Asianet Suvarna News Asianet Suvarna News

ಸೂರ್ಯ ಧನು ರಾಶಿಗೆ ಬಂದರೆ ಈ ನಾಲ್ಕು ರಾಶಿಗಳಿಗೆ ಲಾಭ!

ಮನುಷ್ಯನ ಜಾತಕದಲ್ಲಿ ಸೂರ್ಯ ಎಲ್ಲಿ ಸಂಚರಿಸುತ್ತಾನೆ ಎಂಬುದರ ಮೇಲೆ ಅದೃಷ್ಟ ಹಾಗೂ ನತದೃಷ್ಟ ಅವಲಂಬಿತವಾಗಿರುತ್ತವೆ. ಇಂಥ ಸೂರ್ಯ ಧನು ರಾಶಿಯಲ್ಲಿದ್ದು ಈ ವರ್ಷದ ಕೊನೆಯ ಚಲನೆಯನ್ನು ಮಾಡುತ್ತಾನೆ. ಸೂರ್ಯನ ಈ ಚಲನೆ ಯಾವ ಯಾವ ರಾಶಿಯ ಮೇಲೆ ಬೀರುತ್ತೆ ಪ್ರಭಾವ?

Suns transit in Sagittarius is good to these four zodiacs
Author
Bengaluru, First Published Dec 18, 2019, 6:21 PM IST

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಸೂರ್ಯ ಅತ್ಯಂತ ಶಕ್ತಿಶಾಲಿ, ಪ್ರಭಾವಿ ಗ್ರಹ. ಸೂರ್ಯ ಎಲ್ಲಿ ಸಂಚರಿಸುತ್ತಿದ್ದಾನೆ ಎಂಬುದು ನಮ್ಮ ಜೀವನದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ, ಆತ್ಮವಿಶ್ವಾಸ, ಮಾನಸಿಕ ಸ್ಥಿತಿ, ಯೋಗಕ್ಷೇಮ ಇತ್ಯಾದಿ. ಆತ ಉತ್ತಮ ಸ್ಥಾನದಲ್ಲಿದ್ದರೆ ಅದು ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತದೆ. ಪ್ರತಿ ರಾಶಿಯಲ್ಲೂ ಸೂರ್ಯನು ಸಹಜವಾಗಿ ಸಂಚರಿಸುತ್ತಾನೆ. ವರ್ಷದ ಈ ತಿಂಗಳಿನಲ್ಲಿ ರವಿಯು ತನ್ನ ಕೊನೆಯ ಚಲನೆಯನ್ನು ಧನು ರಾಶಿಯಲ್ಲಿದ್ದು ಮಾಡಲಿದ್ದಾನೆ. 2019ರ ಡಿಸೆಂಬರ್‌ 16ಂದು ಧನು ರಾಶಿ ಪ್ರವೇಶ ಮಾಡಿದ ಸೂರ್ಯ ಇಲ್ಲಿ ಒಂದು ತಿಂಗಳು ಸಂಚರಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಆತನ ಈ ಸ್ಥಾನವು 4 ರಾಶಿಗಳಲ್ಲಿ ಜನಿಸಿದವರಿಗೆ ಹೆಚ್ಚು ಲಾಭವನ್ನು ತರಲಿದೆ.

ವ್ಯಭಿಚಾರ ಭಾವನೆಗೆ ಕಾರಣವಾಗೋ ಶುಕ್ತನ ಸ್ಥಾನ ಪಲ್ಲಟ

ಮೇಷ ರಾಶಿ:
ಮೇಷ ರಾಶಿಯವರಿಗೆ ನವೆಂಬರ್‌ ತಿಂಗಳು ಸ್ವಲ್ಪ ಪ್ರತಿಕೂಲವಾಗಿತ್ತು. ಸೂರ್ಯನ ಧನು ರಾಶಿಯ ಚಲನೆಯು ಮೇಷ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ತರಲಿದೆ. ಶೀಘ್ರದಲ್ಲೇ ಈ ಬದಲಾವಣೆಯನ್ನು ನೀವು ಕಾಣಲಿದ್ದೀರಿ. ನಿಮ್ಮ ವ್ಯಕ್ತಿತ್ವದಲ್ಲಿ ನೀವು ಬದಲಾವಣೆಯನ್ನು ಕಾಣಬಲ್ಲಿರಿ. ಬಹುಕಾಲದಿಂದ ನೀವು ಬಯಸಿದಂತೆ ನಿಮ್ಮ ಸಾಮಾಜಿಕ ವರ್ಚಸ್ಸು ಬೆಳೆಯುತ್ತದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲೂ ಪದೋನ್ನತಿ, ವೇತನ ಹೆಚ್ಚಳ ಮುಂತಾದ ಹರ್ಷದ ಸಂಗತಿಗಳನ್ನು ಕಾಣಬಹುದು. ಬಹುಕಾಲದಿಂದ ಬಾಕಿಯಾಗಿರುವ ಕಾರ್ಯಗಳನ್ನು ಪೂರೈಸಿಕೊಳ್ಳಲು ಇದು ಸಕಾಲ. ಮುಂಬರುವ ಕೆಲಸ ಅಥವಾ ಸಂಘರ್ಷಗಳೊಂದಿಗೆ ಒಡನಾಡುವ ಮನಶ್ಶಕ್ತಿಯನ್ನೂ ಸೂರ್ಯ ನಿಮಗೆ ನೀಡುತ್ತಾನೆ. ಆರೋಗ್ಯದ ದೃಷ್ಟಿಯಿಂದ ನೀವು ದೃಢಕಾಯರಾಗಿರುತ್ತೀರಿ; ಇದೇ ಸಮಯದಲ್ಲಿ ಜಾಗರೂಕರಾಗಿರಲೂ ಬೇಕು.

ಮಿಥುನ ರಾಶಿ:
ಮಿಥುನ ರಾಶಿಯಲ್ಲಿರುವವರಿಗೆ ಸೂರ್ಯನ ಧನು ರಾಶಿಯ ಚಲನೆ ತೃಪ್ತಿದಾಯಕ ಸುದ್ದಿಗಳನ್ನು ನೀಡಲಿದೆ. ಆರೋಗ್ಯವು ಋುತುವಿನ ಬದಲಾವಣೆಯಿಂದಾಗಿ ಸ್ವಲ್ಪ ಹದಗೆಟ್ಟಿದ್ದರೂ ಮೊದಲಿಗಿಂತ ಉತ್ತಮವಾಗಲಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸುವುದು, ಜೀವನಶೈಲಿಯನ್ನು ಆರೋಗ್ಯಕಾರಕವಾಗಿ ಬದಲಾಯಿಸುವುದರಿಂದ ನಿಮಗೆ ಬೇಕಾದ ಹಿತಕರ ಫಲಿತಾಂಶಗಳನ್ನು ಪಡೆಯಬಹುದು. ಹಿಂದಿನ ತಿಂಗಳುಗಳ ನಿಮ್ಮ ಕಠಿಣ ಪರಿಶ್ರಮ ಅದ್ಭುತ ಫಲ ನೀಡಲಿದೆ. ನಿಮ್ಮ ಶಾಂತ ಮತ್ತು ದೃಢ ಸ್ವಭಾವಕ್ಕೆ ನೀವು ಹೆಸರುವಾಸಿಯಾಗಿದ್ದೀರಿ.

ಧನು ರಾಶಿ:
ಸೂರ್ಯನು ಈಗ ನಿಮ್ಮದೇ ರಾಶಿಯಲ್ಲಿದ್ದಾನೆ. ಹೀಗಾಗಿ ಸೂರ್ಯನ ಪ್ರಖರತೆ ನಿಮ್ಮ ರಾಶಿಯಲ್ಲಿದೆ ಎನ್ನಬಹುದು. ಇದಕ್ಕಿಂತಲೂ ಉತ್ತಮ ಸಮಯ ನಿಮ್ಮ ಮುಂದಿರಲು ಸಾಧ್ಯವಿಲ್ಲ. ಈ ವರ್ಷದ ಅಂತ್ಯವು ನಿಮ್ಮನ್ನು ಎಲ್ಲ ಚಿಂತೆಗಳಿಂದ ದೂರ ಮಾಡುತ್ತದೆ. ಧ್ಯಾನ, ಯೋಗ ಮತ್ತು ಇತರ ವ್ಯಾಯಾಮಗಳು ನಿಮ್ಮ ಆರೋಗ್ಯವನ್ನು ಹೊಸ ರೀತಿಯಲ್ಲಿ ನೋಡಲು ನಿಮಗೆ ಸಹಾಯ ಮಾಡುತ್ತವೆ. ಆರೋಗ್ಯದಲ್ಲಿ ಕೆಲವು ಏರಿಳಿತಗಳು ಇರಬಹುದು, ಆದರೆ ಇದು ಒಳ್ಳೆಯದಕ್ಕಾಗಿಯೇ, ಮತ್ತು ನೀವು ಮಾನಸಿಕವಾಗಿ ದೃಢ ಸ್ಥಿತಿಯಲ್ಲಿರುತ್ತೀರಿ. ಕೆಲಸದ ಒತ್ತಡ ಕಡಿಮೆಯಾಗುತ್ತದೆ ಮತ್ತು ಹೆಚ್ಚು ರಜಾದಿನಗಳನ್ನು ತೆಗೆದುಕೊಂಡು ಕುಟುಂಬದ ಜೊತೆ ಸವಿದಿನಗಳನ್ನು ಕಳೆಯಬಹುದು. ಅನಿರೀಕ್ಷಿತ ಲಾಭಗಳು ಮತ್ತು ಧನಾತ್ಮಕ ಆಶ್ಚರ್ಯಕರ ಸುದ್ದಿಗಳು ನಿಮ್ಮನ್ನು ಚಕಿತಗೊಳಿಸಬಹುದು. ಒಟ್ಟಾರೆಯಾಗಿ, ಡಿಸೆಂಬರ್‌ ನಿಮಗೆ ಲಾಭದಾಯಕ ಮತ್ತು ಸಮೃದ್ಧವಾದ ತಿಂಗಳು.

ಈ ರಾಶಿಯವರು ಈ ಚಟ ಬಿಟ್ಟರೆ ಒಳಿತು

ಮೀನ ರಾಶಿ:
ಸೂರ್ಯನ ಬೆಳಕು ನಿಮ್ಮ ತುಸು ಓರೆಯಾಗಿ ಸ್ಪರ್ಶಿಸುತ್ತದೆ. ಮೀನುಗಳು ಸೂರ್ಯನ ಬೆಳಕನ್ನು ನೇರವಾಗಿ ಪಡೆಯುವುದಿಲ್ಲ. ಹೀಗಾಗಿ ಈತನ ಕೃಪೆಯ ಲಾಭ ನಿಮಗೆ ಗೊತ್ತಾಗವುದು ಸ್ವಲ್ಪ ತಡವಾಗಬಹುದು; ಆದರೆ ಲಾಭವಂತೂ ಶತಸ್ಸಿದ್ಧ. ಹದಗೆಟ್ಟ ಕೆಲವು ಸಂಬಂಧಗಳನ್ನು ಸರಿಪಡಿಸಲು, ಬಿಟ್ಟ ಕೆಲಸ ಪುನಃ ಶುರು ಮಾಡಲು, ಘರ್ಷಣೆಗಳು ಮತ್ತು ನಕಾರಾತ್ಮಕ ಬೆಳವಣಿಗೆಗಳನ್ನು ಮನದಿಂದ ತೆಗೆದುಹಾಕಲು ಇದು ನಿಮಗೆ ಸೂಕ್ತ ಸಮಯ. ಈ ಸಮಯದಲ್ಲಿ ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಿ. ವೃತ್ತಿಜೀವನದಲ್ಲಿ ಪೈಪೋಟಿ ಎದುರಿಸುತ್ತಿರುವವರು ಒಳ್ಳೆಯ ಸುದ್ದಿಯನ್ನು ಕೇಳುತ್ತಾರೆ. ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಿ ಮತ್ತು ಕೂಡಲೇ ವಿಚಲಿತಗೊಳ್ಳಲು ಬಿಡಬೇಡಿ.

ಅಯ್ಯಪ್ಪನ ಜನ್ಮ ಜಾತಕವಿದು

Follow Us:
Download App:
  • android
  • ios