ಗವಿಗಂಗಾಧರೇಶ್ವರ ಕ್ಷೇತ್ರಕ್ಕೆ ಬಾರದ ಸೂರ್ಯರಶ್ಮಿ, 2019ರಂತೆ ಈ ಬಾರಿ ಕಾದಿದ್ಯಾ ಗಂಡಾಂತರ?
ಕೋವಿಡ್ ಮೊದಲು ಅತ್ಯಲ್ಪ ಅವಧಿಯಲ್ಲಿ ಸೂರ್ಯ ರಶ್ಮಿ ಲಿಂಗ ಸ್ಪರ್ಶಿಸಿತ್ತು. ಇದೇ ವೇಳೆ ದೀಕ್ಷಿತರು ಅಪಾರ ಸಾವು ನೋವಿನ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೋವಿಡ್ ಮಹಾಮಾರಿ ವಕ್ಕರಿಸಿತ್ತು. ಈ ಬಾರಿ ಸೂರ್ಯ ರಶ್ಮಿ ಗವಿಗಂಗಾಧರನ ಸ್ಪರ್ಶಿಸಿಲ್ಲ. ಇದು ಮತ್ತೊಂದು ಗಂಡಾತರದ ಮುನ್ಸೂಚನೆಯಾ?
ಬೆಂಗಳೂರು(ಜ.14) ಗವಿಗಂಗಧಾರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಲಿಂಗವನ್ನು ಸೂರ್ಯ ರಶ್ಮಿಗಳು ಸ್ಪರ್ಶಿಸುತ್ತದೆ. ಈ ವಿಸ್ಮಯ ಕ್ಷಣ ಹಾಗೂ ದೇವರ ಆಶೀರ್ವಾದ ಪಡೆಯಲು ಕಿಕ್ಕಿರಿದು ಭಕ್ತರು ಸೇರುತ್ತಾರೆ. ಸೂರ್ಯ ರಶ್ಮಿ ಸ್ಪರ್ಶಿಸಿದ ಆಧಾರದಲ್ಲಿ ಅರ್ಚಕರು ವರ್ಷದ ಭವಿಷ್ಯ ಹೇಳುತ್ತಾರೆ. ಆದರೆ ಈ ಬಾರಿ ಮೋಡದ ಕಾರಣದಿಂದ ಸೂರ್ಯ ರಶ್ಮಿಗಳು ಗವಿಗಂಗಧಾರೇಶ್ವರ ಕ್ಷೇತ್ರದ ಲಿಂಗ ಸ್ಪರ್ಶಿಸಿಲ್ಲ. ಇದರ ಬೆನ್ನಲ್ಲೇ ಭಕ್ತರಲ್ಲಿ ಗಂಡಾಂತರದ ಆತಂಕ ಎದುರಾಗಿದೆ. 2019ರಲ್ಲಿ ಇದೇ ರೀತಿ ನಡೆದಿತ್ತು. ಈ ವೇಳೆ ಅರ್ಚಕರು ಅಪಾರ ಸಾವು ನೋವಿನ ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ಕೋವಿಡ್ ಮಹಾಮಾರಿ ಅಪ್ಪಳಿಸಿ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಪ್ರತಿ ವರ್ಷ ಗವಿಗಂಗಧಾರೇಶ್ವರನ ಕ್ಷೇತ್ರದಲ್ಲಿ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸಂದರ್ಭದಲ್ಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗುತ್ತಿತ್ತು. ಲಿಂಗ ಸ್ಪರ್ಶಿಸುವ ಸೂರ್ಯನ ಕಿರಣ ಎಷ್ಟು ಹೊತ್ತು ಇರಲಿದೆ ಅನ್ನುವ ಆಧಾರದಲ್ಲಿ ಅರ್ಚಕರು ಭವಿಷ್ಯ ಹೇಳುತ್ತಿದ್ದರು. 2019ರಲ್ಲಿ ಕೆಲವೆ ಕ್ಷಣ ಸೂರ್ಯನ ಕಿರಣಗಳು ಲಿಂಗವನ್ನು ಸ್ಪರ್ಶಿಸಿತ್ತು. ಕೆಲ ಹೊತ್ತಲ್ಲೇ ಸೂರ್ಯನ ಕಿರಣಗಳು ಮಾಯವಾಗಿತ್ತು. ಅತ್ಯಲ್ಪ ಸಮಯ ಮಾತ್ರ ಸೂರ್ಯನ ಕಿರಣಗಳ ಸ್ಪರ್ಶದ ಬೆನ್ನಲ್ಲೇ ದೀಕ್ಷಿತರು ಅಪಾರ ಸಾವು ನೋವಿನ ಎಚ್ಚರಿಕೆ ನೀಡಿದ್ದರು. 2019ರ ಜನವರಿಯಲ್ಲಿ ನೀಡಿದ ಭವಿಷ್ಯ ಅದೇ ವರ್ಷದ ಅಂತ್ಯದಲ್ಲಿ ನಿಜವಾಗಿತ್ತು. 2019ರ ಅಂತ್ಯದ ವೇಳೆ ಕೋವಿಡ್ ಮಹಾಮಾರಿ ಭಾರತಕ್ಕೆ ಕಾಲಿಟ್ಟಿತ್ತು. ಬಳಿಕ 2 ವರ್ಷಗಳ ಕಾಲ ಹಲವರ ಬದುಕನ್ನು ಕಸಿದುಕೊಂಡಿತ್ತು.
ಕಾಣಿಸಿಕೊಳ್ಳದ ಸೂರ್ಯ ರಶ್ಮಿ... ಜಗತ್ತಿನ ಮೇಲೆ ಪರಿಣಾಮ ಏನು?
ಇದೀಗ ಈ ಬಾರಿಯೂ ಸೂರ್ಯ ರಶ್ಮಿ ಗವಿಗಂಗಧಾರೇಶ್ವರನ ಕ್ಷೇತ್ರಕ್ಕೆ ಸ್ಪರ್ಶಿಸಿಲ್ಲ. ಈ ಬಾರಿ ವಾಯುಭಾರ ಕುಸಿತ, ಮೋಡದ ವಾತಾವರಣದಿಂದ ಸೂರ್ಯನ ರಶ್ಮಿಗಳು ಸ್ಪರ್ಶಿಸಿಲ್ಲ. ಹೀಗಾಗಿ ಕೆಲ ವರ್ಷಗಳ ಹಿಂದೆ ನಡೆದಂತೆ ಈ ಬಾರಿಯೂ ಗಂಡಾಂತರ ಕಾದಿದೆಯಾ ಅನ್ನೋ ಆತಂಕ, ಚರ್ಚೆಗಳು ಶುರುವಾಗಿದೆ.
ಚರ್ಚೆ ಜೋರಾಗುತ್ತಿದ್ದಂತೆ ಗವಿಗಂಗಧಾರೇಶ್ವರ ಕ್ಷೇತ್ರದ ಸೋಮಶೇಖರ ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ. ಭಕ್ತರು ಆತಂಕ ಪಡುವು ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ಶಿವನ ಅನುಮತಿ ಪಡೆದು ಸೂರ್ಯ ಮುಂದುವರೆಯುತ್ತಾನೆ. ಉತ್ತರಾಯಣ ಪ್ರವೇಶ ಮಾಡುವ ಸೂರ್ಯಚಂದ್ರಾಗ್ನಿ ನೇತ್ರ ಶಿವನ ದರ್ಶನ ಮಾಡಲಿದೆ. ಆದರೆ ಈ ಬಾರಿ ಪ್ರಕೃತಿ ವಿಕೋಪದಿಂದ ಭಕ್ತರಿಗೆ ದರ್ಶನ ಸಿಗಲಿಲ್ಲ.ಉತ್ತರಾಯಣದ ದಿನ ಸೂರ್ಯ ಎಲ್ಲರಿಗೂ ದಕ್ಷಿಣಾಯನದ ಫಲ ಕೊಡುತ್ತಾನೆ. ಈ ಪುಣ್ಯ ಹಾಗೂ ಆಶೀರ್ವಾದ ಎಲ್ಲಾ ಭಕ್ತವೃಂದಕ್ಕೆ ದೊರಕಲಿ ಎಂದು ಅರ್ಚಕರು ಹೇಳಿದ್ದಾರೆ. ಸೂರ್ಯ ಆಗಮಿಸಿದ್ದಾನೆ. ಗವಿಗಂಗಾಧರ ಕ್ಷೇತ್ರವನ್ನು ಪ್ರವೇಶಿಸಿದ್ದಾನೆ. ಆದರೆ ನಮಗೆ ನೋಡಲು ಸಾಧ್ಯವಾಗಿಲ್ಲ ಎಂದು ಸೋಮಶೇಖರ ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿ ನಿತ್ಯ ಅಭಿಷೇಖ ಮಾಡುವ ನಮಗೆ ಬದಲಾವಣೆಗಳು ಗೋಚರವಾಗುತ್ತದೆ. ಈ ಬಾರಿ ಸೂರ್ಯನ ಕಿರಣಗಳು ಅಗೋಚರವಾಗಿತ್ತು ಎಂದಿದ್ದಾರೆ. ಪ್ರಕೃತಿ ವಿಕೋಪ ಆಗುವುದು ಬೇಡ. ಸೂರ್ಯ ಕಿರಣಗಳು ಈಶ್ವನ ಪೂಜೆ ಮಾಡಿದೆ. ಲಿಂಗದ ಮೇಲೆ ಎಷ್ಟು ಹೊತ್ತು ಸೂರ್ಯ ಇರ್ತಾನೋ ಅದರ ಮೇಲೆ ನಾವು ಭವಿಷ್ಯ ಹೇಳುತ್ತೇವೆ. ಆದರೆ ಈ ಬಾರಿ ನಮಗೆ ಕಂಡಿಲ್ಲ. ಜಲದ ಸಂಕಟಗಳು ನಡೆಯುವ ಸಾಧ್ಯತೆ ಇದೆ ಎಂು ಸೋಮಶೇಖರ ದೀಕ್ಷಿತ್ ಹೇಳಿದ್ದಾರೆ. 2021ರಲ್ಲಿ ಇದೇ ರೀತಿ ಆಗಿತ್ತು. ಇದೀಗ 2ನೇ ಬಾರಿ ಈ ರೀತಿ ವಿದ್ಯಮಾನ ನಡೆಯುತ್ತಿದೆ ಎಂದು ಸೋಮಶೇಖರ್ ದೀಕ್ಷಿತ್ ಹೇಳಿದ್ದಾರೆ.
ಬೆಂಗಳೂರು ಗವಿಗಂಗಾದರೇಶ್ವರನ ಅಡಿಯಿಂದ ಮುಡಿವರೆಗೆ ಸ್ಪರ್ಶಿಸಿದ ಸೂರ್ಯ ರಶ್ಮಿ