Asianet Suvarna News Asianet Suvarna News

ರಾಮಲಲ್ಲಾ ವಿಗ್ರಹದ ಕಲ್ಲು 2500 ವರ್ಷ ಹಳೆಯದ್ದು; ವಿಗ್ರಹದ ಮತ್ತಷ್ಟು ವಿಶೇಷತೆಗಳು

ಕರ್ನಾಟಕದ ಹೆಸರಾಂತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಚಳಕದಲ್ಲಿ ಒಡಮೂಡಿ ಬಂದ ರಾಮಲಲ್ಲಾ 51 ಇಂಚಿನ ಮೇರುಕೃತಿ. ಇದು 5 ವರ್ಷದ ರಾಮನ ಆಕರ್ಷಕ ಚಿತ್ರಣ.  ಈ ವಿಗ್ರಹದ ಮತ್ತಷ್ಟು ವಿಶೇಷತೆಗಳು ಈಗ ಹೊರ ಬಿದ್ದಿವೆ.

Stone used for ramlalla idol is 2500 years old and other interesting facts skr
Author
First Published Jan 24, 2024, 11:17 AM IST

ಅಯೋಧ್ಯೆಯಲ್ಲಿರುವ ಭವ್ಯವಾದ ರಾಮಮಂದಿರವು ಕೇವಲ ಸ್ಮಾರಕವಲ್ಲ; ಇದು ಶತಮಾನಗಳ ಹಳೆಯ, ಕೋಟ್ಯಂತರ ಜನರ ಭಕ್ತಿಯ ಪರಾಕಾಷ್ಠೆ. ರಾಮಲಲ್ಲಾ ವಿಗ್ರಹದ ರಚನೆಯು ಸಮರ್ಪಣೆ, ನಿಖರವಾದ ಸಂಶೋಧನೆ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಆಳವಾದ ತಿಳುವಳಿಕೆಯ ಕಥೆಯಾಗಿದೆ. ಒಳಗೆ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆಗೆೊಂಡಿರುವ ರಾಮಲಲ್ಲಾ ವಿಗ್ರಹದ ಅನೇಕ ವಿಶೇಷತೆಗಳು ಅಚ್ಚರಿ ಮೂಡಿಸುತ್ತವೆ. 

ಕರ್ನಾಟಕದ ಹೆಸರಾಂತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಚಳಕದಲ್ಲಿ ಒಡಮೂಡಿ ಬಂದ ರಾಮಲಲ್ಲಾ 51 ಇಂಚಿನ ಮೇರುಕೃತಿ. ಇದು 5 ವರ್ಷದ ರಾಮನ ಆಕರ್ಷಕ ಚಿತ್ರಣ. ತನ್ನೊಳಗೆ ಮುಗ್ಧತೆಯ ಮೋಡಿ ಮತ್ತು ದೈವಿಕತೆಯನ್ನು ತುಂಬಿಕೊಂಡಿದೆ. 

2500 ವರ್ಷ ಹಳೆಯದು
ರಾಮಲಲ್ಲಾ ವಿಗ್ರಹಕ್ಕೆ ಬಳಸಿದ ಕಪ್ಪು ಕಲ್ಲು ಸುಮಾರು 2500 ವರ್ಷಗಳಷ್ಟು ಹಳೆಯದು. ಈ ರೀತಿಯ ಕೃಷ್ಣಶಿಲೆಗಳು ಕಾಲಾನಂತರದಲ್ಲಿ ತುಕ್ಕು ಹಿಡಿಯುವುದಿಲ್ಲ ಅಥವಾ ವಿಗ್ರಹದ ಮೇಲೆ ಹಾಲು ಸುರಿದಾಗ ಪ್ರತಿಕ್ರಿಯಿಸುವುದಿಲ್ಲ. ಹಾಗಾಗಿಯೇ 5000 ವರ್ಷಗಳಷ್ಟು ಹಳೆಯ ದೇವಾಲಯದ ವಿಗ್ರಹಗಳು ಕೂಡಾ ಇಂದಿಗೂ ಯಾವುದೇ ಹವಾಮಾನ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸದೆ ಗಟ್ಟಿಯಾಗಿ ನಿಂತಿರುವುದನ್ನು ಅನೇಕ ದೇವಾಲಯಗಳಲ್ಲಿ ಕಾಣಬಹುದು. ಕೃಷ್ಣ ಶಿಲೆಯು ನೀಲಿ-ಬೂದು ಬಣ್ಣದ್ದಾಗಿದೆ ಮತ್ತು ನೀವು ತೆಂಗಿನಕಾಯಿ ಮತ್ತು ಸುಟ್ಟ ಕೋಕೋ ಪೌಡರ್ ಹಾಕಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

ಮೂಲ ನಕ್ಷತ್ರ ಕೆಟ್ಟದು ಎಂಬ ನಂಬಿಕೆ ಗೆ ಇತಿಶ್ರೀ ಹಾಡಿದ 'ಲಕ್ಷ್ಮೀ ನಿವಾಸ'

ಕಲ್ಲು ಹೇಗೆ ಪತ್ತೆಯಾಯಿತು?
ಉತ್ತಮ ಗುಣಮಟ್ಟದ ಗ್ರಾನೈಟ್ ಗಣಿಗಳಿಗೆ ಹೆಸರುವಾಸಿಯಾಗಿರುವ ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಗ್ರಾಮದಿಂದ ರಾಮಲಲ್ಲಾ ವಿಗ್ರಹಕ್ಕೆ ಕಲ್ಲನ್ನು ಆಯ್ಕೆ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಬಂಡೆಯು ಕ್ಯಾಂಬ್ರಿಯನ್ ಪೂರ್ವದ ಯುಗದ್ದು. 

ಬಾಲಕ್ ರಾಮ್
ಸೋಮವಾರ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ರಾಮಲಲ್ಲಾ ವಿಗ್ರಹವು ಐದು ವರ್ಷದ ಬಾಲಕನದ್ದಾದ ಕಾರಣ 'ಬಾಲಕ್ ರಾಮ್' ಎಂದು ಹೆಸರಿಸಲಾಗಿದೆ.

ಶ್ರೀರಾಮಲಲ್ಲಾನ ವಜ್ರಖಚಿತ ಕಿರೀಟದಲ್ಲಿದೆ ಸೂರ್ಯ, ನವಿಲು, ಮೀನು, ಪಚ್ಚೆ; ತಯಾರಕರೇನಂತಾರೆ?

ರಾಜನಿಗೆ ಸರಿಹೊಂದುವ ಉಡುಪುಗಳು
ಜವಳಿ ವಿನ್ಯಾಸಕ ಮನೀಶ್ ತ್ರಿಪಾಠಿಯವರು ರಾಮಲಲ್ಲಾನಿಗೆ ವಸ್ತ್ರ ವಿನ್ಯಾಸ ಮಾಡಿದ್ದು, ಬನಾರಸಿ ಫ್ಯಾಬ್ರಿಕ್ ಬಳಸಿ ಹಳದಿ ಧೋತಿ ಮತ್ತು ಕೆಂಪು ಪಟಕಾ ತಯಾರಿಸಿದ್ದಾರೆ. ಶುದ್ಧ ಚಿನ್ನದ ಝರಿ ಮತ್ತು ಮಂಗಳಕರ ವೈಷ್ಣವ ಚಿಹ್ನೆಗಳಿಂದ ಬಟ್ಟೆ ಅಲಂಕರಿಸಲ್ಪಟ್ಟಿದೆ. 
 

Latest Videos
Follow Us:
Download App:
  • android
  • ios