Name Astrology: ಈ ಹೆಸರಿನ ಜನರಿಗಿದೆ ರಾಜಯೋಗ! ನಿಮ್ಮ ಹೆಸರು ಏನನ್ನುತ್ತೆ?
ಹೆಸರಲ್ಲೇನಿದೆ ಅಂತ ಕೆಲವರು ಕೇಳ್ತಾರೆ. ಆದ್ರೆ ಹೆಸರಲ್ಲೇ ಎಲ್ಲ ಇದೆ ಸ್ವಾಮಿ... ಹೌದು, ನಿಮ್ಮ ಹೆಸರನ್ನು ಜ್ಯೋತಿಷ್ಯ ಸಲಹೆ ಮೇರೆಗೆ ಇಟ್ಟಿದ್ದರೆ ಹಾಗೂ ನಿಮ್ಮ ಹೆಸರು ಈ ಕೆಲ ಅಕ್ಷರಗಳಿಂದ ಶುರುವಾಗುತ್ತಿದ್ದರೆ ನಿಮಗಿದೆ ರಾಜಯೋಗ!
ಪ್ರತಿ ವ್ಯಕ್ತಿಯ ಹೆಸರೂ ಏನನ್ನೋ ಹೇಳುತ್ತದೆ. ವ್ಯಕ್ತಿ ಹುಟ್ಟಿದ ಗಳಿಗೆ ಆತನಿಗೆ ಹೆಸರು(name) ತಂದುಕೊಟ್ಟರೆ, ಆತನಿಗಿಟ್ಟ ಹೆಸರು ಕೆಲ ಯೋಗಗಳನ್ನು ತಂದುಕೊಡುತ್ತದೆ. ಹೌದು, ಮಗು ಹುಟ್ಟಿದಾಗ ಆ ಸಮಯಕ್ಕನುಗುಣವಾಗಿ ಹೆಸರನ್ನು ಸೂಚಿಸಲಾಗುತ್ತದೆ. ಇಲ್ಲವೇ, ಯಾವೆಲ್ಲ ಅಕ್ಷರ(letter)ದಿಂದ ಹೆಸರಿಡಬಹುದು ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಈ ಹೆಸರು ಮುಂದೆ ಆ ಮಗುವಿನ ಭವಿಷ್ಯ(future) ನಿರ್ಧರಿಸುತ್ತದೆ. ಕೆಲ ಅಕ್ಷರಗಳಿಂದ ಶುರುವಾಗುವ ಹೆಸರು ವ್ಯಕ್ತಿಗೆ ರಾಜಯೋಗ(Rajyog)ವನ್ನೇ ತಂದುಕೊಡುತ್ತವೆ.
ಹೀಗೆ ರಾಜಯೋಗದೊಂದಿಗೆ ಹುಟ್ಟಿರುವ ಜನರ ಹೆಸರ ಬಗ್ಗೆ ನೋಡೋಣ. ಅವರಿಗೆ ಜೀವನದ ಎಲ್ಲ ಸುಖಸಂತೋಷಗಳೂ ದೊರೆಯುತ್ತವೆ. ಅವರ ಆರ್ಥಿಕ ಸ್ಥಿತಿ(financial condition) ಸಾಮಾನ್ಯವಾಗಿ ಚೆನ್ನಾಗಿಯೇ ಇರುತ್ತದೆ. ಜೀವನದಲ್ಲಿ ಅವರ ಪರಿಶ್ರಮಕ್ಕೆ ತಕ್ಕಂತೆ ಸಾಕಷ್ಟು ವಿಭಿನ್ನ ಸ್ಥಾನಮಾನವನ್ನೂ ಪಡೆಯುತ್ತಾರೆ. ಯಾವುದಾದರೂ ಕೆಲಸ ಮಾಡಲು ಮನಸ್ಸು ಮಾಡಿದರೆ, ಅದನ್ನು ಮುಗಿಸಲು ಸಂಪೂರ್ಣ ಪ್ರಯತ್ನ ಹಾಕುತ್ತಾರೆ.
ಲೆಟರ್ ಎ: ಎ ಅಕ್ಷರದಿಂದ ಹೆಸರು ಆರಂಭವಾಗುವವರು ಅಂದರೆ ಕನ್ನಡದ ಅ ಅಕ್ಷರದಿಂದ ಹೆಸರು ಶುರುವಾಗುವವರು ಬುದ್ಧಿವಂತರು ಜೊತೆಗೆ ಕಷ್ಟ ಪಟ್ಟು ಕೆಲಸ ಮಾಡುವವರು(hardworking and intelligent). ಬದ್ಧತೆಯೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಆ ವಿಷಯ ಇವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ, ಇವರ ಜೀವನದಲ್ಲಿ ಹಣ, ಸಂಪತ್ತಿನ ಕೊರತೆ ಎಂದಿಗೂ ಬಾರದು. ಕೇವಲ ಹಣವಲ್ಲ, ಜೀವನದ ಯಾವೊಂದು ಪ್ರಮುಖವಾದುದೂ ಇವರಿಗೆ ಕೊರತೆಯಾಗದು.
ಲೆಟರ್ ಎಲ್: ಲ ಅಕ್ಷರದಿಂದ ಅಥವಾ ಎಲ್ ಲೆಟರ್‌ನಿಂದ ಹೆಸರು ಆರಂಭವಾಗುವವರು ಅದೃಷ್ಟವಂತರು. ಏನಾದರೂ ಸಾಧಿಸಲು ಮನಸ್ಸು ಮಾಡಿದರಾದರೆ ಅದು ಈಡೇರುವವರೆಗೂ ಸುಮ್ಮನಾಗುವವರಲ್ಲ. ಇವರ ಆರ್ಥಿಕ ಪರಿಸ್ಥಿತಿ ಸದಾ ಚೆನ್ನಾಗಿರುತ್ತದೆ. ಸಣ್ಣಪುಟ್ಟ ನಷ್ಟಗಳಿಗೆ ಕಂಗಾಲಾಗುವ ಸ್ಥಿತಿ ಎಂದಿಗೂ ಇರುವುದಿಲ್ಲ. ತಮ್ಮ ವೃತ್ತಿಜೀವನ(career)ದಲ್ಲಿ ಸಾಕಷ್ಟು ಮುಂದೆ ಸಾಗುತ್ತಾರೆ. ಇದಕ್ಕಾಗಿ ಅದೃಷ್ಟ ಸದಾ ಅವರ ಜೊತೆಗಿರುತ್ತದೆ. ಸವಲತ್ತುಗಳ(amenities) ಕೊರತೆಯನ್ನು ಇವರೆಂದಿಗೂ ಎದುರಿಸುವುದಿಲ್ಲ.
ಏಕಾಂತದಲ್ಲೇ ಆತ್ಮಾನಂದ ಕಾಣುವ ರಾಶಿಯವರಿವರು
ಲೆಟರ್ ಎಂ: ಮ ಅಕ್ಷರದಿಂದ ಹೆಸರು ಆರಂಭವಾಗುವವರು ಸ್ವಚ್ಛ ಹೃದಯ ಹೊಂದಿದವರು. ಅವರ ಎದೆಯಲ್ಲಿ ಕಲ್ಮಶಗಳಿಲ್ಲ. ಸದಾ ತಮ್ಮವರು ಹಾಗೂ ಇತರರು ಎಲ್ಲರಿಗೂ ಒಳ್ಳೆಯದೇ ಬಯಸುವವರು. ಸಮಾಜದ ಒಳಿತಿಗಾಗಿ ಶ್ರಮಿಸುವವರು ಇವರು. ಇವರ ಬದುಕಿನಲ್ಲಿ ರಾಜಯೋಗವಿರುತ್ತದೆ. ಇವರು ಹಣವಂತರಾಗುತ್ತಾರೆ. ವೃತ್ತಿ ಜೀವನದ ಆರಂಭದಲ್ಲೇ ದೊಡ್ಡ ಮೊತ್ತದ ಸಂಬಳ ಇವರನ್ನರಸಿ ಬರುತ್ತದೆ. ಸಮಾಜ(society)ದಲ್ಲಿ ಸಾಕಷ್ಟು ಗೌರವ ಸಂಪಾದಿಸುತ್ತಾರೆ. ಹೆಸರು ಮಾಡುತ್ತಾರೆ. ಉದ್ಯೋಗ ಹಾಗೂ ಉದ್ಯಮಗಳೆರಡನ್ನೂ ಯಶಸ್ಸಿನತ್ತ ಕೊಂಡೊಯ್ಯ ಬಲ್ಲ ಶಕ್ತಿ ಇವರದು.
ಲೆಟರ್ ವಿ: ವ ಅಕ್ಷರದಿಂದ ಹೆಸರು ಆರಂಭವಾಗುವ ಜನರು ಬಹಳ ಅದೃಷ್ಟವಂತರು. ಯಾವುದೇ ಕೆಲಸದಲ್ಲಿಯೂ ಶ್ರಮ ಹಾಕಿದರೆ ಅದೃಷ್ಟ ಇವರಿಗೆ ಸಾಥ್ ಕೊಡುತ್ತದೆ. ಕೆಲವೊಮ್ಮೆ ಶ್ರಮವಿಲ್ಲದೆಯೂ ಆಸ್ತಿ ಇವರನ್ನು ಅರಸಿ ಬರುತ್ತದೆ. ಹಣಕಾಸಿನ ಅಡಚಣೆ ಇವರನ್ನೆಂದೂ ಬಾಧಿಸುವುದಿಲ್ಲ. ಕುಬೇರನ ಆಶೀರ್ವಾದ ಸದಾ ಇವರ ಮೇಲಿರುತ್ತದೆ. ಇವರ ಹೆಸರಿನ ವಿ ಎಂದರೆ ವಿಕ್ಟರಿ ಎಂದುಕೊಳ್ಳಬಹುದು. ಇವರು ಬಯಸಿದ್ದೆಲ್ಲ ಕಷ್ಟವಿಲ್ಲದೆ ಸಿಗುತ್ತದೆ.
Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು
ಲೆಟರ್ ಎಸ್: ಇವರು ಬಡತನದಲ್ಲೇ ಬೆಳೆದರೂ, ಒಂದು ಹಂತಕ್ಕೆ ಬಂದ ನಂತರ ಯಶಸ್ಸಿನ ಮೆಟ್ಟಿಲನ್ನು ಹತ್ತುತ್ತಾರೆ. ಇವರ ಬುದ್ಧಿವಂತಿಕೆ, ಅನುಭವ ಪಾಠಗಳು ಜೀವನದಲ್ಲಿ ಎತ್ತರಕ್ಕೇರಿಸುತ್ತವೆ. ಹಟ, ಛಲದಿಂದ ತಾವು ಕನಸು ಕಂಡಿದ್ದೆಲ್ಲವನ್ನೂ ಸಾಧಿಸುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.