ಭಯ ಹುಟ್ಟಿಸ್ತಿವೆ 2023ಕ್ಕೆ ಬಾಬಾ ವಾಂಗಾ ಹೇಳಿರೋ ಭವಿಷ್ಯವಾಣಿಗಳು!
2022 ವರ್ಷಕ್ಕೆ ಬಾಬಾ ವಾಂಗಾ ನುಡಿದಿದ್ದ ಭವಿಷ್ಯವಾಣಿಗಳಲ್ಲೆರಡು ನಿಜವಾಗಿವೆ. ಇದೀಗ 2023ರ ಹೊಸ್ತಿಲಲ್ಲಿರುವಾಗ ಹೊಸ ವರ್ಷದ ಬಗ್ಗೆ ಆತಂಕ, ಭಯ ಹುಟ್ಟಿಸುತ್ತಿವೆ ಬಾಬಾ ವಾಂಗಾ 2023ರ ಭವಿಷ್ಯ!
ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೇ ಜನಜನಿತವಾಗಿರುವ, ವಿಶ್ವ-ಪ್ರಸಿದ್ಧ ಅತೀಂದ್ರಿಯ ಶಕ್ತಿ ಹೊಂದಿದ್ದ ಮತ್ತು ಗಿಡಮೂಲಿಕೆ ಶಾಸ್ತ್ರಜ್ಞ ಬಾಬಾ ವಾಂಗಾ 2022ಕ್ಕೆ ನುಡಿದಿದ್ದ ಭವಿಷ್ಯಗಳೆರಡು ನಿಜವಾಗಿವೆ. ಇದೀಗ 2023ಕ್ಕಾಗಿ ವಿಶ್ವವೇ ಎದುರು ನೋಡುತ್ತಿರುವ ಹೊತ್ತಲ್ಲಿ ಈ ಹೊಸ ವರ್ಷದಲ್ಲಿ ಏನೆಲ್ಲ ಕಾದಿದೆ ಎಂಬ ಬಗ್ಗೆ ಬಾಬಾ ವಾಂಗಾ ಮಾಡಿದ ಭವಿಷ್ಯವಾಣಿಗಳು ಸದ್ದು ಮಾಡುತ್ತಿವೆ. ಅಷ್ಟೇ ಅಲ್ಲ, ಜನರಲ್ಲಿ ಭವಿಷ್ಯದ ಬಗ್ಗೆ ಭಯ ಹುಟ್ಟಿಸುತ್ತಿವೆ.
ಬಾಬಾ ವಾಂಗಾ(Baba Vanga) ಮುಂಬರುವ ದಶಕಗಳ ಮತ್ತು ಶತಮಾನಗಳಿಗೆ ಸಂಬಂಧಿಸಿದಂತೆ ಅನೇಕ ಭವಿಷ್ಯವಾಣಿಗಳನ್ನು ಮಾಡಿದ್ದಾರೆ. 5079ನೇ ಇಸವಿವರೆಗೂ ಬಾಬಾ ವಾಂಗಾ ಭವಿಷ್ಯ ಹೇಳಿದ್ದಾರೆ. ಅವರ ಪ್ರಕಾರ, 5079ನೇ ಇಸವಿಯಲ್ಲಿ ಜಗತ್ತು ಕೊನೆಗೊಳ್ಳುತ್ತದೆ. ಬಾಬಾ ವಾಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿವೆ. ಹೀಗಾಗಿ 2023ಕ್ಕೆ ಅವರು ಹೇಳಿರುವ ಭವಿಷ್ಯವಾಣಿಗಳು ಜನರ ನಿದ್ದೆಗೆಡಿಸುವಂತಿವೆ.
2023ಕ್ಕೆ ಬಾಬಾ ವಾಂಗಾ ಅವರ ಭವಿಷ್ಯವಾಣಿಗಳು
ಬಾಬಾ ವಾಂಗಾ ಅವರು 2023ರ ವರ್ಷಕ್ಕೂ ಸಾಕಷ್ಟು ಭವಿಷ್ಯ ನುಡಿದಿದ್ದಾರೆ. ಇವುಗಳಲ್ಲಿ 5 ಭವಿಷ್ಯವಾಣಿಗಳು ನಿಜವಾದರೆ ಜಗತ್ತು ತಲೆ ಕೆಳಗಾಗುತ್ತದೆ.
ಈ ರಾಶಿಗಳಲ್ಲಿ ನಕಾರಾತ್ಮಕತೆ ಹೆಚ್ಚು.. ಜೊತೆ ಏಗೋದು ಕಷ್ಟನಪ್ಪಾ!
1. ಬಾಬಾ ವಾಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಒಂದು ದೊಡ್ಡ ದೇಶವು ಜೈವಿಕ ಶಸ್ತ್ರಾಸ್ತ್ರಗಳಿಂದ ಜನರ ಮೇಲೆ ದಾಳಿ ಮಾಡುತ್ತದೆ. ನಾವು ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ರಷ್ಯಾ-ಉಕ್ರೇನ್ ಯುದ್ಧವು ಇಡೀ ಜಗತ್ತಿಗೆ ನಿಜವಾದ ಬೆದರಿಕೆಯಾಗಿದೆ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಲವಾರು ಬಾರಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ.
2. ಸೌರ ಚಂಡಮಾರುತ ಅಥವಾ ಸೌರ ಸುನಾಮಿ 2023ರಲ್ಲಿ ಸಂಭವಿಸುತ್ತದೆ, ಇದು ಗ್ರಹದ ಕಾಂತೀಯ ಗುರಾಣಿಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ.
3. ಬಾಬಾ ಪ್ರಕಾರ, 2023ರಲ್ಲಿ ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗುತ್ತದೆ. ವಿದೇಶಿಯರು ಭೂಮಿಯ ಮೇಲೆ ದಾಳಿ ಮಾಡಬಹುದು ಮತ್ತು ಲಕ್ಷಾಂತರ ಜನರು ಅದರಲ್ಲಿ ಸಾಯುತ್ತಾರೆ.
4. ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಬಹುದು, ಇದರಿಂದಾಗಿ ವಿಷಕಾರಿ ಮೋಡಗಳು ಏಷ್ಯಾ ಖಂಡವನ್ನು ಆವರಿಸುತ್ತವೆ, ಇದರ ಪರಿಣಾಮವಾಗಿ ಅನೇಕ ದೇಶಗಳು ಗಂಭೀರ ಕಾಯಿಲೆಗಳಿಂದ ಪ್ರಭಾವಿತವಾಗುತ್ತವೆ.
5. 2023ರ ಹೊತ್ತಿಗೆ, ಮಾನವರು ಪ್ರಯೋಗಾಲಯಗಳಲ್ಲಿ ಜನಿಸುತ್ತಾರೆ. ಇಲ್ಲಿಂದ ಜನರ ಪಾತ್ರ ಮತ್ತು ಚರ್ಮದ ಬಣ್ಣ ನಿರ್ಧರಿಸಲಾಗುತ್ತದೆ. ಇದರರ್ಥ ಜನನ ಪ್ರಕ್ರಿಯೆಯು ಸಂಪೂರ್ಣವಾಗಿ ನಿಯಂತ್ರಿಸಲ್ಪಡುತ್ತದೆ.
2022ರಲ್ಲಿ 2 ಭವಿಷ್ಯವಾಣಿಗಳು ನಿಜವಾಗಿವೆ!
2022ರಲ್ಲಿ ಆಸ್ಟ್ರೇಲಿಯಾವು 'ತೀವ್ರವಾದ ಪ್ರವಾಹದ' ಹೊಡೆತಕ್ಕೆ ಒಳಗಾಗುತ್ತದೆ ಎಂದು ಬಾಬಾ ವಾಂಗಾ ಹೇಳಿದ್ದರು. ಅಂತೆಯೇ ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ ಮತ್ತು ಚಂಡಮಾರುತಗಳು ಈ ವರ್ಷ ಭಾರಿ ಪ್ರವಾಹಕ್ಕೆ ಕಾರಣವಾಯಿತು.
Gem Stones: ಯಾವ ಬಣ್ಣದ ರತ್ನ ಧರಿಸಿದ್ರೆ ಏನು ಲಾಭ?
2022ರಲ್ಲಿ ಹಲವಾರು ದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸಲಿವೆ ಎಂದಿದ್ದರು. ಈ ವರ್ಷ, ಯುನೈಟೆಡ್ ಕಿಂಗ್‌ಡಮ್‌ನ ಹಲವಾರು ಭಾಗಗಳಲ್ಲಿ ಮತ್ತು ಹಲವಾರು ಯುರೋಪಿಯನ್ ನಗರಗಳಲ್ಲಿ ಬರಗಾಲವನ್ನು ಅಧಿಕೃತವಾಗಿ ಘೋಷಿಸಲಾಯಿತು. ತೀವ್ರ ಕೊರತೆಯಿಂದಾಗಿ ಪೋರ್ಚುಗಲ್ ಮತ್ತು ಇಟಲಿಗೆ ತಮ್ಮ ನೀರಿನ ಬಳಕೆಯನ್ನು ನಿಯಂತ್ರಿಸಲು ತಿಳಿಸಲಾಗಿದೆ.
ಯಾರು ಈ ಬಾಬಾ ವಾಂಗಾ?
ಬಾಬಾ ವಾಂಗಾ 1911ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಆಕೆಯ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ. ಅವಳು 12ನೇ ವಯಸ್ಸಿನಲ್ಲಿ ಭಾರಿ ಚಂಡಮಾರುತದ ಅಪಘಾತದಲ್ಲಿ ಕಣ್ಣು ಕಳೆದುಕೊಂಡಳು. ಆಗಿನಿಂದ ತನಗೆ ಅತೀಂದ್ರಿಯ ದೃಷ್ಟಿ ಒಲಿಯಿತೆಂದು ಹೇಳಿದ್ದಾಳೆ. 1996ರಲ್ಲಿ ಸಾಯುವ ಮೊದಲು, ಅವಳು ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಳು, ಅದು ಈಗ ನಿಜವೆಂದು ಸಾಬೀತಾಗಿದೆ. ಅವಳು ಅತಿಮಾನುಷ ಸಾಮರ್ಥ್ಯಗಳನ್ನು ಹೊಂದಿದ್ದಳು ಎಂದು ನಂಬಲಾಗಿದೆ.