ಎಷ್ಟೇ ಒಳ್ಳೆ ಅಮ್ಮನಾಗಿರಲಿ, ಅತ್ತೆಯಾಗಿ ಮಾತ್ರ ಈ ರಾಶಿಗಳವರು ನೀಚರು!

ಅತ್ತೆ ಸೊಸೆ ಜಗಳ ಎಂಬುದು ಸಾಮಾನ್ಯ ವಿಚಾರವೆಂಬಷ್ಟು ಸಾಮಾನ್ಯವಾಗಿದೆ. ಎಲ್ಲರ ಮನೆಯಲ್ಲೂ ಎರಡು ಜಡೆಗಳು ಸೇರುವುದಿಲ್ಲ ಎಂದುಕೊಂಡು ಅತ್ತೆ ಸೊಸೆ ಜಗಳವನ್ನು ಒಪ್ಪಿಕೊಳ್ಳುವಂತಾಗಿದೆ. ಆದರೆ, ಕೆಲ ಮನೆಗಳಲ್ಲಂತೂ ಅತ್ತೆಯ ಕಾಟ ಸಹಿಸಲೇ ಅಸಾಧ್ಯ ಎಂಬಂತಾಗಿರುತ್ತದೆ.. ಅಂತ ಕೆಟ್ಟ ಅತ್ತೆಯರು ಯಾವ ರಾಶಿಗೆ ಸೇರಿರುತ್ತಾರೆ ಎಂದು ನೋಡೋಣ.

the MIL of these zodiac signs will show hell to the daughters-in-law skr

ಅನೇಕ ಹುಡುಗಿಯರು ಮದುವೆಗೆ ಹೆದರುತ್ತಾರೆ. ಅದಕ್ಕೆ ಕಾರಣವೇ ಅತ್ತೆ ಮಾವನ ಭಯ. ಗಂಡನಿಗಾದರೂ ಹೊಂದಿಕೊಳ್ಳಬಹುದು. ಆದರೆ, ಅತ್ತೆಯರಿಗೆ ಹೊಂದಿಕೊಳ್ಳುವುದು ಕಷ್ಟ. ಅದರಲ್ಲೂ ಈಗೆಲ್ಲ ಹೆಣ್ಣುಮಕ್ಕಳು ಬಹಳ ಮುದ್ದಿನಲ್ಲಿ, ಪ್ರೀತಿಯಲ್ಲಿ, ಸ್ವತಂತ್ರವಾಗಿ ತವರಿನಲ್ಲಿ ಬೆಳೆದಿರುತ್ತಾರೆ. ಆರ್ಥಿಕವಾಗಿಯೂ ಸ್ವತಂತ್ರರಾಗಿರುತ್ತಾರೆ. ಗಂಡನೂ ಈಗೀಗ ಸ್ನೇಹಿತನಂತೆಯೇ ಇರುತ್ತಾನೆ. ಆದರೆ, ಅತ್ತೆಗೆ ಮಾತ್ರ ತನ್ನ ಮಗ ಕೈ ತಪ್ಪುವ ಭಯ, ಮನೆಯ ಯಜಮಾನಿಕೆ ಕಳೆದುಕೊಳ್ಳುವ ಭಯ, ಅದಕ್ಕಾಗಿ ಸೊಸೆಯನ್ನು ನಿಯಂತ್ರಣದಲ್ಲಿಡಲು ಬಯಸುತ್ತಾರೆ.

ಅಷ್ಟೇ ಅಲ್ಲದೆ, ಮಗನಿಗೆ ಎಲ್ಲ ಕೆಲಸವನ್ನು ಮಾಡಿಕೊಡುವ ಅತ್ತೆ, ಸೊಸೆಯನ್ನು ಮಾತ್ರ ತನ್ನ ಹಾಗೂ ಮನೆಯವರ ಸೇವೆ ಮಾಡಿಕೊಡಲು ಬಂದವಳು ಎನ್ನುವಂತೆ ನೋಡತೊಡಗುತ್ತಾರೆ. ಆಕೆ, ಕಚೇರಿ ಕೆಲಸ ಮಾಡಿ ಎಷ್ಟೇ ದುಡಿದು ತರಲಿ, ಎಷ್ಟೇ ಸುಸ್ತಾಗಲಿ, ಅವಳು ವಿಶ್ರಾಂತಿ ತೆಗೆದುಕೊಳ್ಳುವುದನ್ನು ಹೆಚ್ಚಿನ ಅತ್ತೆಯರಿಗೆ ನೋಡಲಾಗುವುದಿಲ್ಲ. ಅಲ್ಲಿಂದಲೇ ಶುರುವಾಗುವುದು ಎಡವಟ್ಟು. ಹೀಗೆ ಅತ್ತೆ ಸೊಸೆ ಜಗಳ ಶುರುವಾಗಿ ತಾರಕಕ್ಕೇರಿ, ಮನೆಮಂದಿಯ ನೆಮ್ಮದಿಯೆಲ್ಲ ಹಾಳಾಗುತ್ತದೆ. ಎಲ್ಲ ರಾಶಿಚಕ್ರಗಳಲ್ಲಿ(Zodiac signs) ಈ ನಾಲ್ಕು ರಾಶಿಯ ಅತ್ತೆಯರು ಬಹಳ ಕೆಟ್ಟವರು. ಅವರು ತಮ್ಮ ಸೊಸೆಯನ್ನು ನಡೆಸಿಕೊಳ್ಳುವ ರೀತಿ ಸರಿಯಿರುವುದಿಲ್ಲ. ಅದಕ್ಕಾಗಿಯೇ ಈಗೆಲ್ಲ ಗಂಡು ಹೆಣ್ಣಿನ ಜಾತಕವಲ್ಲ, ಅತ್ತೆ ಸೊಸೆಯ ಜಾತಕ ಹೊಂದಿಸಿ ನೋಡಬೇಕು ಎಂಬ ಹೊಸ ಮಾತು ಕೇಳಿಬರುತ್ತಿದೆ. 

ಕೆಟ್ಟ ಅತ್ತೆಯರೆನಿಸಿಕೊಳ್ಳುವವರು ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ.

1. ಸಿಂಹ ರಾಶಿ(Leo)
ಸಿಂಹ ರಾಶಿಯ ತಾಯಂದಿರು ಹೆಚ್ಚಿನ ಸಂದರ್ಭಗಳಲ್ಲಿ ಬಹಳ ಸ್ವಾಮ್ಯಸೂಚಕರಾಗಿದ್ದಾರೆ. ಹಾಗಾದ್ರೆ ಮಗ ಸೊಸೆ ಮನೆ ಸೇರಿದ ತಕ್ಷಣ ಅವರೊಳಗಿನ ವಿಲನ್ ಹೊರಗೆ ಬರ್ತಾರೆ. ಸೊಸೆಯಿಂದಾಗಿ ಮಗ ದೂರ ಹೋಗುತ್ತಾನೆ ಎಂಬ ಭಯ ಅವರಲ್ಲಿ ಹೆಚ್ಚಿರುತ್ತದೆ. ಮಗ ಮನೆಯಲ್ಲಿರುವ ಬದಲು ಸೊಸೆಯೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾನೆಂಬುದೇ ಸಾಕು ಅವರಿಗೆ ಸೊಸೆ ಮೇಲೆ ಕಿಡಿ ಕಾರಲು. ಆಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಯತ್ನಿಸುತ್ತಾರೆ. ಅವರು ತಮ್ಮ ಮಗ ತಮ್ಮ ಮಾತುಗಳನ್ನು ಮಾತ್ರ ಕೇಳಬೇಕೆಂದು ಬಯಸುತ್ತಾರೆ. ಸೊಸೆಯ ಬಗ್ಗೆ ದಿನ ದಿನ ಮಗನ ಬಳಿ ದೂರು ನೀಡುತ್ತಾರೆ. 

2023 ರ ಈಶ ಮಹಾಶಿವರಾತ್ರಿಗೆ ಸಿದ್ಧರಾಗಿ..! ಫೆಬ್ರವರಿ 18 ರಂದು ನಡೆಯಲಿರುವ ಪ್ರಮುಖ ಉತ್ಸವಗಳು ಹೀಗಿದೆ..

2. ಧನು ರಾಶಿ(Sagittarius)
ಧನು ರಾಶಿಯ ತಾಯಂದಿರಿಗೂ ವಿವಾಹದ ಬಳಿಕ ತಮ್ಮ ಮಕ್ಕಳು ದೂರವಾಗುತ್ತಾರೆ ಎಂಬ ಭಾವನೆ ಇರುತ್ತದೆ. ಅತ್ತೆಯಾದಾಗ ಅವರು ಮಗ-ಸೊಸೆ ನಡುವೆ ಜಗಳ ತಂದಿಡಲು ಹಿಂಜರಿಯುವುದಿಲ್ಲ. ಅವರು ತಮ್ಮ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಸೊಸೆಯಂದಿರು ಈ ರಾಶಿಚಕ್ರ ಚಿಹ್ನೆಯ ಅತ್ತೆಯರಿಗೆ ಹೆಚ್ಚು ಗಮನ ಮತ್ತು ಪ್ರೀತಿಯನ್ನು ನೀಡಬೇಕು. ನೀವೇ ಇಂದ್ರ ಚಂದ್ರ ಎಂದು ಏರಿಸಬೇಕು. ಆಗ ಮಾತ್ರ ಅವರು ಶಾಂತವಾಗಿರುತ್ತಾರೆ.

3. ಮಕರ ರಾಶಿ(Capricorn)
ಮಕರ ರಾಶಿಯ ಅತ್ತೆಯರು ತುಂಬಾ ಕೆಟ್ಟದಾಗಿ ವರ್ತಿಸುವುದಿಲ್ಲ. ಅವರು ಮಗ ಮತ್ತು ಸೊಸೆಯ ನಡುವೆ ಜಗಳಗಳನ್ನು ಸೃಷ್ಟಿಸುವುದಿಲ್ಲ. ಆದರೆ ಮಗ ಸೊಸೆಯ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಯುವ ಹಂತದಲ್ಲಿದ್ದರೂ ಬಗೆಹರಿಯಲು ಬಿಡುವುದಿಲ್ಲ. ಅವರು ಜಗಳವಾಡುವಾಗ, ಅತ್ತೆ ಅದನ್ನು ನೋಡುತ್ತಾರೆ ಮತ್ತು ಆನಂದಿಸುತ್ತಾರೆ.

Zodiac Sign: ಮೊದಲ ಭೇಟಿಯಲ್ಲೇ ಜನರನ್ನ ಅಳೆಯೋದು ಹೇಗೆ? ಈ ಜನ ಇದ್ರಲ್ಲಿ ಎತ್ತಿದ ಕೈ

4. ಮೀನ ರಾಶಿ(Pisces)
ಮೀನ ರಾಶಿಯವರು ಕೂಡ ಸೊಸೆಯರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ. ಅವರು ಅವರನ್ನು ಪ್ರಚೋದಿಸುತ್ತಾರೆ ಮತ್ತು ಹೆಚ್ಚಿನ ಜಗಳಗಳನ್ನು ಮಾಡಲು ಪ್ರೋತ್ಸಾಹಿಸುತ್ತಾರೆ. ಅವರು ಸಾಧ್ಯವಾದಷ್ಟು ಸಂಘರ್ಷಗಳನ್ನು ಸೃಷ್ಟಿಸಲು ನೋಡುತ್ತಾರೆ. ಅವರು ಹಾಗೆ ಜಗಳವಾಡದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ. ಎಲ್ಲ ತಪ್ಪುಗಳಿಗೂ ಸೊಸೆಯೇ ಕಾರಣ, ಎಲ್ಲ ಒಳಿತೂ ತನ್ನಿಂದಲೇ ಆಗುತ್ತಿದೆ ಎಂಬಂತಾಡುತ್ತಾರೆ. 

Latest Videos
Follow Us:
Download App:
  • android
  • ios