ಅಕ್ಟೋಬರ್‌ನಲ್ಲಿ ಜನಿಸಿದವರು ಹೀಗಿರ್ತಾರಂತೆ..!
ಪ್ರತಿಯೊಬ್ಬರಿಗೂ ಅವರ ಗುಣ, ಸ್ವಭಾವಗಳ ಬಗ್ಗೆ ತಿಳಿದುಕೊಳ್ಳಲು ಉತ್ಸಾಹ ಸಹಜವಾಗಿಯೇ ಇರುತ್ತದೆ. ಜನವರಿ ತಿಂಗಳಿನಲ್ಲಿ ಜನಿಸಿದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಫೆಬ್ರವರಿಯಲ್ಲಿ ಜನಿಸಿದವರು ಛಲದಿಂದ ಎಲ್ಲವನ್ನೂ ಸಾಧಿಸುವ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಹೀಗೆ ಪ್ರತಿ ತಿಂಗಳಿಗೂ ಅದರದ್ದೇ ಆದ ವಿಶಿಷ್ಟ ಗುಣ ಸ್ವಭಾವಗಳು ಇರುತ್ತದೆ ಮತ್ತು ಬೇರೆ ಬೇರೆ ತಿಂಗಳಿನಲ್ಲಿ ಜನಿಸಿದವರ ಗುಣ ಸ್ವಭಾವಗಳು ಭಿನ್ನವಾಗಿರುತ್ತವೆ. ಹಾಗೆಯೇ ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರ ವ್ಯಕ್ತಿತ್ವದ ಬಗ್ಗೆ ನೋಡೋಣ.
ವ್ಯಕ್ತಿಯು ಜನಿಸಿದ ತಿಂಗಳಿನ ಆಧಾರದ ಮೇಲೆ ಗುಣ, ಸ್ವಭಾವಗಳನ್ನು ಹೇಳಬಹುದಾಗಿದೆ. ಜಾತಕದಲ್ಲಿ ವರ್ತಮಾನ, ಭೂತ, ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಆಯಾ ಮಾಸದಲ್ಲಿ ಜನಿಸಿದವರ ವೈಶಿಷ್ಟ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಹಾಗೆಯೇ ಅಕ್ಟೋಬರ್‌ನಲ್ಲಿ ಜನಿಸಿದವರು ಸೌಂದರ್ಯ ಆರಾಧಕರು ಮತ್ತು ನೋಡಲು ಆಕರ್ಷಕವಾಗಿರುತ್ತಾರಂತೆ. ಸ್ವಭಾವದಲ್ಲಿ ವಿನಯತೆಯನ್ನು ಹೊಂದಿರುವವರು, ತಮ್ಮ ವಿಚಾರಗಳನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲವಂತೆ.
ಅಕ್ಟೋಬರ್‌ನಲ್ಲಿ ಹುಟ್ಟಿದವರು ಇತರರಿಗಿಂತ ಯಾವ ರೀತಿಯಲ್ಲಿ ಭಿನ್ನವಾಗಿರುತ್ತಾರೆ ಮತ್ತು ಗುಣದಲ್ಲಿ ಯಾವ ಬಗೆಯ ವೈಶಿಷ್ಟ್ಯತೆಯನ್ನು ಹೊಂದಿರುತ್ತಾರೆ? ಎಂಬುದನ್ನು ತಿಳಿಯೋಣ.
ಇದನ್ನು ಓದಿ: ಗ್ರಹದೋಷದಿಂದ ಸಂಬಂಧ ಹಾಳು, ಸರಿಮಾಡಿಕೊಳ್ಳಲು ಹೀಗೆ ಮಾಡಿ..!
ಸೌಂದರ್ಯದ ಖಣಿ
ಅಕ್ಟೋಬರ್‌ನಲ್ಲಿ ಜನಿಸಿದವರು ನೋಡಲು ತುಂಬಾ ಸುಂದರ ಮತ್ತು ಆಕರ್ಷಕವಾಗಿರುತ್ತಾರಂತೆ. ಇವರಿಗೆ ವಯಸ್ಸಾದರೂ ಗೊತ್ತೇ ಆಗದಂತ ತಾರುಣ್ಯ ಇವರದ್ದಂತೆ. ಈ ತಿಂಗಳಿನಲ್ಲಿ ಜನಿಸಿದವರನ್ನು ಚಿರಯೌವ್ವನ ಹೊಂದಿದವರೆಂದು ಹೇಳಬಹುದಾಗಿದೆ. ಬಾಲ್ಯದಲ್ಲಿ ಅಷ್ಟು ಸುಂದರವಾಗಿ ಕಾಣದಿದ್ದರೂ ದೊಡ್ಡವರಾಗುತ್ತಾ ಬಂದಂತೆ ಇವರ ಸೌಂದರ್ಯ ವೃದ್ಧಿಯಾಗುವುದು ಅಕ್ಟೋಬರ್‌ನಲ್ಲಿ ಜನಿಸಿದವರ ವಿಶೇಷತೆ.
ಮಾತಿನಲ್ಲಿ ಮನೆಕಟ್ಟುವವರು
ಅಕ್ಟೋಬರ್‌ನಲ್ಲಿ ಜನಿಸಿದವರು ಉತ್ತಮ ವಾಗ್ಮಿಗಳು ಮತ್ತು ಎಲ್ಲೆಲ್ಲಿ ಹೇಗೆ ಮಾತನಾಡಬೇಕೆಂಬ ಕಲೆಯನ್ನು ಚೆನ್ನಾಗಿ ಬಲ್ಲವರಾಗಿರುತ್ತಾರೆ. ಇವರ ಈ ಗುಣ ಇತರರನ್ನು ಬೇಗ ಆಕರ್ಷಿತರಾಗುವಂತೆ ಮಾಡುತ್ತದೆ. ಮಾತಿನ ಕಲೆ ಚೆನ್ನಾಗಿ ಬಲ್ಲವರಾದ್ದರಿಂದ ಹಲವಾರು ತೊಂದರೆಗಳನ್ನು ಸಲೀಸಾಗಿ ನಿವಾರಿಸಿಕೊಳ್ಳುವ ಜಾಯಮಾನ ಇವರದ್ದು. ಮಾತಿನಲ್ಲಿ ಇವರನ್ನು ಸೋಲಿಸುವುದು ಕಷ್ಟಸಾಧ್ಯವೆಂಬುದು ಬಲ್ಲವರ ಅಭಿಪ್ರಾಯ.
ಇದನ್ನು ಓದಿ: ಈ ನಾಲ್ಕು ರಾಶಿಯವರು ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಲ್ವಂತೆ!
ಸಂಬಂಧಗಳನ್ನು ನಿಭಾಯಿಸುವುದನ್ನು ಚೆನ್ನಾಗಿ ಅರಿತವರು
ಈ ತಿಂಗಳಿನಲ್ಲಿ ಜನಿಸಿದವರು ಸಂಬಂಧಗಳ ಮೌಲ್ಯದ ಬಗ್ಗೆ ಉತ್ತಮ ಅರಿವನ್ನು ಹೊಂದಿರುತ್ತಾರೆ. ಸಂಬಂಧಗಳನ್ನು ನಾಜೂಕಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಯಾವುದೇ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳದೇ ಅದರ ಆಳವನ್ನು ತಿಳಿದುಕೊಳ್ಳುವ ಚಾಕಚಕ್ಯತೆಯನ್ನು ಹೊಂದಿರುತ್ತಾರೆ.
ಗುರಿ ಮುಟ್ಟುವ ತನಕ ನಿಲ್ಲುವುದಿಲ್ಲ
ಅಕ್ಟೋಬರ್‌ನಲ್ಲಿ ಜನಿಸಿದವರು ಯಾವುದೇ ವಿಚಾರವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಹಾಕಿಕೊಂಡ ಗುರಿಯನ್ನು ಎಷ್ಟೇ ಕಷ್ಟವಾದರು ಅದನ್ನೆಲ್ಲ ದಾಟಿ ಗುರಿ ತಲುಪುವವರೆಗೂ ಶ್ರಮಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಉಚ್ಛ ಸ್ಥಾನವನ್ನು ಪಡೆಯುವ ಕನಸನ್ನು ಕಾಣುವ ಇವರು, ಕನಸನ್ನು ನನಸಾಗಿಸಲು ಅಷ್ಟೇ ಪರಿಶ್ರಮವನ್ನು ಹಾಕುತ್ತಾರೆ.
ಈ ರಾಶಿಯವರು ಕೈಯಲ್ಲಿ ದುಡ್ಡು ನಿಲ್ಲೋದು ಕಷ್ಟ
ಅಹಂಕಾರ ಇವರಿಗಿರುವುದಿಲ್ಲ
ಅಕ್ಟೋಬರ್‌ನಲ್ಲಿ ಜನಿಸಿದವರು ಎಂತಹುದೇ ಪದವಿಯಲ್ಲಿದ್ದರು, ಧನಿಕರಾಗಿದ್ದರು ಸಹ ಅಹಂಕಾರ ಪಡುವುದಿಲ್ಲ. ಜೀವನದಲ್ಲಿ ಎಲ್ಲವನ್ನು ಹೊಂದಿದ್ದರು ಸಹ ಅದನ್ನು ಇತರರಿಗೆ ಪ್ರದರ್ಶಿಸಿ ಅಹಂಕಾರವನ್ನು ತೋರ್ಪಡಿಸುವ ಗುಣ ಇವರಲ್ಲಿರುವುದಿಲ್ಲ. ಹೆಚ್ಚು ಭಾವುಕ ಸ್ವಭಾವವನ್ನು ಹೊಂದಿರುವ ಇವರು ಸಮಸ್ಯೆಗಳಿಗೆ ಹೆದರುವುದಿಲ್ಲ.
ಶಿಸ್ತಿಗೆ ಬದ್ಧರಾಗಿರುತ್ತಾರೆ
ಅಕ್ಟೋಬರ್‌ನಲ್ಲಿ ಜನಿಸಿದವರು ಶುಚಿತ್ವಕ್ಕೆ ಪ್ರಾಧಾನ್ಯತೆ ನೀಡುವಂಥವರು. ಮನೆಯಲ್ಲಿ ಎಲ್ಲ ವಸ್ತುಗಳನ್ನು ಹರಡಿಕೊಂಡಿರುವ ಪೈಕಿ ಇವರಲ್ಲ, ಎಲ್ಲವನ್ನು ಚೊಕ್ಕವಾಗಿ ಜೋಡಿಸಿಟ್ಟುಕೊಳ್ಳುವುದು ಇವರ ಗುಣ. ನಿಯಮಗಳ ಅನುಸಾರ ನಡೆಯುವ ಇವರು ಶಿಸ್ತಿನ ಸಿಪಾಯಿಗಳಾಗಿರುತ್ತಾರೆ.
ಪ್ರೀತಿಗೆ ಬದ್ಧರು
ಈ ತಿಂಗಳಿನಲ್ಲಿ ಜನಿಸಿದವರು ಪ್ರೀತಿಯ ವಿಷಯದಲ್ಲಿ ನಿಖರತೆಯನ್ನು ಹೊಂದಿರುತ್ತಾರೆ. ಸಂಗಾತಿಯನ್ನು ಅಥವಾ ಪ್ರೀತಿಸಿದವರನ್ನು ಅತ್ಯಂತ ಹೆಚ್ಚು ಪ್ರೀತಿಸುವುದಲ್ಲದೇ, ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡುವುದಿಲ್ಲ. ಆದರೆ ಅಕ್ಟೋಬರ್‌ನಲ್ಲಿ ಜನಿಸಿದವರ ಪ್ರೀತಿಯು ಫಲಿಸುವುದು ವಿರಳ. ಆದರೆ ಪ್ರೀತಿ ಫಲಿಸದ ವಿಚಾರ ಮನೆಯಲ್ಲಿ ಇತರರಿಗೆ ತಿಳಿಯುವುದಿಲ್ಲ. ಇವರು ತಮ್ಮ ಯಾವುದೇ ವಿಚಾರವನ್ನು ಇತರರರಿಗೆ ತಿಳಿಸುವುದಿಲ್ಲ.
ಇದನ್ನು ಓದಿ: ನೌಕರಿ ಪಡೆಯಬೇಕೇ…? ವಾಸ್ತು ಪ್ರಕಾರ ಹೀಗೆ ಮಾಡಿ…!
ಸಹಾಯಕ್ಕೆ ಸದಾ ಸಿದ್ಧ
ಸಹಾಯ ಮಾಡುವುದಕ್ಕೆ ಸದಾ ಸಿದ್ಧರಿರುತ್ತಾರೆ. ಸ್ನೇಹಿತರು ಅಥವಾ ಬಂಧುಗಳು ಸಮಸ್ಯೆಗೆ ಪರಿಹಾರ ಕೇಳಿಕೊಂಡು ಬಂದಾಗ ಅವರ ಸಹಾಯ ಮಾಡೇ ತೀರುವ ವ್ಯಕ್ತಿತ್ವ ಇವರದ್ದು.