿದ್ದಾರೆ. ಕಲಿಕೆಯತ್ತ ಇವರಿಗೆ ಅಪಾರ ಆಸಕ್ತಿಯಿದ್ದು, ಇದು ಇವರ ನೈಸರ್ಗಿಕ ಗುಣವಾಗಿದೆ. ತತ್ವಶಾಸ್ತ್ರ, ಪ್ರವಾಸ (Travel) ಇವರ ಆಸಕ್ತಿಯ ವಲಯಗಳು. ಜ್ಞಾನಕ್ಕಾಗಿ ಅತೀವ ಹಂಬಲ ಹೊಂದಿರುತ್ತಾರೆ. ವಿಭಿನ್ನ ಸಂಸ್ಕೃತಿಗಳನ್ನು ಅರಿತುಕೊಳ್ಳುವುದು, ವಿಭಿನ್ನ ಸ್ತರದ ಜನರೊಂದಿಗೆ ಒಡನಾಡುವುದು ಇವರಿಗೆ ಇಷ್ಟ. ಯಾವುದೇ ವ್ಯಕ್ತಿಗತ ಸಮಸ್ಯೆ ಹಾಗೂ ಸಮಾಜವನ್ನು ವಿಸ್ತಾರವಾದ ದೃಷ್ಟಿಕೋನದಲ್ಲಿ ನೋಡುವುದು ಇವರಲ್ಲಿನ ಬಹುದೊಡ್ಡ ಪ್ರತಿಭೆಯಾಗಿದೆ. ಅನೇಕ ತತ್ವಜ್ಞಾನಿಗಳು, ವಿದ್ವಾಂಸರು (Scholars) ಈ ರಾಶಿಗೆ ಸೇರಿದವರಾಗಿದ್ದಾರೆ. ಹಾಗೆಯೇ, ಜಗತ್ತಿನ ಶ್ರೇಷ್ಠ ಪ್ರವಾಸಿಗರು ಸಹ ಧನು ರಾಶಿಯಲ್ಲೇ ಜನಿಸಿದವರಾಗಿದ್ದಾರೆ. 

ಕನ್ಯಾ ರಾಶಿಯಲ್ಲಿ ಶುಕ್ರ ಕೇತು ಮತ್ತು ಚಂದ್ರ, ಈ ರಾಶಿಯವರಿಗೆ ಮೂರು ಪಟ್ಟು ಲಾಭ

ಕುಂಭ (Aquarius): ಈ ರಾಶಿಯ ಜನ ಅತ್ಯಂತ ಸೃಜನಶೀಲ ಹಾಗೂ ದಾರ್ಶನಿಕ (Visionary) ಮನೋಭಾವ ಹೊಂದಿರುತ್ತಾರೆ. ವಿಶಿಷ್ಟ ಚಿಂತನೆಗೆ ಇವರು ಹೆಸರು. ಮಾನವೀಯತೆಗಾಗಿ (Humanitarian) ಸದಾ ನಿಲ್ಲುತ್ತಾರೆ. ತಂತ್ರಜ್ಞಾನದಲ್ಲೂ ಇವರು ಮುಂದೆ. ಪ್ರಗತಿಪರ (Progressive) ಚಿಂತನೆಯಿಂದ ಮಾನವ ಕುಲದ ಕಲ್ಯಾಣಕ್ಕಾಗಿ ಆಳವಾದ ಕಳಕಳಿ ಹೊಂದಿರುತ್ತಾರೆ. ನೈಜತೆಗೆ ಬೆಲೆ ನೀಡುತ್ತಾರೆ. ಇವರು ಅನ್ವೇಷಣೆ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸ ಮಾಡುವುದು ಹೆಚ್ಚು. ಸಮಾಜದಲ್ಲಿ ಧನಾತ್ಮಕ ಪರಿವರ್ತನೆಗಾಗಿ ತಂತ್ರಜ್ಞಾನದಲ್ಲೂ ಸಾಧನೆ ಮಾಡುತ್ತಾರೆ. ಸಾಮಾಜಿಕ ಕಾರ್ಯಕರ್ತರಾಗಿ ಸಮಾಜದ ಕಲ್ಯಾಣಕ್ಕಾಗಿ (Welfare) ಹೋರಾಡುತ್ತಾರೆ. 

Follow Us:
Download App:
  • android
  • ios