Asianet Suvarna News Asianet Suvarna News

Zodiac Sign: ಈ ರಾಶಿಗಳ ಜನರಿಗೆ ಪ್ರೀತಿಯ ಆರಂಭದಲ್ಲಿರೋ ಉಮೇದಿ ಮುಂದೆ ಇರೋದಿಲ್ಲ, ಎಚ್ಚರಿಕೆ

ಪ್ರೀತಿ-ಪ್ರೇಮದ ವಿಚಾರದಲ್ಲಿ ಕೆಲವು ಜನ ತಮ್ಮ ಮಾತನ್ನು ಉಳಿಸಿಕೊಳ್ಳುವುದಿಲ್ಲ. ಆರಂಭದಲ್ಲಿ ಭಾರೀ ಉತ್ಸಾಹ ತೋರಿದರೂ ಅದನ್ನು ದೀರ್ಘಕಾಲ ಮುಂದುವರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಅಂತಹ ಕೆಲವು ರಾಶಿಗಳ ಜನರನ್ನು ಪ್ರೀತಿಸುವಾಗ ಎಚ್ಚರಿಕೆ ಇರಲಿ.
 

Some zodiac signs whose love estinguishes quickly
Author
Bangalore, First Published Aug 17, 2022, 6:43 PM IST

“ಆರಂಭ ಶೂರತ್ವ’ ಎನ್ನುವ ಪದವನ್ನು ಕೇಳಿರಬಹುದು. ಇದರರ್ಥ, ಯಾವುದಾದರೂ ಕೆಲಸದ ಆರಂಭದಲ್ಲಿ ಉತ್ಸಾಹದಿಂದ, ಗುರಿ ತಲುಪಿಯೇಬಿಡುತ್ತೇನೆ ಎನ್ನುವ ಹುಮ್ಮಸ್ಸಿನಿಂದ ತೊಡಗುವುದು. ಆದರೆ, ಕೆಲವೇ ಸಮಯದಲ್ಲಿ ಆ ಕೆಲಸದ ಕುರಿತು ಉತ್ಸಾಹ ಕಳೆದುಕೊಳ್ಳುವ ಸ್ಥಿತಿ. ಇದು ನಮ್ಮ ದೈನಂದಿನ ಕೆಲಸಕಾರ್ಯಗಳಿಂದ ಅನ್ವಯವಾಗಿ, ನಮ್ಮ ಭಾವನೆಗಳಿಗೂ ಸಂಬಂಧಿಸಿದೆ. ನೀವೇ ನೋಡಿ. ಯಾರದ್ದಾದರೂ ಸ್ನೇಹವಾಗುವ ಸಮಯದಲ್ಲಿ ಅವರ ಕುರಿತು ಅದೆಷ್ಟು ಕುತೂಹಲ, ಆಸಕ್ತಿ ಇರುತ್ತದೆ. ಅವರನ್ನು ತಿಳಿದಾದ ಮೇಲೆ ಆ ತೀವ್ರತೆ ಕಡಿಮೆಯಾಗಿ ಮನಸ್ಸು ಸಮಸ್ಥಿತಿಗೆ ಬರುತ್ತದೆ. ಹಾಗೆಯೇ, ಕೆಲವು ಜನರು ಪ್ರೀತಿ-ಪ್ರೇಮದ ವಿಚಾರದಲ್ಲಿ ಭಾರೀ ಮುಂದೆ. ಅವರಿಗೆ ಟಕ್ ಎಂದು ಪ್ರೀತಿಯಾಗುತ್ತದೆ. ಕೆಲವೇ ಸಮಯದಲ್ಲಿ ಆ ಪ್ರೀತಿ ಆರಿಹೋಗುತ್ತದೆ. ಎಲ್ಲರಿಗೂ ಹಾಗಲ್ಲ. ಕೆಲವು ಜನರಿಗೆ ಸ್ನೇಹ, ಪ್ರೀತಿಯಾಗುವುದು ಬಹಳ ತಡವಾಗಿ. ಇಬ್ಬೊಬ್ಬರನ್ನು ಅರಿತುಕೊಳ್ಳಲು ಅವರು ಸಮಯ ಬಯಸುತ್ತಾರೆ. ಸ್ನೇಹವನ್ನೂ ನಿಧಾನವಾಗಿಯೇ ಮಾಡುತ್ತಾರೆ, ಪ್ರೀತಿಗೆ ತಿರುಗಿದರೂ ಅದು ದೃಢವಾದ ಬಂಧವಾಗಿರುತ್ತದೆ. ಏಕಾಏಕಿ ಪ್ರೀತಿಯಾಗಿ, ಏಕಾಏಕಿ ದೂರವಾಗುವುದು ಅವರ ಜಾಯಮಾನದಲ್ಲಿ ಇರುವುದಿಲ್ಲ. ಇದಕ್ಕೆ ಅವರವರ ರಾಶಿಗಳು ಕಾರಣವಾಗಿವೆ. ಕೆಲವು ರಾಶಿಗಳ ಜನ ಪ್ರೀತಿಯ ಆರಂಭದಲ್ಲಿ ಭಾರೀ ಅತ್ಯುತ್ಸಾಹದಿಂದ ಇರುತ್ತಾರೆ, ಕ್ರಮೇಣ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಅಂತಹ ರಾಶಿಗಳು ಯಾವುದು ಎಂದು ನೋಡಿಕೊಳ್ಳಿ.

•    ಸಿಂಹ (Leo)
ಸಿಂಹ ರಾಶಿಗಳ ಜನ ಆರಂಭದಲ್ಲಿ ಅದ್ಭುತ ಬಾಯ್ ಫ್ರೆಂಡ್ (Boy Friend) ಅಥವಾ ಗರ್ಲ್ ಫ್ರೆಂಡ್ (Girl Friend) ಆಗಿ ಗೋಚರಿಸುತ್ತಾರೆ. ಪ್ರೀತಿಯಲ್ಲಿರುವಾಗ ಇವರ ತೀವ್ರತೆ (Intensity), ಅಗಾಧತೆ, ಲವರ್ (Lover) ಜತೆಗಿನ ಕೆಮೆಸ್ಟ್ರಿ ಅದ್ಭುತವಾಗಿರುತ್ತದೆ. ಬೇರೆ ಯಾರಲ್ಲೂ ಇಷ್ಟು ಪ್ರಮಾಣದ ತೀವ್ರತೆ ಕಂಡುಬರುವುದಿಲ್ಲ. ಟೀನೇಜ್ (Teenage)ನಿಂದಲೂ ಸಿಂಹ ರಾಶಿಯವರು ತಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸುತ್ತಾರೆ. ಸಂಬಂಧವನ್ನು (Relationship) ಇನ್ನೊಂದು ಹಂತಕ್ಕೆ ಒಯ್ಯುತ್ತಾರೆ. ಆದರೆ, ಈ ಬದ್ಧತೆ ಕೆಲವೇ ಸಮಯ. ಏಕೆಂದರೆ, ಗರ್ಲ್ ಫ್ರೆಂಡ್ ಮರೆಯಾದ ಕೆಲವೇ ಸಮಯದಲ್ಲಿ ಇವರಿಗೆ ಇನ್ನೋರ್ವರಲ್ಲಿ ಆಸಕ್ತಿ ಚಿಗುರುತ್ತದೆ. ಬೇರೆ ಯಾರಾದರೂ ಇವರ ಗಮನ ಸೆಳೆಯುತ್ತಾರೆ. ಹೀಗಾಗಿ, ಇವರ ಬದ್ಧತೆ (Commitment) ಬದಲಾಗುತ್ತದೆ. 

ಇದನ್ನೂ ಓದಿ: ಜನ್ಮಾಷ್ಟಮಿ 2022: ಉಪವಾಸ ಆಚರಿಸುವಾಗ ಈ ನಿಯಮ ಮರೀಬೇಡಿ..

•    ಮೇಷ (Aries)
ಮೇಷ ರಾಶಿಯ ಜನ ಮೋಡಿ (Charm) ಮಾಡಬಲ್ಲವರು. ತಮ್ಮ ಸಿಹಿಯಾದ ಮಾತಿನಿಂದ ಮಹಿಳಾ ಸಮೂಹವನ್ನು ಸೆಳೆಯಬಲ್ಲರು. ತಮಗೆ ಅನುಕೂಲವಾಗುವಂತಹ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಲ್ಲರು. ಆದರೆ, ಇವರ ಕುರಿತು ಎಚ್ಚರಿಕೆ ವಹಿಸಬೇಕು. ಏಕೆಂದರೆ, ಅಗ್ನಿ ತತ್ವದ ಈ ರಾಶಿಯ ಜನ ನಿಮಗೆ ಚಂದ್ರ ಅಥವಾ ತಾರೆಯನ್ನು ತಂದುಕೊಡುತ್ತೇನೆ ಎಂದು ವಚನ ನೀಡುತ್ತಾರೆ. ಆದರೆ, ಸಮಯ ಕಳೆದಂತೆ ನೀವು ಅಗತ್ಯವಾಗಿ ಕಾಣದೆ ಇರಬಹುದು. ಇವರ ಆದ್ಯತೆ ಬದಲಾಗಬಹುದು. ಹೀಗಾಗಿ, ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ. ಎಷ್ಟು ಬೇಗ ಪ್ರೀತಿಗೆ (ಳೊವೆ) ಬೀಳಬಲ್ಲರೋ ಅಷ್ಟೇ ಬೇಗ ದೂರವಾಗಬಲ್ಲರು. ಇವರ ಪ್ರೀತಿ ಸ್ಥಿರವಾಗಿರುವುದು ಕಷ್ಟ. ಹಾಗೂ ದೀರ್ಘಕಾಲ (Long Last) ಬಾಳುವುದು ಸಹ ಕಷ್ಟಕರವೇ.

ಇದನ್ನೂ ಓದಿ: ತುಲಾ ರಾಶಿಯಲ್ಲಾಗ್ತಿದೆ ಅಪರೂಪದ ಬದಲಾವಣೆ, ಯಾರಿಗೆ ಲಾಭ, ಯಾರಿಗೆ ನಷ್ಟ?

•     ವೃಶ್ಚಿಕ (Scorpio)
ಸಂಗಾತಿಯ (Mate) ಕಡೆಗೆ ಅತಿಯಾದ ಮೋಹ, ಆಕರ್ಷಣೆ ಹೊಂದಿರುವ ವೃಶ್ಚಿಕ ರಾಶಿಯ ಜನ ಹುಟ್ಟುಹಬ್ಬದಂದು ವಿಶೇಷವಾಗಿ ವಿಶ್ ಮಾಡುತ್ತಾರೆ. ಉಡುಗೊರೆ ನೀಡುತ್ತಾರೆ. ಪ್ರೀತಿಪಾತ್ರರ ಜೀವನದ ಪ್ರತಿ ಹಂತವನ್ನೂ ಸಂಭ್ರಮಿಸುತ್ತಾರೆ. ಆದರೆ, ಇವೆಲ್ಲವನ್ನೂ ಇವರು ತಮ್ಮ ವೃತ್ತಿ (Professional) ಜೀವನದ ಆರಂಭದಲ್ಲಿ ಮಾಡುತ್ತಾರೆ. ವೃತ್ತಿ ಬದುಕಿನಲ್ಲಿ ಮುಂದೆ ಸಾಗುತ್ತಿರುವ ಹಾಗೆ ಪ್ರೀತಿಯನ್ನು ಮರೆತುಬಿಡುತ್ತಾರೆ. ಸಂಪೂರ್ಣವಾಗಿ ವೃತ್ತಿಯಲ್ಲಿ ಮಗ್ನರಾಗಿಬಿಡುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಇವರ ಪ್ರೀತಿ  ಮುರುಟಿಹೋಗುತ್ತದೆ. ಪ್ರೀತಿ ಮತ್ತು ವೃತ್ತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಇವರಿಗೆ ಕಷ್ಟ. 

Follow Us:
Download App:
  • android
  • ios