Dhanurmasam rituals: ಇಂದಿನಿಂದ ಧನುರ್ಮಾಸ ಆರಂಭ, ಏನಿದರ ವೈಶಿಷ್ಟ್ಯತೆ?

ಇಂದಿನಿಂದ ಧನುರ್ಮಾಸ ಆರಂಭವಾಗಿದೆ. ಈ ಮಾಸ ಅವಿವಾಹಿತ ಹೆಣ್ಣುಮಕ್ಕಳಿಗೆ ಹೆಚ್ಚು ವಿಶೇಷವಾಗಿದೆ. ಏಕೆ ತಿಳಿಯಿರಿ. 

Significance of Dhanurmasam last month of Dakshinayana skr

ಸೂರ್ಯ ಪ್ರತಿ ರಾಶಿಯಲ್ಲೂ ಒಂದು ತಿಂಗಳ ಕಾಲ ಇರುತ್ತಾನೆ. ಇಂದು ಆತ ಧನು ರಾಶಿ(Sagittarius)ಗೆ ಪ್ರವೇಶಿಸಿದ್ದಾನೆ. ಹೀಗೆ ಧನು ರಾಶಿಯಲ್ಲಿ ಸೂರ್ಯ(Sun)ನಿರುವ ಒಂದು ತಿಂಗಳ ಕಾಲವನ್ನು ಧನುರ್ಮಾಸ ಎನ್ನಲಾಗುತ್ತದೆ. ಇಂದು ಅಂದರೆ ಡಿಸೆಂಬರ್ 16ರಂದು ಆರಂಭವಾಗುವ ಧನುರ್ಮಾಸವು 14ನೇ ಜನವರಿ 2022ರವರೆಗೆ, ಅಂದರೆ ಸಂಕ್ರಾಂತಿಯ ಮುನ್ನಾ ದಿನದವರೆಗೆ ಇರುತ್ತದೆ. 

ಕೃಷ್ಣನು ಭಗವದ್ಗೀತೆಯಲ್ಲಿ ಮಾಸಗಳನ್ನು ಕುರಿತು ಹೇಳುವಾಗ ಧನುರ್ಮಾಸದ ಮಹಾತ್ಮೆಗೆ ವಿಶೇಷ ಒತ್ತು ನೀಡಿ 'ಮಾಸಾನಾಂ ಮಾರ್ಗಶೀರ್ಷೋಸ್ಮಿ' ಎಂದಿದ್ದಾನೆ.  ಅಂದರೆ, ಧನುರ್ಮಾಸ ಪುಣ್ಯ ಪೂರ್ಣ ಮಾಸ, ಪರ್ವಪ್ರವರ ಪ್ರತಿಷ್ಠಿತ ಮಾಸ. 

Significance of Dhanurmasam last month of Dakshinayana skr

ಧನುರ್ಮಾಸ ವಿಶೇಷ
ದೇವತೆಗಳಿಗೆ ಒಂದು ವರ್ಷವೆಂದರೆ ಒಂದು ದಿನದಂತೆ. ನಮ್ಮ ಪಾಲಿನ ಆರು ತಿಂಗಳು ಅವರಿಗೆ ಒಂದು ರಾತ್ರಿಯ ಕಾಲ. ಇದನ್ನೇ ದಕ್ಷಿಣಾಯಣ(Dakshinayana) ಎನ್ನುವುದು. ಮತ್ತಾರು ತಿಂಗಳು ಬೆಳಗಿನ ಸಮಯ. ಅದನ್ನೇ ಉತ್ತರಾಯಣ(Uttarayana) ಎನ್ನುವುದು. ಈ ಧನುರ್ಮಾಸವು ದಕ್ಷಿಣಾಯಣದ ಕೊನೆಯ ಮಾಸವಾದ್ದರಿಂದ ಇದು ದೇವರು ದೇವತೆಗಳ ಪಾಲಿಗೆ ಬೆಳಗಿನ ಬ್ರಾಹ್ಮೀ ಮುಹೂರ್ತವಾಗಿರುತ್ತದೆ. ಅಂದರೆ ಅವರು ಎದ್ದೇಳುವ ಸಮಯ. ಹಾಗಾಗಿ, ಈ ಬ್ರಾಹ್ಮಿ ಮುಹೂರ್ತದಲ್ಲಿ ಯಾರು ಎದ್ದು ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ಹುಗ್ಗಿಯನ್ನು ಧನುರ್ ಗಣಪನಿಗೆ ಸಮರ್ಪಿಸುತ್ತಾರೋ ಅವರ ಮನೋಭೀಷ್ಟಗಳು ಅಕ್ಷಯವಾಗಿ ನೆರವೇರುತ್ತದೆ ಎನ್ನಲಾಗುತ್ತದೆ. ಧನುರ್ಮಾಸದಲ್ಲಿ ಶ್ರೀವಿಷ್ಣು ಪೂಜೆಯೊಡನೆ ಶ್ರೀಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಸಂಪತ್ತು ಒಲಿಯುತ್ತದೆ ಎಂಬ ನಂಬಿಕೆಯೂ ಇದೆ.

UNESCO accords Durga Puja: ಯುನೆಸ್ಕೋ ಪಾರಂಪರಿಕ ಸ್ಥಾನಮಾನ ಪಡೆದ ಬಂಗಾಳದ ದುರ್ಗಾಪೂಜೆ, ದೇಶದ ಹೆಮ್ಮೆ ಎಂದ ಮೋದಿ

ಹುಗ್ಗಿಯೇ ಏಕೆ?
ಇಂದ್ರ ರಾಜ್ಯ ಭ್ರಷ್ಟರಾದಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು, ಅದರ ಫಲವಾಗಿ ಇಂದ್ರನಿಗೆ ಪುನಃ ರಾಜ್ಯವು ದೊರೆಯಿತು ಎಂಬುದು ಪುರಾಣದ ಐತಿಹ್ಯ. ಅಕ್ಕಿಯ ಎರಡರಷ್ಟು ಪ್ರಮಾಣ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನು ಕೂಡಿಸಿ ಬೇಯಿಸಿದ ಪದಾರ್ಥವೇ ಹುಗ್ಗಿ. ಇದಕ್ಕೆ ಪೊಂಗಲ್(Ponagal) ಎಂದೂ ಹೇಳುತ್ತಾರೆ.  ಮೊದಲೇ ಚಳಿಗಾಲ(winter) ಈ ಧನುರ್ಮಾಸ. ಈ ಸಂದರ್ಭದಲ್ಲಿ  ಮೈ ಬೆಚ್ಚಗಾಗಿಸುವ ಹಾಗು ಚಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುವ ಸಾತ್ವಿಕ ಆಹಾರ ಹುಗ್ಗಿಯಾಗಿದೆ. ಚಳಿಗಾಲದಲ್ಲಿ ದೇಹ ಒಣಗುವುದನ್ನು ತಪ್ಪಿಸಲು, ದೇಹಕ್ಕೆ ಕೊಬ್ಬಿನಂಶ ಹೆಚ್ಚಿಸಲು ಕೂಡಾ ಈ ಆಹಾರ ಸಹಾಯಕವಾಗಿದೆ. 

Significance of Dhanurmasam last month of Dakshinayana skr

Shani Dev: ಮಹಿಳೆಯರು ಶನಿ ದೇವರನ್ನು ಪೂಜಿಸಬಹುದೇ?

ಈ ಮಾಸದಲ್ಲಿ ಏನೇನು ಮಾಡಬೇಕು?
ಈ ಮಾಸದಲ್ಲಿ ತಿರುಪ್ಪಾವೈ ಶ್ಲೋಕಗಳನ್ನು ಹೇಳುವುದು, ಧನುರ್ಮಾಸ ವ್ರತ ಕತೆಯಾದ ಗೋದಾ ದೇವಿಯ ಕತೆ ಕೇಳುವುದು, ವಿಷ್ಣು(Lord Vishnu)ವಿಗೆ ವಿಶೇಷ ಪೂಜೆ ಹಾಗೂ ಹೂವುಗಳನ್ನು ಸಮರ್ಪಿಸುವುದನ್ನು ಮಾಡುವುದರಿಂದ ವಿಶೇಷ ಕೃಪೆಗೆ ಪಾತ್ರರಾಗಬಹುದು. ಈ ಮಾಸದಲ್ಲಿ ವಿಷ್ಣುವನ್ನು ಮಧುಸೂಧನ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ತಿರುಪತಿಯಲ್ಲಿ ಕೂಡಾ ಧನುರ್ಮಾಸದಲ್ಲಿ ಸುಪ್ರಭಾತದ ಬದಲಿಗೆ ತಿರುಪ್ಪಾವೈ ಓದಲಾಗುತ್ತದೆ. ಈ ಮಾಸದ ಮೊದಲ 15 ದಿನ ವಿಷ್ಣುವಿನ ದೇವಾಲಯಗಳಲ್ಲಿ ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಪೂಜೆ ಮುಗಿಸಲಾಗುತ್ತದೆ. ನಂತರದ 15 ದಿನ ಸೂರ್ಯ ಹುಟ್ಟಿ(sunrise)ದ ನಂತರ ಪೂಜೆ ನಡೆಯುತ್ತದೆ. 
ಈ ಮಾಸದಲ್ಲಿ ಅವಿವಾಹಿತ ಹುಡುಗಿಯರು ಕಾತ್ಯಾಯಿನಿ ವ್ರತ ಹಾಗೂ ಧನುರ್ಮಾಸ ವ್ರತ ಆಚರಿಸುವುದರಿಂದ ಉತ್ತಮ ಪತಿ ಸಿಗುತ್ತಾನೆ. 
ಭಾಗವತದಲ್ಲಿ ಈ ವ್ರತದ ಬಗ್ಗೆ ಹೇಳಲಾಗಿದೆ. ಗೋಪಿಯರೆಲ್ಲ ಶ್ರೀಕೃಷ್ಣ ಪರಮಾತ್ಮನನ್ನು ಪತಿಯಾಗಿ ವರಿಸಲು ಈ ವ್ರತವನ್ನು ಆಚರಿಸಿದ್ದರ ಬಗ್ಗೆ ಉಲ್ಲೇಖವಿದೆ. ಹೆಣ್ಣುಮಕ್ಕಳು ಸಗಣಿಯ ಉಂಡೆಗಳನ್ನು ಮಾಡಿ ಅದನ್ನು ರಂಗೋಲಿಯ ಮಧ್ಯದಲ್ಲಿರಿಸಿ ಹೂವುಗಳನ್ನಿಟ್ಟು ಪೂಜಿಸುತ್ತಾರೆ. ಈ ಸಗಣಿಯ ಉಂಡೆಯನ್ನು ಗೌರಿ(Goddess Gauri) ಎಂದು ಪರಿಗಣಿಸಲಾಗುತ್ತದೆ. ಇನ್ನು ಗೌರಿ ಹಾಗೂ ಲಕ್ಷ್ಮೀಯು ಧನುರ್ಮಾಸದಲ್ಲಿ ವ್ರತ ಮಾಡಿದ್ದರಿಂದ ಶಿವ ಹಾಗೂ ವಿಷ್ಣುವನ್ನು ವರಿಸಿದರು ಎಂಬ ಕತೆಯೂ ಇದೆ. 
 

Latest Videos
Follow Us:
Download App:
  • android
  • ios