ತಾನು ರಾಮನ ವಂಶದ 309ನೇ ತಲೆಮಾರಿನ ರಾಜ ಎಂದು ಹೇಳಿಕೊಂಡ ಜೈಪುರ ಮಹಾರಾಜರು!
ಜೈಪುರದ ರಾಜಮನೆತನವು ತನ್ನನ್ನು ಭಗವಾನ್ ಶ್ರೀರಾಮನ ವಂಶಜರು ಎಂದು ಹೇಳಿಕೊಂಡಿದೆ. ಈ ಬಗ್ಗೆ ಸೋಮವಾರ 'ದಿ ರಾಯಲ್ ಫ್ಯಾಮಿಲಿ ಆಫ್ ಜೈಪುರ್' ಇನ್ಸ್ಟಾಗ್ರಾಂನಲ್ಲಿ ತನ್ನ ಬಳಿ ಇರುವ ವಂಶಾವಳಿ ಪಟ್ಟಿ ಹಾಗೂ ಅಯೋಧ್ಯೆಯ ಮ್ಯಾಪ್ ಹಂಚಿಕೊಂಡಿದೆ.
ಶ್ರೀ ರಾಮನ ವಂಶಜರು ಎಂದು ಹೇಳಿಕೊಳ್ಳುವ ಜೈಪುರದ ರಾಜಮನೆತನದ ಮಹಾರಾಜ ಸವಾಯಿ ಪದ್ಮನಾಭ್ ಸಿಂಗ್ ಸೋಮವಾರ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆಯಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ 'ದಿ ರಾಯಲ್ ಫ್ಯಾಮಿಲಿ ಆಫ್ ಜೈಪುರ್' ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದು, 'ಜೈಪುರದ ರಾಜಮನೆತನವು ಭಗವಾನ್ ಶ್ರೀರಾಮನ ಐತಿಹಾಸಿಕ ಪರಂಪರೆಯಿಂದ ಬಂದ ‘ಸೂರ್ಯವಂಶಿ’ ರಜಪೂತರು.
ಜೈಪುರದ H.H. ಮಹಾರಾಜ ಸವಾಯಿ ಪದ್ಮನಾಭ್ ಸಿಂಗ್, ಆ ವಂಶದ 309ನೇ ತಲೆಮಾರಿನವರು. ಇಂದು ದೇವಾಲಯದಲ್ಲಿ ಶ್ರೀರಾಮನ ವಿಗ್ರಹದ 'ಪ್ರಾಣಪ್ರತಿಷ್ಠೆ'ಗಾಗಿ ಅಯೋಧ್ಯೆಯಲ್ಲಿರುವ ಕುಟುಂಬವನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಾರೆ' ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಜೊತೆಗೆ ಅಯೋಧ್ಯೆಯ ದೇವಾಲಯದ ಎದುರು ನಿಂತಿರುವ ಮಹಾರಾಜ ಸವಾಯಿ ಪದ್ಮನಾಭ್ ಸಿಂಗ್ ಫೋಟೋ ಹಾಕಲಾಗಿದೆ. ಯುವ ಮಹಾರಾಜರು ತಲೆಗೆ ಕೇಸರಿ ಪೇಟ ಧರಿಸಿದ್ದಾರೆ.
ಈ ಪೋಸ್ಟ್‌ನಲ್ಲಿಯೇ ತಾವು ಶ್ರೀರಾಮನ ವಂಶಜರು ಎಂದು ಸಾಬೀತು ಪಡಿಸಲು ವಂಶಾವಳಿ ಪಟ್ಟಿಯನ್ನು ಸಹ ಲಗತ್ತಿಸಲಾಗಿದೆ. ಜೊತೆಗೆ ಅಯೋಧ್ಯೆಯ ಐತಿಹಾಸಿಕ ನಕ್ಷೆ ಕೂಡಾ ಇದೆ. ಈ ವಂಶಾವಳಿ ಹಾಗೂ ನಕ್ಷೆಯನ್ನು 18ನೇ ಶತಮಾನದ ಮಹಾರಾಜ ಸವಾಯಿ ಜೈ ಸಿಂಗ್ II ಸಂತರಿಂದ ಖರೀದಿಸಿ ಅಂದಿನಿಂದ ರಕ್ಷಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ರಾಮನ ಪ್ರಕಾರ ಪತ್ನಿಯಾದವಳು ಪತಿಯೊಂದಿಗೆ ಹೇಗಿರಬೇಕು?
ವಂಶಾವಳಿಯಲ್ಲಿ ಕಾಣುವಂತೆ ಶ್ರೀ ರಾಮನು ಸೂರ್ಯವಂಶದ 81ನೇ ತಲೆಮಾರಿಗೆ ಸೇರಿದ್ದಾನೆ. ಮತ್ತು ಜೈಪುರದ ಇಂದಿನ ಮಹಾರಾಜ ಸವಾಯಿ ಪದ್ಮನಾಭ್ ಸಿಂಗ್ 309ನೇ ತಲೆಮಾರಿನವರು.
ಈ ಹಿಂದೆ ಅಯೋಧ್ಯೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆಯಾಗುತ್ತಿದ್ದಾಗ ಶ್ರೀರಾಮನ ವಂಶಜರು ಯಾರೆಂದು ಕೇಳಲಾಗಿತ್ತು. ಆಗ 8 ಕುಟುಂಬಗಳು ತಮ್ಮನ್ನು ಶ್ರೀರಾಮನ ವಂಶಜರೆಂದು ಹೇಳಿಕೊಂಡಿದ್ದವು. ಅದರಲ್ಲಿ ಜೈಪುರದ ಈ ರಾಜಮನೆತನವೂ ಒಂದು.
ಇಕ್ಷ್ವಾಕು ರಾಜನಿಂದ ಆರಂಭ
ವಿಷ್ಣು ಪುರಾಣ, ವಾಲ್ಮೀಕಿ ರಾಮಾಯಣ, ರಾಮಕಥಾ ರಸವಾಹಿನಿ, ಭಾಗವತ ಪುರಾಣ ಮತ್ತು ರಘುವಂಶ ಚಾರಿತ್ರಂಗಳ ಪ್ರಕಾರ ಸೂರ್ಯವಂಶದ ಪ್ರಸಿದ್ಧ ವ್ಯಕ್ತಿಗಳು ಎಂದರೆ ಇಕ್ಷ್ವಾಕು, ವಿಕುಶಿ, ಕಾಕುಸ್ತ, ಇತ್ಯಾದಿ. ಹಿಂದೂ ಧರ್ಮದ ಪ್ರಕಾರ, ಕೋಸಲ ಮತ್ತು ಅಯೋಧ್ಯಾ ನಗರವನ್ನು ಮನು ಮತ್ತು ಅವನ ಮಗ ಇಕ್ಷ್ವಾಕು ಸ್ಥಾಪಿಸಿದರು, ಅವನ ವಂಶಸ್ಥನೇ ರಾಮ.
ಬುರ್ಜ್ ಖಲೀಫಾದಲ್ಲಿ ಮೂಡಿಬಂದ ಶ್ರೀರಾಮ? ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೋಟೋಗಳು ವೈರಲ್
ವಂಶದವರು ಇದ್ದಾರೆಯೇ?
ಭಗವಾನ್ ರಾಮನು ಸೂರ್ಯ ವಂಶ ಅಥವಾ ಸೌರ ರಾಜವಂಶದ ಇಕ್ಷ್ವಾಕು ರಾಜವಂಶದ 81ನೇ ತಲೆಮಾರಿನಲ್ಲಿ ಜನಿಸಿದನು. ಈ ವಂಶಾವಳಿಯು 1634 BCE ವರೆಗೆ ಮತ್ತೊಂದು 64 ತಲೆಮಾರುಗಳವರೆಗೆ ಮುಂದುವರೆಯಿತು. ಅಲ್ಲಿ ಕೊನೆಯ ರಾಜ ಸುಮಿತ್ರನು ಚಾಣಕ್ಯನ ಸಮಕಾಲೀನ ಮಹಾಪದ್ಮ ನಂದನಿಂದ ಕೊಲ್ಲಲ್ಪಟ್ಟನು ಎಂದು ಇತಿಹಾಸ ಹೇಳುತ್ತದೆ. ಆದರೆ, ರಜಪೂತರು ತಮ್ಮನ್ನು ರಾಮನ ಪುತ್ರರಾದ ಲವ, ಕುಶರ ವಂಶಸ್ಥರು ಎನ್ನುತ್ತಾರೆ.