ವಿಶೇಷ ಭವಿಷ್ಯದಲ್ಲಿ ನಿಮ್ಮ ರಾಶಿಯ ಫಲಾ ಫಲಗಳೇನಿದೆ. 

ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಶಿಶಿರ
ಫಾಲ್ಗುಣ ಮಾಸ
ಶುಕ್ಲ ಪಕ್ಷ
ದ್ವಿತೀಯಾ ತಿಥಿ
ಉತ್ತರಾಭಾದ್ರ ನಕ್ಷತ್ರ
====================
ರಾಹುಕಾಲ : 11.01 ರಿಂದ 12.31
ಯಮಗಂಡ ಕಾಲ : 03.29 ರಿಂದ 04.59
ಗುಳಿಕ ಕಾಲ : 08.02 ರಿಂದ 09.32
=============================

ಮೇಷ ರಾಶಿ : ಸಾಹಸ ಕಾರ್ಯಗಳಿಗೆ ಚಾಲನೆ, ನಿಮ್ಮ ವ್ಯಾಪಾರ ಲಾಭದಾಯಕವಾಗಿರುತ್ತದೆ, ಕತ್ತಿನ ಭಾಗದಲ್ಲಿ ತೊಂದರೆಯಾಗುವ ಸಾಧ್ಯತೆ, ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ಅಸಮಧಾನ, ಹಿರಿಯರ ಸಹಕಾರ. 

ದೋಷಪರಿಹಾರ : ನಾಗದೇವರ ಆರಾಧನೆ ಮಾಡಿ

ವೃಷಭ : ಲಾಭದ ದಿನ, ಧನ ಸಮೃದ್ಧಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆದರೆ ಕಾಲಿನ ಭಾಗ, ವಾತ ಸಂಬಂಧಿ ರೋಗಗಳು ಬಾಧಿಸಲಿವೆ, ಮಾತಿನಿಂದ ಧನಲಾಭ, ತಾಯಿಯಿಂದ ಉದ್ಯೋಗಕ್ಕೆ ಸಹಕಾರ ದೊರೆಯಲಿದೆ.

ದೋಷ ಪರಿಹಾರ : ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಮಿಥುನ : ಅನ್ಯೋನ್ಯ ಮಿತ್ರರೂ ದೂರವಾಗುತ್ತಾರೆ, ನಿಮ್ಮ ಮಾತು-ಚತುರತೆ ಶತ್ರುಗಳನ್ನೂ ಮಿತ್ರರನ್ನಾಗಿಸುತ್ತದೆ, ವೃಥಾ ತಿರುಗಾಟ ಧನ ವ್ಯಯ, ವ್ಯಾಪಾರದಲ್ಲಿ ಶತ್ರುತ್ವ , ಬೇಸರ ಉಂಟುಮಾಡಲಿದೆ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ಕಟಕ : ನಿಮ್ಮ ಆಲೋಚನೆ ಫಲ ರಹಿತವಾಗಬಹುದು, ದೃಢ ನಿರ್ಧಾರ ಸಾಧ್ಯವಾಗದು, ಗೊಂದಲದ ವಾತಾವರಣ, ಉದ್ಯೋಗದಲ್ಲಿ ಕಿರಿಕಿರಿ, ಹಿರಿಯ ಅಧಿಕಾರಿಗಳು ನಿಮ್ಮನ್ನು ಕಾಡಲಿದ್ದಾರೆ. 

ದೋಷ ಪರಿಹಾರ : ದೀಪ ನಮಸ್ಕಾರ ಮಾಡಿ

ಸಿಂಹ : ನಿಮ್ಮ ಮಡದಿಯಿಂದ ಸಹಕಾರ, ಕೆಲವರಿಗೆ ಭಿನ್ನಾಭಿಪ್ರಾಯ ಎರಡೂ ರೀತಿಯ ಫಲಗಳಿವೆ, ತಾಯಿಯಿಂದ, ಹಿರಿಯರಿಂದ ಧನಾನುಕೂಲ, ಆದರೆ ಮಾನಸಿಕ ಬೇಸರವೂ ಇರಲಿದೆ, ಕುಟುಂಬ ಸೌಖ್ಯ.

ದೋಷ ಪರಿಹಾರ : ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ : ನಿಮ್ಮ ಸಹೋದರರಿಂದ ಸಮಾಧಾನದ ಮಾತುಗಳು, ಧನ ಸಹಾಯವೂ ಇದೆ, ಮನಸ್ಸು ನಿರಾಳವಾಗುತ್ತದೆ, ಆದರೆ ತಂದೆಯಿಂದ ಸ್ವಲ್ಪ ವಿರೋಧದ ಮಾತು ಕೇಳುತ್ತೀರಿ, ದಾಂಪತ್ಯದಲ್ಲಿ ಚಂಚಲತೆ ಹಾಗೂ ವಿರಸ ಉಂಟಾಗಲಿದೆ.

ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಹೂ ಸಮರ್ಪಣೆ ಮಾಡಿ

ತುಲಾ : ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ, ನಿಮ್ಮ ಮಾತು ಉತ್ಕೃಷ್ಟ ಫಲ ತರಲಿದೆ, ಮಾತುಗಾರರಿಗೆ, ಕವಿಗಳಿಗೆ, ಬರಹಗಾರರಿಗೆ ವಿವಿಧ ಮೂಲದ ಆದಾಯ ಬರಲಿದೆ, ಬಟ್ಟೆ ವ್ಯಾಪಾರಿಗಳಿಗೆ ಧನ ಸಮೃದ್ಧಿ. 

ದೋಷ ಪರಿಹಾರ : ಶ್ರೀಸೂಕ್ತ ಪಠಿಸಿ.

ವೃಶ್ಚಿಕ : ಲೋಹ ವ್ಯಾಪಾರಿಗಳಿಗೆ, ಬಂಗಾರ ತಯಾರಕರಿಗೆ ಲಾಭದ ದಿನ, ಗೃಹ ಸೌಖ್ಯ, ವಾಹನ ಖರೀದಿ, ನಿಮ್ಮಸೇವಕರಿಂದ ಸಹಾಯವಾಗುವ ದಿನ, ಮನೆ ಕೆಲಸದವರ ಜೊತೆ ಕಲಹ, ಸಣ್ಣ ಪುಟ್ಟ ಅವಘಡ. ಎಚ್ಚರವಿರಲಿ.
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಧನಸ್ಸು : ನಿಮ್ಮ ಮನಸ್ಸಿಗೆ ಅಸಮಾಧಾನ, ಅತ್ಯುತ್ತಮರ ಭೇಟಿ, ಸ್ತ್ರೀಯರಿಂದಾಗಿ ಕಲಹ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ಆದರೆ ಸಹಕಾರವೂ ಇದೆ, ಮಕ್ಕಳಿಂದ ನಿಮ್ಮ ಕಾರ್ಯ ನೆರವೇರಲಿದೆ, ಉತ್ತಮರ ಭೇಟಿ.

ದೋಷ ಪರಿಹಾರ : ಕುಲ ದೇವರಿಗೆ ತುಪ್ಪದ ದೀಪ ಹಚ್ಚಿ

ಮಕರ : ಕಾರ್ಯಗಳಲ್ಲಿ ಜಯ ಹಾಗೂ ಲಾಭ ಸಿಗಲಿದೆ. ಉಗ್ರ ಸ್ವಭಾವ ಸ್ವಲ್ಪ ಶಾಂತವಾಗಲಿ. ನಿಮ್ಮ ಯೋಚನೆ ಸರಿ ಇರಬಹುದು ಆದರೂ ಅಭಿಪ್ರಾಯ ಹಂಚಿಕೆಯಾಗುವಾಗ ಸ್ವಲ್ಪ ಸಮಾಧಾನವಿರಲಿ.

ದೋಷ ಪರಿಹಾರ : ಶಿವ ಸ್ತೋತ್ರ ಪಠಿಸಿ

ಕುಂಭ : ಉತ್ತಮ ದಿನವಾಗಿರಲಿದೆ, ತಂದೆಯಿಂದ ಸಹಕಾರ, ಮಾಡುವ ಕಾರ್ಯದಲ್ಲಿ ಜಯ, ನಿಮ್ಮ ಬಂಧುಗಳ ಸಹಕಾರ ದೊರೆಯಲಿದೆ, ಆದರೆ ಕಟು ಮಾತುಗಳನ್ನೂ ಕೇಳಬೇಕಾಗುತ್ತದೆ. ಎಚ್ಚರವಾಗಿರುವುದು ಒಳಿತು.

ದೋಷ ಪರಿಹಾರ : ನಾರಾಯಣ ಸ್ಮರಣೆ ಮಾಡಿ

ಮೀನ : ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಲಾಭದ ದಿನ, ನಿಮ್ಮ ಅನುಕೂಲಕ್ಕೆ ಕಾರ್ಯ ಸಿದ್ಧಿಸುತ್ತದೆ, ಪ್ರಯಾಣ ಸುಖಕರವಾಗಿರಲಿದೆ, ಉತ್ತಮರ ಸಹವಾಸ ಒದಗಲಿದೆ, ಮಂಗಲ ಕಾರ್ಯ ಯೋಜನೆ.

ದೋಷ ಪರಿಹಾರ : ದತ್ತಾತ್ರೇಯ ಸ್ಮರಣೆ ಮಾಡಿ