ಕಾಲಿಗೆ ಕಪ್ಪು ದಾರ ಧರಿಸಿದರೆ ಶನಿಕಾಟವೂ ಶಮನ, ಸಂಪತ್ತಿನ ಆಗಮನ!
ಪ್ರಾಚೀನ ಕಾಲದಿಂದಲೂ ಜನರು ತಮ್ಮ ಕಾಲಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ಕಪ್ಪು ದಾರವನ್ನು ಧರಿಸುವುದು ವಿವಿಧ ಪ್ರಯೋಜನಗಳನ್ನು ತರುತ್ತದೆ. ಜ್ಯೋತಿಷ್ಯದಲ್ಲಿ ಈ ಕಪ್ಪು ದಾರವು ಏನೆಲ್ಲ ಮಹತ್ವ ಹೊಂದಿದೆ ನೋಡೋಣ.
ಕಾಲಿಗೆ ಕಪ್ಪು ದಾರವನ್ನು ಧರಿಸುವುದನ್ನು ಹಲವರು ಫ್ಯಾಶನ್ ಎನ್ನುತ್ತಾರೆ. ಆದರೆ, ನವಜಾತ ಶಿಶುವಿನ ಪುಟ್ಟ ಕಾಲುಗಳಿಗೆ ಅಜ್ಜಿಯರು ಕಪ್ಪು ದಾರವನ್ನು ಹಾಕುವುದನ್ನು ನೀವು ನೋಡಿರಬಹುದು. ಇವರು ಹೀಗೆ ಮಾಡುವುದು ಫ್ಯಾಶನ್‌ಗಾಗಿ ಅಲ್ಲ, ಬದಲಿಗೆ ಕಾಲಿನ ಕಪ್ಪು ದಾರವು ಮಗುವನ್ನು ನಕಾರಾತ್ಮಕತೆ ಮತ್ತು ದುಷ್ಟ ಕಣ್ಣುಗಳಿಂದ ಉಳಿಸುತ್ತದೆ ಎಂಬ ನಂಬಿಕೆಗಾಗಿ. ಕಪ್ಪು ದಾರ ರಕ್ಷಣೆಯಾಗಿ ಕಾರ್ಯ ನಿರ್ವಹಿಸುವುದಷ್ಟೇ ಅಲ್ಲ, ಅದನ್ನು ಕಾಲಿನಲ್ಲಿ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಜ್ಯೋತಿಷ್ಯವು ನಂಬುತ್ತದೆ. ಅವುಗಳೇನು ನೋಡೋಣ.
1. ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ
ಕಪ್ಪು ದಾರವು ದುಷ್ಟ ಕಣ್ಣಿನ ದುಷ್ಪರಿಣಾಮಗಳ ವಿರುದ್ಧ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತದೆ.
2. ವಿತ್ತೀಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ
ಕಾಲಿಗೆ ಕಪ್ಪು ದಾರವನ್ನು ಧರಿಸುವುದು ಹಣಕಾಸಿನ ತೊಂದರೆಗಳನ್ನು ನಿವಾರಿಸಲು ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸ್ಥಿರತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
3. ರಾಹು ಕೇತುಗಳ ದುಷ್ಪರಿಣಾಮಗಳಿಂದ ರಕ್ಷಣೆ
ಜ್ಯೋತಿಷ್ಯದ ಪ್ರಕಾರ, ಕಪ್ಪು ದಾರದ ಗೆಜ್ಜೆ ಧರಿಸುವುದು ರಾಹು ಮತ್ತು ಕೇತು ಗ್ರಹಗಳ ನಕಾರಾತ್ಮಕ ಪ್ರಭಾವಗಳ ವಿರುದ್ಧ ರಕ್ಷಣೆ ನೀಡುತ್ತದೆ.
ಈ ದಿನ ಶೂ, ಚಪ್ಪಲಿ ಕೊಳ್ಳಬೇಡಿ.. ಅಪ್ಪಿತಪ್ಪಿಯೂ ಹೀಗೆ ಮಾಡಿದರೆ ದರಿದ್ರ..!
4. ಸಂಪತ್ತು ಮತ್ತು ಅದೃಷ್ಟವನ್ನು ಆಕರ್ಷಿಸುತ್ತದೆ
ಕಪ್ಪು ದಾರವು ಸಂಪತ್ತು ಮತ್ತು ಅದೃಷ್ಟವನ್ನು ಸೆಳೆಯುತ್ತದೆ ಎಂದು ನಂಬಲಾಗಿದೆ, ಜೀವನದಲ್ಲಿ ಒಟ್ಟಾರೆ ಸಮೃದ್ಧಿಯನ್ನು ಹೆಚ್ಚಿಸುತ್ತದೆ.
5. ಗಾಯಗಳನ್ನು ಗುಣಪಡಿಸುತ್ತದೆ
ಕಾಲಿಗೆ ಧರಿಸುವ ಕಪ್ಪು ದಾರವು ಕಾಲುಗಳಿಗೆ ಆಗುವ ಗಾಯಗಳು ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ.
6. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಣೆ
ಕಪ್ಪು ದಾರದ ಆಂಕ್ಲೆಟ್ ಅನ್ನು ಧರಿಸುವುದರಿಂದ ಮಕ್ಕಳು ನಕಾರಾತ್ಮಕತೆಯಿಂದ ದೂರವಿರುತ್ತಾರೆ. ಹಾಗಾಗಿ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು, ಅವರ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಇದು ಉತ್ತೇಜಿಸುತ್ತದೆ.
500 ವರ್ಷ ನಂತರ 2 ರಾಜಯೋಗ, ಮಾರ್ಚ್‌ನಿಂದ ಈ ರಾಶಿಗೆ ಕೋಟಿ ಕೋಟಿ ಹಣ
7. ಶನಿ ದೋಷದ ಕೆಟ್ಟ ಪರಿಣಾಮಗಳಿಂದ ರಕ್ಷಿಸುತ್ತದೆ
ಜ್ಯೋತಿಷ್ಯದಲ್ಲಿ ಶನಿ ದೋಷವನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಅದು ವ್ಯಕ್ತಿಯ ಜೀವನದಲ್ಲಿ ವಿವಿಧ ಸವಾಲುಗಳು ಮತ್ತು ಅಡೆತಡೆಗಳನ್ನು ತರುತ್ತದೆ. ಕಪ್ಪು ಬಣ್ಣವು ಶನಿಗೆ ಸಂಬಂಧಿಸಿದೆ. ಮತ್ತು ಕಪ್ಪು ದಾರವನ್ನು ಕಾಲಲ್ಲಿ ಧರಿಸುವುದರಿಂದ, ಶನಿಯು ಸಮಾಧಾನಗೊಳ್ಳುತ್ತಾನೆ ಮತ್ತು ಶನಿ ದೋಷದ ದುಷ್ಪರಿಣಾಮಗಳು ಶಮನಗೊಳ್ಳುತ್ತವೆ ಎಂದು ಭಾವಿಸಲಾಗಿದೆ.