Asianet Suvarna News Asianet Suvarna News

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ

ಇವತ್ತು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ. ಭಕ್ತಿ, ಭಾವದಿಂದ ಭಕ್ತರು ಹಬ್ಬವನ್ನ ಆಚರಣೆ ಮಾಡುತ್ತಾರೆ. ಅದೇ ರೀತಿ ಬೊಂಬೆನಗರಿ ಚನ್ನಪಟ್ಣಣದಲ್ಲಿ, ದೇಶದಲ್ಲಿಯೇ ಇರುವ ಏಕೈಕ ಬಾಲಕೃಷ್ಣನ ವಿಗ್ರಹಕ್ಕೆ ಇವತ್ತು ವಿಶೇಷ ಪೂಜೆ, ಪುನಸ್ಕಾರ ನಡೆಯಿತು. 

Special worship at ambegalu krishna temple on the occasion of sri krishna janmashtami at ramanagara gvd
Author
Bangalore, First Published Aug 19, 2022, 10:55 PM IST

ರಾಮನಗರ (ಆ.19): ಇವತ್ತು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ. ಭಕ್ತಿ, ಭಾವದಿಂದ ಭಕ್ತರು ಹಬ್ಬವನ್ನ ಆಚರಣೆ ಮಾಡುತ್ತಾರೆ. ಅದೇ ರೀತಿ ಬೊಂಬೆನಗರಿ ಚನ್ನಪಟ್ಣಣದಲ್ಲಿ, ದೇಶದಲ್ಲಿಯೇ ಇರುವ ಏಕೈಕ ಬಾಲಕೃಷ್ಣನ ವಿಗ್ರಹಕ್ಕೆ ಇವತ್ತು ವಿಶೇಷ ಪೂಜೆ, ಪುನಸ್ಕಾರ ನಡೆಯಿತು. ಬೆಣ್ಣೆಯಿಂದ ಆಲಂಕಾರಗೊಂಡಿರೋ ಅಪ್ರಮೇಯ. ಬಾಲಕೃಷ್ಣನ ವಿಗ್ರಹಕ್ಕೆ ವಿಶೇಷ ಪೂಜೆ ಮಾಡುತ್ತಿರೋ ಆರ್ಚಕರು. ಭಕ್ತಿಯಿಂದ ಪೂಜೆ ಸಲ್ಲಿಸುತ್ತಿರೋ ಭಕ್ತರು. 

ಅಂದಹಾಗೆ ಇಂತಹ ದೃಶ್ಯ ಕಂಡುಬಂದಿದ್ದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಳೂರು ಗ್ರಾಮದ ಬಳಿ ಇರುವ ಅಪ್ರಮೇಯ ಕೃಷ್ಣನ ದೇವಸ್ಥಾನದಲ್ಲಿ. ಹೌದು! ಇವತ್ತು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ. ಭಕ್ತಿ, ಭಾವದಿಂದ ಪೂಜೆ ಸಲ್ಲಿಸಲಾಗುತ್ತದೆ. ಅದೇ ರೀತಿ ಅಪ್ರಮೇಯ ದೇವಸ್ಥಾನದಲ್ಲಿಯೂ ಕೂಡ ಇವತ್ತು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಅದರಲ್ಲಿಯೂ ಮಗುವಿನ ಭಂಗಿಯಲ್ಲಿ ಇರುವ ಬಾಲಕೃಷ್ಣನ ವಿಗ್ರಹಕ್ಕೆ ವಿಶೇಷವಾಗಿ ಬೆಣ್ಣೆ ಅಲಂಕಾರ ಕೂಡ ಮಾಡಲಾಗಿತ್ತು. 

ಇಸ್ಕಾನ್‌ನಲ್ಲಿ ಸಡಗರ, ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಗೋ ಪೂಜೆ, ವಿಶ್ವರೂಪ ದರ್ಶನ, ಸುಪ್ರಭಾತ ಸೇವೆ ಸೇರಿದಂತೆ ಹಲವು ಪೂಜೆಗಳು ನೆರವೇರಿದವು. ನೂರಾರು ಭಕ್ತರು ಇದಕ್ಕೆ ಸಾಕ್ಷಿ ಆಗಿದ್ದರು. ಅಂದಹಾಗೆ ಚನ್ನಪಟ್ಟಣ ತಾಲೂಕಿನ ಮಳೂರು ಗ್ರಾಮದ ಬಳಿ ಇರುವ ಅಪ್ರಮೇಯ ಕೃಷ್ಣನ ದೇವಸ್ಥಾನ, ದೇಶದಲ್ಲಿಯೇ ಎಲ್ಲಿಯೂ ಇಲ್ಲ. ಅದರಲ್ಲೂ ಮಗುವಿನ ಭಂಗಿಯಲ್ಲಿ ಇರುವ ಕೃಷ್ಣನ ವಿಗ್ರಹ ಇದೆ. 400ನೇ ಇಸವಿಯಲ್ಲಿಯೇ ಚೋಳರ ರಾಜ ರಾಜೇಂದ್ರ ಸಿಂಹ ದೇವಸ್ಥಾನ ಕಟ್ಟಿಸಿದ್ದಾನೆ ಎಂದು ಹೇಳಲಾಗಿದ್ದು, ಕಣ್ವ ಮಹರ್ಷಿಗಳು ಬಾಲಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗಿದೆ. 

Krishna Janmashtami: ಕಳ್ಳ ಕೃಷ್ಣ ವೇಷದಲ್ಲಿ ಮಿಂದೆದ್ದ ಯಾದಗಿರಿಯ ಪುಟಾಣಿಗಳು

ಜೊತೆಗೆ ಪುರಂದಾರ ದಾಸರು ಕೂಡ ಇಲ್ಲಿಗೆ ಬಂದು ದೇವರ ಬಗ್ಗೆಯೇ ಹಾಡು ಸಹಾ ಕೇಳಿದ್ದಾರೆ. ಇನ್ನು ದೇವಸ್ಥಾನದ ಮತ್ತೊಂದು ವಿಶೇಷವೆಂದರೇ, ಮಕ್ಕಳು ಆಗದವರು ಇಲ್ಲಿಗೆ ಬಂದು ಹರಕೆ ಹೊತ್ತಿಕೊಂಡರೆ ಮಕ್ಕಳಾಗುತ್ತವೆ ಎಂದು ಪ್ರತಿತಿ ಇದೆ. ನಂತರ ತಮ್ಮ ಬೇಡಿಕೆ ಗಳು ಈಡೇರಿದ ಮೇಲೆ ಹರಕೆ ತೀರಿಸುತ್ತಾರೆ. ಹೀಗಾಗಿ ರಾಜ್ಯದ ವಿವಿಧ ಮೂಲಗಳಿಂದ ಕೃಷ್ಣ ಜನ್ಮಾಷ್ಠಮಿ ದಿನ ಬಂದು ಹಕರೆ ಸಹಾ ತೀರಿಸುತ್ತಾರೆ. ಒಟ್ಟಾರೆ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಇವತ್ತು ಬೊಂಬೆನಗರಿಯಲ್ಲಿ ಮನೆ ಮಾಡಿತ್ತು. ಭಕ್ತರು ಸಹಾ ಬೆಳಗ್ಗೆಯಿಂದ ದೇವರ ದರ್ಶನ ಪಡೆದರು.

Follow Us:
Download App:
  • android
  • ios