ನೀವು ಜನಿಸಿದ ರಾಶಿಚಕ್ರಕ್ಕೂ ದೇಹದ ಏಳು ಚಕ್ರಗಳಿಗೂ ಅವಿನಾಭಾವ ಸಂಬಂಧ!
ನಾವು ಜನಿಸಿದ ರಾಶಿಚಕ್ರಕ್ಕೂ, ನಮ್ಮ ದೇಹದಲ್ಲಿರುವ ಚಕ್ರಗಳಿಗೂ ನಿಕಟ ಸಂಬಂಧವಿದೆ. ಒಂದೊಂದು ರಾಶಿಗೆ ಒಂದೊಂದು ಚಕ್ರಗಳ ಪ್ರಭಾವ ಹಾಗೂ ನೇರ ಸಂಪರ್ಕ ಕಂಡುಬರುತ್ತದೆ. ನಮ್ಮ ದೇಹದ ಚಕ್ರಗಳನ್ನು ಸಮತೋಲನಗೊಳಿಸಿಕೊಳ್ಳುವ ಮೂಲಕ ಜೀವನವನ್ನು ಅರ್ಥಪೂರ್ಣವಾಗಿ ಬಾಳಲು ಸಾಧ್ಯವಾಗುತ್ತದೆ.

ಮಾನವನ ಆರೋಗ್ಯದಲ್ಲಿ ಹಲವು ವಿಧಗಳಿವೆ. ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯಗಳಷ್ಟೇ ಅಲ್ಲ. ಸಾಮಾಜಿಕ ಆರೋಗ್ಯ, ಸಾಂಸಾರಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯಗಳು ಜೀವನಕ್ಕೆ ಬಹುಮುಖ್ಯವಾಗಿವೆ. ಜೀವನದಲ್ಲಿ ಅತೃಪ್ತಿ ಕಾಡದಿರಲು, ಸಾಮರಸ್ಯ ಹಾಗೂ ಸಮತೋಲನದ ಜೀವನಕ್ಕಾಗಿ ಆಧ್ಯಾತ್ಮಿಕ ಆರೋಗ್ಯ ಅತಿ ಮುಖ್ಯ. ಆಧ್ಯಾತ್ಮಿಕ ಆರೋಗ್ಯಕ್ಕೆ ನಮ್ಮ ದೇಹದಲ್ಲಿರುವ ಏಳು ಚಕ್ರಗಳು ಹಾಗೂ ನಾವು ಜನಿಸುವ ರಾಶಿಗಳು ಬಹುಮುಖ್ಯ ಕೊಡುಗೆ ನೀಡುತ್ತವೆ. ಇವುಗಳ ನಡುವೆ ಆಳವಾದ ಸಂಬಂಧವಿದೆ. ಇದನ್ನು ನಾವು ಅರಿತರೆ ಆಂತರಿಕ ಶಕ್ತಿಯನ್ನು ಒಪ್ಪಿಕೊಂಡು, ಅಪ್ಪಿಕೊಂಡು ಹೆಚ್ಚಿನ ಸಾಮರಸ್ಯ ಹಾಗೂ ಸಮತೋಲನದಿಂದ ಜೀವಿಸಲು ಸಾಧ್ಯವಾಗುತ್ತದೆ. ಚಕ್ರಗಳು (Chakras) ಆಧ್ಯಾತ್ಮಿಕ ಚೈತನ್ಯವನ್ನು (Spiritual Energy) ಉದ್ದೀಪಿಸುತ್ತವೆ. ಚಕ್ರಗಳನ್ನು ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುವ ಮಾರ್ಗಗಳು ಎಂದೂ ಪರಿಗಣಿಸಲಾಗುತ್ತದೆ. ಚಕ್ರಗಳೆಂದರೆ, ನಮ್ಮ ದೇಹದ ಶಕ್ತಿಕೇಂದ್ರಗಳಾಗಿವೆ. ಜೀವದ ವೇಗವನ್ನು ನಿಯಮಬದ್ಧಗೊಳಿಸುವ ಇವುಗಳನ್ನು ಪ್ರಾಣ (Prana) ಎಂದೂ ಹೇಳಲಾಗುತ್ತದೆ. ಏಳು ಚಕ್ರಗಳು ಹಾಗೂ ಅವು ಪ್ರತಿನಿಧಿಸುವ ಅಂಶಗಳನ್ನು ಅರಿತುಕೊಂಡರೆ ನಮ್ಮ ದೇಹದ ಎನರ್ಜಿ ಎಲ್ಲಿ ವ್ಯತ್ಯಾಸವಾಗಿದೆ, ಯಾವುದು ಸ್ಥಗಿತವಾಗಿದೆ ಎನ್ನುವುದು ತಿಳಿಯುತ್ತದೆ.
ಇದೊಂದು ಅಭ್ಯಾಸವಿದ್ರೆ ಸಾಕು, ಗಂಡಸರ ಜೇಬು ಖಾಲಿ ಆಗೋದು ಗ್ಯಾರಂಟಿ!
ರಾಶಿಚಕ್ರಗಳು ವ್ಯಕ್ತಿತ್ವದ ಮೇಲೆ ಕಾಸ್ಮಿಕ್ (Cosmic) ಪ್ರಭಾವವನ್ನು ರೂಪಿಸುತ್ತವೆ. ನಿಮಗೆ ಗೊತ್ತೇ? ಪ್ರತಿಯೊಂದು ರಾಶಿಗಳು ನಿರ್ದಿಷ್ಟ ಗುಣ ಮತ್ತು ಸ್ವಭಾವ ಹೊಂದಿರುತ್ತವೆ. ಇದೇ ನಮ್ಮ ವ್ಯಕ್ತಿತ್ವವನ್ನು (Personality) ರೂಪಿಸುವ ಮುಖ್ಯ ಅಂಶವಾಗಿದೆ. ನಮ್ಮ ರಾಶಿಯ ಮೂಲ ಅಂಶ ಅಥವಾ ಪ್ರಕೃತಿಯನ್ನು (Zodiac Nature) ಅರ್ಥೈಸಿಕೊಳ್ಳುವ ಮೂಲಕ ನಮ್ಮ ಶಕ್ತಿ ಮತ್ತು ಸವಾಲುಗಳು, ಆಧ್ಯಾತ್ಮಿಕ ಒಲವಿನ (Inclination) ಬಗ್ಗೆ ಸ್ಪಷ್ಟವಾದ ಮಾಹಿತಿ ಪಡೆದುಕೊಳ್ಳಬಹುದು.
ಹಾಗಿದ್ದರೆ ಚಕ್ರಗಳು ಮತ್ತು ರಾಶಿಗಳ ನಡುವೆ ಇರುವ ಬಂಧವೇನು?
ರಾಶಿಚಕ್ರಗಳ (Zodiac Signs) ಪೈಕಿ ಪ್ರತಿಯೊಂದು ರಾಶಿಯು ನಿರ್ದಿಷ್ಟ ಚಕ್ರದೊಂದಿಗೆ ಸಂಬಂಧ ಹೊಂದಿದೆ. ಇದರಿಂದಾಗಿ ಆಧ್ಯಾತ್ಮಿಕ ಚೈತನ್ಯ ಸೌಹಾರ್ದವಾಗಿ (Harmonious) ಹರಿಯಲು ಸಾಧ್ಯವಾಗುತ್ತದೆ. ನಮ್ಮ ರಾಶಿಯ ಮೂಲ ಪ್ರಕೃತಿ ಯಾವ ಚಕ್ರದೊಂದಿಗೆ ಬೆಸೆದಿದೆ ಎನ್ನುವುದನ್ನು ತಿಳಿದುಕೊಂಡರೆ ನಮ್ಮ ಅರಿವಿನ (Insight) ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದು. ಹಾಗೂ ಸಮತೋಲನ (Balance) ಮತ್ತು ಮಹತ್ವದ ಸಾಧನೆ ಮಾಡಬಹುದು.
ಸಮತೋಲನಗೊಳಿಸೋದು ಸಾಧ್ಯ!
ಹೀಗಾಗಿ, ನಮ್ಮ ರಾಶಿಚಕ್ರಗಳನ್ನೇ ಬಳಸಿ ನಮ್ಮ ದೇಹದ ಚಕ್ರಗಳನ್ನು ಸಮತೋಲನಗೊಳಿಸುವುದನ್ನು ಕಲಿತುಕೊಳ್ಳಬೇಕು. ನಮ್ಮ ರಾಶಿಚಕ್ರ ಹಾಗೂ ದೇಹದ ಚಕ್ರಗಳ ನಡುವಿನ ಸಂಬಂಧ (Relation) ಅರಿತುಕೊಳ್ಳುವುದು ಮುಖ್ಯ. ಹೀಲಿಂಗ್ ಅಭ್ಯಾಸಗಳಿಂದ ಯಾವ ಚಕ್ರ ದುರ್ಬಲವಾಗಿದೆಯೋ, ಯಾವ ಚಕ್ರದಲ್ಲಿ ಎನರ್ಜಿ ಸರಿಯಾಗಿ ಹರಿಯುತ್ತಿಲ್ಲವೋ ಆ ದೋಷವನ್ನು ಸರಿಪಡಿಸಿಕೊಳ್ಳಬಹುದು. ಉದಾಹರಣೆಗೆ, ಮೇಷ ರಾಶಿಗೆ ಸ್ವಾಧಿಷ್ಠಾನ (Sacral) ಚಕ್ರದೊಂದಿಗೆ ಸಂಬಂಧವಿದೆ. ಹೀಗಾಗಿ, ಈ ಚಕ್ರ ದುರ್ಬಲವಿದ್ದರೆ ಇವರು ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇದನ್ನು ನಿವಾರಿಸಲು ಹೀಲಿಂಗ್ (Healing) ಪದ್ಧತಿ ಅತ್ಯುತ್ತಮ.
ಮತ್ತೊಂದು ಅತ್ಯುತ್ತಮ ಉದಾಹರಣೆ ಎಂದರೆ, ಮಗುವಿಗೆ ಮೂಲಾಧಾರ (Root Chakra) ಚಕ್ರದಲ್ಲಿ ದೋಷವಿದ್ದಾಗ ಅದು ಅಪಾರ ಚಟುವಟಿಕೆಯಿಂದ ಕೂಡಿರುತ್ತದೆ. ಹೈಪರ್ ಆಕ್ಟಿವ್ (Hyper Active) ಹಾಗೂ ಏಕಾಗ್ರತೆಯ (Attention) ಕೊರತೆ ಕಂಡುಬರುತ್ತದೆ. ಈ ಸಮಸ್ಯೆಯನ್ನು ಹೀಲಿಂಗ್ ಮೂಲಕ ನಿವಾರಿಸುವ ಮೂಲಕ, ಮಗುವಿನಲ್ಲಿರುವ ಏಕಾಗ್ರತೆಯ ಸಮಸ್ಯೆಯನ್ನು ದೂರ ಮಾಡಬಹುದು. ಹೀಗೆಯೇ, ಒತ್ತಡ, ಆತಂಕ, ಖಿನ್ನತೆಯೂ (Depression) ಸೇರಿದಂತೆ ಮನುಷ್ಯನಲ್ಲಿರುವ ಹಲವು ಸಮಸ್ಯೆಗಳು ಚಕ್ರಗಳ ಹೀಲಿಂಗ್ ನಿಂದ ದೂರವಾಗುತ್ತವೆ.
ಯಾರು ಹೆಚ್ಚು ಮಹತ್ವಾಕಾಂಕ್ಷಿಗಳು? ನಿಮ್ಮ ಜನ್ಮರಾಶಿ ಪ್ರಕಾರ ಚೆಕ್ ಮಾಡಿ!
ಆಧ್ಯಾತ್ಮಿಕ ಸಂಪೂರ್ಣತೆ (Wholeness)
ನಾವು ಜನಿಸಿದ ರಾಶಿಗಳೊಂದಿಗೆ ನಮ್ಮ ದೇಹದ ಚಕ್ರಗಳನ್ನು ಸಾಮರಸ್ಯಗೊಳಿಸಿದಾಗ ನಾವು ನಮ್ಮ ಅಂತರಂಗದೊಂದಿಗೆ ಆಳವಾದ ಸಂಬಂಧ ಹೊಂದಲು ಸಾಧ್ಯವಾಗುತ್ತದೆ. ನಮ್ಮ ಜೀವನದ ಉದ್ದೇಶವನ್ನು (Cause) ನಿಜವಾಗಿ ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಸಂಪೂರ್ಣತೆಯಿದ್ದಾಗ ನಾವು ಐಹಿಕ ಜೀವನದಿಂದ ದೂರವಾಗುತ್ತೇವೆ ಎಂದು ಅರ್ಥವಲ್ಲ. ಬದಲಿಗೆ, ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ, ಧನಾತ್ಮಕತೆಯಿಂದ (Positive) ತುಂಬುತ್ತದೆ.