Marriage Line: ನಿಮ್ಮ ಅಂಗೈನಲ್ಲಿ ಈ ರೀತಿ ರೇಖೆಯಿದ್ರೆ ಡಿವೋರ್ಸ್ ಫಿಕ್ಸ್..!
ಒಬ್ಬ ವ್ಯಕ್ತಿಯ ಜೀವನವು ಸುಖಮಯವಾಗಿರುವುದೋ ಅಥವಾ ದುಃಖಾಗಿರುವುದೋ ಎಂಬುದನ್ನು ಅವನ ಮದುವೆಯ ರೇಖೆಯಿಂದ ಊಹಿಸಬಹುದು. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಒಬ್ಬ ವ್ಯಕ್ತಿಯ ಜೀವನವು ಸುಖಮಯವಾಗಿರುವುದೋ ಅಥವಾ ದುಃಖಾಗಿರುವುದೋ ಎಂಬುದನ್ನು ಅವನ ಮದುವೆ (marriage) ಯ ರೇಖೆಯಿಂದ ಊಹಿಸಬಹುದು. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ವ್ಯಕ್ತಿಗೆ ಯಾವಾಗ ವಿವಾಹ ಯೋಗ ಕೂಡಿ ಬರಲಿದೆ ಎಂಬುದನ್ನು ಹಸ್ತರೇಖೆಯ ಮೂಲಕ ಕಂಡು ಹಿಡಿಯಬಹುದು. ಇದು ಮದುವೆಯ ಬಳಿಕ ನಿಮ್ಮ ವೈವಾಹಿಕ ಜೀವನ (married life) ಎಂಬುದನ್ನು ಕೂಡ ತಿಳಿಸುತ್ತದೆ.
ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಮನುಷ್ಯನ ಅಂಗೈಯಲ್ಲಿರುವ ಮದುವೆ ರೇಖೆಯು, ಅವನ ವೈವಾಹಿಕ ಜೀವನದ ಬಗ್ಗೆ ಹೇಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಒಂದಕ್ಕಿಂತ ಹೆಚ್ಚು ಮದುವೆಯ ರೇಖೆಗಳನ್ನು ಹೊಂದಿದ್ದರೆ ಅದು ವಿಭಿನ್ನ ಅರ್ಥವನ್ನು ಕೊಡುತ್ತದೆ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಮದುವೆ ರೇಖೆಯನ್ನು ಹೊಂದಿದ್ದರೆ ಆ ವ್ಯಕ್ತಿಯು ಖಂಡಿತವಾಗಿಯೂ ಎರಡನೇ ಮದುವೆ (Second marriage) ಯನ್ನು ಆಗುವ ಅಗತ್ಯವಿಲ್ಲ. ನಿಮ್ಮ ಮದುವೆ ರೇಖೆಯು ವೈವಾಹಿಕ ಜೀವನದ ಬಗ್ಗೆ ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ.
ತುಂಡಾದ ಮದುವೆ ರೇಖೆ
ನಿಮ್ಮ ವೈವಾಹಿಕ ರೇಖೆಯು ತುಂಡಾಗಿ ಹೋಗಿದ್ದರೆ ನಿಮ್ಮ ವೈವಾಹಿಕ ಜೀವನದಲ್ಲಿ ವಿಚ್ಛೇದನದ ಸಾಧ್ಯತೆಗಳಿವೆ. ಒಬ್ಬ ವ್ಯಕ್ತಿಯ ಮದುವೆ ರೇಖೆಯು ಹೆಚ್ಚು ಮುರಿದು ಹೋದರೆ ಅವರು ಮತ್ತೊಂದು ಮದುವೆಯಾಗುವ ಸಾಧ್ಯತೆ ಹೆಚ್ಚು ಎಂದು ನಂಬಲಾಗಿದೆ.
ಕಟಕದಲ್ಲಿ ಬುಧನ ಪ್ರವೇಶ; ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ?
ಎರಡು ಸಮನಾಂತರ ರೇಖೆಗಳು
ನಿಮ್ಮ ಅಂಗೈಯಲ್ಲಿ ಎರಡು ಸಮನಾಂತರ ವಿವಾಹ ರೇಖೆಗಳಿದ್ದರೆ ಮತ್ತು ಅವು ಕಿರುಬೆರಳು (little finger) ಮತ್ತು ಹೃದಯ ರೇಖೆಯ ನಡುವೆ ಇದ್ದರೆ, ಅಂತಹ ವ್ಯಕ್ತಿಗಳು ಎರಡು ಬಾರಿ ಮದುವೆಯಾಗುವ ಸಾಧ್ಯತೆಗಳಿವೆ. ಮದುವೆಯ ನಂತರ ಅಂತಹ ವ್ಯಕ್ತಿಯು ಪ್ರತ್ಯೇಕವಾಗಿ ವಾಸಿಸು (live) ವ ಸಾಧ್ಯತೆಯೂ ಇದೆ.
ಚಿಕ್ಕ ಮತ್ತು ಸಮನಾಂತರ ರೇಖೆ
ನೀವು ಚಿಕ್ಕ ಮತ್ತು ಸಮನಾಂತರ ವಿವಾಹ ರೇಖೆಯನ್ನು ಹೊಂದಿದ್ದರೆ, ಮೂರನೇ ವ್ಯಕ್ತಿ ನಿಮ್ಮ ವೈವಾಹಿಕ ಜೀವನಕ್ಕೆ ಪ್ರವೇಶಿಸಬಹುದು ಅಥವಾ ವಿವಾಹೇತರ ಸಂಬಂಧ (relationship) ದ ಸಾಧ್ಯತೆಗಳು ಇರಬಹುದು ಎಂದು ತೋರಿಸುತ್ತದೆ.
ಹೃದಯ ರೇಖೆ ಕಡೆಗೆ ವಾಲುವುದು
ಮದುವೆಯ ರೇಖೆಯು ಹೃದಯ ರೇಖೆಯ ಕಡೆಗೆ ವಾಲುತ್ತಿದ್ದರೆ ಇದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಸುಚಿಸುತ್ತದೆ. ಮದುವೆಯ ರೇಖೆಯು ಹೃದಯ ರೇಖೆ (Heart line) ಯನ್ನು ಕತ್ತರಿಸುತ್ತಿದ್ದರೆ ಅಂತಹ ಜನರ ವೈವಾಹಿಕ ಜೀವನವು ತುಂಬಾ ಕರುಣಾಜನಕವಾಗಿರುತ್ತದೆ.
ನಾಲ್ಕಕ್ಕಿಂತ ಹೆಚ್ಚು ವಿವಾಹ ರೇಖೆಗಳು
ನಾಲ್ಕಕ್ಕಿಂತ ಹೆಚ್ಚು ವಿವಾಹ ರೇಖೆಗಳನ್ನು ಹೊಂದಿರುವ ವ್ಯಕ್ತಿಯು, ತುಂಬಾ ಚಂಚಲ (fickle) ನಾಗಿರುತ್ತಾನೆ ಮತ್ತು ಇತರ ಜನರಲ್ಲಿ ಬಹಳ ಜನಪ್ರಿಯನಾಗಿರುತ್ತಾನೆ. ಮತ್ತೊಂದೆಡೆ, ನಿಮ್ಮ ಮುಖ್ಯ ಮಾರ್ಗವು ಸ್ಪಷ್ಟವಾಗಿಲ್ಲದಿದ್ದರೆ ಮತ್ತು ಆಳವಿಲ್ಲದಿದ್ದರೆ ಮದುವೆಯ ನಂತರ ಜನಪ್ರಿಯ (popular) ವಾಗಲು ಹಲವು ಸಾಧ್ಯತೆಗಳಿವೆ.
ಪಂಚ ಮಹಾಪುರುಷ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು?; ಇವು ನಿಮಗೆ ಅದೃಷ್ಟ ತರಲಿವೆ
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.