ಈ ರಾಶಿಯವ್ರಿಗೆ ಉಳಿತಾಯ ಅಂದ್ರೇನು ಗೊತ್ತೇ ಇಲ್ಲ, ಗಳಿಸಿದ್ದನ್ನೆಲ್ಲ ವೆಚ್ಚ ಮಾಡಿದ್ರಷ್ಟೇ ಸಮಾಧಾನ!

ಎಷ್ಟು ದುಡಿದರೂ ಖರ್ಚು ಮಾಡುವ ಶೋಕಿ ಹಲವರಿಗೆ ಇರುತ್ತದೆ. ಗಳಿಸಿದ್ದನ್ನೆಲ್ಲ ಅನುಭವಿಸಿಯೇ ಮುಗಿಸುವುದು ಇವರ ಧೋರಣೆ. ದುಡಿದ ಹಣವನ್ನೆಲ್ಲ ದುಬಾರಿ ವಸ್ತುಗಳಿಗಾಗಿಯೋ, ಬ್ರ್ಯಾಂಡೆಡ್ ಬಟ್ಟೆಬರೆಗಳ ಸಂಗ್ರಹಕ್ಕಾಗೋ ಮೀಸಲಿಡುತ್ತಾರೆ. ಇಂತಹ ಗುಣವನ್ನು ಈ ನಾಲ್ಕು ರಾಶಿಗಳ ಜನರಲ್ಲಿ ಕಾಣಬಹುದು.
 

Some people spend money beyond their budget and salary

ಸಂಬಳ ಎಷ್ಟಿದ್ದರೂ ತಿಂಗಳ ಕೊನೆಯಲ್ಲಿ ಸ್ನೇಹಿತರು, ಅವರಿವರ ಬಳಿ ಸಾಲ ಮಾಡುವವರನ್ನು ನೋಡುತ್ತೇವೆ. ಅವರು ಹೇಗೆ ತಮ್ಮೆಲ್ಲ ಹಣವನ್ನು ಹೇಗೆ ಖರ್ಚು ಮಾಡಿ ಕೈ ಖಾಲಿ ಮಾಡಿಕೊಳ್ಳುತ್ತಾರೆ ಎಂದೇ ತಿಳಿಯುವುದಿಲ್ಲ, ಹಾಗಿರುತ್ತದೆ ಅವರ ಜೀವನಶೈಲಿ. ವೇತನಕ್ಕಿಂತ ಇವರ ವೆಚ್ಚ ಹೆಚ್ಚು. ಏನಾದರೂ ಖರೀದಿಸಲು, ಹಣವನ್ನು ನೀರಿನಂತೆ ಖರ್ಚು ಮಾಡಲು ಇವರು ಸದಾಕಾಲ ರೆಡಿ ಇರುತ್ತಾರೆ. ತಮ್ಮ ಬಜೆಟ್ ಗೆ ಅನುಗುಣವಾಗಿ ಮಿತವಾಗಿ ವ್ಯಯ ಮಾಡುವುದು ಇವರಿಂದ ಸಾಧ್ಯವೇ ಇಲ್ಲ. ಕೆಲವರು ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಕೈಬಿಗಿ ಹೊಂದಿರುತ್ತಾರೆ. ಆದರೆ, ಇವರು ಮಾತ್ರ ಹಾಗಲ್ಲ. ಖರ್ಚುವೆಚ್ಚದಲ್ಲಿ ಇವರನ್ನು ಮೀರಿಸಲು ಸಾಧ್ಯವಾಗುವುದಿಲ್ಲ. ಹೊರಗೆ ಹೊರಟರೆ ಜೇಬಲ್ಲಿ, ಖಾತೆಯಲ್ಲಿರುವುದನ್ನು ಬಿಟ್ಟು ಕ್ರೆಡಿಟ್ ಕಾರ್ಡನ್ನೂ ಬಳಕೆ ಮಾಡುವ ಸ್ಥಿತಿ ಇವರಿಗೆ ಒದಗಿಬಿಡುತ್ತದೆ. ಇಂತಹ ಜನರನ್ನು ನಮ್ಮ ಸುತ್ತಮುತ್ತ ಹಲವರನ್ನಾದರೂ ಕಂಡಿರುತ್ತೇವೆ. ನಿಸ್ಸಂಶಯವಾಗಿ ಅವರು ಈ ಕೆಲವು ರಾಶಿಚಕ್ರಗಳಿಗೆ ಸೇರಿರುತ್ತಾರೆ. ಮೀನ, ಮೇಷ, ವೃಷಭ, ಮಿಥುನ ರಾಶಿಗಳ ಜನ ತಮ್ಮ ವೆಚ್ಚದ ಮೇಲೆ ಹಿಡಿತ ಹೊಂದಿರುವುದೇ ಇಲ್ಲ. ಕಂಡಿದ್ದೆಲ್ಲ ಬೇಕು ಎನ್ನುವ ಮನಸ್ಥಿತಿ ಹೊಂದಿರುತ್ತಾರೆ. 

•    ಮೀನ (Pisces)
ಮೀನ ರಾಶಿಯ (Zodiac Sign) ಜನ ಕೊಡುಗೈ ದಾನಿಗಳು. ಎಲ್ಲ ಬಾರಿಯೂ ತಮಗಾಗೇ ವೆಚ್ಚ (Spend) ಮಾಡುತ್ತಾರೆ ಎನ್ನುವ ಖಾತ್ರಿ ಇರುವುದಿಲ್ಲ. ತಮ್ಮ ಸಮೀಪವರ್ತಿಗಳಿಗಾಗಿ ಸಾಕಷ್ಟು ವ್ಯಯ ಮಾಡುತ್ತಾರೆ. ಹಾಗೆಯೇ, ಇವರ ಬಳಿ ಯಾರಾದರೂ ಸಹಾಯ (Help) ಕೇಳಿದರೆ ಇಲ್ಲ ಎನ್ನುವುದಿಲ್ಲ. ತಮ್ಮಲ್ಲಿರುವುದನ್ನೆಲ್ಲ ಕೊಟ್ಟು ಕೈ ಖಾಲಿ (Empty) ಮಾಡಿಕೊಳ್ಳುತ್ತಾರೆ. ತಮ್ಮ ಬಜೆಟ್ ಗೆ ಮೀರಿದ್ದರೂ ಅವರು ಯೋಚಿಸುವುದಿಲ್ಲ. ಎರಡು ಯೋಚನೆ ಮಾಡದೆ ತಮ್ಮ ಕೈಯಲ್ಲಿರುವುದನ್ನೆಲ್ಲ ಕೊಟ್ಟುಬಿಡಬಲ್ಲರು.

Astrology Tips: ಈ ರಾಶಿಯ ಜನರು ಫ್ರೀ ಅಡ್ವೈಸ್ ನೀಡೋದ್ರಲ್ಲಿ ಎತ್ತಿದ ಕೈ!

•    ಮೇಷ (Aries)
ಶೋ ಆಫ್ (Show Off) ಮಾಡುವುದರಲ್ಲಿ ಮೇಷ ರಾಶಿಯವರು ಎತ್ತಿದ ಕೈ. ಹೀಗಾಗಿ, ದುಬಾರಿ (Luxurious) ವಸ್ತುಗಳನ್ನು ಖರೀದಿ (Buy) ಮಾಡುವುದೆಂದರೆ ಇವರಿಗೆ ವಿಪರೀತ ಆಸಕ್ತಿ. ತಮ್ಮ ಲಕ್ಸುರಿಯಸ್ ಕಲೆಕ್ಷನ್ ಗೆ ಹೊಸ ಹೊಸ ಸೇರ್ಪಡೆ ಮಾಡುತ್ತ ಹೋಗುವುದೆಂದರೆ ಇವರಿಗೆ ಭಾರೀ ಇಷ್ಟ. ಹೀಗಾಗಿ, ಸಂಬಳ (Salary) ಬರುತ್ತಿದ್ದಂತೆ ಅದೂ ಇದೂ ಖರೀದಿ ಮಾಡಿ ಜೇಬನ್ನು ಖಾಲಿ ಮಾಡಿಕೊಳ್ಳುತ್ತಾರೆ, ಮುಂದಿನ ಸಂಬಳಕ್ಕಾಗಿ ಕಾಯುತ್ತಾರೆ. ದುಬಾರಿ ವಸ್ತುಗಳ ಮೋಹದಿಂದಾಗಿ ಇವರು ಕ್ರೆಡಿಟ್ ಕಾರ್ಡ್ (Credit Card) ಬಳಕೆ ಮಾಡಿ ಸಾಲದ ಸುಳಿಗೂ ಸಿಲುಕಬಲ್ಲರು. ಹಣವಿಲ್ಲದ ಸಮಯದಲ್ಲಿ ಚಡಪಡಿಸುತ್ತಾರೆ. ಆಗ ತಾಳ್ಮೆ ಎನ್ನುವುದೇ ಇವರಲ್ಲಿರುವುದಿಲ್ಲ. 

•    ವೃಷಭ (Taurus)
ಅದ್ದೂರಿಯಾಗಿ ಬದುಕುವುದೆಂದರೆ ವೃಷಭ ರಾಶಿಯವರಿಗೆ ಭಾರೀ ಇಷ್ಟ. ಜೀವನವನ್ನು ಉತ್ತಮವಾಗಿ ಬದುಕುವುದೇ (Living Good Life) ಇವರ ಮುಖ್ಯ ಉದ್ದೇಶ. ಉತ್ತಮ ಆಹಾರದಿಂದ (Food) ಹಿಡಿದು, ಬ್ರ್ಯಾಂಡೆಂಡ್ (Branded) ಬಟ್ಟೆಗಳನ್ನು ಧರಿಸುವವರೆಗೆ ಇವರು ತಮ್ಮದೇ ವಿಭಿನ್ನ ಆಯ್ಕೆ ಮಾಡುತ್ತಾರೆ. ದುಬಾರಿ, ಐಷಾರಾಮಿ ವಸ್ತುಗಳ ಸಂಗ್ರಹ ಮಾಡುತ್ತಾರೆ. ತಮ್ಮ ಗಳಿಕೆಯ ಬಹುಪಾಲನ್ನು ಇವರು ಇಂತಹ ವಸ್ತುಗಳಿಗಾಗಿ, ಕೆಲವು ವಿಭಿನ್ನ ಸಂಗ್ರಹಕ್ಕಾಗಿಯೇ ವೆಚ್ಚ ಮಾಡುತ್ತಾರೆ. ಹೀಗಾಗಿ, ಇವರಿಗೆ ಎಷ್ಟು ಹಣವಿದ್ದರೂ (Money) ಸಾಕಾಗುವುದಿಲ್ಲ. 

ಹಣವೋ, ಪ್ರೀತಿಯೋ ಎಂದರೆ ಪ್ರೀತಿಯನ್ನೇ ಆರಿಸಿಕೊಳ್ಳುವ ಭಾವುಕ ರಾಶಿಗಳಿವು..

•    ಮಿಥುನ (Gemini)
“ಇರುವುದೊಂದೇ ಜೀವನ, ಅದನ್ನು ಚೆನ್ನಾಗಿ ಜೀವಿಸು’ ಎನ್ನುವ ತತ್ವಕ್ಕೆ ಬದ್ಧರಾಗಿರುವ ಮಂದಿ ಎಂದರೆ ಮಿಥುನ ರಾಶಿಯ ಜನ. ಹೀಗಾಗಿ, ತಾವು ಗಳಿಸುವ ಪ್ರತಿಯೊಂದೂ ಪೈಸೆಯನ್ನೂ ಖರ್ಚು ಮಾಡಬಲ್ಲರು. ವಸ್ತುಗಳನ್ನು (Things) ಖರೀದಿಸುವುದು, ಇಷ್ಟವಾಗುವ ಬಟ್ಟೆಗೆ (Clothing) ವೆಚ್ಚ ಮಾಡುವುದೆಂದರೆ ಇವರಿಗೆ ಭಾರೀ ಇಷ್ಟ. ಇವರ ಪ್ರಕಾರ, ಉಳಿತಾಯಕ್ಕೆ (Savings) ಬೆಲೆ ಇಲ್ಲ. ಅದರಿಂದ ಪ್ರಯೋಜನವೇನೂ ಇಲ್ಲ ಎಂದು ವಾದಿಸುತ್ತಾರೆ. ಬ್ರ್ಯಾಂಡೆಡ್ ದುಬಾರಿ ವಸ್ತುಗಳನ್ನು ಕೊಂಡರೆ ಇವರಿಗೆ ತೃಪ್ತಿ (Satisfy) ಎನಿಸುತ್ತದೆ. ಹಣವಿಲ್ಲದ ಸಮಯದಲ್ಲಿ ಪರಿತಪಿಸುತ್ತಾರೆ.

Latest Videos
Follow Us:
Download App:
  • android
  • ios