ಕಲರ್ ಫುಲ್, ವೈಬ್ರಂಟ್ ಬಟ್ಟೆ ಧರಿಸೋದಂದ್ರೆ ಈ 4 ರಾಶಿಗಳ ಮಂದಿಗೆ ಭಾರೀ ಇಷ್ಟ!
ಬಟ್ಟೆ ಧರಿಸುವುದು ನಮ್ಮ ನಮ್ಮ ಮನೋವೃತ್ತಿ, ಅಭ್ಯಾಸ, ಖಾಸಗಿ ಆಯ್ಕೆಗೆ ಸಂಬಂಧಿಸಿದ ಸಂಗತಿ. ಆದರೆ, ಇದರಲ್ಲೂ ರಾಶಿಚಕ್ರದ ಕೈವಾಡ ಇರುತ್ತದೆ. ಕೆಲವು ರಾಶಿಗಳ ಜನ ಸಿಂಪಲ್ಲಾದ ಬಟ್ಟೆಗಳನ್ನು ಧರಿಸಿದರೆ, ಕೆಲವರು ದಟ್ಟವಾದ, ಹೆಚ್ಚು ವೈಬ್ರಂಟ್ ಎನ್ನಿಸುವ ಬಟ್ಟೆಗಳನ್ನು ಆಯ್ಕೆ ಮಾಡುವುದಕ್ಕೆ ಇದೇ ಕಾರಣ. ಮುಖ್ಯವಾಗಿ, ನಾಲ್ಕೇ ರಾಶಿಗಳ ಜನ ಹೆಚ್ಚು ವಿಭಿನ್ನ ಮಾದರಿಯ ಡ್ರೆಸ್ ಧರಿಸಲು ಇಷ್ಟಪಡುತ್ತಾರೆ.

ಉಡುಪು ಅವರವರ ಆಯ್ಕೆ, ಇಷ್ಟದ ವಿಷಯ. ತಮ್ಮ ಮನೋಧರ್ಮಕ್ಕೂ ಸಂಬಂಧಿಸಿದೆ ಎನ್ನಲಾಗುತ್ತದೆ. ಫ್ಯಾಷನ್ ಆಯ್ಕೆಗಳು ಹಲವು ಅಂಶಗಳಿಂದ ಪ್ರಭಾವಿತಗೊಂಡಿರುತ್ತವೆ ಎನ್ನುವುದನ್ನೂ ಅಲ್ಲಗಳೆಯಾಗದು. ಒಂದು ರೀತಿಯ ಫ್ಯಾಷನ್ ಟ್ರೆಂಡ್ ಬಂದಾಗ ಸಾಮಾನ್ಯವಾಗಿ ಎಲ್ಲರೂ ಅದನ್ನು ಒಂದಿಲ್ಲೊಮ್ಮೆಯಾದರೂ ಫಾಲೋ ಮಾಡುತ್ತಾರೆ. ನಾವು ಧರಿಸುವ ಉಡುಪು ಅಥವಾ ಡ್ರೆಸ್ ಬಣ್ಣಗಳು ವ್ಯಕ್ತಿಗತ ಅಭಿರುಚಿ, ಸಾಂಸ್ಕೃತಿಕ ಹಿನ್ನೆಲೆ, ಜೀವನಶೈಲಿಯ ಆಯ್ಕೆಗಳಿಗೂ ಸಂಬಂಧಿಸಿವೆ. ಅಷ್ಟೇ ಏಕೆ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫ್ಯಾಷನ್ ಮನೋಧರ್ಮಕ್ಕೂ ರಾಶಿಚಕ್ರಕ್ಕೂ ಸಂಬಂಧವಿದೆ. ಕೆಲವರನ್ನು ನೋಡಿ, ಯಾವಾಗಲೂ ಕಲರ್ ಫುಲ್ ದಿರಿಸು ಹಾಕುತ್ತಾರೆ. ಹೊಳಪಿನ, ಮಿನುಗುವ ಬಣ್ಣೆಗಳನ್ನು ಧರಿಸಲು ಇಷ್ಟಪಡುತ್ತಾರೆ. ನಾಲ್ಕು ಜನ ಸೇರಿದ ಸಮಯದಲ್ಲಿ ತಾವು ವಿಭಿನ್ನವಾಗಿ ಗುರುತಿಸಿಕೊಳ್ಳಲು ಚಿತ್ರವಿಚಿತ್ರ ಡ್ರೆಸ್ ಧರಿಸುವವರೂ ಇದ್ದಾರೆ. ವಿಭಿನ್ನ ರೀತಿಯಲ್ಲಿ ಡ್ರೆಸ್ ಧರಿಸುವುದೂ ಒಂದು ಕಲೆ. ಆದರೆ, ಈ ಕೌಶಲ ಎಲ್ಲರಲ್ಲೂ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಗಳ ಜನ ಕಲರ್ ಫುಲ್ ಆದ, ಹೆಚ್ಚು ವೈಬ್ರಂಟ್ ಎನ್ನಿಸುವ ಉಡುಪುಗಳನ್ನು ಧರಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ.
• ಸಿಂಹ (Leo)
ಬೋಲ್ಡ್ (Bold) ಮತ್ತು ಆತ್ಮವಿಶ್ವಾಸದ (Confidence) ವ್ಯಕ್ತಿತ್ವ ಸಿಂಹ ರಾಶಿಯವರದ್ದು. ಇವರ ಫ್ಯಾಷನ್ (Fashion) ಆಯ್ಕೆಯಲ್ಲೂ ಇದು ಗೋಚರಿಸುತ್ತದೆ. ಸಿಂಹ ರಾಶಿಯವರು ಎಲ್ಲರ ಗಮನ ಸೆಳೆಯಲು, ಕೇಂದ್ರಬಿಂದುವಾಗಿರಲು ಇಷ್ಟಪಡುತ್ತಾರೆ. ವೈಬ್ರಂಟ್ (Vibrant) ಬಣ್ಣಗಳನ್ನು ಆಯ್ಕೆ ಮಾಡಲು ಇವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಬೋಲ್ಡ್ ಪ್ಯಾಟರ್ನ್, ವಿಶಿಷ್ಟ ಸ್ಟೈಲ್ (Style) ಅನುಸರಿಸುತ್ತಾರೆ. ಸೂರ್ಯ ಈ ರಾಶಿಯ ಅಧಿಪತಿಯಾಗಿದ್ದು, ಸ್ವಯಂ ಅಭಿವ್ಯಕ್ತಿ ಇದರ ಮೂಲ ಗುಣ. ಹೀಗಾಗಿ, ಆಂತರಿಕ ಶಕ್ತಿಯನ್ನು, ಜೀವನದ ಕುರಿತು ತಮಗಿರುವ ಅದಮ್ಯತೆಯನ್ನು ವ್ಯಕ್ತಪಡಿಸುವಂತಹ ದಿರಿಸುಗಳನ್ನು ಧರಿಸುವಲ್ಲಿ ಇವರು ಮುಂದಿರುತ್ತಾರೆ.
ಬುಧನಿಂದ ನಿಮ್ಮ ಖ್ಯಾತಿಗೆ ಧಕ್ಕೆ, ಎಲ್ಲವೂ ಅಸ್ತವ್ಯಸ್ತ; ಈ ನಾಲ್ಕು ರಾಶಿಯವರು ಹುಷಾರ್..!
• ಮಿಥುನ (Gemini)
ಪ್ಲೇಫುಲ್ (Playful) ಹಾಗೂ ಎಲ್ಲವನ್ನೂ ಸ್ವೀಕರಿಸುವಂತಹ (Adoptable) ಮನೋಧರ್ಮದ ಮಿಥುನ ರಾಶಿಯ ಜನ ತಮ್ಮ ಉಡುಪುಗಳ (Dress) ವಿಚಾರದಲ್ಲೂ ಇದನ್ನು ಅಳವಡಿಸಿಕೊಂಡಿರುತ್ತಾರೆ. ವಿಭಿನ್ನ ಲುಕ್ ಗಳ ಮೂಲಕ ಪ್ರಯೋಗ ಮಾಡಲು ಇವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಮಿಕ್ಸ್ ಆಂಡ್ ಮ್ಯಾಚ್ ಮಾಡಿಕೊಳ್ಳುವುದಕ್ಕೆ ಸದಾ ಸಿದ್ಧವಾಗಿರುತ್ತಾರೆ. ಯುವ ಚೈತನ್ಯ ಮತ್ತು ಸದಾಕಾಲ ಲೈವ್ಲಿಯಾಗಿರುವುದರಿಂದ ತಮ್ಮ ಉಡುಪುಗಳಲ್ಲೂ ಅದನ್ನು ಬಿಂಬಿಸುತ್ತಾರೆ. ತಮ್ಮ ಡೈನಮಿಕ್ ವ್ಯಕ್ತಿತ್ವವನ್ನು ಫ್ಯಾಷನ್ ಮೂಲಕ ತೋರ್ಪಡಿಸುತ್ತಾರೆ. ತಮ್ಮ ಮೂಡ್ ಮತ್ತು ಸಂದರ್ಭಕ್ಕೆ ಅನುಗುಣವಾಗಿ ವಿಭಿನ್ನ ರೀತಿಯ ಬಣ್ಣಗಳು (Colour), ದಟ್ಟ ನೀಲಿಯಿಂದ ಕೇಸರಿ ಬಣ್ಣದವರೆಗೆ ಎಲ್ಲ ರೀತಿಯ ಬಣ್ಣಗಳನ್ನೂ ಧರಿಸುತ್ತಾರೆ.
• ಧನು (Sagittarius)
ಸಾಹಸ ಮತ್ತು ನಾವೀನ್ಯತೆಯ ಹಂಬಲವುಳ್ಳ ಧನು ರಾಶಿಯ ಜನ ತಮ್ಮ ಫ್ಯಾಷನ್ ಆಯ್ಕೆಯಲ್ಲೂ ಇದನ್ನು ತೋರ್ಪಡಿಸುತ್ತಾರೆ. ಕಲರ್ ಫುಲ್ ಬಟ್ಟೆಗಳನ್ನು ಆಯ್ಕೆ ಮಾಡುತ್ತಾರೆ. ಚೈತನ್ಯ (Spirit) ಹಾಗೂ ಆಶಾವಾದಿತನವನ್ನು (Optimistic) ಬಿಂಬಿಸುವ ಬಣ್ಣಗಳ ಉಡುಪುಗಳು ಇವರ ಮೊದಲ ಚಾಯ್ಸ್. ಬೋಲ್ಡ್ (Bold) ಮತ್ತು ವೈಬ್ರಂಟ್ ಎನ್ನಿಸುವ ಡ್ರೆಸ್ ಧರಿಸುವುದಕ್ಕೆ ಆಸಕ್ತಿ ಹೊಂದಿರುತ್ತಾರೆ. ಜೀವನದ ಸಾಧ್ಯತೆಗಳ ಕುರಿತು ತಮಗಿರುವ ಪ್ರೀತಿ ಹಾಗೂ ವ್ಯಕ್ತಿತ್ವನ್ನು ಬಿಂಬಿಸುವಂತಹ ಬಟ್ಟೆಗಳನ್ನು ಧರಿಸುವುದು ಹೆಚ್ಚಾಗಿ ಕಂಡುಬರುತ್ತದೆ.
ಗಾಯತ್ರಿ ಮಂತ್ರದಿಂದ ಹೇಗೆ ಲಾಭ ಪಡ್ಕೋಬೇಕು ಗೊತ್ತಾ? ಇದನ್ನು ಹೇಳೋ ವಿಧಾನದ ಬಗ್ಗೆ ತಿಳ್ಕೊಳಿ
• ಮೀನ (Pieces)
ಕನಸುಗಾರ (Dream) ರಾಶಿಯಾಗಿರುವ ಮೀನದ ಜನ ಅಪಾರ ಕಲ್ಪನಾ ಶಕ್ತಿ ಹೊಂದಿರುತ್ತಾರೆ. ಫ್ಯಾಷನ್ ನಲ್ಲೂ ಇವರ ಕ್ರಿಯಾಶೀಲತೆ (Creativity) ಕಂಡುಬರುತ್ತದೆ. ಫ್ಯಾಂಟಸಿ ಮತ್ತು ಮ್ಯಾಜಿಕ್ ಭಾವನೆಗಳನ್ನು ಉದ್ದೀಪಿಸುವ ಬಟ್ಟೆಗಳನ್ನು ಆಯ್ಕೆ ಮಾಡುತ್ತಾರೆ. ಸಮುದ್ರದ ನೀಲಿ ಬಣ್ಣ ಸೇರಿದಂತೆ ಇತರ ಹಲವು ಪ್ರಾಪಂಚಿಕ ಜಗತ್ತಿನ ಬಣ್ಣಗಳನ್ನು ಧರಿಸಲು ಇಷ್ಟಪಡುತ್ತಾರೆ. ತಮ್ಮ ಆಂತರಿಕ ಪ್ರಪಂಚಕ್ಕೆ (Inner World) ಸಮೀಪವಾಗಿರುವ ಬಣ್ಣಗಳು ಇವರಿಗೆ ಯಾವತ್ತೂ ಇಷ್ಟ.