Somvati amavasya: ನೀವು ತಿಳಿದೋ, ತಿಳಿಯದೆಯೋ ಮಾಡಿದ ಪಾಪಗಳಿಂದ ಮುಕ್ತಿ ಪಡೆಯಲು ಬಯಸಿದರೆ, ಸೋಮಾವತಿ ಅಮವಾಸ್ಯೆ ಅತ್ಯಂತ ಪವಿತ್ರವಾದ ದಿನವಾಗಿದೆ. ಈ ದಿನ ನೀವು ಮಾಡುವ ಪರಿಹಾರಕ್ಕೆ ಹೆಚ್ಚಿನ ಪ್ರತಿಫಲ ಸಿಗುತ್ತದೆ. ಅದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ನೋಡೋಣ.
ಸೋಮಾವತಿ ಅಮವಾಸ್ಯೆ
ಹಿಂದೂ ಧರ್ಮಗ್ರಂಥಗಳು ಸಂತೋಷ ಮತ್ತು ನೆಮ್ಮದಿಯನ್ನು ಪಡೆಯಲು ವಿವಿಧ ಪರಿಹಾರಗಳ ಬಗ್ಗೆ ಮಾಹಿತಿ ನೀಡುತ್ತದೆ, ಇವುಗಳನ್ನು ಪಾಲಿಸುವುದರಿಂದ ಪ್ರತಿಫಲವು ದೊರೆಯುತ್ತದೆ. ಶಾಸ್ತ್ರಗಳ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಈ ಆಚರಣೆಗಳನ್ನು ಮಾಡುವುದರಿಂದ ಅವುಗಳ ಪ್ರಯೋಜನಗಳು ಹೆಚ್ಚಾಗುತ್ತವೆ. ಇದೀಗ ಅಧಿಕಮಾಸದಲ್ಲಿ ಅಮವಾಸ್ಯೆ ಸೋಮವಾರ ದಿನ ಬಂದಿದ್ದು, ಈ ದಿನ ಕೆಲವು ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ. ಈ ಅಮವಾಸ್ಯೆಯನ್ನು ಸೋಮವತಿ ಅಮಾವಾಸ್ಯೆ ಎನ್ನಲಾಗುತ್ತದೆ. ಈ ದಿನದಂದು ನಡೆಸುವ ಧಾರ್ಮಿಕ ಚಟುವಟಿಕೆಗಳು ಹಲವು ಪಟ್ಟು ಹೆಚ್ಚು ಪ್ರತಿಫಲವನ್ನು ನೀಡುತ್ತವೆ. ಅಧಿಕಮಾಸದ ಕೊನೆಯ ದಿನ ಜೂನ್ 15 (ಸೋಮವಾರ) ರಂದು ಬರುತ್ತದೆ, ಈ ದಿನ ನೀವು ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳಿಂದ ಮುಕ್ತಿ ಪಡೆಯಲು ಕೆಲವು ಕೆಲಸಗಳನ್ನು ಮಾಡಬೇಕು.
ಧಾರ್ಮಿಕ ಗ್ರಂಥಗಳು ಮತ್ತು ಪಂಚಾಂಗ ಆಧರಿಸಿದ ಲೆಕ್ಕಾಚಾರಗಳ ಪ್ರಕಾರ, ಜ್ಯೇಷ್ಠ ಅಧಿಕ ಮಾಸದ ಕೊನೆಯ ಹದಿನೈದನೆಯ ದಿನ ಸೋಮವತಿ ಅಮಾವಾಸ್ಯೆ (ಸೋಮವಾರದಂದು ಬರುವ ಅಮಾವಾಸ್ಯೆಯ ದಿನ) ದಿನ ಸಂಭವಿಸಲಿದೆ. ಈ ದಿನ ನೀವು ಯಾವ ಕೆಲಸವನ್ನು ಮಾಡಬೇಕು. ಇದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ನೋಡೋಣ.
ಗಂಗಾ ನದಿಯಲ್ಲಿ ಸ್ನಾನ ಮತ್ತು ಧ್ಯಾನ
ಗೋಮುಖದಲ್ಲಿ ಹುಟ್ಟಿ ಸುಂದರವಾದ ಪರ್ವತ ಮಾರ್ಗವನ್ನು ದಾಟಿದ ನಂತರ, ಗಂಗಾ ನದಿಯು ಮೊದಲು ಪವಿತ್ರ ನಗರವಾದ ಹರಿದ್ವಾರದಲ್ಲಿ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಹರಿದ್ವಾರವು ಬ್ರಹ್ಮನ ತಪಸ್ಸಿನ ಸ್ಥಳ ಮತ್ತು ಬ್ರಹ್ಮಾಂಡದ ಸಾಗರದಿಂದ ಮೊಳಗಿದ ಅಮೃತದ ಹನಿಗಳು ಬೀಳುವ ಸ್ಥಳವಾದ್ದರಿಂದ ಈ ನದಿಗೆ ಅತ್ಯುನ್ನತ ಮಹತ್ವವಿದೆ. ಈ ಬಾರಿ, ಅಧಿಕಮಾಸದ ಅಮವಾಸ್ಯೆಯಂದು ಅಂದರೆ ಸೋಮವಾರದಂದು ಬೀಳುವುದರಿಂದ, ಆಧ್ಯಾತ್ಮಿಕ ಎನರ್ಜಿ ಎಲ್ಲೆಡೆ ಹೆಚ್ಚಾಗಿರುತ್ತದೆ. ಹಾಗಾಗಿ ಈ ದಿನದಂದು, ಹರಿದ್ವಾರದಲ್ಲಿ ಸೂರ್ಯ ದೇವರಿಗೆ ಗಂಗಾ-ಜಲ ಅರ್ಪಿಸುತ್ತಾ, ಬೀಜಮಂತ್ರವನ್ನು ಪಠಿಸಿ, ಗಂಗೆಯಲ್ಲಿ ಸ್ನಾನ ಮಾಡಬೇಕು. ಬಳಿಕ ಜಪಮಾಲೆ ಹಿಡಿದು ಗಂಗೆಯ ಬೀಜಮಂತ್ರವನ್ನು ಪಠಿಸಬೇಕು. ಇದರಿಂದ ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಎಲ್ಲಾ ಪಾಪಗಳು ಶುದ್ಧವಾಗುತ್ತವೆ.
ದೇವತೆಗಳು ಸ್ನಾನ ಮಾಡಲು ಬರುತ್ತಾರೆ
ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಮಹತ್ವದ ದಿನಗಳಲ್ಲಿ, ಅದರಲ್ಲೂ ವಿಶೇಷವಾಗಿ ಸೋಮವತಿ ಅಮಾವಾಸ್ಯೆಯಂದು ದೇವತೆಗಳು ಮತ್ತು ದೇವಲೋಕದ ಜೀವಿಗಳು ‘ಬ್ರಹ್ಮ ಮುಹೂರ್ತ’ ದಲ್ಲಿ ಹರಿದ್ವಾರದ ಹರ್ ಕಿ ಪೌರಿಯ ಬ್ರಹ್ಮ ಕುಂಡ ಘಾಟ್‌ನಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಇದರ ಪರಿಣಾಮವಾಗಿ, ಇಲ್ಲಿನ ನೀರು ಅಮೃತವಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ಈ ದಿನ ಹರಿದ್ವಾರದ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ನಿಮ್ಮ ಎಲ್ಲಾ ಪಾಪಗಳು ಪರಿಹಾರವಾಗುತ್ತವೆ.


