ಬಿಜೆಪಿಯೋ, ಕಾಂಗ್ರೆಸ್ಸೋ? ರಾಜ್ಯ ಚುನಾವಣೆ ಫಲಿತಾಂಶದ ಮೇಲೆ ಸೂರ್ಯಗ್ರಹಣ ಪರಿಣಾಮ ಏನು?

ಏಪ್ರಿಲ್ 20ರಂದು ಮೇಷ ರಾಶಿಯಲ್ಲಿ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ರಾಜ್ಯ ಚುನಾವಣೆ ಮೇಲೆ, ಬೊಮ್ಮಾಯಿ ಸರ್ಕಾರದ ಮೇಲೆ ಏನೆಲ್ಲ ಪರಿಣಾಮ ಬೀರಲಿದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

Solar Eclipse 2023 effect on state election result skr

ವಿವರಣೆ: ಡಾ. ಹರೀಶ್ ಕಶ್ಯಪ್

ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಜಗತ್ತು ಸಾಕ್ಷಿಯಾಗುವ ಸಮಯ ಹತ್ತಿರ ಬಂದಿದೆ. ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹಣಕ್ಕೆ ಬಹಳ ಮಹತ್ವವಿದ್ದು, ಇದು ಜಗತ್ತಿನಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗಲಿದೆ. 

ಈ ಬಾರಿ ಏಪ್ರಿಲ್ 20 ಗುರುವಾರ ಸೂರ್ಯಗ್ರಹಣ ಸಂಭವಿಸುವುದು. ಬೆಳಗಿನಿಂದ  ಮಧ್ಯಾಹ್ನ 12ರವರೆಗೆ ಸೂರ್ಯಗ್ರಹಣವು ಮೇಷರಾಶಿಯಲ್ಲಿ ಅಶ್ವಿನೀ ನಕ್ಷತ್ರ ಹಾಗೂ ಅಮಾವಾಸ್ಯ ತಿಥಿಯಲ್ಲಿ ರಾಹುಗ್ರಸ್ಥವಾಗಿ ನಡೆಯುವುದು. ಆದರೆ ಈ ಬಾರಿ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರ ಇಲ್ಲ, ಹಾಗಾಗಿ ಆಚರಣೆಯೂ ಇಲ್ಲ. ಆದರೆ, ಸೂರ್ಯೋದಯದ ಪ್ರಭಾವವಂತೂ ಇದ್ದೇ ಇರುತ್ತದೆ. 

ಗ್ರಹಣ ಪರಿಣಾಮ
ಈ ಗ್ರಹಣವು ಪೆಸಿಫಿಕ್ ಅಂಟಾರ್ಟಿಕಾ ಆಸ್ಟ್ರೆಲಿಯಾ ಭಾಗದಲ್ಲಿ ಕಾಣಿಸುತ್ತದೆ. ಆದರೆ, ಏಷ್ಯಾ ಖಂಡಕ್ಕೆ ಕಾಣಿಸುವುದಿಲ್ಲ. ಗ್ರಹಣವು ದೋಷಕರವಾಗಿದ್ದು, ಪರಿಣಾಮವಾಗಿ ಪಶ್ಚಿಮ ದೇಶಗಳಲ್ಲಿ ಮರಣಯುದ್ದ ಪೀಡೆಗಳು, ನಾನಾ ಬಗೆಯ ಯುದ್ದ, ಅಗ್ನಿ ದುರಂತ, ಸಮುದ್ರ ಜಲ ವಿಕೋಪಗಳು ಮುಂದಿನ ಮೂರು ತಿಂಗಳಲ್ಲಿ ಅಂದರೆ- ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಆವರಿಸಿ ಜನ ಪ್ರಾಣಿ ಭೂಪ್ರದೇಶಗಳಲ್ಲಿ ಅತೀವ ಹಾನಿ, ಅಬ್ಬರ ಉಂಟಾದೀತು. 

Surya Grahan: ಯಂತ್ರ ಮಂತ್ರ ಸೇರಿದಂತೆ ಸೂರ್ಯ ರಾಹು ಗ್ರಹಣ ದೋಷಕ್ಕಿದೆ ಹಲವು ಪರಿಹಾರ..

ರಾಜ್ಯ ಚುನಾವಣೆ ಮೇಲೆ ಸೂರ್ಯಗ್ರಹಣ ಪರಿಣಾಮ
ಗುರುವು ಈಗಾಗಲೇ ಅಸ್ತನಾಗಿದ್ದಾನೆ. ರಾಹು ಪಾಪಗತ ದೋಷವೂ, ಗ್ರಹಣವೂ ಸೇರಿ ಇದು ರಾಜಕೀಯವಾಗಿ ಮಂಕು ಕವಿದ ಫಲವಾಗಿರಲಿದೆ. ರಾಜ್ಯದಲ್ಲಿ ಮತದಾನವು ಮೇ 10ರಂದು ನಡೆಯುತ್ತದೆ. ಆ ಹೊತ್ತಿಗಾಗಲೇ ಸೂರ್ಯ-ಚಂದ್ರ ಗ್ರಹಣಗಳು ಕಳೆದಿರುತ್ತವೆ. ಹಾಗಾಗಿ ಗ್ರಹಣ ದೋಷ ರಾಜ್ಯ ಚುನಾವಣೆಯ ಮೇಲೆ ಪ್ರಭಾವವಿರುವುದಿಲ್ಲ. ಆದರೂ, ರಾಹುಸುತ ಚತುರ್ಗ್ರಹ ಯೋಗಗಳಿಂದ ಕೂಡಿದ ಈ ಗ್ರಹಣ 
ರಾಜ್ಯ ರಾಜಕೀಯದಲ್ಲಿ ರಾಜಕಾರಣಿಗಳಿಗೆ ಕಪ್ಪೆಯಂತೆ ಪಕ್ಷಾಂತರ ಬುದ್ಧಿ, ಜನರ ಮನಸು ಅಸ್ಥಿರವಾಗುವಂತೆ ಮಾಡುವುದಕ್ಕೆ ಕಾರಣವಾಗುತ್ತದೆ. ಇನ್ನು ಚುನಾವಣಾ ಫಲಿತಾಂಶದ ವಿಷಯಕ್ಕೆ ಬಂದರೆ, ಪಕ್ಷಗಳ ನಿರೀಕ್ಷೆ ಬುಡಮೇಲಾಗಿ ಜನರು ತಕ್ಕ ಪಾಠ ಕಲಿಸುವ ಫಲ ಕಾಣುವರು.

ಬೊಮ್ಮಾಯಿ ಜಾತಕ
ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜಾತಕದ ಮೇಲೆ ಸೂರ್ಯಗ್ರಹಣ ಹೇಗೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಿದರೆ- ಬೊಮ್ಮಾಯಿ ಜಾತಕದಲ್ಲೂ ತ್ರಿಗ್ರಹ, ಚತುರ್ಗ್ರಹ ಯೋಗಗಳು ಇದ್ದು, ಗ್ರಹಾನುಕೂಲ ಗ್ರಹಣದ ಮೇಷರಾಶಿಯಲ್ಲಿ ಇದ್ದು ಈ ಅಪರೂಪದ ಯೋಗಾಯೋಗ ಅವರಿಗೆ ಅನುಕೂಲಕರವಾಗಿದೆ.

ಚಂದ್ರಗ್ರಹಣ
ಇನ್ನು, ಮೇ 5ರ ಶುಕ್ರವಾರ ಸ್ವಾತಿ ನಕ್ಷತ್ರದಲ್ಲಿ, ತುಲಾ ರಾಶಿಯಲ್ಲಿ ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸುತ್ತಿದ್ದು ಇದೂ ಕೂಡಾ ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ನಮಗೆ ಸೂತಕವಿರುವುದಿಲ್ಲ. ಅಂದು ಮಧ್ಯಾಹ್ನ 1.30ರಿಂದಲೇ ಗ್ರಹಣ ಆರಂಭವಾಗಿ ನಡುರಾತ್ರಿ 1 ಗಂಟೆಗೆ ಕೇತು ಕೇಂದ್ರದಿಂದ ಚಂದ್ರ ದೂರವಾಗುವನು. 

Weekly Love Horoscope: ಈ ರಾಶಿಗೆ ಎದುರಾಗಲಿದೆ ವೈವಾಹಿಕ ಜೀವನದ ಕಷ್ಟಕರ ಸನ್ನಿವೇಶ

ಪರಿಹಾರ
ಒಟ್ಟಾರೆ ಫಲ ನೋಡುವುದಾದರೆ ಸೂರ್ಯ ಗ್ರಹಣಕ್ಕೆ ಶನಿಯ ದೃಷ್ಟಿಯಿದ್ದು ಅತ್ಯಂತ ಅಶುಭವಾಗಿದೆ. ಚಂದ್ರ ಗ್ರಹಣಕ್ಕೆ ಗುರುದೃಷ್ಟಿಯಿದ್ದು ದೋಷ ತಡೆಯಾಗುವುದು. ಯಾವುದಕ್ಕೂ ಮೇಷ ಹಾಗೂ ತುಲಾ ರಾಶಿಯವರು ಗ್ರಹಣ ಶಾಂತಿ ಪೂಜೆಗಳ ಮಾಡಿಸುವುದು ಒಳ್ಳೆಯದು. ದೇಶ ಹಾಗೂ ಲೋಕಕ್ಷೇಮಕ್ಕಾಗಿ ಮಹಾಕ್ಷೇತ್ರಗಳಲ್ಲಿ ಶತರುದ್ರೀಯ, ಚಂಡಿಕಾಪಾರಾಯಣ,ನಾಗಶಾಂತಿ ತರ್ಪಣ ಮಹಾಸೇವೆಗಳನ್ನು ಮಾಡಬೇಕು.
 

Latest Videos
Follow Us:
Download App:
  • android
  • ios