ಇದೊಂದು ಅಭ್ಯಾಸವಿದ್ರೆ ಸಾಕು, ಗಂಡಸರ ಜೇಬು ಖಾಲಿ ಆಗೋದು ಗ್ಯಾರಂಟಿ!
ನಿತ್ಯದ ಕೆಲಸದ ಬಗ್ಗೆ ನಾವು ಹೆಚ್ಚು ಗಮನ ಹರಿಸೋದಿಲ್ಲ. ಕೆಲಸದ ಒತ್ತಡದ ಕಾರಣ ನಮಗೆ ಅನುಕೂಲವಿದ್ದಾಗ ಕೆಲಸ ಮಾಡಿ ಮುಗಿಸ್ತೇವೆ. ಆದ್ರೆ ಪುರುಷ ಮಾಡುವ ಪ್ರತಿಯೊಂದು ಕೆಲಸವೂ ಶಾಸ್ತ್ರದ ಪ್ರಕಾರ ಮುಖ್ಯವಾಗುತ್ತದೆ. ಟೈಂ ತಪ್ಪಿದ್ರೆ ಆರ್ಥಿಕ ನಷ್ಟವಾಗುತ್ತೆ.
ಹಣ ಸಂಪಾದನೆ, ಶ್ರೀಮಂತಿಗೆ ಮನುಷ್ಯನ ಮೊದಲ ಕನಸು. ಐಷಾರಾಮಿ ಜೀವನ ಪಡೆಯಲು ಜನರು ಜೀವನ ಪರ್ಯಂತ ದುಡಿಯುತ್ತಾರೆ. ಅನೇಕ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬಂದಿರೋದಿಲ್ಲ. ಎಷ್ಟೇ ದುಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಶ್ರೀಮಂತಿಕೆಯಲ್ಲಿ ಮೆರೆಯುತ್ತಿದ್ದ ವ್ಯಕ್ತಿ ಏಕಾಏಕಿ ಕೆಳಗೆ ಬಿದ್ದುಬಿಡಬಲ್ಲ. ಬಡವ ಶ್ರೀಮಂತನಾಗಬಲ್ಲ. ಇದಕ್ಕೆಲ್ಲ ಅನೇಕ ಕಾರಣವಿದೆ. ಧರ್ಮಗ್ರಂಥಗಳಲ್ಲಿ ಇದ್ರ ಬಗ್ಗೆ ಹೇಳಲಾಗಿದೆ. ಒಬ್ಬ ವ್ಯಕ್ತಿ ಜೇಬಿನ ತುಂಬಾ ಹಣ ಇರಬೇಕೆಂದ್ರೆ ಆತ ಮಾಡುವ ಕೆಲಸ ಮುಖ್ಯವಾಗುತ್ತದೆ. ಇದೇ ಆತನ ಅದೃಷ್ಟ ಮತ್ತು ದುರಾದೃಷ್ಟವನ್ನು ನಿರ್ಧರಿಸುತ್ತದೆ . ಪುರುಷನ ಕೆಲ ಕೆಟ್ಟ ಅಭ್ಯಾಸಗಳು ಆತನ ಬಡತನಕ್ಕೆ ಕಾರಣವಾಗುತ್ತದೆ.
ಪುರುಷನ ಜೇಬು ಖಾಲಿ ಮಾಡುತ್ತೆ ಈ ಅಭ್ಯಾಸ (Practice) :
ರಾತ್ರಿ (Night) ಹಣ ಎಣಿಸುವುದು : ರಾತ್ರಿ ಏನು ಕೆಲಸ ಮಾಡ್ಬೇಕು, ಬೆಳಿಗ್ಗೆ ಏನು ಕೆಲಸ ಮಾಡ್ಬೇಕು ಎಂಬುದನ್ನು ಶಾಸ್ತ್ರ (Shastra) ಗಳಲ್ಲಿ ಹೇಳಲಾಗಿದೆ. ರಾತ್ರಿ ಮಲಗುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಹಣವನ್ನು ಎಣಿಸಬಾರದು. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತದೆ. ಕೈನಲ್ಲಿರುವ ಹಣವೂ ಹೊರಟು ಹೋಗುತ್ತದೆ.
ಸ್ಮೆಲ್ ಚನ್ನಾಗಿರಲಿ ಅಂತ ರಾತ್ರೋ ರಾತ್ರಿ ಪರ್ಫ್ಯೂರ್ಮ್ ಹಾಕಿದರೆ ಜೇಬಿಗೆ ಬೀಳುತ್ತಾ ಕತ್ತರಿ?
ಖಾಲಿ ಕೈನಲ್ಲಿ ಮನೆಗೆ ಬರಬೇಡಿ : ಯಾವುದೇ ಕೆಲಸಕ್ಕೆ ಹೋಗಿರಲಿ, ಮನೆಗೆ ಬರುವಾಗ ಪುರುಷ ಖಾಲಿ ಕೈನಲ್ಲಿ ವಾಪಸ್ ಬರಬಾರದು. ಆತ ಸಿಹಿ ತಿಂಡಿ ಅಥವಾ ಹೂ ಸೇರಿದಂತೆ ಯಾವುದಾದ್ರೂ ಒಂದು ವಸ್ತುವನ್ನು ತೆಗೆದುಕೊಂಡು ಬರಬೇಕು ಎನ್ನುತ್ತದೆ ಶಾಸ್ತ್ರ.
ಪರ್ಸ್ ನಲ್ಲಿ ಕಾಗದದ ರಾಶಿ : ಪರ್ಸ್ ನಲ್ಲಿ ಅಗತ್ಯವಾದ ವಸ್ತುಗಳನ್ನು ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಔಷಧಿ ಚೀಟಿಯಿಂದ ಹಿಡಿದು ಫೋನ್ ನಂಬರ್ ವರೆಗೆ ಅನೇಕ ಸಣ್ಣ ಚೀಟಿಗಳನ್ನು ತುಂಬಿಸಿಕೊಂಡಿರುತ್ತಾರೆ. ಇದು ನೋಟುಗಳಿಗಿಂತ ಹೆಚ್ಚಿರುತ್ತದೆ. ನಿಮ್ಮ ಪರ್ಸ್ ನಲ್ಲೂ ನೋಟಿಗಿಂತ ಕಾಗದ ಹೆಚ್ಚಿದ್ರೆ ನಿಮ್ಮ ಜೇಬು ಖಾಲಿಯಾಗುತ್ತೆ ಎನ್ನುತ್ತದೆ ಶಾಸ್ತ್ರ.
ಹೆಂಡತಿಗೆ ಹೊಡೆಯೋ ಗಂಡಂದಿರೇ ಇಲ್ ಕೇಳಿ, ನಿಮ್ಮ ದುಷ್ಕೃತ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಸೂರ್ಯಾಸ್ತದ ನಂತ್ರ ಅಲ್ಲಿಗೆ ಹೋಗ್ಬೇಡಿ : ಸೂರ್ಯಾಸ್ತವಾದ್ಮೇಲೆ ಕೆಲ ಸ್ಥಳಗಳಿಗೆ ಹೋಗದಂತೆ ಹಿರಿಯರು ಸಲಹೆ ನೀಡ್ತಾರೆ. ಅಲ್ಲಿರುವ ಕೆಟ್ಟ ಶಕ್ತಿ, ನಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತೆ ಎಂದು ನಂಬುತ್ತಾರೆ. ಧರ್ಮ ಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಪುರುಷ ಅಪರಿಚಿತ ಜಾಗಕ್ಕೆ ಹೋಗ್ಬಾರದು. ಇದು ಆತನ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.
ಪ್ರಸಾದ ಹಂಚುವುದು : ದೇವಸ್ಥಾನದಲ್ಲಿ ನಮಗೆ ನೀಡಿದ ಪ್ರಸಾದವನ್ನು ನಾವೇ ಸೇವನೆ ಮಾಡಬೇಕು. ಅಲ್ಲಿ ಸಿಕ್ಕ ಪ್ರಸಾದವನ್ನು ನಿಮ್ಮ ಹಿಂದಿರುವ ಪುರುಷ ಅಥವಾ ಮಹಿಳೆಗೆ ನೀಡಿದ್ರೆ ಅದು ಕೂಡ ನಿಮ್ಮನ್ನು ಶ್ರೀಮಂತಿಕೆಯಿಂದ ಬಡತನಕ್ಕೆ ನೂಕುತ್ತದೆ.
ದಾರಿಯಲ್ಲಿ ಸಿಕ್ಕ ಹಣ : ದಾರಿಯಲ್ಲಿ ಕೆಲವೊಮ್ಮೆ ಹಣ ಸಿಕ್ತಿರುತ್ತದೆ. ದಾರಿಯ ಮೇಲೆ ಬಿದ್ದ ನಾಣ್ಯಗಳನ್ನು ಎತ್ತಿಕೊಳ್ಳುವುದು ಒಳ್ಳೆಯದಲ್ಲ. ಹಾಗಂತ ನೋಟು ಬಿದ್ದಾಗ ಅದನ್ನು ಬಿಟ್ಟು ಯಾರೂ ಬರೋದಿಲ್ಲ. ದಾರಿಯಲ್ಲಿ ಸಿಕ್ಕ ಈ ಹಣವನ್ನು ಅತಿ ಬೇಗ ಖರ್ಚು ಮಾಡೋದು ಒಳ್ಳೆಯದಲ್ಲ ಎನ್ನುತ್ತದೆ ಧರ್ಮಗ್ರಂಥ.
ಕಪಾಟಿನಲ್ಲಿ ಹಳೆ ಬಿಲ್ : ಸಾಮಾನ್ಯವಾಗಿ ಎಲ್ಲರ ಮನೆಯ ಕಪಾಟಿನಲ್ಲೂ ನಾವಿದನ್ನು ನೋಡಬಹುದು. ಅಗತ್ಯವಿರುತ್ತದೆ ಎನ್ನುವ ಕಾರಣಕ್ಕೆ ಕಪಾಟಿನಲ್ಲಿ ಹಳೆ ಬಿಲ್ ಗಳನ್ನು ಸಂಗ್ರಹಿಸಿಡುತ್ತೇವೆ. ಆದ್ರೆ ಕಪಾಟಿನಲ್ಲಿ ಹಳೆ ಬಿಲ್ ಇಡುವುದು ಪುರುಷರ ಪರ್ಸ್ ಖಾಲಿ ಮಾಡಿಸುತ್ತದೆ.
ಸೂರ್ಯಾಸ್ತದ ನಂತ್ರ ಹಣಕಾಸಿನ ವ್ಯವಹಾರ : ಸೂರ್ಯಾಸ್ತದ ನಂತ್ರ ಹಣಕಾಸಿನ ವ್ಯವಹಾರ, ಕೊಡು – ಕೊಳ್ಳುವಿಕೆ ಮಾಡಬಾರದು. ಹೀಗೆ ಮಾಡಿದಲ್ಲಿ ಪುರುಷರಿಗೆ ನಷ್ಟವಾಗುತ್ತದೆ.