Asianet Suvarna News Asianet Suvarna News

ದೀಪಾವಳಿ: 13 ದೀಪ ಎಲ್ಲೆಲ್ಲಿ ಹಚ್ಬೇಕು?

ದೀಪಗಳ ಹಬ್ಬವೇ ದೀಪಾವಳಿ. ಹಬ್ಬದಂದು ಮನೆಯಲ್ಲೆ ದೀಪದಿಂದ ಮಿನುಗುತ್ತಿರುತ್ತದೆ. ಈ ಹಬ್ಬದಲ್ಲಿ ೧೩ ದೀಪ ಬೆಳಗುವ ಪದ್ಧತಿ ಇದೆ. ಅದ್ರಿಂದ ಲಾಭವೇನು, ಎಲ್ಲೆಲ್ಲಿ ಬೆಳಗಬೇಕು ಎಂಬ ಮಾಹಿತಿ ಇಲ್ಲಿದೆ. 
 

There Is A Religious Reason Behind Lighting Thirteen Lamps On Diwali roo
Author
First Published Nov 8, 2023, 3:28 PM IST

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಎಲ್ಲೆಲ್ಲೂ ಸಂಭ್ರಮ ಸಡಗರ ತುಂಬಿರುತ್ತದೆ. ಹೊಸ ಪೈರಿಗೆ ಪೂಜೆ ನಡೆಯುತ್ತದೆ. ಒಟ್ಟಿನಲ್ಲಿ ಎಲ್ಲರ ಜೀವನದಲ್ಲಿ ಬೆಳಕು, ಸುಖ, ಶಾಂತಿ ತುಂಬಿರಲಿ ಎಂದು ಎಲ್ಲರೂ ದೀಪಗಳನ್ನು ಬೆಳಗಿಸುತ್ತಾರೆ. ಅಂದು ಲಕ್ಷ್ಮಿ ದೇವಿ ಮನೆಗೆ ಬರುತ್ತಾಳೆ ಎಂದು ಮನೆಯ ಪ್ರತಿ ಕೋಣೆಯಲ್ಲೂ ದೀಪವನ್ನು ಬೆಳಗಿಸುತ್ತಾರೆ. ಮನೆಯಲ್ಲಿ ಸದಾಕಾಲ ಲಕ್ಷ್ಮಿ ನೆಲೆಸಲಿ ಎಂದು ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಕೂಡ ಮಾಡುತ್ತಾರೆ.

ದೀಪಾವಳಿ (Diwali) ಯ ದಿನದಂದು ರಾಮ ಅಯೋಧ್ಯೆಗೆ ಹಿಂತಿರುಗಿ ಬಂದನೆಂಬ ಕಾರಣಕ್ಕೆ ಅಂದಿನ ದಿನ ಇಡೀ ಅಯೋಧ್ಯಾ ನಗರವೇ ದೀಪಗಳಿಂದ ಕಂಗೊಳಿಸಿತ್ತು. ದೀಪಗಳನ್ನು ಬೆಳಗಿಸುವುದರಿಂದ ನಕಾರಾತ್ಮಕತೆ (Negativity) ದೂರವಾಗುತ್ತದೆ ಎಂಬ ಕಾರಣಕ್ಕೆ ಹಿಂದೂ ಧರ್ಮದಲ್ಲಿ ದೀಪ ಹಚ್ಚುವುದನ್ನು ಬಹಳ ಶುಭ (Good Luck)  ಎಂದು ಹೇಳಲಾಗುತ್ತದೆ. ಅದರಲ್ಲೂ ದೀಪಾವಳಿಯಲ್ಲಿ 13 ದೀಪಗಳನ್ನು ಹಚ್ಚಿ ಮನೆಯ ಎಲ್ಲ ಕಡೆ ಇಡುವುದರಿಂದ ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ಇನ್ನೂ ಅನೇಕ ಧಾರ್ಮಿಕ ಮಹತ್ವವೂ ಇದೆ.

ದೀಪಾವಳಿ: ಲಕ್ಷ್ಮಿ ಕೋಪ ತರಿಸುವಂಥ ಈ ತಪ್ಪನ್ನು ಮಾಡಲೇ ಬೇಡಿ!

ದೀಪಾವಳಿಯಂದು 13 ದೀಪ ಹಚ್ಚುವುದರ ಹಿಂದಿನ ಮಹತ್ವ
1. 13 ದೀಪಗಳನ್ನು ಹಚ್ಚುವುದರಿಂದ ಕುಟುಂಬದಲ್ಲಿ ಅಕಾಲ ಮೃತ್ಯುವಿನಿಂದ ರಕ್ಷಣೆ ಸಿಗುತ್ತದೆ. ಧನ್ತೇರಸ್ ದಿನ ದಕ್ಷಿಣ ದಿಕ್ಕಿನಲ್ಲಿರುವ ಕಸದ ಬುಟ್ಟಿಯ ಬಳಿ 13 ಹಳೆಯ ದೀಪಗಳನ್ನು ಬೆಳಗಿಸಬೇಕು.
2. ದೀಪಾವಳಿಯ ದಿನ ರಾತ್ರಿ ಮನೆಯ ದೇವರ ಕೋಣೆಯಲ್ಲಿ ಒಂದು ದೀಪವನ್ನು ಹಚ್ಚಬೇಕು. ಇದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.
3. ಮೂರನೇ ದೀಪವನ್ನು ಲಕ್ಷ್ಮಿ ದೇವಿಗೆ ಹಚ್ಚಬೇಕು. ಲಕ್ಷ್ಮಿಗೆ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿ ಧನ, ಸಮೃದ್ಧಿ ಹಾಗೂ ಯಶಸ್ಸನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ.
4. ನಾಲ್ಕನೆಯ ದೀಪವನ್ನು ಮನೆಯಲ್ಲಿನ ತುಳಸಿಗೆ ಹಚ್ಚಬೇಕು. ತುಳಸಿ ಗಿಡಕ್ಕೆ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

500 ವರ್ಷದ ಬಳಿಕ ದೀಪಾವಳಿಯಂದು ಡಬಲ್ ರಾಜಯೋಗ, ಇಲ್ಲಿದೆ ಲಕ್ಷ್ಮಿ ಪೂಜೆಯ ಸಮಯ..

5. ದೀಪಾವಳಿಯಲ್ಲಿ ಮನೆಯ ಬಾಗಿಲಲ್ಲಿ ದೀಪವನ್ನು ಬೆಳಗಿಸಬೇಕು. ಬಾಗಿಲಿಗೆ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ ಸಂತೋಷ ನೆಲೆಸುತ್ತದೆ ಎನ್ನಲಾಗುತ್ತದೆ.
6. ದೀಪಾವಳಿಯಲ್ಲಿ ದೀಪಗಳನ್ನು ಹಚ್ಚುವಾಗ ಅರಳಿ ಮರಕ್ಕೆ ಕೂಡ ದೀಪ ಹಚ್ಚಬೇಕು. ಹಿಂದೂ ಧರ್ಮದಲ್ಲಿ ಅರಳೀಳಿ ಮರಕ್ಕೆ ಪೂಜನೀಯ ಸ್ಥಾನವಿದೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ. ಆದ್ದರಿಂದ ಅರಳಿ ಮರಕ್ಕೆ ದೀಪವನ್ನು ಹಚ್ಚುವುದರಿಂದ ಹಣದ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
7. ಏಳನೇ ದೀಪವನ್ನು ಯಾವುದಾದರೂ ದೇವಸ್ಥಾನದಲ್ಲಿ ಹಚ್ಚಬೇಕು.
8. ಎಂಟನೆಯ ದೀಪವನ್ನು ಕಸದ ಬುಟ್ಟಿಯ ಬಳಿ ಹಚ್ಚಬೇಕು. ಇದು ನಕಾರಾತ್ಮಕ ಶಕ್ತಿ ಮತ್ತು ಕೆಟ್ಟ ಆತ್ಮಗಳಿಂದ ಮನೆಯನ್ನು ರಕ್ಷಿಸುತ್ತದೆ.
9. ದೀಪಾವಳಿಯಲ್ಲಿ ಮನೆಯ ಶೌಚಾಲಯದ ಬಳಿ ಕೂಡ ಒಂದು ದೀಪವನ್ನು ಬೆಳಗಿಸಬೇಕು. ಶೌಚಾಲಯದ ಬಳಿ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
10. ಹತ್ತನೆಯ ದೀಪವನ್ನು ಮನೆಯ ಛಾವಣಿಯ ಮೇಲೆ ಹಚ್ಚಬೇಕು. ಈ ದೀಪ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಕೊಡುತ್ತದೆ.
11. ಮನೆಯಲ್ಲಿನ ಕೆಟ್ಟ ಶಕ್ತಿಯನ್ನು ಹೊರಹಾಕಲು ಮತ್ತು ದುಷ್ಟಶಕ್ತಿ ಮನೆಯ ಒಳಗೆ ಪ್ರವೇಶಮಾಡದೇ ಇರಲು ಮನೆಯ ಕಿಟಕಿಯ ಬಳಿ ದೀಪ ಬೆಳಗಿಸಬೇಕು.
12. ಮನೆಯ ಮೇಲಿನ ಮಹಡಿಯಲ್ಲಿ ಹನ್ನೆರಡನೆಯ ದೀಪವನ್ನು ಹಚ್ಚಬೇಕು. ಇದರಿಂದ ಕುಟುಂಬದವರ ಆರೋಗ್ಯ ಚೆನ್ನಾಗಿರುತ್ತದೆ.
13. ಹದಿಮೂರನೆಯ ದೀಪವನ್ನು ಮನೆಯ ಕವಲುದಾರಿಯಲ್ಲಿ ಇರಿಸಬೇಕು. ಇದರಿಂದ ಮನೆಯ ಎಲ್ಲ ಕಡೆ ದೀಪದ ಬೆಳಕು ಹರಡಿ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

Follow Us:
Download App:
  • android
  • ios