Asianet Suvarna News Asianet Suvarna News

Zodiac Signs and Luck: ಈ ರಾಶಿಯವರು ಹುಟ್ಟಿನಿಂದಲೇ ಶ್ರೀಮಂತರು!

ಕೆಲವರಿಗೆ ಅದೃಷ್ಟದ ಬಾಗಿಲು ಹುಟ್ಟಿನಿಂದಲೇ ತೆರೆದಿರುತ್ತದೆ. ಅದು ಅವರು ಹುಟ್ಟಿದ ದಿನ, ಘಳಿಗೆ, ರಾಶಿ, ನಕ್ಷತ್ರಗಳ ಮೇಲೆ ಅವಲಂಬಿತವಾಗುತ್ತದೆ. ಜೊತೆಗೆ ಇವರು ಜೀವನದಲ್ಲಿ ಮುಟ್ಟಿದ್ದೆಲ್ಲವೂ ಚಿನ್ನವೇ ಆಗಿರುತ್ತದೆ. ಅಂದುಕೊಂಡ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಹೀಗೆ ಹುಟ್ಟಿನಿಂದಲೇ ಶ್ರೀಮಂತರಾಗಿರುವ ನಾಲ್ಕು ರಾಶಿಯವರ ಬಗ್ಗೆ ತಿಳಿಯೋಣ..

Taurus Leo cancer and  Scorpio Zodiac Signs born people rich
Author
Bangalore, First Published Nov 27, 2021, 12:28 PM IST
  • Facebook
  • Twitter
  • Whatsapp

ಕೆಲವರ ಅದೃಷ್ಟವೇ (Luck) ಹಾಗೇ, ಹುಟ್ಟುತ್ತಲೇ ಚಿನ್ನದ ಚಮಚವನ್ನು (Gold Spoon) ಬಾಯಲ್ಲಿ ಇಟ್ಟುಕೊಂಡು ಬಂದಿರುತ್ತಾರೆ. ಅರ್ಥಾತ್ ಅವರಿಗೇ ಯಾವುದೇ ರೀತಿಯಲ್ಲಿಯೂ ಹಣದ (Money) ಕೊರತೆ (Deficiency) ಎಂಬುದು ಕಾಡುವುದೇ ಇಲ್ಲ. ಇವರು ಎಲ್ಲಾ ದೃಷ್ಟಿಯಲ್ಲಿಯೂ ಸಿರಿವಂತರಾಗಿರುತ್ತಾರೆ (Rich). ಇವರು ಐಷಾರಾಮಿ (luxury) ಜೀವನವನ್ನು (Life) ಸಾಗಿಸುತ್ತಾರೆ. ಕೆಲವರು ಎಷ್ಟೇ ಹಣವಿದ್ದರೂ ಸರಳವಾಗಿದ್ದರೆ, ಮತ್ತೆ ಕೆಲವರು ಕಾರು (Car), ಮನೆ (House) ಮತ್ತು ದುಬಾರಿ (Expensive) ವಸ್ತುಗಳಿಂದ ಆಕರ್ಷಿತರಾಗುತ್ತಾರೆ. ಎಲ್ಲವೂ ಬ್ರಾಂಡೆಡ್ (Branded) ಅನ್ನೋವಷ್ಟರ ಮಟ್ಟಿಗೆ ದುಬಾರಿ ಜೀವನವನ್ನು ಸಾಗಿಸುತ್ತಾರೆ. ಅದೇ ಅವರಿಗೆ ಅಚ್ಚುಮೆಚ್ಚಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಒಟ್ಟು 12 ರಾಶಿಚಕ್ರಗಳಿವೆ. ಪ್ರತಿಯೊಂದು ರಾಶಿಚಕ್ರಗಳಿಗೆ (Zodiac Sign) ಅದರದ್ದೇ ಆದ ವಿಶೇಷತೆಗಳು ಇರುವುದರ ಜೊತೆಗೆ ಅವುಗಳಿಗೆ ಅಧಿಪತಿ ಗ್ರಹವೊಂದು ಇರುತ್ತದೆ. ಇದು ವ್ಯಕ್ತಿಯ ಗುಣ - ಸ್ವಭಾವ (Property – Nature) ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ಜನನ (Birth), ಸಮಯ (Time), ಗ್ರಹ (Planet) ಮತ್ತು ನಕ್ಷತ್ರಗಳಿಗೆ (Stars) ಅನುಗುಣವಾಗಿ ವ್ಯಕ್ತಿಯ ಭವಿಷ್ಯದ (Future) ಚಿತ್ರಣವನ್ನು ಕಂಡುಕೊಳ್ಳಬಹುದಾಗಿದೆ. ಹೀಗಾಗಿ ಮುಂದೇನಾಗಬಹುದು..? ಅವರ ಆರ್ಥಿಕ (Economy) ಸ್ಥಿತಿಗತಿಗಳು ಏನು..? ಶೈಕ್ಷಣಿಕ ಜೀವನ (Education), ವೈವಾಹಿಕ ಜೀವನ (Marriage Life), ವೃತ್ತಿ ಜೀವನ ಹೀಗೆ ಎಲ್ಲ ವಿಷಯಗಳ ಬಗ್ಗೆ ಆ ವ್ಯಕ್ತಿಗಳ ಜಾತಕದ (Horoscope) ಅನುಸಾರ ತಿಳಿದುಕೊಳ್ಳಬಹುದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

ಹುಟ್ಟಿನಿಂದಲೇ ಶ್ರೀಮಂತವಾಗಿರುವ ನಾಲ್ಕು ರಾಶಿಯವರ ಬಗ್ಗೆ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ಈ ರಾಶಿಯವರು ಸಾಕಷ್ಟು ಸಂಪತ್ತನ್ನು (Wealth) ಗಳಿಸುತ್ತಾರೆ. ಇದಲ್ಲದೆ, ಪೂರ್ವಜರ ಆಸ್ತಿಯನ್ನು ಸಹ ಅನುಭವಿಸುವ ಯೋಗ್ಯತೆ ಇವರಿಗೆ ಹೆಚ್ಚಿರುತ್ತದೆ. ಇವರದ್ದು ಪಾದರಸಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಸಾಗುವ ಜೀವನ ಭವಿಷ್ಯವಿದೆ. ಇವರು ನಿರ್ಧಾರ ಮಾಡಿದರೆಂದರೆ ಆ ಕೆಲಸ ನಿಶ್ಚಿತವಾಗಿಯೂ ಯಶಸ್ಸು (Success) ಸಾಧಿಸಲಿದ್ದು, ಅದಕ್ಕಾಗಿ ಶ್ರಮವನ್ನೂ ಹಾಕುತ್ತಾರೆ. ಆ ನಾಲ್ಕು ರಾಶಿಚಕ್ರಗಳು ಯಾವುವು ಎಂಬುದರ ಬಗ್ಗೆ ನೋಡೋಣ...

ಈ ರಾಶಿಯವರು ಹಣ ಉಳಿಸುವಲ್ಲಿ ನಿಸ್ಲೀಮರು
 
ವೃಷಭ ರಾಶಿ (Taurus)
ವೃಷಭ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಮತ್ತು ಹೀಗೇ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ವೃಷಭ ರಾಶಿಗೆ ಶುಕ್ರ ಗ್ರಹವು (Venus) ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಸಾಕಷ್ಟು ಸಂಪತ್ತು ಗಳಿಸುವುದಲ್ಲದೆ, ವೈಭವದಿಂದ ಬಾಳುತ್ತಾರೆ. ಅಲ್ಲದೆ, ಇವರು ಭೌತಿಕ (Physical) ವಿಷಯಗಳನ್ನು ಹೆಚ್ಚು ಪ್ರೀತಿಸುವುದಲ್ಲದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅಷ್ಟೇ ಶ್ರಮ ಹಾಕುತ್ತಾರೆ. ಹೀಗಾಗಿ ವೃಷಭ ರಾಶಿಯಲ್ಲಿ ಜನಿಸಿದವರು ಮನಸ್ಸಿನಲ್ಲಿ ಒಮ್ಮೆ ನಿರ್ಧರಿಸಿದರೆಂದರೆ ಅದನ್ನು ಸಾಧಿಸಿದ ಬಳಿಕವಷ್ಟೇ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. 

ಇದನ್ನು ಓದಿ : Zodiac Sign and Character: ಈ 4 ರಾಶಿಚಕ್ರದವರು ಹಣ ಉಳಿಸುವಲ್ಲಿ ನಿಸ್ಸೀಮರು..!

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರಿಗೆ ಶ್ರೀಮಂತಿಗೆ ಮೇಲೆ ಅಪಾರ ಆಸಕ್ತಿ (Interest) ಮತ್ತು ಅಭಿಮಾನ (Pride). ಇವರಿಗೆ ಕಾರುಗಳು, ಮನೆಗಳು ಮತ್ತು ದುಬಾರಿ ವಸ್ತುಗಳೆಂದರೆ ವಿಶೇಷ ಆಕರ್ಷಣೆ. ಐಷಾರಾಮಿ (Luxury) ಜೀವನ ನಡೆಸುವುದೆಂದರೆ ಇವರಿಗೆ ಬಲು ಇಷ್ಟ. ತಾವು ಸ್ಟಾಂಡರ್ಡ್ (Standard) ಆಗಿರಬೇಕು ಎಂಬುದು ಇವರ ಕನಸಾಗಿರುತ್ತದೆ. ಇದಕ್ಕಾಗಿ ಪರಿಶ್ರಮವನ್ನೂ ಪಡುತ್ತಾರೆ. ಆ ನಿಟ್ಟಿನಲ್ಲಿ ಸಾಧಿಸುತ್ತಾರೆ ಕೂಡ. ಆದರೆ, ಇವರು ಏನನ್ನು ಬಯಸುತ್ತಾರೋ ಅದು ಅವರಿಗೆ ಸಿಕ್ಕೇ ಸಿಗುತ್ತದೆ. 

ಕರ್ಕಾಟಕ ರಾಶಿ (Cancer)
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. ಇವರು ತಮ್ಮ ಆಸೆಗಳ ಜೊತೆಗೆ ಕುಟುಂಬದವರ ಆಸೆ (Desire) – ಆಕಾಂಕ್ಷೆಗಳನ್ನೂ (Aspiration) ಸಹ ಪೂರೈಸಿಕೊಳ್ಳಲು ಶ್ರಮವಹಿಸುತ್ತಾರೆ. ಇವರಿಗೆ ಹಣ ಗಳಿಸುವುದು ಸಹ ಕಷ್ಟದ ಕೆಲಸವಾಗಿರುವುದಿಲ್ಲ. ಹಾಗಂತ ಯಾವುದೇ ಅಡ್ಡದಾರಿ ಹಿಡಿಯದೇ ನ್ಯಾಯಯುತ (Fair) ಮಾರ್ಗದಲ್ಲಿಯೇ ಉತ್ತಮವಾಗಿ ಹಣ ಸಂಪಾದಿಸುತ್ತಾರೆ. 
 

Taurus Leo cancer and  Scorpio Zodiac Signs born people rich

 

ಸಿಂಹ ರಾಶಿ (Leo)
ಸಿಂಹ ರಾಶಿಯಲ್ಲಿ ಜನಿಸಿದವರು ತಾವು ಏನಾಗಬೇಕು..? ಹೇಗೆ ಇರಬೇಕೆಂಬ ಬಗ್ಗೆ ತಾವೇ ನಿರ್ಧರಿಸುತ್ತಾರೆ (Decide). ಇದಕ್ಕಾಗಿ ಅವರು ನಿರ್ದಿಷ್ಟ ಗುರಿಯನ್ನೂ (Aim) ಹಾಕಿಕೊಂಡಿರುತ್ತಾರೆ. ಆದರೆ, ಇದಕ್ಕಾಗಿ ಅವರು ಒಂದು ಚೌಕಟ್ಟನ್ನು ಹಾಕಿಕೊಂಡಿರುವುದಿಲ್ಲ. ಯಾವುದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳದೇ ಅವುಗಳನ್ನು ಈಡೇರಿಸಿಕೊಳ್ಳಲು ಶ್ರಮವನ್ನು ಹಾಕುತ್ತಾರೆ. ಜೊತೆಗೆ ಇವರಿಗೆ ಸಾಧಿಸುವ ಸಾಮರ್ಥ್ಯವೂ (Ability) ಇರಲಿದೆ. ಇವರ ಸ್ವಭಾವವು ಎಲ್ಲರನ್ನೂ ಬಹುಬೇಗ ಆಕರ್ಷಿಸುತ್ತದೆ.

ಇದನ್ನು ಓದಿ : Rituals: ಸಂಭೋಗಿಸಿ, ಸ್ನಾನ ಮಾಡದೇ ಪೂಜಿಸಿದರೆ ತಟ್ಟುತ್ತೆ ಶಾಪ!

 

Follow Us:
Download App:
  • android
  • ios