ಎಲ್ಲರಿಗಿಂತ ಹೆಚ್ಚು ಸ್ವಾರ್ಥ, ನೀಚತನ ಈ ರಾಶಿಯವರಲ್ಲಿ.. they are MEAN
ಎಲ್ಲರೂ ಸಂಪೂರ್ಣ ಕೆಟ್ಟರಾಗಿರುವುದು ಸಾಧ್ಯವಿಲ್ಲ. ಹಾಗೆಯೇ ಯಾರೂ ಪೂರ್ತಿ ಒಳ್ಳೆಯವರೂ ಅಲ್ಲ. ಎಲ್ಲರಲ್ಲೂ ಕೆಲ ದುಷ್ಟ ಬುದ್ಧಿಗಳಿರುತ್ತೆ. ಸ್ವಾರ್ಥ, ದ್ವೇಷ, ಹಟ- ಹೀಗೆ ಸುತ್ತಲಿದ್ದವರ ವಿಷಯದಲ್ಲಿ ಕೊಂಚ ಹೆಚ್ಚು ಕೃಪಣರಾಗೋರು ಈ ರಾಶಿಗಳು..
ಈ ಭೂಮಿ ಮೇಲೆ ಇರುವವರಲ್ಲಿ ಯಾರೂ ಶೇ.100ರಷ್ಟು ಸಾಚಾ ಅಲ್ಲ, ಹಾಗಂತ ಎಲ್ಲರೂ ಕೆಟ್ಟವರೇನಲ್ಲ. ಎಲ್ಲರಲ್ಲೂ ಕೆಲ ಒಳ್ಳೆಯ ಗುಣಗಳು, ಮತ್ತಷ್ಟು ಕೆಟ್ಟ ಗುಣಗಳೂ ಇರುತ್ತವೆ. ಎಲ್ಲಾ ಹನ್ನೆರಡು ರಾಶಿಚಕ್ರಗಳನ್ನು ಭೂತಗನ್ನಡಿಯ ಅಡಿಯಲ್ಲಿ ಇರಿಸಿ ಸುತ್ತಲಿರುವವರಿಗೆ, ಜೊತೆಯಲ್ಲಿ ಬದುಕುವವರಿಗೆ ಅವರು ಎಷ್ಟು ಕೆಟ್ಟವರಾಗಲು ಸಾಧ್ಯ ಎಂದು ನೋಡಿದರೆ ಅತಿ mean ಆಗಬಲ್ಲ ರಾಶಿಗಳು ಯಾವೆಲ್ಲ ನೋಡೋಣ. ಈ ನೀಚ ರಾಶಿಚಕ್ರದ ಶ್ರೇಯಾಂಕದಲ್ಲಿ ನಿಮ್ಮ ರಾಶಿ ಇದೆಯೇ ಎಂಬುದನ್ನು ಪರಿಶೀಲಿಸಿ, ಆತ್ಮಾವಲೋಕನ ಮಾಡಿಕೊಳ್ಳಿ. 5 ಅತಿ ನೀಚ ರಾಶಿಗಳಲ್ಲೇ ಹೆಚ್ಚಿನಿಂದ ಕಡಿಮೆ ಎಂಬ ranking orderನಲ್ಲಿ ಇರಿಸಲಾಗಿದೆ.
ವೃಶ್ಚಿಕ ರಾಶಿ(Scorpio)
ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ವೃಶ್ಚಿಕ ರಾಶಿಯು ಅತ್ಯಂತ ಶೀತವಾಗಿದೆ. ನೀವು ಮಾಡುವ ಯಾವುದೋ ಒಂದು ವಿಷಯದಿಂದ ಅವರು ಮನನೊಂದಿದ ಕ್ಷಣದಲ್ಲಿ ಅವರು ಮಂಜುಗಡ್ಡೆಯಾಗುತ್ತಾರೆ ಮತ್ತು ನೀವು ಅವರಿಗೆ ಕ್ಷಮೆ ಯಾಚಿಸುವವರೆಗೂ ಪಶ್ಚಾತ್ತಾಪವನ್ನೂ ಪಡುವುದಿಲ್ಲ. ನೀನು ಯಾವೂರ ದಾಸಯ್ಯಾ ಎಂದೂ ಕೇಳುವುದಿಲ್ಲ. ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಪ್ರತೀಕಾರಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರು ಸಮರ್ಥನೆಯನ್ನು ಪರಿಪರಿಯಾಗಿ ಪಡೆಯುವವರೆಗೂ ಅವರು ಸುಮ್ಮನಾಗುವವರಲ್ಲ. ಒಂದು ವೇಳೆ ಕ್ಷಮೆಗಾಗಿ ನಿಮ್ಮ ಮೊಣಕಾಲುಗಳ ಮೇಲೆ ಕೂರಲು ನೀವು ಸಿದ್ಧರಿಲ್ಲದಿದ್ದರೆ, ವೃಶ್ಚಿಕದವರ ಕೋಪಕ್ಕೆ ಸಿಲುಕಿದ ಮೇಲೆ ಅವರಿಂದ ದೂರ ಹೋಗುವುದೇ ಉತ್ತಮ.
ವಾರ ಭವಿಷ್ಯ: ಕಟಕಕ್ಕೆ ಭರಪೂರ ಉದ್ಯೋಗಾವಕಾಶ, ವೃಶ್ಚಿಕದ ಪ್ರೇಮಜೀವನಕ್ಕೆ ತಿರುವು!
ಮಕರ ರಾಶಿ(Capricorn)
ಮಕರವು ನೀಚ ಎಂದು ಹೆಸರುವಾಸಿಯಾಗಿದೆ. ಯಾರಾದರೂ ತಮಗೆ ಒಳ್ಳೆಯವರಲ್ಲ ಎಂದು ಅವರು ಭಾವಿಸಿದರೆ ಯಾವಾಗಲೂ ಸೇಡು ತೀರಿಸಿಕೊಳ್ಳಲು ಅವರು ಹೆಸರುವಾಸಿಯಾಗಿದ್ದಾರೆ. ಕೆಲವೊಮ್ಮೆ, ಅವರು ನಿಮ್ಮನ್ನು ಸಂಪೂರ್ಣ ನಿರ್ಲಕ್ಷಿಸುವುದನ್ನು ಮತ್ತು ಅವರ ಜೀವನದಿಂದ ನಿಮ್ಮನ್ನು ನಿರ್ಬಂಧಿಸುವುದನ್ನೇ ತಮ್ಮ ಮಾರ್ಗವಾಗಿ ಬಳಸುತ್ತಾರೆ. ಅವರು ಒಳ್ಳೆಯವರಾಗಿರಬಹುದು, ಆದರೆ ಅವರ ಕೋಪಕ್ಕೋ, ದ್ವೇಷಕ್ಕೋ ಸಿಕ್ಕಿದಿರಾದರೆ, ನಿಮ್ಮ ಕತೆ ಪಡ್ಚ!
ಮೇಷ ರಾಶಿ(Aries)
ಮೇಷ ರಾಶಿಯು ಯಾರನ್ನಾದರೂ ಎದುರಿಸಲು ಬಯಸಿದರೆ ನೇರಾನೇರಾವೇ ಕೂಗಾಡುತ್ತಾರೆ. ಕೋಪದಿಂದ ಹರಿ ಹಾಯುತ್ತಾರೆ. ಹಾಗೆಯೇ, ತಮ್ಮನ್ನು ಮಾತ್ರ ಸರ್ವತಾ ಒಳ್ಳೆಯವರು, ಎದುರಿನವರದೇ ಪೂರ್ಣ ತಪ್ಪು ಎಂದು ಸರಾಸಗಟಾಗಿ ವಾದಿಸುತ್ತಾರೆ ಮತ್ತು ಅದಕ್ಕಾಗಿ ತಾವು ನೀಚ ಗುಣ ತೋರಿದ್ದು ಸರಿಯೆಂದೇ ಸಮರ್ಥಿಸುತ್ತಾರೆ.
ಕನ್ಯಾ ರಾಶಿ (Virgo)
ಕನ್ಯಾರಾಶಿ ಕ್ರೂರ ಮತ್ತು ದಯೆಯ ಸಂಯೋಜನೆ. ಅದು ಆಗಾಗ್ಗೆ ಜನರ ಭಾವನೆಗಳನ್ನು ಉಳಿಸುವ ಪರವಾಗಿ ನೇರವಾಗಿ ಪ್ರಾಮಾಣಿಕವಾಗಿರಲು ಆಯ್ಕೆ ಮಾಡುತ್ತದೆ. ಹಾಗಿದ್ದೂ ಕನ್ಯಾರಾಶಿಯ ತಾನು ನೆಚ್ಚದ ಜನರನ್ನು ಅತಿ ಕ್ರೂರವಾಗಿ ನಡೆಸಿಕೊಳ್ಳಬಲ್ಲದು. ತಾನವರನ್ನು ನೆಗ್ಲೆಕ್ಟ್ ಮಾಡಿ ಇಲ್ಲವೇ ಆಕ್ರಮಣಕಾರಿಯಾಗಿ ಮಾತನಾಡಿ ಎದುರಿನವರನ್ನು ಹಣಿಯುತ್ತದೆ.
Love Compatibility: ನಿಮಗೆ ಈ ರಾಶಿಯವರೇ ಅತ್ಯುತ್ತಮ ಸಂಗಾತಿ, ಸಿಕ್ಕಿದ್ರೆ ಮಿಸ್ ಮಾಡ್ಕೋಬೇಡಿ!
ಸಿಂಹ ರಾಶಿ(Leo)
ಸಿಂಹ ರಾಶಿಯವರು ಎಲ್ಲರೂ ಸಂತೋಷವಾಗಿರಲು ಬಯಸುತ್ತಾರೆ, ಇತರ ಜನರಿಗೆ ಒಳ್ಳೆಯವರಾಗಿರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅವರೊಂದಿಗಿದ್ದಾಗ ಎಲ್ಲರೂ ಖುಷಿಯಾಗಿಯೇ ಇರುತ್ತಾರೆ. ಆದರೆ, ಯಾರೋ ಒಬ್ಬರು ತಮ್ಮ ಅಥವಾ ಅವರು ಪ್ರೀತಿಸುವವರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರಿಗೆ ಅನಿಸಿದರೆ ಮಾತ್ರ ಅವರ ಹೊಸ ಮುಖವನ್ನೇ ನೋಡಬೇಕಾದೀತು. ಅವರು ಬಹಳ ಕೆಟ್ಟದಾಗಿ ಕಡೆಗಣಿಸಲಾರಂಭಿಸುತ್ತಾರೆ. ಜೊತೆಗೆ ಅವರ ಬಾಳಿನಲ್ಲಿ ನಿಮಗೆ ನಯಾಪೈಸೆ ಬೆಲೆ ಇಲ್ಲ ಎಂಬುದನ್ನು ಸ್ವಭಾವದಲ್ಲಿ ತೋರಿಸುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ರಾಶಿಯ ಸ್ವಭಾವಗಳು, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.