ಪಂಚ ಮಹಾಪುರುಷ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು?; ಇವು ನಿಮಗೆ ಅದೃಷ್ಟ ತರಲಿವೆ
ಪಂಚ ಮಹಾಪುರುಷ ಯೋಗದಲ್ಲಿ ಜನಿಸಿದವರು ಅದೃಷ್ಟವಂತರು ಮತ್ತು ಸಮೃದ್ಧರು ಎಂದು ನಂಬಲಾಗಿದೆ. ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿಯಿಂದ ಐದು ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. ಇದನ್ನು ಪಂಚ ಮಹಾಪುರುಷ ಯೋಗ ಎಂದು ಕರೆಯಲಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.
ಪಂಚ ಮಹಾಪುರುಷ ಯೋಗದಲ್ಲಿ ಜನಿಸಿದವರು ಅದೃಷ್ಟವಂತರು ಮತ್ತು ಸಮೃದ್ಧರು ಎಂದು ನಂಬಲಾಗಿದೆ. ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿಯಿಂದ ಐದು ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. ಇದನ್ನು ಪಂಚ ಮಹಾಪುರುಷ ಯೋಗ ಎಂದು ಕರೆಯಲಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.
ರುಚಕ, ಭದ್ರಕ, ಹಂಸಕ, ಮಾಲವ, ಶಶ ಎನ್ನುವ ಈ ಪಂಚ ಮಹಾಪುರುಷ ಯೋಗಗಳು ಕ್ರಮವಾಗಿ ಮಂಗಳ, ಬುಧ, ಗುರು, ಶುಕ್ರ, ಶನಿ ಗ್ರಹಗಳಿಂದ ಉಂಟಾಗುತ್ತವೆ. ಇಲ್ಲಿ ಐದು ಶುಭಯೋಗಗಳ ಕುರಿತು ಮಾಹಿತಿ ನೀಡಲಾಗಿದೆ.
ಪಂಚ ಮಹಾಪುರುಷ ಯೋಗದಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು ಮತ್ತು ಶ್ರೀಮಂತರು. ಇವುಗಳಲ್ಲಿ ರುಚಕ ಪಂಚ ಮಹಾಪುರುಷ ಯೋಗವು ಹೆಚ್ಚು ಪ್ರಬಲವಾಗಿದೆ. ಮೇಷ, ವೃಶ್ಚಿಕ ಅಥವಾ ಮಕರ ರಾಶಿಯಲ್ಲಿ ಮಂಗಳವು ಮೊದಲ ಚತುರ್ಥ ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದರೆ ಆಗ ರುಚಕ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಅಂತಹ ಜನರು ತುಂಬಾ ಬಲಶಾಲಿಗಳು ಈ ಜನರು ಸೈನ್ಯ ಅಥವಾ ಪೊಲೀಸ್ ಉದ್ಯೋಗಗಳಲ್ಲಿ ಉತ್ತಮ ಸ್ಥಾನಕ್ಕೆ ಹೋಗಬಹುದು ಅಂತಹವರು ಹವಳವನ್ನು ಧರಿಸದರೆ ಪ್ರಯೋಜನವಾಗುತ್ತದೆ.
ಬುಧನು ಮಿಥುನ ಅಥವಾ ಕನ್ಯಾ ರಾಶಿಯಲ್ಲಿ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದರೆ ಆಗ ಭದ್ರ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಅಂತಹ ವ್ಯಕ್ತಿಯು ತುಂಬಾ ಬುದ್ಧಿವಂತನಾಗಿರುತ್ತಾನೆ. ಅಂತಹವರು ಪಚ್ಚೆ ವಸ್ತ್ರವನ್ನು ಧರಿಸಿದರೆ ಅನುಕೂಲವಾಗುತ್ತದೆ.
ಬುಧವಾರ ಗಣೇಶನಿಗೆ ಪ್ರಿಯ; ಈ ಕಾರ್ಯಗಳಿಂದ ಅದೃಷ್ಟ ಬರಲಿದೆ..!
ಗುರುವು ಧನು ರಾಶಿ, ಮೀನ ಅಥವಾ ಕಟಕದಲ್ಲಿ ಉಚ್ಛನಾಗಿದ್ದರೆ ಮತ್ತು ಮೊದಲ ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದರೆ ಆಗ ಹಂಸ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಅಂತಹ ವ್ಯಕ್ತಿಯು ಬೋಧನಾ ಕೆಲಸ ಅಥವಾ ಸರ್ಕಾರದಲ್ಲಿ ಉತ್ತಮ ಸ್ಥಾನವನ್ನು ಹೊಂದಿರುತ್ತಾನೆ. ಅಂತಹ ವ್ಯಕ್ತಿಯು ಪುಖರಾಜ್ ಅನ್ನು ಧರಿಸಿದರೆ, ಅವನು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ.
ಶುಕ್ರನು ವೃಷಭ, ತುಲಾ ಅಥವಾ ಮಿನದಲ್ಲಿ ಉಚ್ಛನಾದರೆ ಮತ್ತು ಮೊದಲ ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದರೆ ಆಗ ಮಾಲವ್ಯ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಈ ಯೋಗದವರು ಚಲನಚಿತ್ರೋದ್ಯಮ, ರೆಸ್ಟೋರೆಂಟ್, ಕಿರಾಣಿ ಅಂಗಡಿ ಅಥವಾ ಗಾರ್ಮೆಂಟ್ ಉದ್ಯಮದಲ್ಲಿ ಯಶಸ್ಸು ಪಡೆಯಲಿದ್ದಾರೆ. ಓಪಲ್ ಅಥವಾ ಡೈಮಂಡ್ ಧರಿಸುವುದರಿಂದ ಪ್ರಯೋಜನಗಳು ಆಗಲಿವೆ.
ಶನಿಯು ಮಕರ, ಕುಂಭ ಅಥವಾ ತುಲಾ ರಾಶಿಯಲ್ಲಿ ಉಚ್ಚನಾಗಿದ್ದರೆ ಮತ್ತು ಮೊದಲ ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದರೆ, ಆಗ ಶಶ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಅಂತಹ ವ್ಯಕ್ತಿಯು ಕಬ್ಬಿಣದ ವ್ಯಾಪಾರ, ಉತ್ಪನ್ನ ತಯಾರಿಕಾ ಘಟಕ, ಪೆಟ್ರೋಲ್ ಪಂಪ್, ತೈಲ ಘಟಕ ಅಥವಾ ಮಹಾನ್ ಪ್ರಚಾರಕನಾಗಬಹುದು. ಅಂತಹ ವ್ಯಕ್ತಿಯು ನೀಲಿ ಮಣಿಯನ್ನು ಧರಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾನೆ.
ಗುರು ನಕ್ಷತ್ರ ಪರಿವರ್ತನೆ: ಈ ರಾಶಿಯವರಿಗೆ ವರದಾನ ಆಗಲಿದೆ 5 ತಿಂಗಳು..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.