Asianet Suvarna News Asianet Suvarna News

ಜಪ ಮಾಲೆ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷ್ಯ

ದೇವರ ಜಪ ಮಾಡುವಾಗ ಜಪಮಾಲೆ ಬಳಸೋದು ಸಾಮಾನ್ಯ. ಲೆಕ್ಕ ತಪ್ಪದಿರಲಿ ಎಂಬ ಕಾರಣಕ್ಕೆ ಜಪ ಮಾಲೆ ಬಳಸ್ತಾರೆ ಅಂತಾ ಎಲ್ಲರಿಗೂ ತಿಳಿದಿದೆ. ಆದ್ರೆ ಜಪದ ಲೆಕ್ಕಕ್ಕೆ ಮಾತ್ರವಾಗಿದ್ದರೆ ಮಾಲೆಯಲ್ಲಿ ಎಷ್ಟೋ ಮಣಿಗಳು ಇರಬೇಕಿತ್ತಲ್ವಾ? 108 ಮಣಿಯನ್ನು ಮಾತ್ರ ಯಾಕೆ ಹಾಕಿರ್ತಾರೆ? 
 

Significance of chanting a mantra for 108 times and health
Author
Bangalore, First Published Jan 7, 2022, 5:28 PM IST

ಹಿಂದೂ ಧರ್ಮ (Hinduism)ದಲ್ಲಿ ದೇವರ (God) ಆರಾಧನೆಗೆ ಬಹಳ ಮಹತ್ವದ ಸ್ಥಾನವಿದೆ. ಮಂತ್ರ (Mantra )ಜಪಿಸುವ ಮೂಲಕ ದೇವರ ಪ್ರಾರ್ಥನೆ ಮಾಡ್ತೇವೆ. ಬೇರೆ ಬೇರೆ ದೇವರಿಗೆ ಬೇರೆ ಬೇರೆ ಮಂತ್ರಗಳಿವೆ. ಹಾಗೆಯೇ ಬೇರೆ ಬೇರೆ ಸಮಯದಲ್ಲಿ ಮಂತ್ರ ಜಪಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಲಹೆ ನೀಡಲಾಗುತ್ತದೆ. ಪ್ರತಿ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕೆಂದು ಹೇಳಲಾಗುತ್ತದೆ. ಮಂತ್ರ ಜಪಿಸುವವರು,ಮಂತ್ರ ಲೆಕ್ಕ ಹಾಕಲು ಜಪ ಮಾಲೆ ಹಿಡಿದಿರುತ್ತಾರೆ. ನೀವು ಅದನ್ನು ಬಳಸಿರಬಹುದು. ಆದರೆ ಈ ಜಪಮಾಲೆಯಲ್ಲಿ ಯಾಕೆ 108 ಮಣಿಗಳಿರುತ್ತವೆ ಎಂಬುದರ ಬಗ್ಗೆ ಆಲೋಚನೆ ಮಾಡಿದ್ದೀರಾ? ಸಾಮಾನ್ಯವಾಗಿ ಯಾರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಹೇಳಿದಂತೆ 108 ಬಾರಿ ಮಂತ್ರ ಜಪಿಸಿ,ದೇವರ ಪೂಜೆ ಮಾಡ್ತಾರೆ. ಇಂದು ನಾವು ದೇವರ ಜಪ ಮಾಲೆ (jap mala) ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೆವೆ.  

ವಿವಿಧ ದೇವತೆಗಳನ್ನು ಮೆಚ್ಚಿಸಲು ವಿವಿಧ ಜಪ ಮಾಲೆಯನ್ನು  ಬಳಸಲಾಗುತ್ತದೆ. ರುದ್ರಾಕ್ಷಿ, ತುಳಸಿ, ವೈಜಯಂತಿ, ಮುತ್ತುಗಳು ಅಥವಾ ರತ್ನಗಳಿಂದ ಮಾಡಿದ ಮಾಲೆಗಳಿರುತ್ತವೆ. ಮಾಲೆ ಯಾವುದರಿಂದಲೇ ಮಾಡಿರಲಿ, ಪ್ರತಿ ಜಪಮಾಲೆಯಲ್ಲಿ 108 ಮಣಿಗಳಿರುತ್ತವೆ. ಈ 108 ಮಣಿಗಳ ಹೊರತಾಗಿ ಮತ್ತೊಂದು ವಿಭಿನ್ನವಾದ ದೊಡ್ಡ ಮಣಿ ಇರುತ್ತದೆ. ಆ ಮಣಿಯನ್ನು ಜಪ ಮಾಡುವಾಗ ಎಣಿಸುವುದಿಲ್ಲ. ಜಪ ಮಾಲೆಯಲ್ಲಿರುವ ಆ ಮಣಿಗೆ ಸುಮೇರು ಪರ್ವತ ಎಂದು ಕರೆಯಲಾಗುತ್ತದೆ. ಜಪ ಮಾಡುವಾಗ ಆ ಮಣಿಯ ಮುಂದಿನ ಮಣಿಯಿಂದ ಜಪ ಆರಂಭವಾಗುತ್ತದೆ. ಆ ಮಣಿಗಿಂತ ಹಿಂದೆ ಬರುವ ಮಣಿಯನ್ನು ಜಪಿಸಿ,ಜಪ ಮುಗಿಸಲಾಗುತ್ತದೆ. ದೊಡ್ಡ ಮಣಿಯನ್ನು ಹಾದು ಹೋಗುವುದಿಲ್ಲ. ಸುಮೇರು ಪರ್ವತವನ್ನು ವಿಶ್ವದಲ್ಲಿಯೇ ಅತ್ಯಂತ ಎತ್ತರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಪ್ರತಿ ಮಂತ್ರವನ್ನು ಜಪಿಸಿದ ನಂತರ, ಸುಮೇರು ಪರ್ವತವನ್ನು ಭಗವಂತ ಎಂದು ಪರಿಗಣಿಸಿ ಹಣೆಗೆ ಸ್ಪರ್ಶಿಸಲಾಗುತ್ತದೆ.

Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

ಜಪ ಮಾಲೆಯಲ್ಲಿ ಯಾಕೆ 108 ಮಣಿಗಳಿರುತ್ತವೆ ? : ಜಪ ಮಾಲೆಯಲ್ಲಿ 108 ಮಣಿ ಇರಲು ಕಾರಣವೇನು ಎಂಬುದಕ್ಕೆ ಒಂದು ಕಾರಣ ನೀಡಲು ಸಾಧ್ಯವಿಲ್ಲ. ಅದರ ಬಗ್ಗೆ ಅನೇಕ ನಂಬಿಕೆಗಳಿವೆ. ನಂಬಿಕೆಯ ಪ್ರಕಾರ, ನಕ್ಷತ್ರಪುಂಜಗಳ ಸಂಖ್ಯೆ 27 ಮತ್ತು ಪ್ರತಿ ನಕ್ಷತ್ರಪುಂಜವು 4 ಚರಣಗಳನ್ನು ಹೊಂದಿರುತ್ತದೆ. ಆದ್ದರಿಂದ 27 ರಿಂದ 4 ಗುಣಿಸಿದಾಗ 108 ಸಿಗುತ್ತದೆ. ಅದಕ್ಕಾಗಿಯೇ ಮಾಲೆಯಲ್ಲಿ 108 ಮಣಿಗಳನ್ನು ಇಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನೊಂದು ಕಾರಣವೆಂದ್ರೆ, ಬ್ರಹ್ಮಾಂಡವನ್ನು ಹನ್ನೆರಡು ಭಾಗಗಳಾಗಿ ವಿಂಗಡಿಸಲಾಗಿದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ರಾಶಿಚಕ್ರದ ಸಂಖ್ಯೆಯೂ ಹನ್ನೆರಡು ಆಗಿದೆ. ಒಂಭತ್ತು ಗ್ರಹಗಳಿವೆ. ಹನ್ನೆರಡು ಮತ್ತು ಒಂಭತ್ತನ್ನು ಅನ್ನು ಗುಣಿಸಿದಾಗಲೂ 108 ಸಿಗುತ್ತದೆ. 

Zodiacs and Relationship: ರಾಶಿ ಪ್ರಕಾರ, ವಿವಾಹ ಜೀವನ ಸಿಹಿಯಾಗಿರಲು ನೀವೇನು ಮಾಡ್ಬೇಕು..?

ಉಸಿರಾಟದ ಆಧಾರದ ಮೇಲೆ 108 ಮಣಿಯನ್ನು ನಿರ್ಧರಿಸಲಾಗಿದೆ ಎಂಬ ನಂಬಿಕೆಯೂ ಇದೆ. ಸಂಪೂರ್ಣ ಆರೋಗ್ಯವಂತ ವ್ಯಕ್ತಿಯು ಒಂದು ದಿನದಲ್ಲಿ ತೆಗೆದುಕೊಳ್ಳುವ ಉಸಿರಾಟದ ಸಂಖ್ಯೆಗೆ ಇದು ಸಂಬಂಧಿಸಿದೆ. ಒಬ್ಬ ವ್ಯಕ್ತಿಯು 24 ಗಂಟೆಗಳಲ್ಲಿ ಸುಮಾರು 21600 ಬಾರಿ ಉಸಿರಾಡುತ್ತಾನೆ. ದಿನದ 24 ಗಂಟೆಗಳಲ್ಲಿ, 12 ಗಂಟೆಗಳು ದೈನಂದಿನ ಚಟುವಟಿಕೆಗಳಲ್ಲಿ ಕಳೆಯುತ್ತಾರೆ ಮತ್ತು ಉಳಿದ 12 ಗಂಟೆಗಳಲ್ಲಿ ಒಬ್ಬ ವ್ಯಕ್ತಿಯು 10800 ಬಾರಿ ಉಸಿರಾಡುತ್ತಾನೆ. ಈ ಸಮಯದಲ್ಲಿ ದೇವತೆಗಳನ್ನು ಧ್ಯಾನಿಸಬೇಕು. ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿ ಉಸಿರಾಟದಲ್ಲೂ ದೇವರನ್ನು ಧ್ಯಾನಿಸಬೇಕು, ಅಂದರೆ 12 ಗಂಟೆಗಳಲ್ಲಿ 10800 ಬಾರಿ ಧ್ಯಾನಿಸಬೇಕು.  ಆದರೆ ಇದು ಸಾಧ್ಯವಿಲ್ಲ. ಅದಕ್ಕಾಗಿಯೇ 10800 ಬಾರಿ ಉಸಿರಾಟದ ಸಂಖ್ಯೆಯಿಂದ ಕೊನೆಯ ಎರಡು ಸೊನ್ನೆಗಳನ್ನು ತೆಗೆದು ಜಪ ಮಾಡಲು 108 ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.  108 ಬಾರಿ ಪೂರ್ಣ ಮನಸ್ಸಿನಿಂದ ಜಪಿಸಿದರೆ 10,800 ಜಪ ಮಾಡಿದ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. 

Follow Us:
Download App:
  • android
  • ios