ಈ ತಾರೀಖಿನಲ್ಲಿ ಹುಟ್ಟಿದವರು ದುಡ್ಡಿನ ವಿಷಯದಲ್ಲಿ ಬಹಳ ಲಕ್ಕಿ..!
ನಿಮ್ಮದು ಯಾವುದು ಲಕ್ಕಿ ನಂಬರ್..? ನನ್ನದು ಈ ನಂಬರ್ ಲಕ್ಕಿ ಹೀಗೆ ಕೆಲವರ ಬಾಯಲ್ಲಿ ಆಗಾಗ ಕೇಳಿಬರುವ ಮಾತು ಇದಾಗಿದೆ. ಯಾವ ನಂಬರ್ ಅದೃಷ್ಟ ತರುತ್ತದೆ ಎಂದು ಹಸ್ತರೇಖೆ, ಜಾತಕದ ಪ್ರಕಾರವೂ ಇಂಥ ಸಂಖ್ಯೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಹುಟ್ಟಿದ ತಾರೀಖಿನಿಂದಲೂ ಆ ಸಂಖ್ಯೆಯ ಪಾದಾಂಕದ ಆಧಾರದ ಮೇಲೆ ಅದೃಷ್ಟವನ್ನು, ಗುಣ-ಸ್ವಭಾವವನ್ನು, ಭವಿಷ್ಯವನ್ನು ಸಹ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ, 1, 10, 19, 28ನೇ ತಾರೀಖಿನಂದು ಜನಿಸಿದವರ ಲಕ್ ಏನು ಅನ್ನೋದನ್ನು ನೋಡೋಣ ಬನ್ನಿ…
ಸಂಖ್ಯಾಶಾಸ್ತ್ರ ಎಂಬುದು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗ. ಸಂಖ್ಯೆಗಳ ಮೂಲಕ ನೀವು ಅದೃಷ್ಟವನ್ನು ತಿಳಿದುಕೊಳ್ಳಬಹುದು. ಜೊತೆಗೆ ಇಂಥ ವಸ್ತುಗಳ ಆಗಿಬರುತ್ತವೆ, ಇಂಥ ದಿನ ಖರೀದಿ ಮಾಡಬೇಕು, ಇಂಥ ಸಂಖ್ಯೆಯ ಬೈಕ್ ನಂಬರ್, ಕಾರ್ ನಂಬರ್ ಇದ್ದರೆ ಒಳ್ಳೆಯದು, ಇಂಥ ದಿನಾಂಕ ತಮಗೆ ಹೊಸ ಕೆಲಸಕ್ಕೆ ಕೈ ಹಾಕಲು ಶುಭ ದಿನ ಹೀಗೆ ಹಲವಾರು ವಿಷಯಗಳನ್ನು ಜನ ಸಂಖ್ಯೆಗಳ ಮೊರೆ ಹೋಗುತ್ತಾರೆ.
ಯಾವುದೇ ತಿಂಗಳ 1, 10, 19, 28ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳ ಭವಿಷ್ಯ ಯಾವ ರೀತಿ ಇದೆ ಎಂಬುದನ್ನು ಸಂಖ್ಯಾಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು. ಇವರ ಅದೃಷ್ಟ ಹೇಗಿದೆ..? ಹೇಗೆ ಇವರಿಗೆ ಲಾಭವಾಗಲಿದೆ? ಆರ್ಥಿಕ ಸ್ಥಿತಿ ಏನು..? ಅವರ ಗೌರವಾದರಗಳು ಹೇಗೆ ಎಂಬದರ ಬಗ್ಗೆ ತಿಳಿಯೋಣ ಬನ್ನಿ…
ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಬಹಳ ಬುದ್ಧಿವಂತರು, ಬುಧನ ಪ್ರಭಾವ ಇದಕ್ಕೆ ಕಾರಣ..!
ಪ್ರಾಮಾಣಿಕರು, ಸೃಜನಶೀಲರು
1, 10, 19, 28ನೇ ತಾರೀಖಿನಂದು ಜನಿಸಿದವರ ಪಾದಾಂಕ 1 ಆಗಿರುತ್ತದೆ. ಈ ಪಾದಾಂಕದ ಸ್ವಾಮಿ ಸೂರ್ಯ ದೇವ. ಈ ತಾರೀಖುಗಳಲ್ಲಿ ಜನಿಸಿದ ವ್ಯಕ್ತಿಗಳು ಪ್ರಾಮಾಣಿಕರು, ದೃಢ ನಿಶ್ಚಯವುಳ್ಳವರು, ಮತ್ತು ಸೃಜನಶೀಲರಾಗಿರುತ್ತಾರೆ. ಇವರಲ್ಲಿ ನೇತೃತ್ವ ವಹಿಸುವ ಕ್ಷಮತೆ ಬಹಳ ಉತ್ತಮವಾಗಿರುತ್ತದೆ. ಹೆಚ್ಚು ಮಹಾತ್ವಾಕಾಂಕ್ಷೆಯನ್ನು ಇವರು ಹೊಂದಿದವರಾಗಿದ್ದು, ನೋಡಲು ಆಕರ್ಷಕವಾಗಿಯೂ ಇರುತ್ತಾರೆ. ಜೊತೆಗೆ ತಮ್ಮ ಕೆಲಸಗಳಲ್ಲಿ ದಕ್ಷರಾಗಿರುವುದಲ್ಲದೆ, ವಿಚಾರ ಪ್ರಧಾನರಾಗಿರುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವಲ್ಲಿ ಇವರು ನಿಷ್ಣಾತರಾಗಿರುತ್ತಾರೆ. ಪಾದಾಂಕ 1 ಅನ್ನು ಹೊಂದಿದವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಕ್ರಿಯಾಶೀಲ ವ್ಯಕ್ತಿತ್ವ
ಈ ತಾರೀಖುಗಳಲ್ಲಿ ಜನಿಸಿದವರು ವಾಗ್ಮಿಗಳಾಗಿದ್ದು, ಸೈದ್ಧಾಂತಿಕ ಹಿನ್ನೆಲೆಯನ್ನು ಹೊಂದಿರುತ್ತಾರೆ. ಯಾವುದೇ ಕಾರಣಕ್ಕೂ ತಮ್ಮ ಸಿದ್ಧಾಂತವನ್ನು ಇವರು ಬಿಟ್ಟುಕೊಡುವವರಲ್ಲ. ಜೊತೆಗೆ ಕರ್ಮ ಪ್ರಧಾನ ಅಂದರೆ, ಕೆಲಸ – ಕಾರ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಯಾವುದೇ ಕೆಲಸ ಕಳ್ಳತನ ಇವರಿಗೆ ಗೊತ್ತಿರದು. ಇದರೊಂದಿಗೆ ಕ್ರಿಯಾಶೀಲ ವ್ಯಕ್ತಿತ್ವ ಸಹ ಇವರದ್ದಾಗಿರುತ್ತದೆ.
ಇದನ್ನು ಓದಿ: ಈ ನಾಲ್ಕು ರಾಶಿಯವರದ್ದು ಆಕರ್ಷಕ ವ್ಯಕ್ತಿತ್ವ.... ನಿಮ್ಮ-ನಿಮ್ಮವರ ರಾಶಿ ಇದರಲ್ಲಿದೆಯಾ?
ಸ್ವತಂತ್ರವನ್ನು ಇಷ್ಟಪಡುವವರು
ಸ್ವತಂತ್ರರಾಗಿ ಕೆಲಸ ಮಾಡಲು ಇವರು ಇಷ್ಟಪಡುವ ಗುಣವನ್ನು ಹೊಂದಿರುತ್ತಾರೆ. ಅಂದರೆ, ತಮ್ಮ ಕೆಲಸದಲ್ಲಿ ಇನ್ನೊಬ್ಬರು ಮೂಗು ತೂರಿಸುವುದು ಇವರಿಗೆ ಇಷ್ಟವಾಗದು. ಧೈರ್ಯವಂತರಾಗಿದ್ದು, ಸಾಹಸ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದರ ಜೊತೆಗೆ ಸ್ವಾಭಿಮಾನಿ ಸ್ವಭಾವವನ್ನು ಇವರು ಹೊಂದಿರುತ್ತಾರೆ.
ಸ್ವಾರ್ಥ ಸ್ವಲ್ಪ ಹೆಚ್ಚಿದೆ
ಜೀವನದಲ್ಲಿ ಬರುವ ಸಂಕಷ್ಟಗಳಿಗೆ ಹೆದರುವ ಜಾಯಮಾನ ಇವರದ್ದಲ್ಲ. ಪಾದಾಂಕ 1ರ ಕೆಲವು ಜನರು ಸ್ವಾರ್ಥವಿಲ್ಲದೆ ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ಹಾಗಾಗಿ ಇವರನ್ನು ಸ್ವಾರ್ಥಿಗಳು ಎಂದು ಸಹ ಕೆಲವರು ಭಾವಿಸುತ್ತಾರೆ. ಆದರೆ, ಇವರ ಇದೇ ಗುಣವು ಇವರಿಗೆ ಯಶಸ್ಸು ಸಿಗಲು ಸಹಾಯವನ್ನು ಮಾಡುತ್ತದೆ.
ಗೌರವಾದರಗಳ ಹಪಹಪಿ ಇಲ್ಲ
ಸಾಮಾನ್ಯವಾಗಿ ಪಾದಾಂಕ 1ರಲ್ಲಿ ಜನಿಸಿದವರು ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ. ಗೌರವಾದರಗಳಿಗೆ ಹಪಹಪಿಸುವ ಮನೋಭಾವ ಇವರದ್ದಲ್ಲ. ಜೊತೆಗೆ ಯಾರ ಜೊತೆಯೂ ಹೊಂದಾಣಿಕೆಯನ್ನು ಮಾಡಿಕೊಳ್ಳುವವರಲ್ಲ. ಬರಬೇಕೆಂದಿದ್ದರೆ ಅದಾಗಿಯೇ ಬರಲಿದೆ ಎಂಬ ಮನಸ್ಥಿತಿ ಇವರದ್ದಾಗಿರುತ್ತದೆ.
ಇದನ್ನು ಓದಿ: ಶುಕ್ರ ಗ್ರಹದ ರಾಶಿ ಪರಿವರ್ತನೆ ಈ ರಾಶಿಗಳಿಗೆ ಶುಭಫಲ, ನಿಮ್ಮ ರಾಶಿ ಇದೆಯಾ?
ಆರ್ಥಿಕವಾಗಿ ಸ್ಥಿತಿವಂತರು
ಇವರು ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಹೊಂದಲಿದ್ದು, ತುಂಬಾ ಸ್ಥಿತಿವಂತರಾಗಿರುತ್ತಾರೆ. ಈ ವ್ಯಕ್ತಿಗಳ ಬಳಿ ಹಣಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಹೀಗಾಗಿ ಇವರು ಕೈ ಹಾಕಿದ ಕಾರ್ಯಕ್ಷೇತ್ರದಲ್ಲಿ ಲಾಭದ ಹರಿವು ಉಂಟಾಗುತ್ತದೆ. ಇವರಿಗೆ ಹಣದ ಅಭಾವ ಅಕಸ್ಮಾತ್ ಸೃಷ್ಟಿಯಾದರೂ ಸಹ ಸ್ನೇಹಿತರು ಹಾಗೂ ಸಂಬಂಧಿಕರಿಂದ ಸಹಾಯ ಲಭಿಸಲಿದೆ. ನ್ನು ಐಷಾರಾಮಿಯಾಗಿ ಜೀವನ ನಡೆಸಲು ಇವರು ಹೆಚ್ಚು ಹಣವನ್ನು ಖರ್ಚು ಮಾಡುವವರಿದ್ದು, ಸದಾ ಖುಷಿಯಾಗಿ ಇರಲು ಇಷ್ಟಪಡುತ್ತಾರೆ.
ಇವರು ಹೃದಯವಂತರಾಗಿದ್ದು, ಎದುರಿನಿಂದ ಕಠೋರವಾಗಿ ಕಂಡರೂ ಬಹಳ ಮೃದು ಹೃದಯವನ್ನು ಹೊಂದಿರುವವರಾಗಿದ್ದಾರೆ. ಇಂಥವರನ್ನು ಹೊಂದಿದ ಸಂಗಾತಿ ಬಹಳ ಅದೃಷ್ಟವನ್ನು ಮಾಡಿದ್ದಾರೆ.