ಸಾಡೇಸಾತಿಯ ಕ್ರೂರ ಹಂತದಲ್ಲಿದೆ ಕುಂಭ ರಾಶಿ, ಯಾವಾಗಪ್ಪಾ ಇದರಿಂದ ಮುಕ್ತಿ?

ಕುಂಭ ರಾಶಿಯ ಮೇಲೆ ಶನಿ ಸಾಡೇ ಸಾತಿಯ ಎರಡನೇ ಹಂತ ನಡೆಯುತ್ತಿದೆ. ಇದು ಸಾಡೇ ಸಾತಿಯ ಅತ್ಯಂತ ನೋವಿನ ಘಟ್ಟವಾಗಿದೆ. ಈ ಸಂದರ್ಭದಲ್ಲಿ ಏನೆಲ್ಲ ಅನುಭವಿಸಬೇಕಾಗುವುದು, ಈ ಹಂತದಿಂದ ಕುಂಭ ರಾಶಿಗೆ ಯಾವಾಗ ಮುಕ್ತಿ ನೋಡೋಣ..

The most painful phase of Shani Sade Sati is on Aquarius know when will it end skr

ಕಷ್ಟ ಬಂದಾಗೆಲ್ಲ ಶನಿ ಹೆಗಲೇರಿದ್ದಾನೆ ಅಂತೀವಿ. ಹಾಗಂಥ ಶನಿಯು ಕೆಟ್ಟವನೇನಲ್ಲ, ಬರೀ ಕೆಟ್ಟದ್ದನ್ನೇ ಮಾಡುವವನೂ ಅಲ್ಲ. ಆದರೆ, ಆತ ಕರ್ಮಫಲದಾತ. ಸೂರ್ಯನ ಮಗನಾದ ಶನಿಯು ಎಲ್ಲಾ ಸ್ಥಳೀಯರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ಅವು ಒಳ್ಳೆಯ ಫಲಿತಾಂಶವನ್ನು ನೀಡುತ್ತವೆ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಕಠಿಣ ಶಿಕ್ಷೆಯಾಗುತ್ತದೆ. 

ಜ್ಯೋತಿಷ್ಯದಲ್ಲಿ, ಶನಿಯ ರಾಶಿ ಬದಲಾವಣೆ ಅಥವಾ ಅದರ ಚಲನೆಯಲ್ಲಿನ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಶನಿಯು ಅಕ್ಟೋಬರ್ 23ರಂದು ಮಕರ ಮಾರ್ಗಿಯಾಗಿದ್ದಾನೆ. ಅಲ್ಲಿಯವರೆಗೆ ಮಕರದಲ್ಲಿ ವಕ್ರಿಯಾಗಿದ್ದ ಶನಿ ಇದೀಗ ಅದೇ ರಾಶಿಯಲ್ಲಿ ನೇರವಾದ ಚಲನೆಯಲ್ಲಿ ನಡೆಯುತ್ತಾನೆ. ಶನಿ ದೇವನು ಕುಂಭ ಮತ್ತು ಮಕರ ರಾಶಿಯನ್ನು ಆಳುವ ಗ್ರಹ. ಪ್ರತಿಯೊಬ್ಬರ ಜೀವನದಲ್ಲಿ ಒಂದಿಲ್ಲೊಂದು ಸಮಯದಲ್ಲಿ ಶನಿ ಸಾಡೇಸಾತಿ ನಡೆಯುತ್ತದೆ. ಈ ಸಮಯ ಕೇವಲ ಕೆಟ್ಟದ್ದೇನಲ್ಲ. ಸಾಡೇಸಾತಿಯಲ್ಲೂ ಮೂರು ಹಂತಗಳಿವೆ. ಅದರಲ್ಲಿ ಎರಡನೇ ಹಂತ ಬಹಳ ನೋವಿನ, ಕಷ್ಟದ ಘಟ್ಟವಾಗಿದೆ. ಸದ್ಯ ಕುಂಭ ರಾಶಿಯಲ್ಲಿ ಎರಡನೇ ಹಂತದ ಶನಿ ಸಾಡೇ ಸಾತಿ ನಡೆಯುತ್ತಿದೆ. 

ಶನಿಯು ಒಂದು ರಾಶಿಯಿಂದ ಮತ್ತೊಂದಕ್ಕೆ ಹೊರಳಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಅಂದರೆ ಮೂರು ರಾಶಿಗಳನ್ನು ಆತ ದಾಟಿ ಹೋದಾಗ ಒಬ್ಬರ ಸಾಡೇಸಾತಿ ಮುಗಿಯುತ್ತದೆ.

ಭಯ ಹುಟ್ಟಿಸ್ತಿವೆ 2023ಕ್ಕೆ ಬಾಬಾ ವಾಂಗಾ ಹೇಳಿರೋ ಭವಿಷ್ಯವಾಣಿಗಳು!

ಸಾಡೇಸಾತಿಯ ಎರಡನೇ ಹಂತ
ಸಾಡೇಸಾತಿಯ ಎರಡನೇ ಹಂತದಲ್ಲಿ ಸ್ಥಳೀಯರು ತಮ್ಮ ವ್ಯಾಪಾರ ವಿಷಯಗಳಲ್ಲಿ ಮತ್ತು ಕೌಟುಂಬಿಕವಾಗಿ ವಿವಿಧ ಅಡೆತಡೆಗಳನ್ನು ಎದುರಿಸಬಹುದು. ಅವರು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲದಿರಬಹುದು. ಸಮಸ್ಯೆಗಳ ಮೇಲೆ ಸಮಸ್ಯೆ ಎದುರಾಗಬಹುದು. ಈ ಹಂತದಲ್ಲಿ ಅವರು ವಿವಿಧ ಕಾಯಿಲೆಗಳು ಮತ್ತು ಆರ್ಥಿಕ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇರುತ್ತದೆ. ಅಚಾನಕ್ ಜೀವನ ತಲೆ ಕೆಳಗಾಗಬಹುದು. ಎಷ್ಟು ಕಷ್ಟ ಪಟ್ಟರೂ ಅದಕ್ಕೆ ತಕ್ಕ ಫಲಿತಾಂಶ ಸಿಗದೆ ಹೋಗಬಹುದು. ಈ ಹಂತವು ವ್ಯಕ್ತಿಯನ್ನು ಸಂಪೂರ್ಣ ನುಜ್ಜುಗುಜ್ಜಾಗಿಸಿ ಪರೀಕ್ಷೆಗೆ ಹಚ್ಚುತ್ತದೆ.

ಕುಂಭ ರಾಶಿಗೆ ಎರಡನೇ ಹಂತದಿಂದ ಮುಕ್ತಿ ಯಾವಾಗ?
ಪಂಚಾಂಗದ ಪ್ರಕಾರ, ಏಪ್ರಿಲ್ 29, 2022ರಂದು ಶನಿ ಗ್ರಹವು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಿತು. ಅಂದಿನಿಂದ, ಕುಂಭ ರಾಶಿಯವರಿಗೆ ಅತ್ಯಂತ ನೋವಿನ ಅಂದರೆ ಶನಿಯ ಅರ್ಧಶತಕದ ಎರಡನೇ ಹಂತವು ಪ್ರಾರಂಭವಾಯಿತು. ಈ ಸಮಯದಲ್ಲಿ, ಮೀನ, ಕುಂಭ ಮತ್ತು ಮಕರ ರಾಶಿಯ ಜನರು ಶನಿಯ ಅರ್ಧಾರ್ಧದಿಂದ ಪ್ರಭಾವಿತರಾಗುತ್ತಾರೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರು ಧೈಯ್ಯಾ ಪ್ರಭಾವದಿಂದ ಬಳಲುತ್ತಿದ್ದಾರೆ.

Tulsi remedies: ನಿಮ್ಮ ಹಣಕಾಸಿನ ಸಮಸ್ಯೆಗೆ ತುಳಸಿ ಎಲೆಯ ಈ ಪರಿಹಾರ ಮಾಡಿ!

ಪಂಚಾಂಗದ ಪ್ರಕಾರ, ಶನಿಯು ಅಕ್ಟೋಬರ್ 23ರಂದು ಮಕರ ರಾಶಿಯನ್ನು ಪ್ರವೇಶಿಸಿದೆ. ಇದಾದ ಬಳಿಕ ಶನಿಯು 2023ರ ಜನವರಿ 17ರಂದು ಮತ್ತೆ ಕುಂಭ ರಾಶಿಗೆ ಪ್ರವೇಶಿಸಲಿದ್ದು, ಅಂದಿನಿಂದ ಕುಂಭ ರಾಶಿಯವರಿಗೆ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗಲಿವೆ. ಕುಂಭ ರಾಶಿಗೆ ಸಾಡೇಸಾತಿಯ 2ನೇ ಹಂತದಿಂದ 2024ರ ವೇಳೆಗೆ ಮುಕ್ತಿ ಸಿಗಲಿದೆ. 3 ಜೂನ್ 2027ರಂದು ಸಂಪೂರ್ಣ ಸಾಡೇಸಾತಿಯಿಂದ ಮುಕ್ತಿ ಸಿಗುತ್ತದೆ.  23 ಫೆಬ್ರವರಿ 2028ರಂದು ಶನಿಗ್ರಹದ ಮಹಾದಶಾದಿಂದ ಬಿಡುಗಡೆ ದೊರೆಯುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios