Asianet Suvarna News Asianet Suvarna News

2023 ರ ಈಶ ಮಹಾಶಿವರಾತ್ರಿಗೆ ಸಿದ್ಧರಾಗಿ..! ಫೆಬ್ರವರಿ 18 ರಂದು ನಡೆಯಲಿರುವ ಪ್ರಮುಖ ಉತ್ಸವಗಳು ಹೀಗಿದೆ..

ಕೊಯಮತ್ತೂರಿನ ಈಶ ಯೋಗ ಕೇಂದ್ರವು ವರ್ಷದ ಅತಿದೊಡ್ಡ ಹಬ್ಬವಾದ ಈಶ ಮಹಾಶಿವರಾತ್ರಿಯನ್ನು ಆಚರಿಸಲು ಸಿದ್ಧವಾಗುತ್ತಿದೆ. ರಾತ್ರಿಪೂರ ನಡೆಯುವ ಈ ಹಬ್ಬವು ಮಾರ್ಚ್ 18 ರ ಸಂಜೆ 6 ಗಂಟೆಗೆ ಸದ್ಗುರುಗಳ ಸನ್ನಿಧಿಯಲ್ಲಿ ಆರಂಭವಾಗಿ ಮುಂದಿನ ದಿನ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗುತ್ತದೆ. 

celebrate mahashivaratri with isha foundation february 18th major programmes ash
Author
First Published Feb 15, 2023, 6:11 PM IST | Last Updated Feb 15, 2023, 6:11 PM IST

ಕೊಯಮತ್ತೂರು (ಫೆಬ್ರವರಿ 15, 2023): ತಮಿಳುನಾಡಿನ ಕೊಯಮತ್ತೂರಿನಲ್ಲಿ ಸದ್ಗುರುಗಳು ನಡೆಸಿಕೊಡುವ ಮಧ್ಯರಾತ್ರಿ ಧ್ಯಾನ, ಸಂಗೀತ-ನೃತ್ಯ ಪ್ರದರ್ಶನಗಳು, ಮತ್ತು ಸಾಂಸ್ಕೃತಿಕ ಸಂಭ್ರಮ ನಿಮಗಾಗಿ ಕಾದಿದೆ. ಇದು ತೀವ್ರವಾದ ಆಧ್ಯಾತ್ಮಿಕ ಅನುಭವ ಪಡೆಯಲು ರೂಪುಗೊಂಡ ಶ್ರೇಷ್ಠ ಪರಿಸರವಾಗಿದೆ. ಕೊಯಮತ್ತೂರಿನ ಈಶ ಯೋಗ ಕೇಂದ್ರವು ವರ್ಷದ ಅತಿದೊಡ್ಡ ಹಬ್ಬವಾದ ಈಶ ಮಹಾಶಿವರಾತ್ರಿಯನ್ನು ಆಚರಿಸಲು ಸಿದ್ಧವಾಗುತ್ತಿದೆ. ರಾತ್ರಿಪೂರ ನಡೆಯುವ ಈ ಹಬ್ಬವು ಮಾರ್ಚ್ 18 ರ ಸಂಜೆ 6 ಗಂಟೆಗೆ ಸದ್ಗುರುಗಳ ಸನ್ನಿಧಿಯಲ್ಲಿ ಆರಂಭವಾಗಿ ಮುಂದಿನ ದಿನ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗುತ್ತದೆ. 

ಅತ್ಯದ್ಭುತವಾದ ಈಶ ಮಹಾಶಿವರಾತ್ರಿ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನೇರಪ್ರಸಾರದಲ್ಲೂ ಭಾಗವಹಿಸುವವರೆಂದು ನಿರೀಕ್ಷಿಸಲಾಗಿದೆ. ಮಾಧ್ಯಮಗಳ ಮೂಲಕ ಕೋಟಿಗಳ ಸಂಖ್ಯೆಯಲ್ಲಿ ಭಾಗವಹಿಸಿ ಸದ್ಗುರುಗಳ ನಿರ್ದೇಶನದಲ್ಲಿ ಧ್ಯಾನ, ಅನುಪಮ ಸಂಗೀತ, ನರ್ತನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು. ಈಶ ಮಹಾಶಿವರಾತ್ರಿಯು 16 ಭಾಷೆಗಳಲ್ಲಿ ಆನ್‌ಲೈನ್ ಮೂಲಕ ನೇರಪ್ರಸಾರವಾಗಲಿದೆ. ಭಾರತದಲ್ಲಿನ ಎಲ್ಲಾ ಮುಖ್ಯ ಟೆಲಿವಿಷನ್ ಜಾಲತಾಣಗಳಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮರಾಠಿ, ಮತ್ತಿತರ ರಾಜ್ಯ ಭಾಷೆಗಳಲ್ಲಿ ಪ್ರಸಾರವಾಗಲಿದೆ. 

ಇದನ್ನು ಓದಿ: MAHASHIVRATRI : ಸಾಲದಿಂದ ಮುಕ್ತರಾಗಲು ಮಹಾಶಿವರಾತ್ರಿಯಂದು ಈ ಕೆಲಸ ಮಾಡಿ

ಇನ್ನು, ಮಹಾಶಿವರಾತ್ರಿಯ ಮಹತ್ವವನ್ನು ವಿವರಿಸುತ್ತ ಹೇಳಿದ ಸದ್ಗುರುಗಳು, “ಮಹಾಶಿವರಾತ್ರಿ  ಧರ್ಮ ಮತಗಳದ್ದಲ್ಲ, ಜನಾಂಗ ಅಥವಾ ದೇಶದ್ದಲ್ಲ; ಈ ರಾತ್ರಿಯಲ್ಲಿ ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ದೇಹದಲ್ಲಿ ಸಹಜವಾಗಿ ಶಕ್ತಿಯ ಉತ್ಕರ್ಷವಾಗುತ್ತದೆ. ಬ್ರಹ್ಮಾಂಡದ ಒಂದು ಚಮತ್ಕಾರವಾಗಿ ವಿಶ್ವದ ಮೇಲೆ ಪ್ರಭಾವ ಬೀರುತ್ತದೆ. ಇದನ್ನು ಪ್ರಜ್ಞಾ ಪೂರ್ವಕವಾಗಿ ಅನುಭವಿಸಿರಿ.“ ಎಂದರು. 

ಧ್ಯಾನಲಿಂಗದಲ್ಲಿ ಪಂಚ ಭೂತ ಆರಾಧನೆಯೊಡನೆ, ಈಶ ಮಹಾಶಿವರಾತ್ರಿಯು ಲಿಂಗಭೈರವಿ ಮಹಾ ಯಾತ್ರಾದಲ್ಲಿ ಶುರುವಾಗುವುದು. ನಂತರ ಸದ್ಗುರುಗಳ ಸತ್ಸಂಗ, ಮಧ್ಯರಾತ್ರಿ ಧ್ಯಾನ, ಮತ್ತು ವರ್ಣರಂಜಿತ ಧ್ವನಿ ಮತ್ತು ಬೆಳಕಿನ ಪ್ರದರ್ಶನವಾದ ಆದಿಯೋಗಿ ದಿವ್ಯ ದರ್ಶನ ಇರುತ್ತದೆ. 

ಇದನ್ನೂ ಓದಿ: Mahashivratri : ಶಿವ ಒಲಿಬೇಕೆಂದ್ರೆ ಅಭಿಷೇಕ ಮಾಡುವಾಗ ಈ ತಪ್ಪು ಮಾಡ್ಬೇಡಿ!

ಭಾಗವಹಿಸುವವರನ್ನು ಎಚ್ಚರವಾಗಿದ್ದು ನರ್ತಿಸುತ್ತಿರುವಂತೆ ಮಾಡಲು ರಾಷ್ಟ್ರದ ಬೇರೆ ಬೇರೆ ರಾಜ್ಯಗಳ ಪ್ರಸಿದ್ಧ ಕಲಾವಿದರು- ರಾಜಸ್ಥಾನದ ಮಾಮೆ ಖಾನ್, ಪ್ರಶಸ್ತಿ ವಿಜೇತ ಕುಶಲ ಸಿತಾರ್ ವಾದಕರಾದ ನೀಲಾದ್ರಿ ಕುಮಾರ್, ಟಾಲಿವುಡ್ ಗಾಯಕ ರಾಮ್ ಮಿರಿಯಾಲ, ಮತ್ತು ತಮಿಳು ಹಿನ್ನೆಲೆ ಗಾಯಕ ವೇಲ್ಮುರುಗನ್ ಇರುವರು. ಪ್ರತಿ ವರ್ಷದಂತೆ, ಮತ್ತೆ ಮತ್ತೆ ಕೇಳಬಯಸುವ ಈಶ ಕೇಂದ್ರದ ಸಂಗೀತ ವೃಂದ ಸೌಂಡ್ಸ್ ಆಫ್ ಈಶದ ಕಾರ್ಯಕ್ರಮಗಳು, ಈಶ ಸಂಸ್ಕೃತಿಯ ನೃತ್ಯ ಕಾರ್ಯಕ್ರಮಗಳು ರಾತ್ರಿಯ ಆಧ್ಯಾತ್ಮಿಕ ಪ್ರಭೆಯನ್ನು ಹೆಚ್ಚಿಸುತ್ತವೆ.

https://www.instagram.com/p/CocMZB1gzeN/

ಕಳೆದ ಕೆಲವು ವರ್ಷಗಳಲ್ಲಿ, ಈಶ ಮಹಾಶಿವರಾತ್ರಿ ಉತ್ಸವವು ಸಂಕೇತವಾಗಿ ಬೆಳೆದು ಎಲ್ಲಾ ಪ್ರಸಾರಗಳ ದಾಖಲೆಗಳನ್ನೂ ಮುರಿದಿದೆ. 2022ರ ಮಹಾಶಿವರಾತ್ರಿಯ ಕಾರ್ಯಕ್ರಮಗಳನ್ನು ದೂರದರ್ಶನ ಮತ್ತು ನೇರಪ್ರಸಾರಗಳ ಮೂಲಕ, 22 ಭಾಷೆಗಳಲ್ಲಿ, 192 ದೇಶಗಳಲ್ಲಿ, 14 ಕೋಟಿ ವೀಕ್ಷಕರು ನೋಡಿದರು. 2021ರಲ್ಲಿ, ಮಾರ್ಚ್ 11-12ರ ಮಹಾಶಿವರಾತ್ರಿಯ ಆನ್‌ಲೈನ್ ವೀಕ್ಷಣೆಯು 14ರಂದು ಪ್ರಸಾರವಾದ ಗ್ರ್ಯಾಮಿ ಅವಾರ್ಡ್ ವೀಕ್ಷಣೆಗಿಂತಲೂ 50% ಹೆಚ್ಚಾಗಿದ್ದಿತ್ತು. 

ಇದನ್ನೂ ಓದಿ: Mahashivratri 2023: ಶಿವರಾತ್ರಿ ಹಬ್ಬದಂದು ಉಪವಾಸ ಏಕೆ ಮಾಡಬೇಕು?

ಈಶ ಮಹಾಶಿವರಾತ್ರಿ ಯನ್ನು https://www.youtube.com/live/qAkI10NsUe4?feature=share ನಲ್ಲಿ ವೀಕ್ಷಿಸಿ. 

ಈಶ ಮಹಾಶಿವರಾತ್ರಿಯ ಜೊತೆಗೆ, ಭಕ್ತರು ರುದ್ರಾಕ್ಷ ದೀಕ್ಷಾ, ಇನ್ ದಿ ಗ್ರೇಸ್ ಆಫ಼್ ಯೋಗ, ಯಕ್ಷ ಉತ್ಸವ, ಮಹಾ ಅನ್ನದಾನ, ಮಹಾ ಶಿವರಾತ್ರಿ ಸಾಧನಾ - ಇತ್ಯಾದಿ ವಿವಿಧ ಅರ್ಪಣೆಗಳಿಂದ ಲಾಭ ಪಡೆಯಬಹುದು.

In the Grace of Yoga (ಇನ್ ದಿ ಗ್ರೇಸ್ ಆಫ಼್ ಯೋಗ) - ಸದ್ಗುರುಗಳೊಡನೆ ಕಾರ್ಯಕ್ರಮ

ಇನ್ ದಿ ಗ್ರೇಸ್ ಆಫ಼್ ಯೋಗ ಮಹಾಶಿವರಾತ್ರಿಯ ವಿಶೇಷ ಕಾರ್ಯಕ್ರಮವು ಸಾಧಕರಿಗೆ ವರ್ಷದಲ್ಲಿಯೇ ಅತ್ಯುತ್ತಮ ದಿನವಾದ ರಾತ್ರಿಯಲ್ಲಿ ಗುರುಗಳ ಸಾನ್ನಿಧ್ಯದ ಅನುಗ್ರಹದ ಅನುಪಮ ಅವಕಾಶವನ್ನು ನೀಡುವುದು. ಈ ವರ್ಷ, ಸದ್ಗುರುಗಳು ಸಾಧಕರನ್ನು ಶಕ್ತಿಯುತ ಪ್ರಕ್ರಿಯೆಗಳ ಮತ್ತು ನಿರ್ದೇಶಿತ ಧ್ಯಾನಗಳ ಮೂಲಕ ಪಂಚಭೂತಗಳ ಶುದ್ಧೀಕರಣ ಮತ್ತು ಜೀವನದ ಆಧಾರವಾದ ಪಂಚ ತತ್ತ್ವಗಳ ಉಪಯೋಗ ಮಾಡಿ ಸ್ವಾಸ್ಥ್ಯ ಪಡೆಯುವಂತೆ ಮಾಡುವರು. ಈ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ 9 ಭಾಷೆಗಳಲ್ಲಿ, 14 ವರ್ಷಕ್ಕೆ ಮೇಲ್ಪಟ್ಟವರಿಗೆ ನೀಡಲಾಗುವುದು. 
https://isha.sadhguru.org/in/en/grace-of-yoga 

Rudraksha Diksha - ರುದ್ರಾಕ್ಷ ದೀಕ್ಷಾ ಈಶದಿಂದ ಉಚಿತ ಕೊಡುಗೆ

ರುದ್ರಾಕ್ಷ ಎಂದರೆ ಶಿವನ ಕಣ್ಣೀರು. ರುದ್ರಾಕ್ಷ ಧರಿಸಿದವರಿಗೆ ಅದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಲಾಭಗಳನ್ನು ನೀಡುವುದು. ಸದ್ಗುರುಗಳು ಮಹಾಶಿವರಾತ್ರಿಯ ಶಕ್ತಿಪೂರ್ಣ ರಾತ್ರಿಯಲ್ಲಿ ರುದ್ರಾಕ್ಷವನ್ನು ಪ್ರತಿಷ್ಠಾಪಿಸಿ, ನೋಂದಣಿ ಮಾಡಿದವರಿಗೆ ಉಚಿತವಾಗಿ ನೀಡುವರು. ರುದ್ರಾಕ್ಷ ದೀಕ್ಷಾ ಪ್ಯಾಕೇಜ್‌ನಲ್ಲಿ ಧ್ಯಾನಲಿಂಗದ ಸನ್ನಿಧಿಯಲ್ಲಿ ಪವಿತ್ರೀಕರಿಸಿದ ವಿಭೂತಿ, “ಒಳಮುಖರಾಗುವುದೇ ಬಿಡುಗಡೆಯ ಏಕೈಕ ಮಾರ್ಗ ಎಂದು ನೆನಪಿಸಲು ಆದಿಯೋಗಿಯ ಭಾವಚಿತ್ರ ಮತ್ತು ಅಭಯ ಸೂತ್ರ - ಭಯ ನಿವಾರಣೆಗೆ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ವಿಶೇಷವಾಗಿ ಪವಿತ್ರೀಕರಿಸಿದ ದಾರ ಇವುಗಳು ಇರುತ್ತವೆ. 

ಉಚಿತ ರುದ್ರಾಕ್ಷಕ್ಕಾಗಿ https://mahashivarathri.org/en/rudraksha-diksha ನಲ್ಲಿ ನೋಂದಾಯಿಸಿರಿ.

11 ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಹರ್ಷೋಲ್ಲಾಸ

ಈ ವರ್ಷ, ಈಶ ಮಹಾಶಿವರಾತ್ರಿಯ ಮುನ್ನ ಫೆಬ್ರವರಿ 15 ರಿಂದ 17 ರವರೆಗೆ ಸಂಜೆ 7 ಗಂಟೆಗೆ ಯಕ್ಷ ಉತ್ಸವ ನಡೆಯುವುದು. ಮೂರು ದಿನಗಳ ಈ ಸಾಂಸ್ಕೃತಿಕ ಹಬ್ಬದಲ್ಲಿ ಪ್ರಸಿದ್ಧ ಕಲಾವಿದರಿಂದ ಸಂಗೀತ, ನೃತ್ಯ, ಪ್ರದರ್ಶನವಿದ್ದು, ಭಾರತದ ಪ್ರದರ್ಶನ ಕಲೆಗಳ ವಿಶಿಷ್ಟತೆ, ಶುದ್ಧತೆ ಮತ್ತು ವೈವಿಧ್ಯವನ್ನು ಉಳಿಸಿ ಬೆಳೆಸುವ ಪ್ರಯತ್ನವಿದೆ. ಮಹಾಶಿವರಾತ್ರಿಯ ನಂತರ, ಕೇಂದ್ರವು ಒಂದು ವಾರದ ಉತ್ಸವವನ್ನೂ ಆಯೋಜಿಸಿದೆ. ಇದರಲ್ಲಿ ತಮಿಳುನಾಡಿನ ಜಾನಪದ ನೃತ್ಯ ಕಲಾವಿದರ ಪ್ರದರ್ಶನಗಳಿರುತ್ತವೆ.

ಮಹಾ ಅನ್ನದಾನ - ಬರುವ ಎಲ್ಲಾ ಭಕ್ತರಿಗೆ ಅನ್ನದಾನ ಮಾಡುವುದು ಉತ್ಸವದ ಅಂಗವಾಗಿದೆ. ಮಹಾಶಿವರಾತ್ರಿಯ ರಾತ್ರಿ ಮತ್ತು ಮುಂದಿನ 7 ದಿನಗಳವರೆಗೆ ನೂರಾರು ಸ್ವಯಂಸೇವಕರು ಅಡುಗೆ ಮಾಡಿ ಸಾವಿರಾರು ಮಂದಿಗೆ ಉಣಬಡಿಸಲು ಸಜ್ಜಾಗಿರುತ್ತಾರೆ.

2023ರ ಈಶ ಮಹಾಶಿವರಾತ್ರಿಯಂದು ಪ್ರದರ್ಶಿಸುವ ಕಲಾವಿದರ ಪರಿಚಯ:

ಮಾಮೆ ಖಾನ್  

ರಾಜಸ್ಥಾನದ ಪ್ರಸಿದ್ಧ ಜಾನಪದ ಗಾಯಕರಾದ ಮಾಮೆ ಖಾನ್ ಹಿನ್ನೆಲೆ ಗಾಯಕರಾಗಿ ಬಾಲಿವುಡ್‌ನ ಹಲವು ಚಿತ್ರಗಳಿಗೆ ಹಾಡಿದ್ದಾರೆ- ‘ಲಕ್ ಬೈ ಛಾನ್ಸ್‘ (2009), ‘ನೋ ಒನ್ ಕಿಲ್ಲ್ಡ್ ಜೆಸ್ಸಿಕಾ‘ (2011), ‘ಮಿರ್ಜ಼್ಯ‘ (2016), ಮತ್ತು ‘ಸೋನ್ ಚಿರಿಯಾ‘ (2019). ಎಮ್.ಟಿ.ವಿ. ಕೋಕ್ ಸ್ಟೂಡಿಯೋದ ಎರಡನೇ ಸೀಸನ್‌ನಲ್ಲಿ ಅಮಿತ್ ತ್ರಿವೇದಿ ಜೊತೆಗೂಡಿ ಜನಪ್ರಿಯ ಟ್ರ್ಯಾಕ್ ‘ಚೌಧರಿ‘ ಪ್ರಸ್ತುತಪಡಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತ ಮಾಮೆ ಖಾನ್ ಪ್ರಸಿದ್ಧ ಕ್ಯಾನ್ನೆಸ್‌ನ ರಾಜಪಥದಲ್ಲಿ ನಡೆದ ಮೊದಲ ಭಾರತೀಯ ಜಾನಪದ ಕಲಾವಿದರು. 

ನೀಲಾದ್ರಿ ಕುಮಾರ್  

ಪ್ರಶಸ್ತಿ ವಿಜೇತ, ನುರಿತ ಸಿತಾರ್ ವಾದಕರಾದ ನೀಲಾದ್ರಿ ಕುಮಾರ್ ಐದು ತಂತಿಗಳ ಎಲೆಕ್ಟ್ರಿಕ್ ಸಿತಾರ್ ನಿರ್ಮಿಸಿ ‘ಜ಼ಿಟಾರ್‘ ಎಂದು ಹೆಸರಿಸಿದ್ದಾರೆ. ಭಾರತದ ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿಸುವ ಕುಮಾರ್ ಅವರು ಶಾಸ್ತ್ರೀಯ ಸಂಗೀತ ಮತ್ತು ಫ಼್ಯೂಷನ್ ಸಂಗೀತದ ನಡುವೆ ಸೂಕ್ತ ಸಮತೋಲನಕ್ಕೆ ಪ್ರಯತ್ನ ನಡೆಸಿದ್ದಾರೆ.

ರಾಮ್ ಮಿರಿಯಾಲ 

ಟಾಲಿವುಡ್‌ನ ರೋಮಾಂಚನಕಾರಿ ಗಾಯಕರಾದ ರಾಮ್ ಮಿರಿಯಾಲ ಹಿನ್ನೆಲೆ ಗಾಯಕರು, ಹಾಡಿನ ರಚನೆಕಾರರು, ರೆಕಾರ್ಡ್ ನಿರ್ಮಾಪಕರು, ಸಂಗೀತ ರಚನೆಕಾರರೂ ಆಗಿದ್ದಾರೆ. ‘ಊರು ಎಲ್ಲಿಪೋತ್ತ ಮಾಮಾ‘, ‘ಚೆಟುಲೆತ್ತಿ ಮೊಕ್ಕುತ‘, ‘ಮಾಯ‘, ಇತ್ಯಾದಿ  ವೈರಲ್ ಆಗಿರುವ ಗೀತೆಗಳ ರಚನೆ ಮಾಡಿರುವ ಮಿರಿಯಾಲ ಅವರು ಪ್ರೇಕ್ಷಕರಲ್ಲಿ ಹರ್ಷೋದ್ಗಾರ ಮೂಡಿಸುವರು.

ವೇಲ್ಮುರುಗನ್
ತಮಿಳ್ ಸಿನೆಮಾದ ಹಿನ್ನೆಲೆ ಗಾಯಕರಾದ ವೇಲ್ಮುರುಗನ್ ಅವರು ತಮ್ಮ ‘ಸುಬ್ರಮಣಿಯಪುರಮ್‘, ನಾಡೋಡಿಗಳ್ ನ ‘ಆಡುಂಗದ‘ ಮತ್ತು ‘ಆಡುಕಾಲಮ್‘ನ ‘ಓತ ಸೊಲ್ಲಲಾ‘  ಜನಪದ ಹಾಡುಗಳಿಂದ ಅತಿಜನಪ್ರಿಯರಾಗಿ ಹೆಸರು ಗಳಿಸಿರುವರು. ವೇಲ್ಮುರುಗನ್ ತಮ್ಮದೇ ಆದ ವಿಶಿಷ್ಟ ಶೈಲಿಯ ಸಂಗೀತ ರೂಢಿಸಿ, ತಮಿಳ್ ಜಾನಪದ ಶೈಲಿಯನ್ನು ತಮಿಳು ಸಿನೆಮಾಗೆ ಅಳವಡಿಸಿದ್ದಾರೆ. 

Click here for pictures, and videos.
Follow this link for Livestream

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು +91 94874 75346 ಸಂಪರ್ಕಿಸಿ ಅಥವಾ mediarelations@ishafoundation.org ಗೆ ಬರೆಯಿರಿ.

Latest Videos
Follow Us:
Download App:
  • android
  • ios