ಗ್ರಹಗಳ ರಾಜನೆಂದು ಕರೆಯಲ್ಪಡುವ ಸೂರ್ಯಗ್ರಹವು ಇದೇ ಸೆಪ್ಟೆಂಬರ್ 16ರಂದು ಕನ್ಯಾ ರಾಶಿಯನ್ನು ಪ್ರವೇಶಿಸಲಿದೆ. ಸೂರ್ಯನು 17 ಅಕ್ಟೋಬರ್ 2020ರ ವರೆಗೆ ಅದೇ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ. ಸೂರ್ಯನು ಗೌರವ, ತಂದೆ, ಆತ್ಮ, ಉಚ್ಛ ಪದವಿ ಹಾಗೂ ಸರ್ಕಾರಿ ಕೆಲಸಗಳಂತ ಕಾರ್ಯಗಳ ಕಾರಕನಾಗಿದ್ದಾನೆ. ಹಾಗಾಗಿ ಸೂರ್ಯನ ರಾಶಿ ಪರಿವರ್ತನೆಯಿಂದ ಯಾವ್ಯಾವ ರಾಶಿಯವರಿಗೆ ಶುಭ, ಅಶುಭ ಹಾಗೂ ಮಿಶ್ರಫಲಗಳಿವೆ ಎಂಬುದನ್ನು ತಿಳಿಯೋಣ…

ಮೇಷ ರಾಶಿ
ಮೇಷ ರಾಶಿಯವರಿಗೆ ಶುಭ ಫಲ ಪ್ರಾಪ್ತವಾಗುತ್ತದೆ. ಸುಖ-ಸಮೃದ್ಧಿ ದೊರೆಯಲಿದೆ. ಸಾಹಸ ಮತ್ತು ಪರಿಶ್ರಮದಿಂದ ಜಯವನ್ನು ಸಾಧಿಸುವ ಸಮಯ ಮತ್ತು ವೃತ್ತಿ ಕ್ಷೇತ್ರದ ವ್ಯಾಪ್ತಿ ಹೆಚ್ಚಲಿದೆ. ಕೋರ್ಟ್ ಕಚೇರಿ ಕೆಲಸಗಳು ಸುಗಮವಾಗುತ್ತವೆ. ಕುಟುಂಬದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ.

ಇದನ್ನು ಓದಿ: ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…! 

ವೃಷಭ ರಾಶಿ
ಈ ರಾಶಿಯವರು ಉತ್ತಮ ಫಲವನ್ನು ಪಡೆಯಬಹುದಾಗಿದೆ. ಉನ್ನತ ಶಿಕ್ಷಣ, ಗುಪ್ತಚರ ಕಾರ್ಯಗಳಲ್ಲಿ ಸಫಲತೆ ದೊರೆಯುತ್ತದೆ. ಪ್ರೇಮಕ್ಕೆ ಸಂಬಂಧಿಸಿದಂತೆ ಶುಭವಾರ್ತೆಯನ್ನು ಕೇಳುವ ಸಂಭವವಿದೆ. ಸಂತಾನಕ್ಕೆ ಸಂಬಂಧಿಸಿದ ಚಿಂತೆಯು ದೂರಾಗುತ್ತದೆ. ಹಟದಿಂದ ಕಾರ್ಯ ಸಾಧಿಸಿಕೊಳ್ಳಬಹುದಾಗಿದೆ. ಹಿರಿಯ ಅಧಿಕಾರಿಗಳ ಸಹಯೋಗ ದೊರೆಯಲಿದೆ.


ಮಿಥುನ ರಾಶಿ
ಈ ರಾಶಿಯವರು ಮಾನಸಿಕ ಅಶಾಂತಿ, ಗೃಹ ಕ್ಲೇಶದಿಂದ ಚಿಂತೆಗೊಳಗಾಗುವ ಸಾಧ್ಯತೆ ಇದೆ. ಹೃದಯ ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯೆತೆ ಇದ್ದು, ಜಾಗರೂಕರಾಗಿರಿ. ತಂದೆ-ತಾಯಿಯ ಆರೋಗ್ಯದ ಕಾಳಜಿ ವಹಿಸಿ. ನಿಂತು ಹೋದ ಕೆಲಸಗಳು ಆಗುವ ಸಂಭವವಿದ್ದು, ಕಾರ್ಯಕ್ಷೇತ್ರದ ವ್ಯಾಪ್ತಿ ವಿಸ್ತರಿಸುವುದಲ್ಲದೆ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ರಾಜಕೀಯ ವ್ಯಕ್ತಿಗಳು ಮತ್ತು ಆಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡಲಿದೆ.

ಕರ್ಕಾಟಕ ರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಿದ್ದರೆ ಈ ಸಮಯದಲ್ಲಿ ಸಫಲಗೊಳ್ಳುತ್ತವೆ. ಸಾಹಸ ಮತ್ತು ಪರಾಕ್ರಮವು ವೃದ್ಧಿಸಲಿದೆ. ನಿಮ್ಮಲ್ಲಿರುವ ಅತ್ಯುತ್ತಮ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳಿ.

ಸಿಂಹ ರಾಶಿ
ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ದುಬಾರಿ ವಸ್ತುವನ್ನು ಖರೀದಿಸುವ ಸಂಭವವಿದೆ. ಹಲವಾರು ದಿನಗಳಿಂದ ಬರಬೇಕಿದ್ದ ಹಣ ವಾಪಸ್ ಸಿಗಲಿದೆ. ಈ ರಾಶಿಯವರು ಆರೋಗ್ಯದ ಕಾಳಜಿ ವಹಿಸುವುದು ಉತ್ತಮ.

ಇದನ್ನು ಓದಿ: ನಿಮ್ಮ ಜಾತಕದಲ್ಲಿ ಚಾಂಡಾಲ ಯೋಗವಿರಬಹುದು, ಇದ್ದರೆ ಹೀಗೆ ಮಾಡಿ! 
 
ಕನ್ಯಾ ರಾಶಿ
ಧರ್ಮ ಮತ್ತು ಆಧ್ಯಾತ್ಮದಲ್ಲಿ ಹೆಚ್ಚು ಒಲವು ಮೂಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪ್ರಶಸ್ತ ಸಮಯವಾಗಿದೆ. ಸಂತಾನದ ಬಗ್ಗೆ ಇರುವ ಚಿಂತೆಯು ಕಡಿಮೆಯಾಗಲಿದೆ. ಉದ್ಯೋಗದಲ್ಲಿ ಹೊಸದೊಂದು ಬದಲಾವಣೆಯನ್ನು ಸಹ ಕಾಣಬಹುದಾಗಿದೆ.

ತುಲಾ ರಾಶಿ
ಈ ರಾಶಿಯವರು ಸ್ವಲ್ಪ ಕಷ್ಟದ ಸಮಯವನ್ನು ಕಳೆಯುವಂತಾಗುತ್ತದೆ. ಸ್ನೇಹಿತರಿಂದ ಅಥವಾ ಬಂಧುಗಳಿಂದ ಅಶುಭ ಸಮಾಚಾರವನ್ನು ಕೇಳುವ ಸಾಧ್ಯತೆಯಿದೆ. ವಿದೇಶ ಸಂಬಂಧಿ ಕಾರ್ಯಗಳಿಗೆ ಇದು ಪ್ರಶಸ್ತವಾದ ಕಾಲವಾಗಿದೆ. ಹೆಚ್ಚಿನ ಖರ್ಚು ನಿಮ್ಮನ್ನು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗುತ್ತದೆ.

ವೃಶ್ಚಿಕ ರಾಶಿ
ನಿಮ್ಮ ಚಿಂತೆಗಳು ದೂರಾಗಲಿವೆ. ಸಂತಾನಕ್ಕೆ ಸಂಬಂಧಿಸಿದ ತೊಂದರೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಫಲತೆಯನ್ನು ಕಾಣಬಹುದಾಗಿದೆ.

ಧನು ರಾಶಿ
ವೃತ್ತಿ ಕ್ಷೇತ್ರದಲ್ಲಿ ಸಫಲತೆಯು ಸಿಗುತ್ತದೆ. ಕೆಲಸಕ್ಕಾಗಿ ಪಟ್ಟ ಕಷ್ಟಕ್ಕೆ ಉತ್ತಮ ಪ್ರತಿಫಲ ಸಿಗಲಿದೆ. ಹೊಸ ಉದ್ಯಮವನ್ನು ಆರಂಭಿಸಲು ಉತ್ತಮ ಸಮಯ ಇದಾಗಿದೆ. ವಿದೇಶಿ ಕಂಪೆನಿಗಳಿಂದ ಸಹ ಕೆಲಸಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಕಾಳಜಿ ವಹಿಸಿ. 

ಮಕರ ರಾಶಿ
ಈ ರಾಶಿಯವರು ದಾನ ಮಾಡಿ ಪುಣ್ಯವನ್ನು ಸಂಪಾದಿಸುವಿರಿ. ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ಕೋರ್ಟ್ ಕಚೇರಿಯ ವಿಚಾರಗಳನ್ನು ಪರಸ್ಪರ ಮಾತನಾಡಿ ಸರಿಪಡಿಸಿಕೊಂಡರೆ ಉತ್ತಮ. ಶತ್ರುಗಳ ಬಗ್ಗೆ ಎಚ್ಚರದಿಂದಿರಿ.

ಕುಂಭ ರಾಶಿ
ಈ ರಾಶಿಯವರ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಸ್ವಾಸ್ಥ್ಯದ ಕಾಳಜಿ ಇರಲಿ. ಜಮೀನು ಸಂಬಂಧಿ ಕೆಲಸಗಳು ಸುಗಮವಾಗಿ ಮುಗಿಯಲಿವೆ. ನಿಮ್ಮವರೇ ನಿಮ್ಮನ್ನು ತುಳಿಯಲು ಪ್ರಯತ್ನಿಸುತ್ತಾರೆ.

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..! 

ಮೀನ ರಾಶಿ
ದಾಂಪತ್ಯ ಜೀವನದಲ್ಲಿ ಸಮಸ್ಯೆ ಎದುರಾಗುವ ಸಂಭವವಿದೆ. ವ್ಯಾಪಾರಸ್ಥರಿಗೆ ಉತ್ತಮ ಸಮಯವಾಗಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಎಚ್ಚರಿಕೆಯಿಂದ ಕೆಲಸಗಳನ್ನು ಪೂರ್ಣಗೊಳಿಸಿ.