ಪಹಲ್ಗಾಂ ದಾಳಿಯಲ್ಲಿ ಬಲಿಯಾದವರ ಸ್ಮರಣಾರ್ಥ ಧರ್ಮದಾನ ಸಂಸ್ಥೆಯಿಂದ 45 ಸುದರ್ಶನ ಹೋಮಗಳ ಅರ್ಪಣೆ ಮಾಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಪಾಯಿಂಟ್ ಬ್ಲ್ಯಾಂಕ್ ರೇಂಜ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಘಟನೆಯಲ್ಲಿ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಸೇರಿದಂತೆ 26 ಮಂದಿ ಮೃತಪಟ್ಟಿದ್ದಾರೆ. ಅಧಿಕ ಪ್ರವಾಸಿಗರು ಹಾಗೂ ಸ್ಥಳೀಯರು ಗಂಭೀರ ಗಾಯಗೊಂಡಿದ್ದಾರೆ.
ಪಹಲ್ಲಾಂ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ದ ಕಠಿಣ ಕ್ರಮ ಮುಂದುವರೆಸಿರುವ ಸೇನಾ ಪಡೆಗಳು ಮತ್ತೆ ನಾಲ್ಕು ಉಗ್ರರ ಮನೆಗ ಳನ್ನು ಧ್ವಂಸ ಮಾಡಿವೆ. ಇದರೊಂದಿಗೆ 26 ಪ್ರವಾಸಿಗರ ಹತ್ಯೆ ನಡೆದ ಮೂರು ದಿನಗಳಲ್ಲಿ ಒಟ್ಟು ಆರು ಉಗ್ರರ ಮನೆಗಳನ್ನು ಧ್ವಂಸ ಮಾಡಿದಂತಾಗಿದೆ. ಜೊತೆಗೆ ಉಗ್ರರಿಗಾಗಿ ಮನೆ ಮನೆ ಹುಡುಕಾಟದ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಅಲ್ಲದೆ ಉಗ್ರರ ಬೆಂಬಲಿಗರು ಮತ್ತು ಅವರಿಗೆ ನೆರವು ನೀಡುವವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಹಲವಾರು ಜನರನ್ನು ವಶಕ್ಕೆ ಪಡೆದಿದ್ದು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭಯೋತ್ಪಾದಕರು ಮತ್ತು ಅವರಿಗೆ ಪ್ರೋತ್ಸಾಹ ನೀಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಕಠಿಣ ಸಂದೇಶ ರವಾನಿಸಿದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಇಂಥ ಘಟನೆಗಳು ಆರಂಭವಾಗಿವೆ.
ಹೀಗಾಗಿ ಪಹಲ್ಗಾಂ ದಾಳಿಯಲ್ಲಿ ಬಲಿಯಾದವರ ಸ್ಮರಣಾರ್ಥ ಧರ್ಮದಾನ ಸಂಸ್ಥೆಯಿಂದ 45 ಸುದರ್ಶನ ಹೋಮಗಳ ಅರ್ಪಣೆ ಮಾಡಲಾಗಿದೆ. ಏಪ್ರಿಲ್ 27, 2025 ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವ ಧರ್ಮದಾನ ವೇದಿಕೆಯು ಇತ್ತೀಚಿನ ಪಹಲ್ಗಾಂನಲ್ಲಿ ಉಗ್ರಗಾಮಿಗಳಿಂದ ಹತ್ಯೆಗೀಡಾದ ಅಮಾಯಕರ ಗೌರವಾರ್ಥವಾಗಿ, 45 ಸುದರ್ಶನ ಹೋಮಗಳನ್ನು ಭಾವಪೂರ್ಣವಾಗಿ ಆಯೋಜಿಸಿದೆ. ತಮ್ಮ ಗುರುಗಳಾದ ಪೂಜ್ಯ ಪ್ರೊಫ್. ಪಿ.ಆರ್. ಮುಕುಂದ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ, ಮೃತರ ಆತ್ಮಕ್ಕೆ ಶಾಂತಿ ಹಾಗೂ ಅವರ ಕುಟುಂಬಗಳಿಗೆ ಶಕ್ತಿ ಹಾಗೂ ದೈವೀ ರಕ್ಷಣೆಗಾಗಿ ಈ ಯಜ್ಞವು ನೆರವೇರಿಸಲಾಯಿತು.
ಕರ್ನಾಟಕದ ವಿವಿಧ ಭಾಗಗಳಲ್ಲಿನ ಪುರೋಹಿತರು, ಉತ್ಸಾಹದಿಂದ ಕೈಜೋಡಿಸಿ, ಭಗವಂತ ಸುದರ್ಶನನಿಗೆ 108 ಆಜ್ಯಾಹುತಿಯನ್ನು ಸಮರ್ಪಿಸಿದರು.
ಧರ್ಮದಾನ ತಂಡ, ಈ ಮಹತ್ತರ ಯತ್ನಕ್ಕೆ ತಮ್ಮ ಪ್ರೀತಿಯ ಸಹಕಾರ ನೀಡಿದ ದಾನಿಗಳು ಹಾಗೂ ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸೂಚಿಸಿದೆ. ಸಮಷ್ಟಿಯ ಬೆಂಬಲವಿಲ್ಲದೆ ಈ ಪವಿತ್ರ ಅರ್ಪಣೆ ಸಾಧ್ಯವಾಗುತ್ತಿರಲಿಲ್ಲ ಎಂಬುದು ನಿಸ್ಸಂಶಯ ಎಂದು ಧರ್ಮದಾನದ ಪ್ರತಿನಿಧಿ ತಿಳಿಸಿದ್ದಾರೆ.
ಭಾರತದ ಉದ್ದಗಲಕ್ಕೂ ಧರ್ಮ ಹಾಗೂ ದಾನದ ದಿವ್ಯ ಅಗ್ನಿ ಸದಾ ಪ್ರಕಾಶಮಾನವಾಗಿರಲಿ ಎಂದು ಧರ್ಮದಾನದ ಪ್ರತಿನಿಧಿಗಳು ಪ್ರಕಟಿಸಿದ್ದಾರೆ. ಈ ಯಜ್ಞದ ಯಶಸ್ಸಿನಿಂದ ಉತ್ತೇಜಿತರಾಗಿ, "ನಾವು ಈ ದಾನಯಜ್ಞವನ್ನು ವಿಸ್ತರಿಸಿ, ನೂರಾರು ಕುಟುಂಬಗಳನ್ನು ಈ ಸೇವೆಯಲ್ಲಿ ಸಹಭಾಗಿಗಳಾಗಿಸಲು ನಿಶ್ಚಯಿಸಿದ್ದೇವೆ." ಎಂದು ಹೇಳಿದರು
ಧರ್ಮದಾನವನ್ನು ಬೆಂಬಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ www.dharmadaana.com ಯನ್ನು ಭೇಟಿ ನೀಡಿ.
ಧರ್ಮದಾನ ಸಂಸ್ಥೆಯ ಪರಿಚಯ:
ಧರ್ಮದಾನವು ಭಾರತೀಯ ದಾನ ಪರಂಪರೆಯ ಸಂರಕ್ಷಣೆಯ ಸಂಕಲ್ಪದಿಂದ ಉದಯಿಸಿ, ದಾನ ಮತ್ತು ಯಜ್ಞಸೇವೆಗಳ ಮೂಲಕ ವ್ಯಕ್ತಿಗಳನ್ನೂ ಸಮುದಾಯಗಳನ್ನೂ ಸಬಲಗೊಳಿಸುವ ಪಾವನ ವೇದಿಕೆಯಾಗಿದೆ.
