Asianet Suvarna News Asianet Suvarna News

ನಿಮ್ಮ ಅದೃಷ್ಟದ ಬಾಗಿಲು ತೆರೀತಾ ಇದೆ ಅನ್ನೋದಕ್ಕೆ ಈ ಸಂಕೇತವೇ ಸಾಕ್ಷಿ

ಸುಲಭವಾಗಿ ಕೆಲಸಗಳು ಜರುಗುವುದು, ಅವಕಾಶಗಳು ಎದುರಾಗುವುದು, ಉತ್ತಮ ಜನರ ಭೇಟಿ, ಸಂಬಂಧಗಳಲ್ಲಿ ನೆಮ್ಮದಿ ಉಂಟಾಗುವುದು ಇವೆಲ್ಲ ಉತ್ತಮ ಸಮಯದ ಸೂಚಕಗಳು. ಮುಂದೆ ಹೆಚ್ಚಿನ ಅದೃಷ್ಟದ ಸಮಯವಿದೆ ಎನ್ನುವುದನ್ನು ತೋರಿಸುವ ಸಂಕೇತಗಳು. ಈ ಸಮಯವನ್ನು ಮುಕ್ತವಾಗಿ ಆಲಿಂಗಿಸಿ, ಜೀವನವನ್ನು ಸುಂದರವಾಗಿ ಮಾಡಿಕೊಳ್ಳಿ.
 

Some signs shows that your good time is coming way sum
Author
First Published Oct 3, 2023, 10:52 AM IST | Last Updated Oct 3, 2023, 10:52 AM IST

ಯಾವುದೋ ಕಚೇರಿಗೆ ಹೋಗಿರುತ್ತೀರಿ. ಊಹೆಗೇ ನಿಲುಕದಂತೆ ಬಹುಬೇಗ ಕೆಲಸವಾಗಿಬಿಡುತ್ತದೆ. ಯಾರೋ ಪರಿಚಯದವರು ಸಿಕ್ಕಿ ಅವರು ನಿಮ್ಮ ಕೆಲಸ ಮಾಡಿಕೊಟ್ಟುಬಿಡುತ್ತಾರೆ. ಹೀಗೆ, ಹೆಚ್ಚಿನ ಪ್ರಯತ್ನವೇ ಇಲ್ಲದೆ ಸರಳವಾಗಿ ಕೆಲಸಕಾರ್ಯಗಳು ಮುಗಿದುಹೋಗುತ್ತಿದ್ದರೆ ಆ ಸಮಯವನ್ನು ಅದೃಷ್ಟದ ಸಮಯ ಎನ್ನಬಹುದು ಅಲ್ಲವೇ? ಹೌದು, ಅದೃಷ್ಟದ ಕಾಲ ಕೂಡಿ ಬರುವ ಸಮಯದಲ್ಲಿ ಕೆಲವು ಸಂಕೇತಗಳು ದೊರೆಯುತ್ತವೆ. ಕೆಲವು ಸಂಗತಿಗಳು ನಮ್ಮ ಕೈಮೀರಿ ನಡೆಯುತ್ತಿರುತ್ತವೆ. ಅವುಗಳ ಬಗ್ಗೆ ಸೂಕ್ಷ್ಮವಾಗಿದ್ದರಷ್ಟೇ ಅರಿವಿಗೆ ಬರುತ್ತದೆ. ಆ ಸಮಯದಲ್ಲಿ ಅವಕಾಶಗಳು ಮನೆಬಾಗಿಲಿಗೆ ಬರುತ್ತವೆ. ಕಾರಣವಿಲ್ಲದೇ ಮನದಲ್ಲಿ ಧನಾತ್ಮಕ ಭಾವನೆ ತುಂಬಿಕೊಳ್ಳುತ್ತದೆ. ನಾವು ಕೆಟ್ಟ ಅದೃಷ್ಟವನ್ನಾದರೆ ಸುಲಭದಲ್ಲಿ ಗುರುತಿಸಿಬಿಡುತ್ತೇವೆ. ದುರಾದೃಷ್ಟದ ಸಮಯ ಬಹುಬೇಗ ಅರಿವಿಗೆ ಬರುತ್ತದೆ. ಹಾಗೆಯೇ, ಅದೃಷ್ಟದ ಸಮಯವನ್ನೂ ಗುರುತಿಸಲು ಕಲಿತುಕೊಳ್ಳಬೇಕು. ಅಂತಹ ಸಮಯದಲ್ಲಿ ಕೆಲವು ಅಂಶಗಳನ್ನು ಗುರುತಿಸಬಹುದು. ಜ್ಯೋತಿಷ್ಯ ಶಾಸ್ತ್ರ ಹಾಗೂ ವೈದಿಕ ಶಾಸ್ತ್ರದಲ್ಲಿ ಕೆಲವು ಸಂಕೇತಗಳನ್ನು ಶುಭ ಲಕ್ಷಣಗಳು ಎಂದು ಹೇಳಲಾಗಿದೆ. ಅವುಗಳ ಅನುಭವ ನಿಮಗಾಗುತ್ತಿದ್ದರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತಿದೆ ಎಂದರ್ಥ.

ಅದೃಷ್ಟದ (Good Time) ಕಾಲ ಕೂಡಿ ಬರಲು ಮುಖ್ಯವಾಗಿ ಗ್ರಹಗಳ ಚಲನೆ (Planets Movement) ಕಾರಣವಾಗುತ್ತದೆ. ನಿಮ್ಮ ಜನ್ಮಕುಂಡಲಿಯಲ್ಲಿ ಯಾವ ಗ್ರಹ, ರಾಶಿಗಳು ಇವೆಯೋ ಅವುಗಳ ಪ್ರಭಾವವಿರುತ್ತದೆ. ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಅದೃಷ್ಟಕ್ಕೆ ಗುರು ಗ್ರಹ, ಶುಕ್ರ ಮತ್ತು ಬುಧಗ್ರಹಗಳು ಉತ್ತಮ ಸ್ಥಾನದಲ್ಲಿರುವುದು ಮುಖ್ಯ. ಇವುಗಳ ಸ್ಥಾನ (Position) ಚೆನ್ನಾಗಿದ್ದರೆ ನಿಮ್ಮ ಅದೃಷ್ಟವೂ ಉತ್ತಮವಾಗಿರುತ್ತದೆ. ಹಾಗಿದ್ದರೆ ಏನೆಲ್ಲ ಲಕ್ಷಣಗಳು ಗೋಚರಿಸಬಹುದು ನೋಡೋಣ.

ಸೂರ್ಯ ಚಂದ್ರರನ್ನು ನುಂಗುವ ರಾಹುಕೇತು, ಕಾರಣವೇನು?

•    ಅಂತಃದೃಷ್ಟಿ (Intuition) ಮತ್ತು ಭಾವನೆ (Gut Feelings)
ಕೆಲವೊಮ್ಮೆ ನಿರ್ದಿಷ್ಟ ವಿಚಾರಕ್ಕೆ ತೀವ್ರವಾದ ಭಾವನೆಗಳು ನಮ್ಮಲ್ಲಿ ಮೂಡುತ್ತವೆ. ಇವುಗಳನ್ನು ಗಟ್‌ ಫೀಲಿಂಗ್‌ ಎನ್ನಲಾಗುತ್ತದೆ. ಈ ಅಂತಃದೃಷ್ಟಿಯನ್ನು ನಂಬಬಹುದು. ಉತ್ತಮ ನಿರ್ಧಾರ (Good Decision) ಕೈಗೊಳ್ಳಲು ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ಇವು ನಿರ್ದೇಶನ (Direct) ನೀಡುತ್ತವೆ.

•    ಅನಿರೀಕ್ಷಿತ ಧನಲಾಭ (Money)
ಅನಿರೀಕ್ಷಿತವಾಗಿ (Unexpected) ಧನ ಹಾಗೂ ಸಂಪನ್ಮೂಲದ ಲಾಭವಾದರೆ ಅದನ್ನು ಖಂಡಿತವಾಗಿ ಅದೃಷ್ಟದ ಕಾಲ ಮುಂದೆ ಕಾದಿದೆ ಎಂದೇ ಅರ್ಥೈಸಬಹುದು. ವೃತ್ತಿಯಲ್ಲಿ ಬೋನಸ್‌ (Bonus) ರೂಪದಲ್ಲಿ ಬರಬಹುದು, ಅನಿರೀಕ್ಷಿತ ಮೂಲಗಳಿಂದ ಬರಬಹುದು. ಅಥವಾ ದಾರಿಯಲ್ಲೂ ಸಿಗಬಹುದು. ಕಳೆದೇ ಹೋಯಿತು ಎಂದುಕೊಂಡ ಹಣ ವಾಪಸ್‌ ದಕ್ಕಬಹುದು. ಇವೆಲ್ಲವೂ ಧನಾತ್ಮಕ (Positive) ಲಕ್ಷಣಗಳು.

•    ಕನಸುಗಳು (Dreams)
ಶಾಸ್ತ್ರಗಳ ಪ್ರಕಾರ, ಕನಸುಗಳಿಗೆ ಸಾಕಷ್ಟು ಮಹತ್ವವಿದೆ. ನಿರ್ದಿಷ್ಟ ವಸ್ತುಗಳು, ಸನ್ನಿವೇಶಗಳ ಕನಸು ಕಾಣುವುದು ಶುಭಕಾರಕ (Auspicious) ಎನ್ನಲಾಗುತ್ತದೆ. ಈ ಕನಸುಗಳು ಧನಾತ್ಮಕ ಭವಿಷ್ಯವನ್ನು (Future) ಸೂಚಿಸುತ್ತವೆ. ಅದೃಷ್ಟದ ಸಮಯದಲ್ಲಿ ಉತ್ತಮ ಸಂದೇಶ ನೀಡುವ ಕನಸುಗಳು ಚಿತ್ತಪಟಲದಲ್ಲಿ ಮೂಡುತ್ತವೆ. ಕನಸುಗಳು ನಮ್ಮ ಅಂತಃಪ್ರಜ್ಞೆಯನ್ನು ಬಿಂಬಿಸುತ್ತದೆ.

 ಅಂಗೈ ಮತ್ತು ಪಾದ ತುರಿಸಿದರೆ ಏನರ್ಥ ಗೊತ್ತಾ..? ಅದೃಷ್ಟವೋ..? ದುರಾದೃಷ್ಟವೋ..?

•    ಉತ್ತಮ ಜನರ ಭೇಟಿ (Meet)
ಸೌಹಾರ್ದವಾಗಿ (Harmony) ಸಹಾಯ ಮಾಡುವ ಜನರನ್ನು ಭೇಟಿಯಾಗುವುದು ಸಹ ಅದೃಷ್ಟವಾಗಿದೆ. ಇದರಿಂದ ಕಾರಣವಿಲ್ಲದೆ ಕೆಲವು ವಿಚಾರಗಳಿಗೆ ಬೆಂಬಲ ದೊರೆಯುತ್ತದೆ, ಸಹಕಾರ ಲಭಿಸುತ್ತದೆ. ಇದೂ ಸಹ ಅದೃಷ್ಟದ ಸಮಯ ಎದುರು ಕಾಯುತ್ತಿದೆ ಎನ್ನುವುದನ್ನು ತೋರಿಸುತ್ತದೆ. ನಿಮ್ಮ ಭವಿಷ್ಯದ ಯಶಸ್ಸಿನಲ್ಲಿ ಈ ಜನ ಮುಖ್ಯ ಪಾತ್ರ ವಹಿಸಬಹುದು. 

•    ಸಂಬಂಧಗಳು ಸುಖಮಯ (Happy Relationships)
ಅದೃಷ್ಟದ ಕಾಲದಲ್ಲಿ ಸಂಬಂಧಗಳು ಶಾಂತವಾಗಿ, ಸುಖದಿಂದ ಕೂಡಿರುತ್ತವೆ. ಸೌಹಾರ್ದ ಮತ್ತು ಪ್ರೀತಿದಾಯಕ ಸಂಬಂಧಗಳು ನಿಮ್ಮದಾಗುತ್ತವೆ. ಅಲ್ಲದೇ, ಈ ಸಮಯದಲ್ಲಿ ಉತ್ತಮ ಆರೋಗ್ಯವೂ (Health) ನಿಮ್ಮದಾಗಿರುತ್ತದೆ.

•    ಅವಕಾಶಗಳು (Opportunities)
ಕೆಲವೊಮ್ಮೆ ಜೀವನದಲ್ಲಿ ಅವಕಾಶಗಳೇ ಕಂಡುಬರುವುದಿಲ್ಲ. ಆದರೆ, ಒಳ್ಳೆಯ ಸಮಯದಲ್ಲಿ ಸಾಕಷ್ಟು ಅವಕಾಶಗಳು ನಿರ್ಮಾಣವಾಗುತ್ತವೆ. ಬಯಸಿದ ಉದ್ಯೋಗ ದೊರೆಯಬಹುದು, ವಿದೇಶ ಯೋಗ ಕೂಡಿರಬಹುದು. ನಿಮ್ಮದೇ ಕನಸಿನ ಉದ್ಯಮ ಆರಂಭಿಸಲು ಸಾಧ್ಯವಾಗಬಹುದು. 
 

Latest Videos
Follow Us:
Download App:
  • android
  • ios