ಕೆಟ್ಟ ಕನಸುಗಳ ಬಾಧೆಗೆ ಗುಡ್‌ಬೈ ಹೇಳಲು Astro Remedies

ಅಪರೂಪಕ್ಕೊಂದು ಕೆಟ್ಟ ಕನಸು ಎಲ್ಲರನ್ನೂ ಭಾದಿಸುತ್ತದೆ. ಆದರೆ, ಪದೇ ಪದೇ ಕೆಟ್ಟ ಕನಸುಗಳೇ ಬೀಳುತ್ತಿದ್ದರೆ ಮನಸ್ಸು ಚಿಂತೆಗೆ ಬೀಳುತ್ತದೆ. ಆತಂಕವಾಗುತ್ತದೆ. ಇಂಥ ಸಂದರ್ಭದಲ್ಲಿ ಕೆಟ್ಟ ಕನಸುಗಳಿಗೆ ಬೈಬೈ ಹೇಳಲು ಈ ಜ್ಯೋತಿಷ್ಯ ಪರಿಹಾರಗಳು ಸಹಾಯಕವಾಗಿವೆ. 

Sure Shot Astrology Remedies for Bad Dreams skr

ಅದೇನೋ ಕೆಲವರಿಗೆ ಬರೀ ಕೆಟ್ಟ ಕನಸುಗಳೇ ಬೀಳುತ್ತಿರುತ್ತವೆ. ಅವರು ಎಷ್ಟೇ ಪಾಸಿಟಿವ್ ಯೋಚನೆಗಳನ್ನು ಮಾಡಿ ಮಲಗಲಿ, ಕೆಟ್ಟ ಕನಸು ಬಿದ್ದು ಅರ್ಧ ರಾತ್ರಿಯಲ್ಲಿ ನಿದ್ರೆಗೆಡಿಸುತ್ತದೆ. ಈ ಕೆಟ್ಟ ಕನಸುಗಳಲ್ಲಿ ಹತ್ತಿರದವರಿಗೆ ಅಪಾಘಾತವಾದಂತೆ, ಸ್ವತಃ ನೀವೇ ಮೇಲಿಂದ ಬೀಳುತ್ತಿರುವಂತೆ, ಯಾರೋ ಮೋಸ ಮಾಡಿದಂತೆ, ದೆವ್ವಗಳು ಅಟ್ಟಿಸಿಕೊಂಡು ಬಂದಂತೆ.. ಹೀಗೆ ಅನೇಕ ರೀತಿಯಲ್ಲಿ ಬಿದ್ದು ಮನಸ್ಸನ್ನು ಕದಡುತ್ತವೆ. ಆತಂಕ ಹುಟ್ಟು ಹಾಕುತ್ತವೆ. ಅದು ಭವಿಷ್ಯದ ಮುನ್ಸೂಚನೆಯೇನೋ ಎಂದು ಮನಸ್ಸು ಗೊಂದಲಕ್ಕೀಡಾಗುತ್ತದೆ. ನಿಮಗೂ ಕೂಡಾ ಪದೇ ಪದೇ ಕೆಟ್ಟ ಕನಸುಗಳೇ ಬೀಳುತ್ತಿದ್ದರೆ ಅದರಿಂದ ಪಾರಾಗಲು ಜ್ಯೋತಿಷ್ಯ ಉಪಾಯಗಳು ಇಲ್ಲಿವೆ.. 

ಕೆಟ್ಟ ಕನಸುಗಳನ್ನು ತೊಡೆದು ಹಾಕಲು ಜ್ಯೋತಿಷ್ಯ ಪರಿಹಾರಗಳು!

  • ನಿಮ್ಮ ಮನೆಯ ನೆಲವನ್ನು ಉಪ್ಪುನೀರಿನೊಂದಿಗೆ ಒರೆಸುವುದು ಒಂದು ಪ್ರಮುಖ ಪರಿಹಾರವಾಗಿದೆ. ಮಲಗುವ ಮುನ್ನ ಉಪ್ಪುನೀರಿನೊಂದಿಗೆ ಮಲಗುವ ಕೋಣೆಯನ್ನು ಒರೆಸುವುದು ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಕಾರಣವಾಗುತ್ತದೆ.
  • ಮಲಗುವ ಮುನ್ನ ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯುವುದು ನಿಮ್ಮು ಕೆಟ್ಟ ಕನಸುಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ.
  • ಆಗಾಗ್ಗೆ ದುಃಸ್ವಪ್ನದ ಸಮಸ್ಯೆಯನ್ನು ಎದುರಿಸುತ್ತಿರುವವರು ಮಲಗುವ ಮೊದಲು ತಮ್ಮ ದಿಂಬಿನ ಕೆಳಗೆ ಸ್ಟೀಲ್ ಚಾಕುವನ್ನು ಇಟ್ಟುಕೊಳ್ಳಬೇಕು.
  • ಮಲಗುವ ಮುನ್ನ ತೆಂಗಿನೆಣ್ಣೆಯನ್ನು ಪಾದಕ್ಕೆ ಹಚ್ಚುವುದರಿಂದ ನಿಮ್ಮ ಪಾದಗಳು ನಯವಾಗುತ್ತವೆ ಮತ್ತು ಮನಸ್ಸಿನಲ್ಲಿ ಧನಾತ್ಮಕ ಫಲಿತಾಂಶಗಳನ್ನು ತರುತ್ತವೆ.
  • ಮಲಗುವ ಮುನ್ನ ಬೆಳ್ಳುಳ್ಳಿ, ಲವಂಗವನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದು ಸಹ ನಿಮಗೆ ಸಹಾಯ ಮಾಡುತ್ತದೆ.

    Yearly Horoscope 2023: ತುಲಾ ರಾಶಿಗೆ 2023 ತರಲಿದೆ ಅಚ್ಚರಿಗಳ ಗುಚ್ಛ
     
  • ಶಾಂತಿಯುತ ಮತ್ತು ಉತ್ತಮ ನಿದ್ರೆಯನ್ನು ಹೊಂದಲು, ಏಲಕ್ಕಿಯ ಪ್ಯಾಕೆಟ್ ಅನ್ನು ಸಹ ದಿಂಬಿನಡಿ ಇರಿಸಬಹುದು.
  • ಫೆನ್ನೆಲ್ ಬೀಜಗಳನ್ನು ಬಿಳಿ ಬಟ್ಟೆಯಲ್ಲಿ ಇರಿಸಿ ಮತ್ತು ಅದನ್ನು ದಿಂಬಿನ ಕೆಳಗೆ ಇಡುವುದು ಸಹ ಕೆಲಸ ಮಾಡುತ್ತದೆ.
  • ಧ್ಯಾನವು ಆರೋಗ್ಯಕ್ಕೆ ಉತ್ತಮ ಕೀಲಿಯಾಗಿದೆ. ಜೊತೆಗೆ ನಮ್ಮ ದೇವರನ್ನು ಸ್ಮರಿಸುವುದರಿಂದ ಮನಸ್ಸಿಗೆ ಸಮಾಧಾನ ದೊರಕಿ ಸರಿಯಾದ ನಿದ್ರೆಗೆ ಕಾರಣವಾಗುತ್ತದೆ.
  • ಸರಿಯಾದ ನಿದ್ರೆಯನ್ನು ಪಡೆಯಲು, ನಿಮ್ಮ ಅಡುಗೆಮನೆಯ ಮುಂದೆ ದೀಪವನ್ನು ಬೆಳಗಿಸಿ ಮತ್ತು ಅದರಲ್ಲಿ ಸ್ವಲ್ಪ ಸಿಂಧೂರವನ್ನು ಸೇರಿಸಿ ಮತ್ತು ದೀಪವು ಉರಿಯಲು ಪ್ರಾರಂಭಿಸಿದಾಗ ಆ ಸಿಂಧೂರದಿಂದ ತಿಲಕವನ್ನು ತೆಗೆದಿಟ್ಟುಕೊಳ್ಳಿ. ಇದರಿಂದ ನಿಮಗೆ ಸರಿಯಾದ ನಿದ್ರೆ ಬರುತ್ತದೆ.
  • ತುಳಸಿ ಗಿಡವನ್ನು ಕೋಣೆಯಲ್ಲಿ ಇಡಬೇಕು, ತುಳಸಿ ಸಸ್ಯವು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ, ಅದು ಶಾಂತಿಯುತ ನಿದ್ರೆಗೆ ಕಾರಣವಾಗುತ್ತದೆ. 
  • ನಿಮ್ಮ ಹಾಸಿಗೆಯ ಖಾಲಿ ಸ್ಥಳದಲ್ಲಿ ಅಥವಾ ಬೆಡ್ ಬಾಕ್ಸ್‌ನಲ್ಲಿ ನೀವು ಹೆಚ್ಚಿನ ವಸ್ತುಗಳನ್ನು ಇಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಸಂತೆ ಮಾರ್ಕೆಟ್‌ನಂತೆ ಬಾಕ್ಸ್ ಇದ್ದರೆ ಅದು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ ಮತ್ತು ಅಸಮರ್ಪಕ ನಿದ್ರೆಯನ್ನು ತರುತ್ತದೆ.
  • ಮಲಗುವ ಜಾಗದಲ್ಲಿ ಅಥವಾ ಹಾಸಿಗೆಯ ಕೆಳಗೆ ಪಾದರಕ್ಷೆಗಳನ್ನು ಇಟ್ಟುಕೊಳ್ಳುವುದು ಕೆಟ್ಟ ಕನಸುಗಳಿಗೆ ಕಾರಣವಾಗಬಹುದು, ಹಾಸಿಗೆಯ ಕೆಳಗೆ ಯಾವುದೇ ಪಾದರಕ್ಷೆಗಳನ್ನು ಇಡಬೇಡಿ.
  • ನಿಮ್ಮ ಹಾಸಿಗೆಯ ಹೆಡ್‌ರೆಸ್ಟ್‌ನ ಪಕ್ಕದಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇರಿಸಿ ಮತ್ತು ಅದನ್ನು ಬಟ್ಟೆಯಿಂದ ಮುಚ್ಚಿ. ಬೆಳಿಗ್ಗೆ, ಆ ನೀರನ್ನು ಹೊರಗಿನ ಸಸ್ಯಗಳಿಗೆ ಹಾಕಿ.
  • ನಿಮ್ಮ ದಿಂಬು ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
  • ಕೆಟ್ಟ ಮತ್ತು ಗೊಂದಲದ ಕನಸುಗಳನ್ನು ನಿವಾರಿಸಲು ದುರ್ಗಾ ಪೂಜೆ ಮಾಡಿಸಿ. ಇದು ಧನಾತ್ಮಕ ಶಕ್ತಿಯನ್ನು ಮನೆಗೆ ತರಲು ಮತ್ತು ರಾತ್ರಿಯಲ್ಲಿ ಶಾಂತಿಯುತ ನಿದ್ರೆಗೆ ಸಹಾಯ ಮಾಡುತ್ತದೆ.

    Zodiac Signs: ಕನಸುಗಳನ್ನ ನನಸಾಗಿಸಿಕೊಳ್ಳೋ ಛಲದ ರಾಶಿಯವರಿವರು..

ಕೆಟ್ಟ ಕನಸುಗಳನ್ನು ದೂರ ಮಾಡಲು ಮಂತ್ರ
ದುರ್ಗಾ ದೇವಿಯ ಮಂತ್ರ
'ಯಾ ದೇವಿ ಸರ್ವ ಭೂತೇಷು ನಿದ್ರಾ ರೂಪೇಣ ಸಂಸ್ಥಿತ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।'

ಹನುಮಾನ್ ಮಂತ್ರ 
'ರಾಮಸ್ಕಂದಂ ಹನುಮಂತಂ, ವೈನತೇಯಂ ವೃಕೋದರಂ ಶಯನಯಾಃ ಸ್ಮರೇ ನಿತ್ಯಂ, ದುಸ್ವಪ್ನ ತಸ್ಯ ನಶ್ಯತಿ'

ನರಸಿಂಹ ಮಂತ್ರ
'ಓಂ ಹುಂ ಫಟ್ ನೃಸಿಂಹ ಸ್ವಾಹಾ'

Latest Videos
Follow Us:
Download App:
  • android
  • ios