Asianet Suvarna News Asianet Suvarna News

ಶುಕ್ರನ ಹಿಮ್ಮುಖ ಚಲನೆ; ಈ ವೇಳೆ ನಿಮ್ಮ ಬದುಕೇ ಬಂಗಾರ..!

ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಹಿಮ್ಮುಖ ಸಂಚಾರ ಆರಂಭಿಸಿದೆ. ಶುಕ್ರನ ಹಿನ್ನಡೆಯಿಂದಾಗಿ ಕೆಲ ರಾಶಿಯವರ ಜೀವನದಲ್ಲಿ ಬದಲಾವಣೆ ಆಗಲಿದೆ. ಅವರ ಆರ್ಥಿಕ ಸ್ಥಿತಿಯು ಹೆಚ್ಚುವುದರ ಜೊತೆಗೆ ಸಾಂಸಾರಿಕ ಜೀವನವೂ ಮಧುರವಾಗಿ ಇರಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.

shukra vakri 2023 venus retrogression in leo impact people life suh
Author
First Published Jul 24, 2023, 10:29 AM IST | Last Updated Jul 24, 2023, 10:29 AM IST

ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಹಿಮ್ಮುಖ ಸಂಚಾರ ಆರಂಭಿಸಿದೆ. ಶುಕ್ರನ ಹಿನ್ನಡೆಯಿಂದಾಗಿ ಕೆಲ ರಾಶಿಯವರ ಜೀವನದಲ್ಲಿ ಬದಲಾವಣೆ ಆಗಲಿದೆ. ಅವರ ಆರ್ಥಿಕ ಸ್ಥಿತಿಯು ಹೆಚ್ಚುವುದರ ಜೊತೆಗೆ ಸಾಂಸಾರಿಕ ಜೀವನವೂ ಮಧುರವಾಗಿ ಇರಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಜ್ಯೋತಿಷ್ಯದಲ್ಲಿ ಗ್ರಹಗಳ ಹಿಮ್ಮೆಟ್ಟುವಿಕೆಯನ್ನು ಸಾಮಾನ್ಯ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಜುಲೈ 23ರಿಂದ ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಹಿಮ್ಮೆಟ್ಟಿದೆ. ಶುಕ್ರವು ಸರಿಸುಮಾರು ಪ್ರತಿ 18 ತಿಂಗಳಿಗೊಮ್ಮೆ ಹಿಮ್ಮೆಟ್ಟುತ್ತದೆ. ಮತ್ತು 40-43 ದಿನಗಳವರೆಗೆ ಇರುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವು ನಮ್ಮ ಜೀವನದಲ್ಲಿ ಪ್ರೀತಿ, ಸೌಂದರ್ಯ ಮತ್ತು ಸಾಮರಸ್ಯದ ಅಂಶವಾಗಿದೆ. ಶುಕ್ರಧ ಹಿಮ್ಮುಖ ಚಲನೆಯಿಂದ ನಮ್ಮ ಜೀವನದಲ್ಲಿ ಈ ಕೆಳಗಿನ ಬದಲಾವಣೆ ಆಗಲಿವೆ.

ಪ್ರೀತಿಯ ಜೀವನದ ಮೇಲೆ ಪರಿಣಾಮ

ಹಿಮ್ಮಖ ಶುಕ್ರವು ಪ್ರೀತಿಯ  ಜೀವನವನ್ನು ಬಲಪಡಿಸಲು ಅದ್ಭುತ ಅವಕಾಶಗಳನ್ನು  ನೀಡುತ್ತದೆ. ಈ ಸಮಯವು ಆತ್ಮವಲೋಕನ ಮತ್ತು ಸಂಬಂಧದಲ್ಲಿ ಮರು ಮೌಲ್ಯ ಮಾಪನವನ್ನು ಪ್ರೋತ್ಸಾಹಿಸುತ್ತದೆ. ಭಾವನಾತ್ಮಕ ಸಂಬಂಧಗಳನ್ನು ಮರು ಮೌಲ್ಯಮಾಪನವನ್ನು ಮಾಡಲು ಮತ್ತು ಸಂತೋಷದಿಂದ ಮತ್ತು ಪ್ರೀತಿಯಲ್ಲಿ ತೃಪ್ತರಾಗಿದ್ದೇವೆಯೇ ಎಂದು ಕಂಡುಹಿಡಿಯಲು ಇದು ನಮ್ಮನ್ನು ಪ್ರೇರೆಪಿಸುತ್ತದೆ.

ಭಾವನೆಗಳ ಪುನರುಜ್ಜೀವನ

ಹಿಮ್ಮೆಟ್ಟುವ ಶುಕ್ರವು ಹಿಂದಿನ ದಿನಗಳನ್ನು ಪುನರುಜ್ಜೀವನಗೊಳಿಸುತ್ತದೆ. ಮತ್ತು ಭಾವನೆಗಳನ್ನು ಮರುಕಳಿಸುತ್ತದೆ. ನಿಮ್ಮ ಹಿಂದಿನ ಸಂಬಂಧದಿಂದ ನೀವು ಬಹಳಷ್ಟನ್ನು ಕಲಿಯಬಹುದು. ಮತ್ತು ಭವಿಷ್ಯಕ್ಕಾಗಿ ಸ್ಪಷ್ಟತೆಯನ್ನು ಪಡೆಯಬಹುದು.

ಅಧಿಕ ಮಾಸ ಆರಂಭ; ಏನು ಮಾಡಬೇಕು? ಏನು ಮಾಡಬಾರದು ?

 

ಸೌಕರ್ಯ ಮತ್ತು ಅನುಕೂಲತೆ 

ಶುಕ್ರವು ಸೌಂದರ್ಯ ಮತ್ತು ಐಷಾರಾಮಿಗೆ ಸಂಬಂಧಿಸಿದೆ. ಶುಕ್ರವು ಹಿಮ್ಮುಖ ಚಲನೆಯು ಜೀವನದಲ್ಲಿ ಉತ್ತಮವಾದ ವಿಷಯಗಳ ಬಯಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ವಸ್ತು ಆಸ್ತಿಯನ್ನು ಮರು ಮೌಲ್ಯಮಾಪನ ಮಾಡುತ್ತೀರಿ ಮತ್ತು ನಿಮ್ಮ ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತೀರಿ. 

ಸಂಪತ್ತಿನ ಸೃಷ್ಟಿ

ಹಿಮ್ಮುಖ ಶುಕ್ರವು ಖರೀದಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಹೊಸ ವಾಹನಗಳನ್ನು ಖರೀದಿಸಬಹುದು. ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ವಿರುದ್ದ ಸಲಹೆ ನೀಡುತ್ತದೆ. ಹೊಸ ವಾಹನ ಖರೀದಿಗೆ ಮೌಲ್ಯಮಾಪನ ಮಾಡಲು ಎಚ್ಚರಿಸುತ್ತದೆ. 

ಜೀವನಶೈಲಿ ಬದಲಾವಣೆ

ಶುಕ್ರವು ದೈನಂದಿನ ದಿನಚರಿಗಳು, ಅಭ್ಯಾಸಗಳೂ ಮತ್ತು ಜೀವನಶೈಲಿಯ ಆಯ್ಕೆಗಳ ಮರು ಮೌಲ್ಯಮಾಪನವನ್ನು ಪ್ರೋತ್ಸಾಹಿಸುತ್ತದೆ. ನಿಮ್ಮ ಆಶಯಗಳು ಮತ್ತು ಆಕಾಂಕ್ಷೆಗಗಳಿಗೆ ಅನುಗುಣವಾಗಿ ಧನಾತ್ಮಕ ಬದಲಾವಣೆಗಳನ್ನು ಮಾಡಲು ಇದು ಅವಕಾಶಗಳನ್ನು ಒದಗಿಸುತ್ತದೆ. ಹಿಮ್ಮೆಟ್ಟುವ ಶುಕ್ರನ ಶಕ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಉತ್ತಮ ಜೀವನಶೈಲಿಯನ್ನು ಅಭಿವೃದ್ದಿ ಪಡಿಸಬಹುದು.

ಆರೋಗ್ಯಕರ ಆಹಾರವನ್ನು ಸೇವಿಸುವುದು

ಶುಕ್ರನ ಸಂಕ್ರಮಣದ ಸಮಯದಲ್ಲಿ, ಶುಕ್ರಗ್ರಹದ ಶಕ್ತಿಯು ನಿಮ್ಮ ಆಹಾರ ಪದ್ಧತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಆಹಾರದಲ್ಲಿ ಸಾವಯುವ ಅಥವಾ ಸಸ್ಯ ಆಧಾರಿತ ಆಹಾರವನ್ನು ನೀವು ಸೇರಿಸಬಹುದು. ಶುಕ್ರನ ಹಿಮ್ಮುಖ ಚಲನೆಯು ಸ್ವಯಂ ಕಾಳಜಿ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಲು ನಿಮ್ಮನ್ನು ಪ್ರೇರೇಪಿಸುತ್ತದೆ.

ಅಧಿಕ ಮಾಸ ಆರಂಭ; ಏನು ಮಾಡಬೇಕು? ಏನು ಮಾಡಬಾರದು ?

ವ್ಯವಹಾರದಲ್ಲಿ ಬೆಳವಣಿಗೆ 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವು ಸೌಂದರ್ಯ, ಸೃಜನಶೀಲತೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಶುಕ್ರವು ಹಿಮ್ಮೆಟ್ಟುವಿಕೆಯ ಸಮಯದಲ್ಲಿ ಈ ಗುಣಗಳು ಹೆಚ್ಚಾಗಲಿವೆ. ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕಲು ಸಹ ಪ್ರೇರೇಪಿಸುತ್ತದೆ. 

ಕಲಾತ್ಮಕ ಅಭಿವ್ಯಕ್ತಿ

ಈ ಅವಧಿಯಲ್ಲಿ ಚಿತ್ರ ಕಲೆ, ಬರವಣಿಗೆ, ಫ್ಯಾಷನ್‌ ವಿನ್ಯಾಸ ಅಥವಾ ಮನೆಯ ಅಲಂಕಾರದಂತಹ ಸೃಜನಶೀಲ ಕಲೆಗಳಲ್ಲಿ ತೊಡಗಿಕೊಳ್ಳಲು ಉತ್ತಮ ಸಮಯ.

Latest Videos
Follow Us:
Download App:
  • android
  • ios