Kukke Subramanya ChampaShashti: ಸುಬ್ರಹ್ಮಣ್ಯದಲ್ಲಿ ನಾಳೆ ಬೆಳಗ್ಗೆ ದೇವರ ದರ್ಶನ ಇಲ್ಲ
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನ.20ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ಇರುವುದರಿಂದ, ಭಕ್ತರಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆವರೆಗೆ ದೇವರ ದರ್ಶನ ಹಾಗೂ ಸೇವೆ ನೆರವೇರಿಸಲು ಅವಕಾಶವಿರುವುದಿಲ್ಲ.
ಸುಬ್ರಹ್ಮಣ್ಯ (ನ.19): ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನ.20ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ಇರುವುದರಿಂದ, ಭಕ್ತರಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆವರೆಗೆ ದೇವರ ದರ್ಶನ ಹಾಗೂ ಸೇವೆ ನೆರವೇರಿಸಲು ಅವಕಾಶವಿರುವುದಿಲ್ಲ. ಮಧ್ಯಾಹ್ನ 2ರ ಬಳಿಕ ಭಕ್ತರಿಗೆ ದೇವರ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ನ.27 ಚೌತಿಯ ದಿನ ಮತ್ತು ನ.28 ಪಂಚಮಿಯ ದಿನ ಭಕ್ತರ ಪ್ರಾರ್ಥನೆ ಸೇವೆ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ. ಷಷ್ಠಿಯ ದಿನವಾದ ನ.29ರಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ಇರುವುದಿಲ್ಲ. ನ.29ರಂದು ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ. ನ.23 ಲಕ್ಷದೀಪೋತ್ಸವ ದಿನದಂದು ಮತ್ತು ಚೌತಿ, ಪಂಚಮಿ, ಷಷ್ಠಿ ದಿನದಲ್ಲಿ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರುವುದಿಲ್ಲ. ಹಾಗೇನೆ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ನ.21ರಿಂದ ಡಿ.5ರ ವರೆಗೆ ಸಂಜೆ ವೇಳೆ ನಡೆಯುವ ಆಶ್ಲೇಷ ಬಲಿ ಸೇವೆ ಇರುವುದಿಲ್ಲ, ಭಕ್ತರು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.
Karnataka Politics: ಕಾಂಗ್ರೆಸ್ಸಿನ ಸಂತೋಷ್ ಲಾಡ್‌ಗೆ ಬಿಜೆಪಿ ಗಾಳ?
2 ವರ್ಷಗಳ ಬಳಿಕ ಎಡೆಸ್ನಾನಕ್ಕೆ ಅವಕಾಶ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.21ರಿಂದ ನಡೆಯಲಿರುವ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮರಥೋತ್ಸವ ಸೇವೆಯಲ್ಲಿ ಭಕ್ತರಿಗೆ ಗರಿಷ್ಠ 100 ಸೇವಾ ರಶೀದಿಗಳನ್ನು ನೀಡಲು ಮತ್ತು ಸೇವಾರ್ಥಿಗಳಿಗೆ ವಸತಿ, ಊಟೋಪಚಾರ ವ್ಯವಸ್ಥೆ ಕಲ್ಪಿಸುವ ಕ್ರಮಕೈಗೊಳ್ಳಲಾಯಿತು.
ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ನಿರ್ಬಂಧಿಸಲಾಗಿದ್ದ ಎಡೆಸ್ನಾನ ಸೇವೆಗೆ ಈ ಬಾರಿ ಅವಕಾಶ ನೀಡಲು ಸಮ್ಮತಿಸಲಾಯಿತು. ಚೌತಿ, ಪಂಚಮಿ, ಷಷ್ಠಿ ದಿನದಂದು ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತಾದಿಗಳು ಸ್ವ-ಇಚ್ಛೆಯಿಂದ ಭಾಗವಹಿಸುವವರಿಗೆ ಜಿಲ್ಲಾಧಿಕಾರಿ ನಿರ್ದೇಶನವನ್ನು ಪಾಲಿಸಿಕೊಂಡು ಸೇವೆಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಬೀದಿ ಉರುಳು ಸೇವೆ ಮಾಡುವವರಿಗೆ ಲಕ್ಷ ದಿಪೋತ್ಸವ ದಿನದಂದು ರಾತ್ರಿ ರಥೋತ್ಸವದ ಬಳಿಕ ಸಂಜೆ ಗಂಟೆ 5ರಿಂದ ಬೆಳಗ್ಗೆ 6 ಗಂಟೆವರೆಗೆ ಅವಕಾಶ ನೀಡಲು ಸಲಹೆ ವ್ಯಕ್ತವಾಯಿತು.
ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ: ರಾಜ್ಯ ಸರ್ಕಾರದ ಮಹತ್ವದ ಆದೇಶ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಲೆಮಾರಿ ಜಾನುವಾರು ಹಾಗೂ ಬೀದಿ ನಾಯಿ, ಹುಚ್ಚು ನಾಯಿಗಳ ಹಾವಳಿ ವ್ಯಾಪಕವಾಗಿರುವ ಬಗ್ಗೆ ದೂರು ವ್ಯಕ್ತವಾಯಿತು. ಚಂಪಾಷಷ್ಠಿ ಮಹೋತ್ಸವ ಸುಸೂತ್ರವಾಗಿ ನಡೆಯಲು ಎಲ್ಲರ ಸಹಕಾರ ಬೇಕು ಎಂದು ಹೇಳಿದ ಜಿಲ್ಲಾಧಿಕಾರಿ ರವಿಕುಮಾರ್ ಅವರು ಜನತೆಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ವಿಶೇಷವಾಗಿ ಕಲ್ಪಿಸಬೇಕು. ಎಲ್ಲೆಲ್ಲಿ ನೀರಿನ ವ್ಯವಸ್ಥೆ ಬೇಕೋ ಅಲ್ಲಿ ಕುಡಿಯುವ ನೀರು, ಮೋಬೈಲ್ ಶೌಚಾಲಯ ಕಲ್ಪಿಸುವಂತೆ ಸೂಚಿಸಿದರು. ಸಹಾಯಕ ಆಯುಕ್ತ ಗಿರೀಶ್ ನಂದನ್, ಸುಳ್ಯ ತಹಸೀಲ್ದಾರ್ ಅನಿತಾಲಕ್ಷ್ಮೀ, ಕಡಬ ತಹಸೀಲ್ದಾರ್ ರಮೇಶ್‌ಬಾಬು, ಗ್ರಾ.ಪಂ.ಅಧ್ಯಕ್ಷೆ ಲಲಿತಾ ಕೆ. ಮತ್ತಿತರರು ಪಾಲ್ಗೊಂಡರು.