Asianet Suvarna News Asianet Suvarna News

Funniest Zodiac Signs: ಇಂಥವ್ರ ಜತೆಗಿದ್ರೆ ನಗ್ತಾ ನಗ್ತಾ ಸಮಯ ಹೋಗೋದೇ ಗೊತ್ತಾಗಲ್ಲ

ವಿನೋದದ ಮಾತುಗಳನ್ನಾಡುತ್ತ ಎಲ್ಲರ ಮುಖದಲ್ಲೂ ನಗು ಮೂಡಿಸುವುದು ಒಂದು ಕಲೆ. ತಾವು ಸ್ವತಃ ಆನಂದವಾಗಿದ್ದುಕೊಂಡು ಇತರರನ್ನೂ ಖುಷಿ ಪಡಿಸುವುದು ಎಲ್ಲರಿಗೂ ಬರುವುದಿಲ್ಲ. ಕೆಲವೇ ರಾಶಿಗಳ ಜನ ಇದರಲ್ಲಿ ಎಕ್ಸ್ ಪರ್ಟ್ ಆಗಿರುತ್ತಾರೆ. 
 

Some zodiac signs have extremely funny nature
Author
First Published Nov 29, 2022, 6:14 PM IST

“ಅಯ್ಯೊ, ನಮ್ಮವರಿಗೆ ಜೋಕ್ ಮಾಡುವುದಿರಲಿ, ನಗುವುದೂ ತಿಳಿದಿಲ್ಲ’ ಎಂದು ಬೇಸರಿಸಿಕೊಳ್ಳುತ್ತಾರೆ ಅನೇಕ ಮಹಿಳೆಯರು. ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ನಗುವುದು, ಜೋಕ್ ಮಾಡುವುದು ಹೆಚ್ಚು. ಆದರೆ, ಮಹಿಳೆಯರಾಗಲೀ, ಪುರುಷರಾಗಲೀ ಸಾಕಷ್ಟು ಮಂದಿ ಜೋಕ್ ಮಾಡುವುದಂತೂ ಬಿಡಿ, ಯಾರಾದರೂ ಜೋಕ್ ಮಾಡಿದಾಗ ನಗಲೂ ಬರುವುದಿಲ್ಲ. ನಗುತ್ತಿರುವ ಮನಸ್ಥಿತಿಯಾಗಲೀ, ಜೋಕ್ ಮಾಡುವುದಾಗಲೀ ಅದೊಂಥರ ದೇವರ ಆಶೀರ್ವಾದ ಇದ್ದಂತೆ. ಅಷ್ಟಕ್ಕೂ ಜೋಕ್ ಮಾಡುವುದು ಯಾರಿಗೆ ಇಷ್ಟವಾಗುವುದಿಲ್ಲ? ಎಲ್ಲೇ ಇದ್ದರೂ ಎಲ್ಲರೊಂದಿಗೆ ಮಾತಾಡುತ್ತ, ಜೋಕ್ ಮಾಡುತ್ತ ಹಾಯಾಗಿರುವವರು ನಮ್ಮ ನಡುವೆ ಇರುತ್ತಾರೆ. ಮೇಲ್ನೋಟಕ್ಕೆ ಅವರು ಎಲ್ಲ ಚಿಂತೆಗಳಿಂದ ಮುಕ್ತರಾಗಿದ್ದಾರೆ ಎನ್ನಿಸಬಹುದು. ಆದರೆ, ವಿಷಯ ಹಾಗಲ್ಲ. ಅವರು ಯಾವುದೇ ಸಮಯ ಸಂದರ್ಭಗಳಲ್ಲಿ ವಿನೋದಮಯ ಮಾತುಗಳನ್ನಾಡುತ್ತ, ತಾವೂ ಖುಷಿಯಾಗಿ ಇನ್ನೊಬ್ಬರನ್ನೂ ಖುಷಿಪಡಿಸುತ್ತಿರುತ್ತಾರೆ. ಅಂತಹ ಜನರು ಈ ಕೆಲವು ರಾಶಿಗಳಿಗೆ ಸೇರಿರುತ್ತಾರೆ. ಸಮಯಕ್ಕೆ ಸರಿಯಾದ ಚುರುಕು ಮಾತುಗಳು ಹಾಗೂ ವಿನೋದದಿಂದಾಗಿ ಅವರು ಎಲ್ಲರ ಮನ ಗೆಲ್ಲುತ್ತಾರೆ. ತಾವಿರುವ ಪರಿಸರದಲ್ಲಿ ಧನಾತ್ಮಕ, ಖುಷಿಯ ವಾತಾವರಣ ತುಂಬುತ್ತಾರೆ. ತಮ್ಮೊಳಗೆ ಯಾವುದೇ ಭಾವನೆ ಇದ್ದರೂ ನಾಲ್ಕು ಜನ ಸೇರಿದಾಗ ಅದನ್ನು ತೋರ್ಪಡಿಸಿಕೊಳ್ಳದೆ ಕೇವಲ ಖುಷಿ ಹಾಗೂ ವಿನೋದದಿಂದ ನಲಿಸುತ್ತಾರೆ. ಅಂತಹ ರಾಶಿಗಳು ಯಾವುವು ನೋಡಿ.

ಧನು (Sagittarius): ಧನು ರಾಶಿಯ (Zodiac Sign) ಮಂದಿ ಜನರನ್ನು ಒಲಿಸಿಕೊಳ್ಳುವುದರಲ್ಲಿ ಮುಂದಿರುತ್ತಾರೆ. ಜನರನ್ನು ನಗಿಸಲು (Smile) ಹಾಗೂ ಅವರನ್ನು ಖುಷಿಪಡಿಸಲು ಯಾವುದೇ ಎಗ್ಗಿಲ್ಲದೆ ವರ್ತಿಸಬಲ್ಲರು. ಸತ್ಯವನ್ನು (Truth) ಮುಖಕ್ಕೆ ಹೊಡೆದಂತೆ ಕ್ರೂರವಾಗಿ ಹೇಳಬಲ್ಲರು ಹಾಗೂ ಬಳಿಕ ಅದನ್ನೊಂದು ಜೋಕನ್ನಾಗಿ ಪರಿವರ್ತಿಸಬಲ್ಲರು. ಎಕ್ಸ್ ಟ್ರೀಮ್ಲಿ ಫನ್ನಿ (Funny) ಗುಣ ಹೊಂದಿರುವ ಇವರು ಸದಾಕಾಲ ಆನಂದದ (Happy) ಮೂಡಿನಲ್ಲಿ ಇರುತ್ತಾರೆ. ಸಾಕಷ್ಟು ಕ್ರಿಯಾಶೀಲತೆ (Creative) ಹಾಗೂ ಪ್ರತಿಭೆ ಹೊಂದಿರುತ್ತಾರೆ. ನಾಲ್ಕು ಜನ ಸೇರಿದಾಗ ಖುಷಿಖುಷಿಯಾಗಿದ್ದು, ಚುರುಕು ಹಾಗೂ ವಿನೋದದಿಂದ ವರ್ತಿಸುತ್ತಾರೆ. ಹೀಗಾಗಿ, ಎಷ್ಟೇ ನೋವು, ಆತಂಕದಲ್ಲಿದ್ದರೂ ಅವರು ಜೀವನದ ಪ್ರಸ್ತುತ ಕ್ಷಣವನ್ನು ಆನಂದಿಸಬಲ್ಲರು.

ಪ್ರೇಮಿಗೆ ಗಿಫ್ಟ್ ಕೊಟ್ಟು ಇಂಪ್ರೆಸ್‌ ಮಾಡೋದ್ರಲ್ಲಿ ಈ ರಾಶಿಯವರು ಎತ್ತಿದ ಕೈ!

ಮಿಥುನ (Gemini): ಮಿಥುನ ರಾಶಿಯ ಜನರನ್ನು ಕಾಮಿಡಿ (Comedy) ಜೀನಿಯಸ್ ಎಂದು ಹೇಳಬಹುದು. ಯಾರನ್ನೇ ಆದರೂ ಮಾತಿಗೆ (Talk) ಎಳೆಯಬಲ್ಲರು ಹಾಗೂ ತಮ್ಮ ವಿನೋದದ ಮಾತುಗಳಿಂದ ಅವರನ್ನು ಮೋಡಿ ಮಾಡಬಲ್ಲರು. ಜನರೊಂದಿಗೆ ಸಂಪರ್ಕ (Communicate) ಸಾಧಿಸಲೆಂದೇ ಅವರು ಜೋಕ್ (Jokes) ಗಳನ್ನು ಮಾಡುವ ಗುಣ ಹೊಂದಿರುತ್ತಾರೆ. ಇತರರ ಮುಖದ ಮೇಲೆ ದೊಡ್ಡದೊಂದು ನಗು ಮೂಡಿಸುವ ಇವರು ಕ್ರಿಯಾಶೀಲರಾಗಿದ್ದು, ತಾವು ಸರಳವಾಗಿರುತ್ತಾರೆ. ಅಪ್ರಯತ್ನಪೂರ್ವಕವಾಗಿ (Effortless) ಜನರನ್ನು ಮೋಡಿ ಮಾಡುತ್ತಾರೆ. ಇವರ ರಕ್ತದಲ್ಲೇ ಈ ಗುಣ ಸಹಜವಾಗಿ ಬಂದಿರುತ್ತದೆ. 

ಕನ್ಯಾ (Virgo): ಕನ್ಯಾ ರಾಶಿಯ ಜನ ಸ್ಮಾರ್ಟ್ (Smart) ಹಾಗೂ ಪ್ರತಿಭಾನ್ವಿತರು. ಇವರ ವ್ಯಕ್ತಿತ್ವದಲ್ಲೇ ವಿನೋದದ ಗುಣವೂ ಅಡಗಿದೆ. ಇವರ ಜತೆಗಿರುವಾಗ ಎಲ್ಲರೂ ಕಂಫರ್ಟ್ (Comfort) ಭಾವನೆ ಅನುಭವಿಸುತ್ತಾರೆ. ತಮ್ಮ ಸಾಮರ್ಥ್ಯದಿಂದಾಗಿಯೇ ಇತರರನ್ನು ಹಗುರ (Relax) ಮಾಡಬಲ್ಲರು. ಮಾತಿನ ಮಧ್ಯೆ ಮಧ್ಯೆ ಜೋಕ್ ಗಳನ್ನು ಮಾಡುತ್ತ ಸುಲಭವಾಗಿ ಬೇರೆಯವರನ್ನು ನಗಿಸಬಲ್ಲರು ಹಾಗೂ ಅವರು ರಿಲ್ಯಾಕ್ಸ್ ಆಗುವಂತೆ ಮಾಡಬಲ್ಲರು.

ಉದ್ಯೋಗದ ಸ್ಥಳದಲ್ಲಿ ಎಲ್ಲರಿಗೂ ಈ ರಾಶಿಯವರೆಂದರೆ ಅಚ್ಚುಮೆಚ್ಚು!

ಸಿಂಹ (Leo): ಸಿಂಹ ರಾಶಿಯವರು ವಿಶೇಷ ಸೆನ್ಸ್ ಆಫ್ ಹ್ಯೂಮರ್ (Sense of Humour) ಹೊಂದಿರುತ್ತಾರೆ. ಇವರಿಂದಾಗಿ ಜತೆಗಿರುವವರು ನಗುತ್ತ ಹಾಯಾಗಿರುತ್ತಾರೆ. ತಾವು ಎಲ್ಲರ ಗಮನ ಸೆಳೆಯಬೇಕು ಎಂದುಕೊಂಡರೆ  ಸಿಲ್ಲಿ (Silly) ಎನ್ನಿಸುವ ಹಾಗೂ ಇತರರನ್ನು ಮುಜುಗರ (Embarrass) ಮಾಡುವ ಜೋಕ್ ಗಳನ್ನೂ ಮಾಡಿಬಿಡುತ್ತಾರೆ. ಜನಸಂದಣಿಯನ್ನು (Crowd) ಇಷ್ಟಪಡುತ್ತಾರೆ ಹಾಗೂ ಅವರೊಂದಿಗೆ ವಿನೋದದ ಮಾತುಗಳ ಮೂಲಕ ಎಂಗೇಜ್ ಆಗುತ್ತಾರೆ. 

Follow Us:
Download App:
  • android
  • ios