ದೇವಸ್ಥಾನದಲ್ಲಿ 'ಘಂಟೆಯ ನಾದ' ಕೇಳಿ; ಈ ನಿಗೂಢ ಶಕ್ತಿ ಪಡೆಯಿರಿ..!

ಹಿಂದೂ ಧರ್ಮದಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ಒಮ್ಮೆ  ಘಂಟೆಯನ್ನು ಬಡಿದು, ನಂತರ ದೇವರಿಗೆ ನಮಸ್ಕರಿಸುವ ಪದ್ಧತಿ ಇದೆ. ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಹಿಂದೆಯೂ ಅದರದ್ದೇ ಆದ ಮಹತ್ವ ಇದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

significance of temple bell and the positive effects suh

ಹಿಂದೂ ಧರ್ಮದಲ್ಲಿ ದೇವಸ್ಥಾನ (temple) ಕ್ಕೆ ಹೋಗುತ್ತಿದ್ದಂತೆ ಒಮ್ಮೆ  ಘಂಟೆಯನ್ನು ಬಡಿದು, ನಂತರ ದೇವರಿಗೆ ನಮಸ್ಕರಿಸುವ ಪದ್ಧತಿ ಇದೆ. ದೇವಾಲಯಗಳಲ್ಲಿ ಘಂಟೆ (bell) ಮೊಳಗಿಸುವುದರ ಹಿಂದೆಯೂ ಅದರದ್ದೇ ಆದ ಮಹತ್ವ (Significance) ಇದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ನಾವು ಪ್ರತಿಯೊಂದು ದೇವಾಲಯಗಳಲ್ಲಿ ಘಂಟೆ ಇರುವುದನ್ನು ನೋಡಿರುತ್ತೇವೆ. ಅನಾದಿ ಕಾಲದಿಂದಲೂ ಮಂದಿರಗಳಲ್ಲಿ ಘಂಟಾನಾದ ಮೊಳಗಿಸುವ ಪದ್ಧತಿ (custom)  ನಮ್ಮಲ್ಲಿ ಇದೆ. ಘಂಟೆ ಬಾರಿಸಿ ದೇವರಿಗೆ ನಮಿಸಿ, ನಂತರ ದೇವರ ಸುತ್ತ ಪ್ರದಕ್ಷಿಣೆ (circumambulation) ಯನ್ನು ಹಾಕುತ್ತಾರೆ. ಈ ಕ್ರಮವನ್ನು ಏಕೆ ಅನುಸರಿಸುತ್ತೇವೆ ಎಂಬ ಮಾಹಿತಿ ಇಲ್ಲಿದೆ.

ದೇವರ ದರ್ಶನಕ್ಕೂ ಮುನ್ನ ಏಕೆ ಘಂಟೆ ಬಾರಿಸಬೇಕು?

ನಾವು ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ (Darshan) ಮಾಡುವ ಮೊದಲು ಗರ್ಭಗುಡಿಯ ಮುಂಭಾಗದಲ್ಲಿರುವ ಘಂಟೆಯನ್ನು ಹೊಡೆಯುತ್ತೇವೆ. ಇದಕ್ಕೆ ಮುಖ್ಯವಾದ ಕಾರಣ ಭಕ್ತಿ (devotion). ಯಾಕೆಂದರೆ ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಅವರಲ್ಲಿ ಭಕ್ತಿಭಾವ ಮೂಡಿ ಶಾಂತ (quiet) ತೆ ನೆಲೆಸುತ್ತದೆ. ಹೀಗಾಗೇ ದೇವಾಲಯಗಳಲ್ಲಿ ಘಂಟೆ ಮೊಳಗಿಸುತ್ತಾರೆ.

ಪ್ರತೀ ದೇವಸ್ಥಾನದ ಮುಂಭಾಗದಲ್ಲಿ ಘಂಟೆಯನ್ನು ಹಾಕಿರುತ್ತಾರೆ. ದೇವಸ್ಥಾನದ ಒಳಗೆ ಪ್ರವೇಶಿಸಲು (enter) ದೇವರ ಬಳಿ ಅನುಮತಿ ಕೇಳಲು ಈ ಘಂಟೆಯನ್ನು ಅಳವಡಿಸಲಾಗುತ್ತೆ, ಹಾಗೂ ಅದನ್ನು ಹೊಡೆದು ಮುಂದೆ ದರ್ಶನ ಪಡೆಯಬೇಕು ಎಂಬ ನಂಬಿಕೆ (faith) ಇದೆ.

Daily Horoscope: ಈ ರಾಶಿಯವರಿಗೆ ಇಂದು ಮಾನ ಹಾನಿ ಆಗಲಿದೆ..!

 

ಘಂಟೆ ಬಾರಿಸಿ ಕೆಳಗೆ ನಿಲ್ಲಬೇಕು ಏಕೆ?

ಘಂಟೆಯ ನಾದ ಓಂ (Om) ಶಬ್ದಕ್ಕೆ ಸಮನಾಗಿದೆ ಎನ್ನಲಾಗಿದೆ. ಹಾಗೂ ಘಂಟೆಯನ್ನು  ಕಂಚು (bronze) , ಜಿಂಕ್, ಕ್ಯಾಡ್ಮಿಯಂ (Cadmium) , ಮೆಗ್ನೀಶಿಯಂ, ಕ್ರೋಮಿಯಮ್ (Chromium), ಮತ್ತು ನಿಕಲ್ ಲೋಹಗಳಿಂದ ತಯಾರಿಸಲಾಗುತ್ತದೆ. ಹೀಗೆ ಬಾರಿಸಿದ ಘಂಟೆಗಳಿಂದ ಪ್ರತಿಧ್ವನಿ (echo) ಕೇಳಿಸುತ್ತದೆ. ಪ್ರತಿಧ್ವನಿಸಿದಾಗ ಅದು 7 ಸೆಕೆಂಡ್‌ಗಳ ಕಾಲ ಆ ಶಬ್ಧ ಕೇಳಿಸಿತ್ತದೆ. ಘಂಟೆಯ ಪ್ರತಿಧ್ವನಿಯೂ ನಮ್ಮಲ್ಲಿನ ನಿರ್ದಿಷ್ಟವಾದ ಕೇಂದ್ರ ಅಂದರೆ ಚಕ್ರಗಳಿಗೆ ತಲುಪುತ್ತವೆ. ಇದರಿಂದ ಮಿದುಳಿ (brain) ನಲ್ಲಿನ ಎಲ್ಲಾ ರೀತಿಯ ಆಲೋಚನೆಗಳಿಂದ ಮುಕ್ತವಾದ ಶಾಂತ ಸ್ಥಿತಿಗೆ ಕರೆದೊಯ್ಯುತ್ತದೆ. ಹಾಗಾಗಿ ದೇವರ ದರ್ಶನ ಪಡೆಯುವಾಗ ಘಂಟೆ ಬಾರಿಸಿ ಅದರ ಕೆಳಗೆ ನಿಲ್ಲಬೇಕು. 

ಘಂಟೆನಾದದ ಪ್ರಯೋಜನಗಳು ಏನು?

ಘಂಟೆ ಬಾರಿಸುವುದರಿಂದ ದುಷ್ಟ ಶಕ್ತಿ (Evil power) ಗಳು ದೂರ ಆಗುತ್ತವೆ. ಹಾಗೂ ವ್ಯಕ್ತಿಯಲ್ಲಿನ ಋಣಾತ್ಮಕ ಶಕ್ತಿ (Negative energy) ಕೂಡ ಹೊರ ಹಾಕಲ್ಪಡುತ್ತದೆ. ಹಾಗಾಗಿ ದೇವಸ್ಥಾನದಲ್ಲಿ ಘಂಟೆ ಬಾರಿಸುವುದರಿಂದ ನಮ್ಮೊಳಗೆ ಪರಿಶುದ್ಧರಾಗುವುದರ ಜೊತೆಗೆ ಇತರರನ್ನು ಶುದ್ಧಿಸಬಹುದು ಎಂಬ ನಂಬಿಕೆ ಇದೆ.

ಘಂಟೆಯಿಂದ ಹೊರಹೊಮ್ಮುವ ಓಂಕಾರ ಶಬ್ದ (sound) ದಿಂದ ದುಷ್ಟಶಕ್ತಿಗಳ ಕಾಟ ದೂರಾಗುತ್ತೆ. ಕಷ್ಟ (difficult) ಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.


Weekly Tarot Readings: ಈ ರಾಶಿಯವರು ಶೀಘ್ರದಲ್ಲೇ ಖ್ಯಾತಿ ಗಳಿಸುತ್ತಾರೆ..!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios