ಶ್ರೀರಾಮನ ಅವತಾರದ ದಿನ ಪಂಚಾಂಗ ಹೇಗಿತ್ತು ? ಅಂತ ಬಾಲಕಾಂಡದಲ್ಲಿ ಮಹರ್ಷಿ ವಾಲ್ಮೀಕಿ ಉಲ್ಲೇಖ ಮಾಡಿರುವರು. ಶ್ಲೋಕಗಳ ಜೊತೆ ವಿವರಣೆ ಇದೆ. 

ದೈವಜ್ಞ ಹರೀಶ್ ಕಾಶ್ಯಪ...

ಯುಗಾಂತ್ಯಗಳೇ ಕಳೆದರೂ ಒಬ್ಬ ವ್ಯಕ್ತಿ ಈ ಮಟ್ಟಿಗೆ ಶಾಶ್ವತ ಕೀರ್ತಿ ಪಡೆಯಬೇಕಾದರೆ ಅದಕ್ಕೆ ಜಾತಕ ಪಂಚಾಂಗ ಕಾರಣವೋ ಅಥವಾ ಈ ವ್ಯಕ್ತಿಯ ವಿಶೇಷವೋ? ಇದು ವಿಚಾರ ಮಾಡಬೇಕಾದ್ದು. ರಾಮನ ದಿನದಲ್ಲಿ ಅಂದೇ ಅದೇ ಸಮಯದಲ್ಲಿ (12.15 ಮಟ್ಟ ಮಧ್ಯಾಹ್ನ ಅಭಿಜಿನ್ ಮುಹೂರ್ತ) ಎಷ್ಟು ಮಕ್ಕಳು ಹುಟ್ಟಿದ್ದಾರೋ, ಅವರಾರೂ ಯಾರ ಹೆಸರೂ ಇಲ್ಲ. ಆದರೆ ಅವರೆಲ್ಲರೂ ಆ ದಿನದ ಹೋರಾ ಫಲವನ್ನು ಪಡೆದಿರುತ್ತಾರೆ, ಆದರೆ ರಾಮಕೀರ್ತಿ...ಶ್ರೀರಾಮನದ್ದು ಮಾತ್ರ . ಯಾಕೆಂದರೆ ಅದು ಜೀವ ಆತ್ಮ ಪರಮಾತ್ಮ ಭೇದ ವಿಷಯ, ವಿಜ್ಞಾನ, ಜನ್ಮ ಕರ್ಮ ಚ ಮೇ ದಿವ್ಯಂ" ಭ.ಗೀತೆ 4 ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರುವನು. ಅದೇ ಪ್ರಮಾಣ. ಆತ್ಮನ ವಿಶೇಷತೆಯಿಂದ ಗ್ರಹ ಗೋಚಾರ ಫಲಿಸುವುದೇ ಹೊರತು, ಗ್ರಹರಿಂದ ಆತ್ಮನ ಅಡಗು ಆಗದು,

ಶ್ರೀಮನ್ ಮಧ್ವಾಚಾರ್ಯರ ತತ್ವವಾದ ಸಿದ್ಧಾಂತವು ಇದನ್ನೇ ಪ್ರತಿಪಾದಿಸುತ್ತದೆ. ಎಲ್ಲವೂ ಒಂದೇ ಅಲ್ಲ. ಎಲ್ಲವೂ ಒಂದರಿಂದಲೇ. ಇದು ಇರವಿನ ಅರಿವು. ಎರಡು ಕಾಲಿನ ಜೀವರಾಶಿಗಳ ಬಿಡಿ. ಸ್ವತಃ ದೇವರೇ ಒಂದವತಾರ ಎತ್ತಿದಂತೆ ಇನ್ನೊಂದು ಎತ್ತನು. ಅವನು ಅವನಾಗಿಯೇ ಎಲ್ಲಾ ಅವತಾರಗಳಲ್ಲೂ ಇದ್ದು ಆಯಾ ಅವತಾರ ಕಾರಣಕ್ಕೆ ತಕ್ಕ ರೂಪ ಲೀಲೆ ವ್ಯಾಪಾರಗಳ ತೋರುವನು . ಭಗವಂತನ ಅಚಿಂತ್ಯವೇ ಅಂಥದ್ದು. 

ಹೀಗಾಗಿ ಶ್ರೀರಾಮ ಕಾಲದಲ್ಲೇ ಹಲವರು ಜನಿಸಿದ್ದರೂ ರಾಮನೊಬ್ಬ ಅವತಾರ ಎನ್ನುವುದು,ಯಾವುದೆಲ್ಲ ಅವತಾರವೋ ಅದೆಲ್ಲ ಭಗವನ್ಮಯವು.

ಅಂದಂದಿನ ಗ್ರಹಗತಿಗಳು ತಮ್ಮ ಕಾರ್ಯವನ್ನು ಸ್ವಾಮಿ ಕಾರ್ಯವೆಂದೇ ಮಾಡುವರು . ಸ್ವಕಾರ್ಯ ಹೀನರಾಗುವರು. ಶ್ರೀರಾಮಚಂದ್ರನ ಜಾತಕ ಸೌಂದರ್ಯವೇ ಹಾಗಿದೆ

ಕರ್ಕ ಲಗ್ನ(ರಾಜಕೀಯ ಪುಷ್ಟ ರಾಶಿ) 
ಅಲ್ಲಿ ಉಚ್ಚ ಗುರು ಒಂದಿಗೆ(ಸರ್ವಜ್ಞತೆ) ಪುನರ್ವಸು ಚಂದ್ರ ಸ್ವಕ್ಷೇತ್ರ (ಕೇಸರಿ ಯೋಗ)
ಅಲ್ಲಿಂದ ಚತುರ್ಥ ಶನಿ ಶಶಕ ಮಹಾಪುರುಷ ಯೋಗ(ಸಪ್ತಮಪತಿ)
ಶಡ್ ಧನುರ್ ರಾಹು(ವಿಜಯ ಸಂಪನ್ನತೆ) ಸಪ್ತಮದಲ್ಲಿ ಉಚ್ಚ ಕುಜ ರುಚಕ ಮಹಾಪುರುಷಯೋಗ(ಚಕ್ರವರ್ತಿ ಯೋಗ) 
ನವಮದಲ್ಲಿ ಉಚ್ಚ ಶುಕ್ರ(ಚತುರ್ಥಪತಿ ಆದ್ದರಿಂದ ಮಾಲವ್ಯ ಮಹಾಪುರುಷಯೋಗ)
ದಶಮ ಕೇಂದ್ರದ ಉಚ್ಚ ರವಿ (ಅನಂತ ಕೀರ್ತಿ)
ಏಕಾದಶ ಬುಧ (ಉಚ್ಚ ಆರೋಹಿ ಶ್ರೀಮಂತಿಕೆ)
ವ್ಯಯದ ಕೇತು..ಜ್ಞಾನ ವೈರಾಗ್ಯ ಕಾರಕ.

ಪತ್ನಿಯ ವಿಯೋಗ ಎಂಬ ಒಂದು ಕುಂದು ಸಪ್ತಮದಲ್ಲಿ ಕುಜ ಉಚ್ಚನಿದ್ದು ಲಗ್ನ ನೋಡುವುದು, ದಾಂಪತ್ಯ ವೈವಾಹಿಕ ದೋಷಗಳ ಹೇಳುತ್ತದೆ. ಆದರೂ ಉಚ್ಚ ಗುರು ಇರಲು ಅದೂ ಕೂಡಾ ಪತ್ನಿಯನ್ನು ಉಚ್ಚ ಪ್ರೇಮದಲ್ಲಿ ಇರಿಸಿ ಅನುಪಮ ದಾಂಪತ್ಯ ವನ್ನೇ ಕೊಡುತ್ತದೆ, ಇದರ ಹೊರತಾಗಿ , ಶ್ರೀರಾಮಾವತಾರಕ್ಕೆ ಆತನ ಅನಂತ ಕೀರ್ತಿಗೆ ಗ್ರಹರೆಲ್ಲರೂ ದಾಸ್ಯ ವಹಿಸಿರುವಂತೆ ಇದೆ ರಾಮನ ಜಾತಕ