ಈ ವರ್ಷ ಪದೇ ಪದೇ ರಾಶಿ ಬದಲಿಸುವ ಗುರುವಿನಿಂದ ಅದೃಷ್ಟದ ಮಳೆ

ಗುರು ಗ್ರಹದಲ್ಲಿ ಈ ವರ್ಷ ದೊಡ್ಡ ಬದಲಾವಣೆಯನ್ನು ನೋಡಬಹುದು. ಗುರು ಅನೇಕ ಬಾರಿ ತನ್ನ ರಾಶಿ ಬದಲಿಸ್ತಾನೆ. ಚಲನೆಯಲ್ಲೂ ವ್ಯತ್ಯಾಸವಾಗಲಿದೆ. ಇದು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. 
 

The Change Of Jupiter Brings Good Luck To The Four Zodiac Signs roo

ಗ್ರಹ – ರಾಶಿ, ನಕ್ಷತ್ರಗಳು ನಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತವೆ. ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತಮ್ಮ ಸ್ಥಾನ ಬದಲಾವಣೆ ಮಾಡಿದಾಗ, ನೇರವಾಗಿ, ಹಿಮ್ಮುಖವಾಗಿ, ವಕ್ರವಾಗಿ ಹೀಗೆ ಬೇರೆ ಬೇರೆ ರೀತಿಯಲ್ಲಿ ಚಲನೆ ಶುರು ಮಾಡಿದಾಗ ನಮ್ಮ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ 2024 ರಲ್ಲಿ ಗುರು ಗ್ರಹವು ತನ್ನ ಚಲನೆಯನ್ನು ಹಲವಾರು ಬಾರಿ ಬದಲಿಸಲಿದೆ. ಇದ್ರಿಂದಾಗಿ ಕೆಲ ರಾಶಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಗುರುವಿನ ಈ ಚಲನೆ ಹನ್ನೆರಡು ರಾಶಿಯ ಮೇಲೂ ಆಗಲಿದೆ.  

ಗುರು (Jupiter) ತನ್ನ ರಾಶಿ ಬದಲಾವಣೆಯನ್ನು ಮೇ ತಿಂಗಳಿಂದ ಶುರು ಮಾಡಲಿದ್ದಾನೆ. ಸದ್ಯ ಗುರು, ಮಂಗಳ ಗ್ರಹದಲ್ಲಿ ಮೇಷ ರಾಶಿ (Zodiac ) ಯಲ್ಲಿ ನೇರ ಕ್ರಮದಲ್ಲಿ ಚಲಿಸುತ್ತಿದ್ದಾನೆ. ಮೇ ಒಂದರಂದು ವೃಷಭ ರಾಶಿಗೆ ಹೋಗಲಿದ್ದಾನೆ. ಮೇ 6 ರಂದು ಹಿಮ್ಮುಖ ಸ್ಥಿತಿಗೆ ಬರುತ್ತಾನೆ. ಜೂನ್ 12 ರಂದು ಗುರು ರೋಹಿಣಿ ನಕ್ಷತ್ರದಲ್ಲಿ ಸಂಕ್ರಮಿಸುತ್ತಾನೆ. ಇದರ ನಂತರ ಅಕ್ಟೋಬರ್ (October) 9 ರಂದು ಹಿಮ್ಮುಖ ಸ್ಥಿತಿಗೆ ಪ್ರವೇಶಿಸುತ್ತಾನಲ್ಲದೆ  2025 ರವರೆಗೂ ಹಿಮ್ಮುಖ ಚಲನೆಯಲ್ಲೇ ಇರುತ್ತಾನೆ. ಗುರುವಿನ ಈ ಚಲನೆ ನಾಲ್ಕು ರಾಶಿಗಳ ಮೇಲೆ ಹೆಚ್ಚಾಗಲಿದೆ. ಇದ್ರಿಂದ ನಾಲ್ಕು ರಾಶಿಯವರಿಗೆ ಅತ್ಯಧಿಕ ಲಾಭವಾಗಲಿದೆ.

ಚಾಕು ನಿಮ್ಮೊಂದಿಗೆ ಇದ್ದರೆ ಹಣದ ಸಮಸ್ಯೆ ಇರಲ್ಲಂತೆ ಗೊತ್ತಾ..?

ಗುರು ರಾಶಿ ಬದಲಾವಣೆಯಿಂದ ಈ ರಾಶಿಗೆ ಲಾಭ :

ಮೇಷ ರಾಶಿ ಮೇಲೆ ಕೃಪೆ : ಗುರು ರಾಶಿ ಬದಲಾವಣೆ ಮಾಡೋದು ಮೇಷ ರಾಶಿಯವರಿಗೆ ಲಾಭ ತರಲಿದೆ. ಗುರುಗ್ರಹದ ಪ್ರಭಾವದಿಂದ ಅದೃಷ್ಟ ಒದಗಿಬರಲಿದೆ. ಆರ್ಥಿಕ ಲಾಭವಾಗಲಿದೆ. ಅನಿರೀಕ್ಷಿತ ಕಡೆಯಿಂದ ನಿಮಗೆ ಹಣ ಸಿಗಲಿದೆ. ಕೆಲಸದಲ್ಲಿ ಎದುರಿಸುತ್ತಿದ್ದ ಅಡೆತಡೆ ನಿವಾರಣೆಯಾಗಲಿದೆ. ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ನಿಮ್ಮ ಕೆಲಸದಲ್ಲಿ ಗೌರವ ಸಿಗಲಿದೆ. ಹಣದ ಉಳಿತಾಯ ಮಾರ್ಗ ನಿಮಗೆ ಸಿಗಲಿದೆ. ನಿಮಗೆ ಒಳ್ಳೆ ಸುದ್ದಿ ಸಿಗೋದಲ್ಲದೆ ಪೂರ್ವಜರ ಆಸ್ತಿ (Ancestor Propertyy) ಲಭಿಸುವ ಸಾಧ್ಯತೆ ಹೆಚ್ಚಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ. ಗುರು ಪ್ರಭಾವದಿಂದ ಭೌತಿಕ ಸೌಕರ್ಯ ಕೂಡ ಹೆಚ್ಚಾಗಲಿದೆ.

ಕರ್ಕ ರಾಶಿಗೆ ಲಾಭ : ಗುರುವಿನ (Jupiter) ರಾಶಿ ಬದಲಾವಣೆ ಕರ್ಕ ರಾಶಿ ಮೇಲೂ ಆಗಲಿದೆ. ಆದಾಯಕ್ಕೆ ಹೊಸ ಮೂಲ ಸಿಗುವ ಕಾರಣ ಆದಾಯ ಹೆಚ್ಚಾಗಲಿದೆ. ಹೊಸ ಉದ್ಯೋಗಕ್ಕೆ (Employment) ಬಲವಾದ ಅವಕಾಶವಿದೆ. ಉದ್ಯೋಗ ಹುಡುಕುತ್ತಿರುವ ಜನರ ಅದೃಷ್ಟ (Luck) ಬದಲಾಗಲಿದೆ. ಒಳ್ಳೆ ಉದ್ಯೋಗ ನಿಮಗೆ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ. ಶಿಕ್ಷಣದಲ್ಲಿ (Education) ನಿರೀಕ್ಷಿತ ಫಲ ಸಿಗುವುದಲ್ಲದೆ ವ್ಯಾಪಾರಸ್ಥರಿಗೂ ಇದ್ರಿಂದ ಸಾಕಷ್ಟು ಲಾಭವಿದೆ. 

ಸಿಂಹ (Leo) ರಾಶಿಗೆ ಸಿಗಲಿದೆ ಗುರುವಿನ ಆಶೀರ್ವಾದ : ಈ ವರ್ಷ ಸಿಂಹ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಕೆಲಸದಲ್ಲಿ, ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು. ಮಂಗಳಕರ ಘಟನೆಗಳು ನಡೆಯಲಿವೆ. ಸಂಶೋಧನೆಗೆ (Research) ಸಂಬಂಧಿಸಿದ ಕೆಲಸ ಮಾಡುವವರಿಗೆ ಲಾಭವಾದ್ರೆ, ಸರ್ಕಾರಿ ಕೆಲಸ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆ ಅವಕಾಶ ಒದಗಿಬರಲಿದೆ. ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆ ಹೆಚ್ಚಿದೆ.

ಕಾಲಿಗೆ ಕಪ್ಪು ದಾರ ಧರಿಸಿದರೆ ಶನಿಕಾಟವೂ ಶಮನ, ಸಂಪತ್ತಿನ ಆಗಮನ!

ಬದಲಾಗಲಿದೆ ಕನ್ಯಾರಾಶಿಯವರ ಅದೃಷ್ಟ : ಇನ್ನು ಗುರು ಚಲನೆ ಬದಲಿಸುತ್ತಿದ್ದಂತೆ ಕನ್ಯಾ ರಾಶಿಯವರ ಜೀವನದಲ್ಲಿ ಸಂತೋಷದ ದಿನ ಶುರುವಾಗುತ್ತದೆ. ನಿಂತ ಕೆಲಸ ಪೂರ್ಣಗೊಳ್ಳುವುದಲ್ಲದೆ ಎಲ್ಲ ಆಸೆ ಈಡೇರುತ್ತದೆ. ವಿದೇಶಿ ಯೋಗ ಈ ರಾಶಿಯವರಿಗಿದ್ದು, ಭೂಮಿ, ವಾಹನ ಖರೀದಿಗೆ ಒಳ್ಳೆ ಅವಕಾಶ ಸಿಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಎಲ್ಲ ಮೂಲಗಳಿಂದಲೂ ಹಣ ಹರಿದು ಬರಲಿದೆ. 

Latest Videos
Follow Us:
Download App:
  • android
  • ios