Asianet Suvarna News Asianet Suvarna News

Zodiac Signs: ಕನಸುಗಳನ್ನ ನನಸಾಗಿಸಿಕೊಳ್ಳೋ ಛಲದ ರಾಶಿಯವರಿವರು..

ಕನಸುಗಳನ್ನು ಕಾಣುವುದು ಎಲ್ಲರ ಸಹಜ ಗುಣವಾದರೂ ಅದನ್ನು ಈಡೇರಿಸಿಕೊಳ್ಳುವ ಬದ್ಧತೆ, ಶ್ರಮಿಸುವ ಮನೋಭಾವನೆ ಎಲ್ಲರಲ್ಲೂ ಇರುವುದಿಲ್ಲ. ಕೆಲವು ರಾಶಿಗಳ ಜನ ಮಾತ್ರ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. 
 

These zodiac sign love to bring dreams come true in life
Author
First Published Dec 8, 2022, 10:54 AM IST

ಎಲ್ಲರೂ ಕನಸುಗಳನ್ನು ಕಾಣುತ್ತೇವೆ. ಈಡೇರಿಸಲು ಸಾಧ್ಯವಾಗುವಂಥ ಕನಸುಗಳೂ ಸೇರಿ, ಸಾಧಿಸಲು ಸಾಧ್ಯವೇ ಇಲ್ಲದಂತಹ ಕನಸುಗಳನ್ನೂ ಸಹ ಕಾಣುತ್ತೇವೆ. ಅಷ್ಟಕ್ಕೂ ಕನಸು ಕಾಣುವುದು ಎಲ್ಲರ ಹಕ್ಕು. ಅದು ಮನೋಭೂಮಿಕೆಯಾದ್ದರಿಂದ ಯಾರದ್ದೇ ಹಂಗಿಲ್ಲ. ಎಂತಹ ಕನಸು ಕಾಣಲಿಕ್ಕೂ ಎಲ್ಲರೂ ಸರ್ವ ಸ್ವತಂತ್ರ್ಯರು. ಆದರೆ, ನನಸು ಮಾಡಿಕೊಳ್ಳುವ ಹಾದಿ ಮಾತ್ರ ಸುಲಭದ್ದಾಗಿರುವುದಿಲ್ಲ. ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವ ಆಸೆ ಎಲ್ಲರಲ್ಲೂ ಸಹಜ. ಒಬ್ಬೊಬ್ಬರು “ನಮ್ಮದು ಕನಸು ಮಾತ್ರʼ ಎಂದು ತಮ್ಮ ಕನಸುಗಳಿಗೆ ತಾವೇ ಒಂದಿಷ್ಟು ಚೌಕಟ್ಟು ಹಾಕಿಕೊಂಡುಬಿಡುತ್ತಾರೆ. ಕೆಲವರು ಅದನ್ನು ಈಡೇರಿಸಲು ಶತಪ್ರಯತ್ನ ಮಾಡುತ್ತಾರೆ. ಕೆಲವರು ಕನಸುಗಳನ್ನು ಬೆಂಬತ್ತಿ ಹೋಗಿ ಶತಾಯಗತಾಯ ಅದನ್ನು ಈಡೇರಿಸಿಕೊಳ್ಳುತ್ತಾರೆ. ಕನಸುಗಳನ್ನು ನನಸು ಮಾಡಿಕೊಳ್ಳದೆ ಅವರು ವಿಶ್ರಮಿಸುವುದಿಲ್ಲ. ಅದೆಂಥದ್ದೇ ಕನಸಾದರೂ ಸಾಧಿಸದೆ  ಬಿಡುವುದಿಲ್ಲ. ಅವರ ನಿರ್ಧಾರವೇ ಹಾಗಿರುತ್ತದೆ. ಕನಸುಗಳನ್ನು ಬೆಂಬತ್ತುವ ಅವರ ದೃಢತೆಯೂ ಅಷ್ಟೇ ಬಲವಾಗಿರುತ್ತದೆ. ಆದರೆ, ಈ ಗುಣ ಎಲ್ಲರಿಗೂ ಬರುವುದಿಲ್ಲ. ಕೆಲವು ರಾಶಿಯ ಜನರಲ್ಲಿ ಮಾತ್ರ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಜನ್ಮಜಾತವಾಗಿ ಕಂಡುಬರುತ್ತದೆ. ಹಾಗೆಂದು ಉಳಿದವರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದಿಲ್ಲ ಎಂದರ್ಥವಲ್ಲ. ಆದರೆ, ಈ ರಾಶಿಗಳ ಜನ ಈ ಬಗ್ಗೆ ಹೆಚ್ಚು ಬದ್ಧರಾಗಿರುತ್ತಾರೆ. ಅವರು ಅದಕ್ಕಾಗಿ ಶ್ರಮಿಸುತ್ತಾರೆ, ಸಾಕಷ್ಟು ತ್ಯಾಗ ಮಾಡುತ್ತಾರೆ, ಹಾಗೆಯೇ ಅಂದುಕೊಂಡಿದ್ದನ್ನು ಜೀವನದಲ್ಲಿ ತುಂಬಿಕೊಳ್ಳುತ್ತಾರೆ. ತಾವು ಕಂಡ ಕನಸುಗಳನ್ನು ಬೆನ್ನತ್ತುವ ಕೆಲವು ರಾಶಿಗಳು ಇವು.

•    ಮೇಷ (Aries)
ಕಂಡ ಕನಸುಗಳನ್ನು (Dream) ಸಾಧಿಸುವುದೆಂದರೆ ಇವರಿಗೆ ಭಾರೀ ಪ್ರೀತಿ. ಹೊಸ ಹೊಸ ಗುರಿಗಳನ್ನು ಬೆನ್ನತ್ತುವುದರಲ್ಲಿ ಮೇಷ ರಾಶಿಯ ಜನ ಹೆಚ್ಚು ಉತ್ಕಟತೆ (Ardent) ಹೊಂದಿರುತ್ತಾರೆ ಹಾಗೂ ಪ್ಯಾಷನೇಟ್‌ (Passionate) ಆಗಿರುತ್ತಾರೆ. ಕನಸನ್ನು ಸಾಕಾರಗೊಳಿಸುವಲ್ಲಿ ಅತ್ಯಂತ ಸ್ಪರ್ಧಾತ್ಮಕ (Competitive) ಮನೋಸ್ಥಿತಿ ಹೊಂದಿರುತ್ತಾರೆ. ಹಾಗೂ ಅವುಗಳ ಬಗ್ಗೆಯೇ ಸದಾ ಚಿಂತನೆ ನಡೆಸುತ್ತಿರುತ್ತಾರೆ. ಹೀಗಾಗಿ, ಸಾಕಷ್ಟು ಅತ್ಯುತ್ತಮ ಎನ್ನುವಂತಹ ಅವಕಾಶಗಳನ್ನು (Opportunities) ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಒಮ್ಮೆ ಕನಸುಗಳನ್ನು ಸಾಕಾರಗೊಳಿಸಲು ಮುಂದಾದರೆ ಯಾವ ಅಡೆತಡೆಗಳೂ ಇವರನ್ನು ಬಾಧಿಸುವುದಿಲ್ಲ. 

ಸಂಗಾತಿಯೊಂದಿಗೆ ಆಳವಾದ ಸಂಬಂಧ ಬಯಸುವ ರಾಶಿಚಕ್ರಗಳಿವು..

•    ವೃಷಭ (Taurus)
ಈ ರಾಶಿಯ ಜನ ಕೂಡ ತಾವು ಕಂಡ ಕನಸುಗಳು ಸಾಕಾರವಾಗದಿದ್ದರೆ (Achieve) ನೆಮ್ಮದಿಯಿಂದ ಇರುವುದಿಲ್ಲ. ಅದಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಾರೆ. ಕನಸುಗಳ ಬಗ್ಗೆ ಪ್ಯಾಷನೇಟ್‌ ಆಗಿದ್ದು, ದೃಢ ಚಿತ್ತದಿಂದ (Loyal) ಶ್ರಮಪಡುತ್ತಾರೆ. ಅದಕ್ಕೆ ತಕ್ಕ ಶಿಸ್ತೂ ಇವರಲ್ಲಿರುತ್ತದೆ. ಪ್ರತಿಭಾನ್ವಿತರಾಗಿರುವ ಇವರು ಬದ್ಧತೆಯನ್ನೂ (Commitment) ಹೊಂದಿರುವುದರಿಂದ ಇವರಿಗೆ ಸರಿಸಾಟಿ ಯಾವುದೂ ಇರುವುದಿಲ್ಲ. ಗುರಿಯತ್ತ ಹೊರಡುವ ಗೂಳಿಯನ್ನು (Bull) ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ತಾನು ಬಯಸಿದ್ದನ್ನು ಪಡೆಯದ ಹೊರತು ಗೂಳಿ ನಿಲ್ಲುವುದಿಲ್ಲ. ಅದಕ್ಕೆ ಬೇಕಾದ ವಿಲ್‌ ಪವರ್‌ (Willpower) ಕೂಡ ಇವರಲ್ಲಿರುತ್ತದೆ. 

•    ಧನು (Sagittarius)
ಸಾಹಸಪ್ರಿಯರಾಗಿರುವ ಧನು ರಾಶಿಯ ಜನ ಚಿಕ್ಕಪುಟ್ಟದ್ದನ್ನೆಲ್ಲ ಕನಸು ಕಾಣುವುದಿಲ್ಲ. ತಾವು ಕಂಡ ಕನಸುಗಳು ಈಡೇರುವವರೆಗೆ ಸುಮ್ಮನಿರುವುದಿಲ್ಲ. ತಮ್ಮ ಮನಸ್ಸಿನಲ್ಲಿ ನಿಗದಿಪಡಿಸಿಕೊಂಡ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾರೆ. ಧನಾತ್ಮಕ (Positive) ಮನಸ್ಥಿತಿಯಿಂದ ಉತ್ಸಾಹಭರಿತರಾಗಿರುತ್ತಾರೆ. ಅದ್ಭುತ ದೃಷ್ಟಿಕೋನವನ್ನು ನನಸಾಗಿಸಿಕೊಳ್ಳಲು ಸಂಪೂರ್ಣ ಪ್ರಯತ್ನ (Hardwork) ಪಡುತ್ತಾರೆ. ಹಾಗೂ ತಮ್ಮದೇ ಸಾಮ್ರಾಜ್ಯ (Empire) ನಿರ್ಮಿಸಿಕೊಳ್ಳುತ್ತಾರೆ. ಬಲು ಎತ್ತರದ ಬಯಕೆಗಳನ್ನೇ ಹೊಂದಿದ್ದು, ಸದಾ ಶೋಭಿಸುವ (Fiery) ವ್ಯಕ್ತಿತ್ವದಿಂದಾಗಿ ಅವುಗಳನ್ನು ಸಾಧಿಸಿಕೊಳ್ಳುತ್ತಾರೆ.

ಸಂಗಾತಿ ತಮ್ಮನ್ನು ಹೊಗಳಲಿ ಎಂದು ಬಯಸುವ Zodiac Signs!

•    ಮಕರ (Capricorn)
ಭೂಮಿ ತತ್ವದ ಮಕರ ರಾಶಿಯ ಜನ ಅಪೂರ್ವ ಶ್ರದ್ಧೆ Diligent) ಹೊಂದಿರುತ್ತಾರೆ. ತಮ್ಮ ಕಾರ್ಯಸಾಧನೆಗಾಗಿ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಸಿದ್ಧತೆ (Preparation)ಯೊಂದಿಗೆ ಮುನ್ನಡೆಯುತ್ತಾರೆ. ತಮ್ಮದೇ ನಿಯಮಗಳನ್ನು ರೂಪಿಸಿಕೊಳ್ಳುತ್ತಾರೆ. ವೃತ್ತಿ (Career) ಜೀವನದಲ್ಲಿ ಅತ್ಯುನ್ನತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.  

Follow Us:
Download App:
  • android
  • ios