Asianet Suvarna News Asianet Suvarna News

ಯುಕೆಯಲ್ಲಿ'ಸಿಂಗ್ , ಡಾನ್ಸ್ ಅಂಡ್ ಪ್ರೇ' ಪುಸ್ತಕ ಬಿಡುಗಡೆ ಮಾಡಿದ ಇಸ್ಕಾನ್

ಭಕ್ತಿ ವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರವರ ಜೀವನ ಚರಿತ್ರೆ
ಇಸ್ಕಾನ್ ಬೆಂಗಳೂರು ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮ

Sing Dance and Pray book releases in Uk By ISKCON Bengaluru skr
Author
First Published May 17, 2023, 11:22 AM IST

ಬೆಂಗಳೂರು: ಭಾರತದಲ್ಲಿ ಅನೇಕ ಯಶಸ್ವಿ ಕಾರ್ಯಕ್ರಮಗಳ ನಂತರ ಇಸ್ಕಾನ್ ಬೆಂಗಳೂರು 'ಸಿಂಗ್, ಡ್ಯಾನ್ಸ್ ಆಂಡ್ ಪ್ರೇ' ಪುಸ್ತಕದ ಪ್ರಚಾರ ಪ್ರವಾಸವನ್ನು ಯುನೈಟೆಡ್ ಕಿಂಗ್ಡಮ್ (UK)ನಲ್ಲಿ ಸಂಯೋಜಿಸಿತ್ತು. ಇದು ಅಂತಾರಾಷ್ಟ್ರೀಯ ಹರೇ ಕೃಷ್ಣ ಆಂದೋಲನದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ.ಸಿ. ಭಕ್ತಿ ವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರವರ ಜೀವನ ಚರಿತ್ರೆ. ವಿಲ್ಬರ್ ಪ್ರಶಸ್ತಿ ವಿಜೇತ ಮತ್ತು ಖ್ಯಾತ ಇತಿಹಾಸಕಾರರಾದ  ಡಾ. ಹಿಂದೋಲ್ ಸೇನ್ ಗುಪ್ತ  ಅದರ ಲೇಖಕರಾಗಿದ್ದಾರೆ. ಈ ಪುಸ್ತಕವು ಸಮಕಾಲೀನರಿಗೆ ಶ್ರೀಲ ಪ್ರಭುಪಾದರ ಅದ್ಭುತ ಬದುಕಿನ ಅಪೂರ್ವ ಚಿತ್ರಣವನ್ನು ನೀಡುತ್ತದೆ. 
ಬ್ರಿಟನ್ನಿನ ಅನೇಕ ಐತಿಹಾಸಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಥಳಗಳಲ್ಲಿ ಪುಸ್ತಕ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

ಇಸ್ಕಾನ್ ಬೆಂಗಳೂರಿನ  ಮತ್ತು ಅಕ್ಷಯಪಾತ್ರಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸರು ಈ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಮತ್ತು ಅಕ್ಷಯ ಪಾತ್ರಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಚಂಚಲಾಪತಿ ದಾಸರು  ಮತ್ತು ಪುಸ್ತಕದ ಲೇಖಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಇವರಿಗೆ ಅವರು ಪ್ರೇಮಿ, ಅವರಿಗೆ ಇವರಲ್ಲ! ಒನ್ ಸೈಡೆಡ್ ಲವ್‌ ಈ ರಾಶಿಯವರಲ್ಲಿ ಹೆಚ್ಚು

ಈ ಸಂದರ್ಭದಲ್ಲಿ ಮಾತನಾಡಿದ ವೇದಾಂತ ರಿಸೋರ್ಸಸ್ ಲಿಮಿಟೆಡ್ನ ಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್, 'ಶ್ರೀಲ ಪ್ರಭುಪಾದರು 69ರ ಇಳಿ ವಯಸ್ಸಿನಲ್ಲಿ ವಿಶ್ವಾದ್ಯಂತ ಕೃಷ್ಣ ಭಕ್ತಿ ಆಂದೋಲನವನ್ನು ಸ್ಥಾಪಿಸಿದ್ದು, ಅವರ ಜೀವನ ಮತ್ತು ಕಾರ್ಯಗಳನ್ನು ಕುರಿತು ಅರಿತಾಗ ನಾನು ತುಂಬಾ ಸ್ಫೂರ್ತಿಗೊಂಡೆ! ಅವರನ್ನು ನಾನು ಸರ್ವಕಾಲೀನ ಶ್ರೇಷ್ಠ ಆಂಟ್ರಪ್ರೆನ್ಯುರ್ ಎಂದು ಪರಿಗಣಿಸುವೆ.  ಜಗತ್ತಿಗೆ ಅವರ ಕೊಡುಗೆಯು ವಿಶ್ವವ್ಯಾಪಿ ಸಂಸ್ಥೆಯನ್ನು ಸ್ಥಾಪಿಸಿರುವುದಷ್ಟೇ ಅಲ್ಲ, ಸಮಾಜಕ್ಕೆ 108 ಸಾಂಸ್ಕೃತಿಕ ಕೇಂದ್ರಗಳನ್ನು ಬಿಟ್ಟು ಹೋಗಿರುವುದಾಗಿದೆ. ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಒಂದು ಧಾರ್ಮಿಕ ಪುಸ್ತಕವಲ್ಲ, ಅದೊಂದು ಸ್ಫೂರ್ತಿದಾಯಕ ಪುಸ್ತಕವಾಗಿದೆ,' ಎಂದರು.

ಪ್ರಮುಖ ಲೇಖಕ ಹಾಗೂ ನೆಹರೂ ಕೇಂದ್ರದ ನಿರ್ದೇಶಕ ಶ್ರೀ ಅಮೀಶ್ ತ್ರಿಪಾಠಿ ಮಾತನಾಡಿ, 'ಯಾರೂ ಕೂಡ ಹಸಿವಿನಿಂದ ಇರಬಾರದು ಎನ್ನುವ ಶ್ರೀಲ ಪ್ರಭುಪಾದರ ಕನಸು ವಿಶ್ವವ್ಯಾಪಿ ಸಂಸ್ಥೆ ಅಕ್ಷಯಪಾತ್ರಾದಲ್ಲಿ ಸಾಕಾರಗೊಂಡಿದೆ. ಭಾರತದಲ್ಲಿ ಆರಂಭಗೊಂಡ ಈ ಸಂಸ್ಥೆಯು  ಯುಕೆಯಲ್ಲಿ ಕೂಡ ಸತ್ಕಾರ್ಯವನ್ನು ಮಾಡುತ್ತಿದೆ. ವಸುಧೈವ ಕುಟುಂಬಕಂ ಎನ್ನುವ ಅವರ ಸಂದೇಶವನ್ನು ಅಕ್ಷರ ಪಾತ್ರೆಯು  ಎಲ್ಲೆಡೆ ಸಾರುತ್ತಿದೆ' ಎಂದರು.

Shani Vakri 2023: ಮತ್ತೆ 5 ತಿಂಗಳು ವಕ್ರಿಯಾಗಲಿದ್ದಾನೆ ಶನಿ, ಯಾವ ರಾಶಿಯ ಮೇಲೇನು ಪರಿಣಾಮ?

ಶ್ರೀಲ ಪ್ರಭುಪಾದರ ಜೀವನ ಚರಿತ್ರೆ
'ಸಿಂಗ್, ಡ್ಯಾನ್ಸ್ ಆಂಡ್ ಪ್ರೇ' ಪುಸ್ತಕವು ಭಾರತದ ಪುರಾತನ ಆಧ್ಯಾತ್ಮಿಕ ಸಂಸ್ಕೃತಿಯನ್ನು 20ನೆಯ ಶತಮಾನದ ಪಾಶ್ಚಿಮಾತ್ಯ ಜಗತ್ತಿಗೆ ಸ್ಷಷ್ಟವಾಗಿ ವಿವರಿಸುತ್ತದೆ. ಶ್ರೀಲ ಪ್ರಭುಪಾದರ ಜೀವನ, ಅವರ ಅಪೂರ್ವ ಗುಣ ಮತ್ತು ಅವರ ಅಗಾಧ ಪ್ರಭಾವವನ್ನು ಸಮಕಾಲೀನರಿಗೆ ಸ್ಫುಟಪಡಿಸುತ್ತದೆ. ಅಮೆರಿಕದಲ್ಲಿ 60 ಮತ್ತು 70ರ ದಶಕದಲ್ಲಿ ಇದ್ದ ಕೌಂಟರ್ ಕಲ್ಚರ್ ಸಂದರ್ಭದಲ್ಲಿ ಅವರು ಅನೇಕ ಕಷ್ಟಕೋಟಲೆಗಳ ಮಧ್ಯೆಯೂ ನಿರಂತರವಾಗಿ ಪ್ರಯತ್ನಿಸುತ್ತ ಮತ್ತು ಶ್ರೀ ಕೃಷ್ಣನಲ್ಲಿ ಅಪಾರವಾದ ನಿಷ್ಠೆಯಿಂದ ಸಕಾರಾತ್ಮಕ ಸಾಂಸ್ಕೃತಿಕ ಪಲ್ಲಟವನ್ನು ತಂದ ವಿವರವನ್ನು ಈ ಪುಸ್ತಕವು ನೀಡುತ್ತದೆ. ಆ ಕಾಲದ ಗಣ್ಯರು ಮತ್ತು ಇತರ ಪ್ರಮುಖ ಜನರ ಮೇಲೆ ಅವರ ಪ್ರಭಾವವನ್ನು ಇದು ತಿಳಿಸುತ್ತದೆ. ಬೀಟಲ್ಸ್ ನಾಯಕತ್ವದ ಖ್ಯಾತ ಗಿಟಾರ್ ವಾದಕ ಜಾರ್ಜ್ ಹ್ಯಾರಿಸನ್, ಜಾನ್ ಲೆನನ್ ಅವರಲ್ಲಿ ಪ್ರಮುಖರು. ಅಮೆರಿಕದ ಕವಿ ಮತ್ತು ಲೇಖಕ ಅಲೆನ್ ಗಿನ್ಸ್ ಬರ್ಗ್ ಅವರ ಮೇಲೆ ಕೂಡ ಶ್ರೀಲ ಪ್ರಭುಪಾದರ ಪ್ರಭಾವವಿತ್ತು. ಇವುಗಳನ್ನು ಪುಸ್ತಕದಲ್ಲಿ ತಿಳಿಸಲಾಗಿದೆ. 
ಈ ಪುಸ್ತಕವು ಭಾರತದಲ್ಲಿ ಅತ್ಯಧಿಕವಾಗಿ ಮಾರಾಟವಾಗಿದೆ. ದೇಶಾದ್ಯಂತ ಇದಕ್ಕೆ ಒಳ್ಳೆಯ ವಿಮರ್ಶೆಯೂ ಬಂದಿದೆ. ಡಾ. ಜಾನ್ ಸ್ಟ್ರಾಟನ್ ಹಾಲೀ (ಧರ್ಮ ಕುರಿತು ಕ್ಲೈರ್ ಟೌ ಪ್ರಾಧ್ಯಾಪಕ, ಕೊಲಂಬಿಯಾ ವಿಶ್ವ ವಿದ್ಯಾಲಯ) ಮತ್ತು ಪ್ರಾನ್ಸಿಸ್ ಎಕ್ಸ್. ಕ್ಲೂನೆ (ದಿವ್ಯ ಶಾಸ್ತ್ರದ ಪರ್ಕ್ಮನ್ ಪ್ರಾಧ್ಯಾಪಕ, ಹಾರ್ವಡ್ ವಿಶ್ವ ವಿದ್ಯಾಲಯ) ಅವರಂತಹ ಅಂತಾರಾಷ್ಟೀಯ ವಿದ್ವಾಂಸರಲ್ಲದೆ  ಶಶಿ ತರೂರ್ (ಸಂಸತ್ ಸದಸ್ಯ ಮತ್ತು ಲೇಖಕ) ಅವರಂತಹ ನಾಯಕರು ಮತ್ತು ಸ್ವಪನ್ ದಾಸ್ಗುಪ್ತ (ಪತ್ರಕರ್ತ  ಮತ್ತು ಚಿಂತಕ) ಅವರೂ ಕೂಡ ಈ ವಿದ್ವತ್ಪೂರ್ಣ ಕೃತಿಯನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ. 

Follow Us:
Download App:
  • android
  • ios