ಮಳೆಗೆ ಪ್ರಾರ್ಥಿಸಿ ಗೋರಿಯ ಶವದ ಬಾಯಿಗೆ ನೀರು ಬಿಡ್ತಾರೆ: ವಿಜಯಪುರದಲ್ಲಿ ಮಳೆಗಾಗಿ ಭಯಾನಕ ಆಚರಣೆ!
ರಾಜ್ಯದಲ್ಲಿ ಭರ್ಜರಿ ಮಳೆ ಆಗ್ತಿದೆ. ಮಲೆನಾಡು ಭಾಗದಲ್ಲಂತು ಮಳೆ ನಿಲ್ಲುವ ಲಕ್ಷಣಗಳಿಲ್ಲ. ಆದ್ರೆ ಉತ್ತರ ಕರ್ನಾಟಕ ಭಾಗದ ವಿಜಯಪುರ, ಕಲಬುರ್ಗಿ, ಬೀದರ್, ಬಾಗಲಕೋಟೆ ಸೇರಿದಂತೆ ಇನ್ನು ಮಳೆ ಆರ್ಭಟ ಶುರುವಾಗಿಲ್ಲ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜು.15): ರಾಜ್ಯದಲ್ಲಿ ಭರ್ಜರಿ ಮಳೆ ಆಗ್ತಿದೆ. ಮಲೆನಾಡು ಭಾಗದಲ್ಲಂತು ಮಳೆ ನಿಲ್ಲುವ ಲಕ್ಷಣಗಳಿಲ್ಲ. ಆದ್ರೆ ಉತ್ತರ ಕರ್ನಾಟಕ ಭಾಗದ ವಿಜಯಪುರ, ಕಲಬುರ್ಗಿ, ಬೀದರ್, ಬಾಗಲಕೋಟೆ ಸೇರಿದಂತೆ ಇನ್ನು ಮಳೆ ಆರ್ಭಟ ಶುರುವಾಗಿಲ್ಲ. ಹೀಗಾಗಿ ಕಣ್ಮರೆಯಾಗಿರೋ ಮಳೆಗಾಗಿ ಗುಮ್ಮಟನಗರಿ ವಿಜಯಪುರದಲ್ಲಿ ವಿಚಿತ್ರ, ಭಯಾನಕ ಆಚರಣೆಯೊಂದನ್ನ ಮಾಡಿದ್ದಾರೆ. ಸಮಾಧಿಯಲ್ಲಿರೋ ಶವದ ಬಾಯಿಗೆ ನೀರು ಬಿಟ್ಟು ಮಳೆಗಾಗಿ ಪ್ರಾರ್ಥಿಸಿದ್ದಾರೆ..
ಮಳೆಗಾಗಿ ಸಮಾಧಿಯಲ್ಲಿರೋ ಶವದ ಬಾಯಿಗೆ ನೀರು: ಜನರು ಮಳೆಗಾಗಿ ಇನ್ನಿಲ್ಲದಂತೆ ಪ್ರಯತ್ನಗಳನ್ನ ಮಾಡ್ತಿದ್ದಾರೆ. ಕತ್ತೆ ಮದುವೆ, ಕಪ್ಪೆ ಮದುವೆ, ದೇವರಲ್ಲಿ ಪ್ರಾರ್ಥನೆ ಸೇರಿದಂತೆ ಮಳೆಗಾಗಿ ಹಪಹಪಿಸುತ್ತಿದ್ದಾರೆ. ಈ ನಡುವೆ ಬರದ ನಾಡು ಅಂತಲೆ ಕುಖ್ಯಾತಿ ಗಳಿಸಿರುವ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ವಿಚಿತ್ರ ಆಚರಣೆಯೊಂದು ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಗೋರಿಯಲ್ಲಿರೋ ಶವದ ಬಾಯಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥಿಸಲಾಗಿದೆ. ಇಂಥಹ ವಿಚಿತ್ರ ಆಚರಣೆ ನಡೆದಿರೋದು ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ.
ಟ್ರಾಮಾ ಸೆಂಟರ್ ಉದ್ಘಾಟನೆಯಾದ್ರೂ ಕಾರ್ಯಾರಂಭ ಇಲ್ಲ: ಗ್ಯಾರಂಟಿ ನಡುವೆ 1.5 ವರ್ಷದಿಂದ ಅನಾಥವಾಗಿದೆ ಕಟ್ಟಡ!
ಸಮಾಧಿಗೆ ರಂದ್ರ, ಟ್ಯಾಂಕರ್ ಪೈಪ್ ಮೂಲಕ ನೀರು: ಜುಲೈ ತಿಂಗಳು ಕಳೆಯುತ್ತಾ ಬಂದಿದೆ. ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ಇದೆ ಹೊರತಾಗಿ ಅಂದುಕೊಂಡ ರೀತಿಯಲ್ಲಿ ಮಳೆ ಸುರಿಯುತ್ತಿಲ್ಲ. ಮಹಾರಾಷ್ಟ್ರದಲ್ಲಿ ಮಳೆಯಾಗ್ತಿದ್ದು, ಪರಿಣಾಮ ಆಲಮಟ್ಟಿ ಆಣೆಕಟ್ಟಿಗೆ ನೀರು ಹರಿದು ಬಂದಿದೆ. ಆದ್ರೆ ಜಿಲ್ಲೆಯಲ್ಲಿ ಮಳೆ ಇನ್ನು ಮರೀಚಿಕೆಯಾಗಿದೆ. ಹೀಗಾಗಿ ಮಳೆಗಾಗಿ ವಿಚಿತ್ರ ರೀತಿಯಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ. ಅದರಲ್ಲು ಟ್ಯಾಂಕರ್ ಸಹಿತವಾಗಿ ಗ್ರಾಮದ ಸ್ಮಶಾನಕ್ಕೆ ತೆರಳಿದ ಯುವಕರು, ಗ್ರಾಮದ ಮುಖಂಡರು ಗೋರಿಯೊಂದರ ಮೇಲೆ ಹಾರಿಯಿಂದ ರಂದ್ರ ಕೊರೆದಿದ್ದಾರೆ. ಬಳಿಕ ಅದ್ರಲ್ಲಿ ಟ್ಯಾಂಕರ್ ನ ಪೈಪ್ ಮೂಲಕ ನೀರು ಹಾಕಿದ್ದಾರೆ. ಪೈಪ್ ಮೂಲಕ ಹಾಕುವ ನೀರು ಶವ ಬಾಯಿ ತಲುಪುತ್ತಂತೆ. ಗೋರಿಯಲ್ಲಿರೋ ಶವದ ಬಾಯಿಗೆ ಹೀಗೆ ನೀರು ಹಾಕಿದ್ರೆ ಮಳೆಯಾಗುತ್ತೆ ಎನ್ನುವ ಗಾಢ ನಂಬಿಕೆ ಇದೆ..
ನೀರು ಕುಡಿಯುತ್ತವಂತೆ ಸಮಾಧಿಯಲ್ಲಿರೋ ಶವಗಳು: ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಶವಗಳ ಬಾಯಿಗೆ ನೀರುಣಿಸಲು ಗೋರಿಗೆ ಟ್ಯಾಂಕರ್ ಮೂಲಕ ನೀರು ಬಿಡ್ತಾರೆ. ಹೀಗೆ ನೀರು ರಂದ್ರಗಳ ಮೂಲಕ ಗೋರಿಯಲ್ಲಿ ಹೂತಿರುವ ಶವದ ಬಾಯಿಗೆ ಹೋಗಿ ತಲುಪುತ್ತೆ. ಹೀಗೆ ನೀರು ತಲುಪಿದಾಗ ಆ ನೀರನ್ನ ಶವಗಳು ಸೇವಿಸುತ್ತವಂತೆ. ಬಾಯಿ ತೆರೆದು ಶವಗಳು ನೀರು ಕುಡಿಯುತ್ವೆ ಎನ್ನುವ ನಂಬಿಕೆ ಇದೆ. ನೀರು ಕುಡಿದು ಶವಗಳು ತೃಪ್ತಿಯಾದರೆ ಮಳೆಯಾಗುತ್ತೆ ಎನ್ನುವ ಗಾಢ ನಂಬಿಕೆ ಇಲ್ಲಿನ ಜನರಲ್ಲಿದೆ.
ಬೆಂಗಳೂರು ಕಾನ್ವೆಂಟ್ ಮಾದರಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ: ಸಚಿವ ಎಂ.ಬಿ.ಪಾಟೀಲ್
ಇದು ನಂಬಿಕೆಯಾ? ಮೂಢನಂಬಿಕೆಯಾ?: ಇನ್ನು ಶವದ ಬಾಯಿಗೆ ನೀರು ಹಾಕಿದ್ರೆ ಮಳೆಯಾಗುತ್ತಾ ಎನ್ನುವ ಪ್ರಶ್ನೆಗಳಿವೆ. ಇದು ನಂಬಿಕೆಯಾ ಮೂಢನಂಬಿಕೆಯಾ ಎನ್ನುವ ಜಿಜ್ಞಾಸೆಗಳಿವೆ. ಗ್ರಾಮಸ್ಥರ ಇಟ್ಟುಕೊಂಡಿರುವ ನಂಬಿಕೆಯಂತೆ ಶವದ ಬಾಯಿಗೆ ಆಗಲಿ, ಗೋರಿಯಲ್ಲಿ ರಂಧ್ರ ಕೊರೆದು ನೀರು ಬಿಟ್ಟು, ಆ ನೀರು ಶವದ ಬಾಯಿಗೆ ಹೋದರೆ ಮಳೆಯಾಗುತ್ತಂತೆ. ಈ ಭಾಗದಲ್ಲಿ ಗಾಢವಾಗಿರುವ ನಂಬಿಕೆ ಇದು. ಮೊದಲೆಲ್ಲ ತೀವ್ರ ಬರಗಾಲ ಉಂಟಾದಾಗ ಈ ರೀತಿಯಲ್ಲಿ ವಿಚಿತ್ರ ಆಚರಣೆ ನಡೆಸಲಾಗ್ತಿತ್ತಂತೆ.