Zodiac Sign: ಮೊದಲ ಭೇಟಿಯಲ್ಲೇ ಜನರನ್ನ ಅಳೆಯೋದು ಹೇಗೆ? ಈ ಜನ ಇದ್ರಲ್ಲಿ ಎತ್ತಿದ ಕೈ
ಮೊದಲ ಭೇಟಿಯಲ್ಲಿ ಜನರನ್ನು ಅರ್ಥ ಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೆಲವು ರಾಶಿಗಳ ಜನ ಮಾತ್ರ ಇದರಲ್ಲಿ ಭಾರೀ ಮುಂದಿರುತ್ತಾರೆ. ಅವರು ಮೊದಲ ಭೇಟಿಯಲ್ಲೇ ಜನರನ್ನು ಅಳೆದುಬಿಡುತ್ತಾರೆ.
ಫಸ್ಟ್ ಇಂಪ್ರೆಷನ್ ಭಾರೀ ಮುಖ್ಯ. ಒಬ್ಬರ ಮೇಲೆ ಅಳಿಸಲಾರದ ಭಾವನೆಯನ್ನು ಅದು ಬಿತ್ತುತ್ತದೆ. ಮೊದಲ ಭೇಟಿಯಲ್ಲಿ ಮೂಡಿದ ಭಾವನೆ ಸುಲಭದಲ್ಲಿ ಬದಲಾಗುವುದಿಲ್ಲ. ಸಾಮಾನ್ಯವಾಗಿ ನಾವೆಲ್ಲರೂ ಮೊದಲ ಬಾರಿ ಭೇಟಿಯಾದವರನ್ನು ನಮ್ಮದೇ ದೃಷ್ಟಿಕೋನದಿಂದ ಅಂದಾಜು ಮಾಡುತ್ತೇವೆ. ಭೇಟಿಯ ಕೆಲವೇ ನಿಮಿಷಗಳಲ್ಲಿ ಅವರು ಹೇಗೆ, ವ್ಯಕ್ತಿತ್ವ ಯಾವ ಮಾದರಿಯದ್ದು ಎನ್ನುವುದನ್ನು ಗುರುತಿಸಿಕೊಂಡರೆ ಎಷ್ಟೋ ಬಾರಿ ನಮ್ಮ ಕೆಲಸವೂ ಹಗುರವಾಗುತ್ತದೆ. ಒಂದೊಮ್ಮೆ ಅವರು ನಮಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲವೆಂದಾದರೂ, ಅವರಿಂದ ನಮಗೆ ಯಾವುದೇ ಕೆಲಸವಾಗಬೇಕಿಲ್ಲವಾದರೂ ಯಾರನ್ನಾದರೂ ಭೇಟಿಯಾದಾಗ ಅವರನ್ನು ಅಳೆಯುವುದು ಅತಿ ಸಹಜ ಕ್ರಿಯೆ. ವರ್ತನೆಗೆ ಸಂಬಂಧಿಸಿ ನಮ್ಮ ಸಮಾಜದಲ್ಲಿ ಸ್ವಲ್ಪ ನಿರೀಕ್ಷೆಗಳಿರುವುದು ಇದಕ್ಕೆ ಕಾರಣ. ಕೆಲವರು ಇನ್ನೊಬ್ಬರನ್ನು ಅಳೆಯುವಲ್ಲಿ ನಿಷ್ಣಾತರಾಗಿರುತ್ತಾರೆ. ಅವರು ಸೂಕ್ಷ್ಮವಾಗಿ ಜನರನ್ನು ಗಮನಿಸುವುದು ಇದಕ್ಕೆ ಕಾರಣ. ಇಲ್ಲೂ ಸಹ ರಾಶಿಚಕ್ರಗಳು ಮಹತ್ವದ ಭೂಮಿಕೆ ನಿಭಾಯಿಸುತ್ತವೆ. ಕೆಲವು ರಾಶಿಗಳ ಜನ ಇನ್ನೊಬ್ಬರ ವ್ಯಕ್ತಿತ್ವವನ್ನು ಮೊದಲ ಭೇಟಿಯಲ್ಲೇ ಕಠಿಣವಾಗಿ ಅಳೆಯುವಲ್ಲಿ ಭಾರೀ ಮುಂದಿರುತ್ತಾರೆ. ಈ ರಾಶಿಗಳ ಜನರ ವ್ಯಕ್ತಿತ್ವ, ನೆಗೆಟಿವ್ ಅನುಭವಗಳು ಇದಕ್ಕೆ ಮುಖ್ಯ ಕಾರಣವಾಗಿರುತ್ತವೆ.
• ಮೇಷ (Aries)
ಮೇಷ ರಾಶಿಯ ಜನ ಇತರರನ್ನು ಮೂರ್ಖರು (Fool) ಎಂದು ಭಾವಿಸುತ್ತಾರೆ. ಜನರಲ್ಲಿರುವ ವಿಭಿನ್ನತೆಯನ್ನು (Difference) ಗುರುತಿಸಿದರೂ ಇವರ ಪಾಲಿಗೆ ಅವೆಲ್ಲವೂ ಅರ್ಥವಿಲ್ಲದ್ದು. ಹೀಗಾಗಿ, ಮೊದಲ ಭೇಟಿಯಲ್ಲಿ ಅತ್ಯುತ್ಸಾಹ (Adventurous) ಹಾಗೂ ಶಕ್ತಿಯುತ ವ್ಯಕ್ತಿತ್ವದಿಂದ (Personality) ಇವರ ಮೇಲೆ ಪ್ರಭಾವ ಬೀರಿದರೆ ಸರಿ. ಇಲ್ಲವಾದರೆ, ಮೇಷ ರಾಶಿಯವರ ಮೇಲೆ ಸುಲಭವಾಗಿ ಯಾರೂ ಸಹ ಪ್ರಭಾವ (Impression) ಬೀರಲು ಸಾಧ್ಯವಿಲ್ಲ. ಎಲ್ಲರನ್ನೂ ಇವರು ದುರ್ಬಲರನ್ನಾಗಿ ಪರಿಗಣಿಸುತ್ತಾರೆ. ಇತರರು ತಮ್ಮಂತೆಯೇ ಬದುಕಬೇಕು ಎಂದು ನಿರೀಕ್ಷಿಸುತ್ತಾರೆ ಹಾಗೂ ಈ ಕುರಿತು ಕಠಿಣ ನಿಲುವು ಹೊಂದಿರುತ್ತಾರೆ.
ಕುಂಭ ರಾಶಿ ಪ್ರವೇಶಿಸಿದ ಸೂರ್ಯ… ಯಾವ ರಾಶಿಯಲ್ಲೇನು ಬದಲಾವಣೆ?
• ಮಿಥುನ (Gemini)
ಬೇರೆ ಯಾವುದೇ ರಾಶಿಗಿಂತ ಮಿಥುನ ರಾಶಿಯವರು ಜನರನ್ನು ಅಳೆಯುವುದರಲ್ಲಿ (Judgemental) ನಿಷ್ಣಾತರಾಗಿರುತ್ತಾರೆ. ಉತ್ಸಾಹ ಹಾಗೂ ಯಾವಾಗಲೂ ಅತ್ತಿತ್ತ ಸುತ್ತಾಡುತ್ತ ಕ್ರಿಯಾಶೀಲವಾಗಿರುವ ಮಿಥುನ ರಾಶಿಯವರನ್ನು ಮೊದಲ ಭೇಟಿಯಲ್ಲಿ (First Meet) ಸೆಳೆಯುವುದು ಕಷ್ಟಕರ. ಅವರಂಥದ್ದೇ ವ್ಯಕ್ತಿತ್ವ ಅಥವಾ ವರ್ತನೆ ನಿಮ್ಮದಾಗಿದ್ದರೆ ಸರಿ. ವರ್ತನೆಯನ್ನು ಆಧರಿಸಿ ಮೊದಲ ಭೇಟಿಯಲ್ಲೇ ಜನರನ್ನು ಅರಿತುಕೊಳ್ಳುವ ಕಲೆ ಇವರಿಗೆ ಸಿದ್ಧಿಸಿರುತ್ತದೆ. ಜನರ ಬಗ್ಗೆ ತಮ್ಮದೇ ಅಭಿಪ್ರಾಯ (Opinion) ರೂಪಿಸಿಕೊಳ್ಳುತ್ತಾರೆ. ಮೊದಲ ಭೇಟಿಯಲ್ಲಿ ಮಿಥುನ ರಾಶಿಯವರ ಗಮನ ಸೆಳೆಯಲು ನೀವು ಯಶಸ್ವಿಯಾದಿರಿ ಎಂದಾದರೆ ಅದೊಂದು ವಿಶಿಷ್ಟ ಸಾಧನೆಯಾಗಬಲ್ಲದು. ಇಲ್ಲವಾದರೆ, ಈ ನಿಮ್ಮ ಭೇಟಿಯೇ ಅವರೊಂದಿಗಿನ ಕೊನೆಯ ಭೇಟಿಯಾಗಬಹುದು. ಏಕೆಂದರೆ, ಇವರು ಡಲ್ ಹಾಗೂ ನಿರುತ್ಸಾಹಿಗಳ ಸ್ನೇಹ ಮಾಡುವುದಿಲ್ಲ.
• ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುವಲ್ಲಿ ಮುಂದಿರುತ್ತಾರೆ. ಸಮಾಜದ ನಿರೀಕ್ಷೆ (Expectation) ಹಾಗೂ ದೃಷ್ಟಿಕೋನದ ಬಗ್ಗೆ ಅರಿತಿರುತ್ತಾರೆ. ಹೊಸದಾಗಿ ಪರಿಚಯವಾಗುವ ಮಂದಿಯ ಬಗ್ಗೆ ಮೂಡಿದ ಅಭಿಪ್ರಾಯಗಳನ್ನು ತಮ್ಮಲ್ಲೇ ಇರಿಸಿಕೊಳ್ಳುತ್ತಾರೆ. ಒಮ್ಮೆ ಹೊಸಬರೊಂದಿಗೆ ವ್ಯವಹರಿಸಿದರು ಎಂದರೆ ಅವರ ಕುರಿತು ಸಮಗ್ರ ವಿಮರ್ಶೆ (Analysis) ಮಾಡಿಮುಗಿಸುತ್ತಾರೆ. ಮಾನಸಿಕವಾಗಿ ಅವರ ಸ್ಥಿತಿಗತಿ ಅರಿತುಕೊಳ್ಳುತ್ತಾರೆ. ನಿಮ್ಮ ದೇಹ ಭಾಷೆಯನ್ನು ನೋಡಿ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೀಗಾಗಿ, ಯಾವುದಾದರೂ ಅನಗತ್ಯ ಭಂಗಿಯಲ್ಲಿ ಹೆಚ್ಚು ಸಮಯವಿದ್ದರೆ ಅವರಲ್ಲಿ ನಿಮ್ಮ ಬಗ್ಗೆ ತಪ್ಪು ಭಾವನೆ (Wrong Impression) ಮೂಡುವುದು ಖಚಿತ.
ಈ ನಾಲ್ಕು ರಾಶಿಯ ಹುಡುಗಿಯರಿಗೆ ಲಕ್ಷ್ಮಿ, ಸರಸ್ವತಿ ಇಬ್ಬರ ಕೃಪೆಯೂ ಇದೆ!
• ಕುಂಭ (Aquarius)
ಕುಂಭ ರಾಶಿಯ ಜನ ಇತರರ ಬಗ್ಗೆ ಅತಿಯಾಗಿ ನ್ಯಾಯತೀರ್ಮಾನ ಮಾಡುತ್ತಾರೆ. ಅಸಲಿಗೆ, ನಿಮ್ಮನ್ನು ಭೇಟಿಯಾಗುವ ಮುನ್ನವೇ ನಿಮ್ಮ ಬಗ್ಗೆ ಒಂದು ರೀತಿಯ ಅಭಿಪ್ರಾಯ ಮೂಡಿಸಿಕೊಂಡಿರುತ್ತಾರೆ. ನಿಮ್ಮ ಕುರಿತ ವಿವರಗಳನ್ನು (Details) ಕಲೆ ಹಾಕಿರುತ್ತಾರೆ. ಉದ್ದೇಶಪೂರ್ವಕವಲ್ಲದಿದ್ದರೂ ಇತರರನ್ನು ಜಡ್ಜ್ ಮಾಡುವುದು ಇವರ ಹವ್ಯಾಸ.