Asianet Suvarna News Asianet Suvarna News

ಅಬ್ಬಬ್ಬಾ, ಅಶಿಸ್ತಿಗೆ ಇನ್ನೊಂದೇ ಹೆಸರೇ ಈ ರಾಶಿ, ಯೂವುದಕ್ಕೂ ಸಿಸ್ಟಮ್ ಇರೋಲ್ಲ

ದೈನಂದಿನ ಕೆಲಸಕಾರ್ಯ, ಸ್ವಚ್ಛತೆಯಲ್ಲೂ ಅವ್ಯವಸ್ಥಿತವಾಗಿರುವ ಜನರನ್ನು ನಾವು ನೋಡುತ್ತೇವೆ. ಇದರಲ್ಲೂ ಕೆಲವು ರಾಶಿಗಳ ಜನರು ಮುಂದಿರುತ್ತಾರೆ. ಅವರಿಗೆ ಸ್ವಚ್ಛತೆಯಲ್ಲಿ, ವಸ್ತುಗಳನ್ನು ಶಿಸ್ತಾಗಿ ಇಟ್ಟುಕೊಳ್ಳುವಲ್ಲಿ ಆಸಕ್ತಿಯೇ ಇರುವುದಿಲ್ಲ.

 

Some zodiac sign people do not maintain clean and daily chores
Author
First Published Aug 26, 2022, 12:41 PM IST | Last Updated Aug 26, 2022, 12:41 PM IST

ಗೊಂದಲವಿಲ್ಲದೆ ವ್ಯವಸ್ಥಿತವಾಗಿ ದೈನಂದಿನ ಜೀವನ ನಡೆಸುವುದಕ್ಕೆ ನಾವೆಲ್ಲರೂ ಇಷ್ಟಪಡುತ್ತೇವೆ. ದಿನದಿನವೂ ಗೊಂದಲ, ಮಾಮೂಲಿ ಕೆಲಸದಲ್ಲೂ ಅವ್ಯವಸ್ಥೆ ಇರುವುದು ಯಾರಿಗೂ ಇಷ್ಟವಾಗುವುದಿಲ್ಲ. ಆದರೂ ಕೆಲವೊಮ್ಮೆ ಅವ್ಯವಸ್ಥೆ ಉಂಟಾಗುವುದು, ಮನೆಯೆಲ್ಲ ಚೆಲ್ಲಾಪಿಲ್ಲಿಯಾಗುವುದು ಸಾಮಾನ್ಯ. ಮನೆಯಲ್ಲಿ ಮಕ್ಕಳಿದ್ದಾಗ ಎಷ್ಟೋ ಬಾರಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬರುತ್ತದೆ. ಅನೇಕ ಜನರನ್ನು ನೋಡುತ್ತೇವೆ, ಅವರಿಗೆ ತಮ್ಮದಾದ ವಸ್ತುಗಳನ್ನು ನೀಟಾಗಿ ಇಟ್ಟುಕೊಳ್ಳಲು ಬರುವುದಿಲ್ಲ. ಬಟ್ಟೆಬರೆ, ವಸ್ತುಗಳನ್ನು ನಿಭಾಯಿಸುವುದರಿಂದ ಹಿಡಿದು ಅಡುಗೆ-ಊಟ-ತಿಂಡಿಗಳಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ‘ಶಿಸ್ತೇ ಇಲ್ಲ, ಎಲ್ಲ ಚೆಲ್ಲಾಪಿಲ್ಲಿ ಮಾಡಿರ್ತಾರೆ, ಮನೆಯನ್ನು ಗೊಬ್ಬರ ಗುಂಡಿಯನ್ನಾಗಿ ಮಾಡ್ತಾರೆ’ ಎಂದು ಅಂಥವರ ಬಗ್ಗೆ ಬೈದುಕೊಳ್ಳುತ್ತೇವೆ. ಹಾಗೆಂದು ಎಲ್ಲರೂ ಈ ಸ್ವಭಾವ ಹೊಂದಿರುವುದಿಲ್ಲ. ಈ ಸ್ವಭಾವಕ್ಕೂ ನಮ್ಮ ರಾಶಿಗಳ ಪ್ರಭಾವ ಕಂಡುಬರುತ್ತದೆ. ಏಕೆಂದರೆ, ಕೆಲವು ರಾಶಿಗಳ ಜನ ಮಾತ್ರ ಹೆಚ್ಚು ಅವ್ಯವಸ್ಥಿತ ಜೀವನ ಹೊಂದಿರುತ್ತಾರೆ. ಅಂತಹ ಜೀವನ ನಡೆಸುವುದಕ್ಕೆ ಅವರಿಗೆ ಏನೇನೂ ಬೇಸರವಾಗುವುದಿಲ್ಲ. ದೈನಂದಿನ ಕೆಲಸ ಕಾರ್ಯಗಳಲ್ಲಿ ಶಿಸ್ತು ಅಳವಡಿಸಿಕೊಳ್ಳದೆ ಎಲ್ಲವನ್ನೂ ಗೊಂದಲ ಮಾಡಿಕೊಳ್ಳುತ್ತಾರೆ. ಅಂತಹ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.

·        ಧನು (Sagittarius)
ಸ್ವತಂತ್ರ ಪಕ್ಷಿ (Free Bird) ಎಂದು ಯಾರನ್ನಾದರೂ ಕರೆಯುವುದಿದ್ದರೆ ಅದು ಧನು ರಾಶಿಯವರಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತದೆ. ಪ್ರವಾಸ (Travel) ಮಾಡುವುದೆಂದರೆ ಇವರಿಗೆ ಇಷ್ಟ. ಸಾಹಸಕೃತ್ಯಗಳನ್ನು ಕೈಗೊಳ್ಳಲು, ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವುದೆಂದರೆ ಭಾರೀ ಇಷ್ಟ. ಗಡಿಬಿಡಿಯ (Hurry) ಸ್ವಭಾವ ಹೊಂದಿದ್ದು, ಎಲ್ಲವನ್ನೂ ತರಾತುರಿಯಲ್ಲಿ ಮಾಡಿ ಮುಗಿಸಲು ಯತ್ನಿಸುತ್ತಾರೆ. ಹೆಚ್ಚು ಕೆಲಸಗಳನ್ನು (Works) ಮಾಡಲು ಯತ್ನಿಸುವುದರಿಂದ ಸದಾಕಾಲ ಓಡುತ್ತಲೇ ಇರುತ್ತಾರೆ. ಪರಿಣಾಮವಾಗಿ, ದೈನಂದಿನ ಕೆಲಸ (Daily Chores) ಕಾರ್ಯಗಳ ಬಗ್ಗೆ ಅನಾಸಕ್ತಿ ಹೊಂದಿರುತ್ತಾರೆ. ನಿಯಮಿತವಾಗಿ ಏನನ್ನಾದರೂ ಮಾಡಲು ಇವರಿಂದ ಸಾಧ್ಯವಾಗುವುದಿಲ್ಲ. ತಮ್ಮ ಜವಾಬ್ದಾರಿಗಳನ್ನು ಗಡಿಬಿಡಿಯಿಂದ ಮಾಡುವ ಇವರು, ಕೊನೆಗೆ ಬಹಳಷ್ಟು ಕೆಲಸಗಳನ್ನು ಅವ್ಯವಸ್ಥಿತವಾಗಿ ಮುಗಿಸುತ್ತಾರೆ. ಸ್ವಚ್ಛತೆಗೆ (Cleaning) ಇವರ ಬಳಿ ಹೆಚ್ಚು ಸಮಯವಿರುವುದಿಲ್ಲ. ತಮ್ಮ ಗಡಿಬಿಡಿಯಲ್ಲಿ ಮುಳುಗಿದ್ದು, ಅಸ್ತವ್ಯಸ್ತತೆಯನ್ನು ಸರಿಪಡಿಸುವ ಗೋಜಿಗೂ ಹೋಗುವುದಿಲ್ಲ.

Zodiac Traits: ಈ ರಾಶಿಯವರು ಸ್ವಾರ್ಥಕ್ಕಾಗಿ ಸ್ನೇಹಿತರಿಗೆ ವಂಚಿಸಲೂ ಹೇಸೋರಲ್ಲ!

·        ವೃಶ್ಚಿಕ (Scorpio)
ವೃಶ್ಚಿಕ ರಾಶಿಯವರು ವ್ಯವಸ್ಥಿತವಾಗಿರುವಂತೆ ಕಂಡುಬಂದರೂ ಅದು ಮೇಲ್ನೋಟಕ್ಕೆ ಅಷ್ಟೇ ಆಗಿರಬಹುದು. ಅತ್ಯಂತ ಕ್ರಿಯಾಶೀಲವಾಗಿರುವ (Creative) ಇವರು ತಮಗೆ ಅನಿಸಿದ್ದೆಲ್ಲವನ್ನೂ ಮಾಡುವ ಉತ್ಸಾಹ ಹೊಂದಿರುತ್ತಾರೆ. ಏನಾದರೂ ಒಂದು ಕೆಲಸದಲ್ಲಿ ಏನೇನೋ ಮಾಡಲು ಹೋಗಿ ಇನ್ನಷ್ಟು ಗೊಂದಲಕಾರಿಯನ್ನಾಗಿ (Chaos) ಮಾಡುವುದು ಇವರ ಅಭ್ಯಾಸ. ಎಷ್ಟರ ಮಟ್ಟಿಗೆ ಎಂದರೆ ಇವರು ಮಾಡಿಟ್ಟ ಅವ್ಯವಸ್ಥೆಯನ್ನು (Scatter) ಸುಲಭಕ್ಕೆ ಸರಿ ಮಾಡುವುದು ಕಷ್ಟ. ಮನೆಯವರು ಮತ್ತು ಸಮೀಪದ ಬಂಧುಗಳಿಂದ ತೀವ್ರ ಒತ್ತಡ ಬಂದ ಹೊರತು ಅವುಗಳನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ. ತಮ್ಮನ್ನು ಇತರರು ತಪ್ಪಾಗಿ ತಿಳಿದುಕೊಳ್ಳುವುದು ಅಥವಾ ಅಶಿಸ್ತಿನ ಮನುಷ್ಯ ಎಂದು ಭಾವಿಸುವುದು ಇವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ, ವಸ್ತುಗಳನ್ನು ಸಾಧ್ಯವಾದಷ್ಟೂ ಸರಿಯಾಗಿ ಇಟ್ಟುಕೊಳ್ಳಲು ಮುಂದಾಗುತ್ತಾರೆ.

·        ಮೇಷ (Aries)
ಅಸಲಿಗೆ, ಮೇಷ ರಾಶಿಗಳ ಜನ ಅತ್ಯಂತ ಶಿಸ್ತಿನ ಜೀವಿಗಳು. ಇವರಿಗೆ ಮನೆ ಶಿಸ್ತಾಗಿರಬೇಕು, ವಸ್ತುಗಳು ಎಲ್ಲಿರಬೇಕೋ ಅಲ್ಲಿರಬೇಕು, ಕಚೇರಿಯಲ್ಲೂ ಅಷ್ಟೆ. ಒಂದೊಮ್ಮೆ ತಾವು ಅವ್ಯವಸ್ಥೆ (Clumsy) ಮಾಡಿದ್ದರೆ ಅದನ್ನು ಮುಚ್ಚಿಡುವಲ್ಲಿ ಯಶಸ್ವಿಯಾಗುತ್ತಾರೆ. ಬಾಹ್ಯ ಪರಿಸರವನ್ನು ಅತಿಯಾಗಿ ಚೊಕ್ಕ ಮಾಡುತ್ತಾರೆ. ಹೀಗಾಗಿ, ಹೆಚ್ಚು ಕಸ ಸೃಷ್ಟಿಸುತ್ತಾರೆ. ತಮ್ಮ ಬೀರುವನ್ನು (Cupboard) ಮಾತ್ರ ಚೊಕ್ಕವಾಗಿ ಇಟ್ಟುಕೊಳ್ಳಲು ಆಸಕ್ತಿ ಹೊಂದಿರುವುದಿಲ್ಲ.

ಈ ರಾಶಿಗಳು ಯಾವಾಗಲೂ Panic Modeನಲ್ಲೇ ಇರುತ್ತವೆ!

·        ತುಲಾ (Libra)
ಸಂಘಟಿತ ಕೆಲಸ (Organised Work) ತುಲಾ ರಾಶಿಯವರಿಂದ ಸಾಧ್ಯವಿಲ್ಲ. ಯೋಜನೆ ರೂಪಿಸುವುದರಲ್ಲಿ ಇವರು ಎತ್ತಿದ ಕೈ. ಆದರೆ, ಎಲ್ಲವನ್ನೂ ಗೊಂದಲಕಾರಿಯನ್ನಾಗಿ ಮಾಡಿಡುವಲ್ಲೂ ಅಗ್ರಗಣ್ಯರು. ಹೇಗೆ ಪರಿಸ್ಥಿತಿ ನಿಭಾಯಿಸಬೇಕೆಂದೇ ತಿಳಿದಿರುವುದಿಲ್ಲ. ಇವರ ಮನೆ, ರೂಮು ಅತ್ಯಂತ ಅವ್ಯವಸ್ಥಿತವಾಗಿರುತ್ತದೆ. ಮನೆಯನ್ನು ಸ್ವಚ್ಛಗೊಳಿಸುವುದು ಇವರಿಂದ ಸಾಧ್ಯವಿಲ್ಲ.  

Latest Videos
Follow Us:
Download App:
  • android
  • ios