Shukra Gochar 2023: ಈ ರಾಶಿಚಕ್ರಗಳಿಗೆ ಶುಕ್ರ ಸಂಚಾರದಿಂದ ಗರಿಷ್ಠ ಪ್ರಯೋಜನ

ಸೂರ್ಯನು ಕುಂಭಕ್ಕೆ ತೆರಳಿದ ಎರಡೇ ದಿನಕ್ಕೆ ಶುಕ್ರ ಗ್ರಹವು ಮೀನ ರಾಶಿಗೆ ಚಲಿಸಲಿದೆ. ಇದರಿಂದ 5 ರಾಶಿಗಳು ಲಾಭದ ಮುಖ ನೋಡಲಿವೆ. ಅವರ ಜೀವನದಲ್ಲಿ ಪ್ರಗತಿಯ ಪಥ ತೆರೆದುಕೊಳ್ಳುತ್ತದೆ..

Shukra Gochar 2023 Soon Venus will transit in Pisces these zodiacs will get bumper benefits skr

ಇದೀಗ ತಾನೇ ಬುಧ ಗ್ರಹ ತನ್ನ ರಾಶಿ ಬದಲಿಸಿದೆ. ಫೆಬ್ರವರಿ 13ರಂದು ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದಾಗಿ ಎರಡೇ ದಿನಕ್ಕೆ ಅಂದರೆ ಫೆಬ್ರವರಿ 15ರಂದು, ಶುಕ್ರವು ಮೀನ ರಾಶಿಯಲ್ಲಿ ಸಾಗುತ್ತದೆ. ಶುಕ್ರವನ್ನು 'ಪ್ಲಾನೆಟ್ ಆಫ್ ಲವ್' ಎನ್ನಲಾಗುತ್ತದೆ.  ಶುಕ್ರನು ಅದೃಷ್ಟದ ಅಧಿಪತಿ. ವೈದಿಕ ಜ್ಯೋತಿಷ್ಯದಲ್ಲಿ ಶುಕ್ರವು ಭೌತಿಕ ಮತ್ತು ಐಷಾರಾಮಿತನದ ಎಲ್ಲದರೊಂದಿಗೆ ಸಂಬಂಧ ಹೊಂದಿದೆ. ಶುಕ್ರವು ನಿಮ್ಮ ಕುಂಡಲಿಯಲ್ಲಿ ನಿಮ್ಮ ಹೃದಯದ ಪ್ರಿಸ್ಮ್ ಅನ್ನು ಬೆಳಗಿಸುತ್ತದೆ. ಶುಕ್ರ ಗ್ರಹವು ಜ್ಯೋತಿಷ್ಯದಲ್ಲಿ ಪ್ರೀತಿ, ಪ್ರಣಯ, ಐಶಾರಾಮಿತನ, ವೈಭೋಗದ ಅಂಶವಾಗಿದೆ.  ಶುಕ್ರದ ಈ ಮೀನ ಸಂಕ್ರಮಣದಿಂದ ನಾಲ್ಕು ರಾಶಿಗಳ ಬದುಕಲ್ಲಿ ಬೆಳಕಿನ ಆಶಾಕಿರಣ ಕಾಣಿಸಲಿದೆ. ಪ್ರೇಮಿಗಳ ದಿನದ ಮರುದಿನವೇ ಈ ಶುಭ ಸಂಚಾರ ನಡೆಯುತ್ತಿರುವುದು ಕೂಡಾ ಉತ್ತಮವಾಗಿದೆ.

ಈ ಬಾರಿ ಶುಕ್ರನು ಫೆಬ್ರವರಿ 15 ರಂದು 19:43 ಕ್ಕೆ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.  ಶುಕ್ರ ಸಂಚಾರದಿಂದಾಗಿ ಯಾವ ರಾಶಿಗಳು ಪ್ರೀತಿ, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ತಿಳಿಯೋಣ. 

ಮೇಷ ರಾಶಿ (Aries)
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇಷ ರಾಶಿಯ ಜನರು ಮೀನ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಲಾಭ ಪಡೆಯಬಹುದು. ಮೇಷ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುವುದು, ವ್ಯವಹಾರದಲ್ಲಿ ಪರಿಸ್ಥಿತಿ ಸುಧಾರಿಸುವುದು, ಕಠಿಣ ಪರಿಶ್ರಮ ತುಸು ಹೆಚ್ಚಾದರೂ ಯಶಸ್ಸು ಖಂಡಿತ ಸಿಗುತ್ತದೆ. ವಾಹನಗಳು ಸಂತೋಷವನ್ನು ಪಡೆಯಬಹುದು, ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳು ಸಹ ಪಡೆಯಬಹುದು. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ ಮತ್ತು ವೈವಾಹಿಕ ಜೀವನವು ಸಂತೋಷದಿಂದ ಇರುತ್ತದೆ.

ಬಯಸಿದವರೊಂದಿಗೆ ವಿವಾಹಕ್ಕಾಗಿ MahaShivratri 2023ರಂದು ಈ ರೀತಿ ಮಾಡಿ..

ವೃಷಭ ರಾಶಿ(Taurus)
ವೃಷಭ ರಾಶಿಯವರ ಜೀವನದ ಮೇಲೆ ಶುಕ್ರ ಸಂಕ್ರಮಣವು ಶುಭ ಪರಿಣಾಮವನ್ನು ಬೀರುತ್ತದೆ. ಈ ಗ್ರಹಗಳ ಸಂಚಾರದಿಂದ ಆದಾಯವು ಹೆಚ್ಚಾಗುತ್ತದೆ ಮತ್ತು ಬರುವ ಎಲ್ಲ ಅಡೆತಡೆಗಳು ಶೀಘ್ರದಲ್ಲೇ ನಿವಾರಣೆಯಾಗುತ್ತವೆ. ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಸಾಧ್ಯತೆಗಳಿವೆ ಮತ್ತು ನಿಮ್ಮ ಪಾಲುದಾರ ಅಥವಾ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಈ ಅವಧಿಯಲ್ಲಿ ದುಡಿಯುವ ಜನರು ಆರ್ಥಿಕ ಪ್ರಗತಿಯನ್ನು ಪಡೆಯಬಹುದು.

ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರು ಮೀನ ರಾಶಿಯಲ್ಲಿ ಶುಕ್ರ ಸಂಚಾರದಿಂದ ವಿಶೇಷ ಲಾಭವನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಉದ್ಯೋಗವನ್ನು ಬದಲಾಯಿಸಲು ಉತ್ತಮ ಅವಕಾಶವಿರುತ್ತದೆ. ಈ ಸಮಯದಲ್ಲಿ ಕುಟುಂಬ ಸದಸ್ಯರು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ ಮತ್ತು ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ.

ಸಿಂಹ ರಾಶಿ(Leo)
ಶುಕ್ರ ಸಂಕ್ರಮಣದ ಶುಭ ಪರಿಣಾಮವು ಸಿಂಹ ರಾಶಿಯ ಜನರ ಮೇಲೂ ಇರುತ್ತದೆ. ಈ ಅವಧಿಯಲ್ಲಿ, ವಿತ್ತೀಯ ಲಾಭದ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ಇದರೊಂದಿಗೆ ಈ ಹಿಂದೆ ಮಾಡಿದ ಹೂಡಿಕೆಯ ಲಾಭವೂ ಸ್ಥಳೀಯರಿಗೆ ಸಿಗಲಿದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಲಾಭಗಳನ್ನು ಪಡೆಯುವ ಉತ್ತಮ ಚಿಹ್ನೆಗಳನ್ನು ಪಡೆಯುತ್ತಿದ್ದಾರೆ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.

ಕುಂಭ ರಾಶಿಯಲ್ಲಿ ಸೂರ್ಯನ ಸಂಕ್ರಮಣ, ಈ 4 ರಾಶಿಯವರಿಗೆ ಕಷ್ಟಗಳು ಹೆಚ್ಚಾಗಬಹುದು!

ಕನ್ಯಾ ರಾಶಿ(Virgo)
ಶುಕ್ರನ ಸಂಕ್ರಮಣವು ಕನ್ಯಾ ರಾಶಿಯ ಸ್ಥಳೀಯರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಅವಧಿಯಲ್ಲಿ ಸಂಗಾತಿ ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶವಿರುತ್ತದೆ ಮತ್ತು ಸಂಗಾತಿಯೊಂದಿಗೆ ನಿಕಟತೆ ಹೆಚ್ಚಾಗುವ ಸೂಚನೆಗಳಿವೆ. ಸ್ಥಳೀಯರು ಕೆಲಸದ ಕ್ಷೇತ್ರದಲ್ಲಿ ಸಕಾರಾತ್ಮಕ ಪರಿಣಾಮವನ್ನು ಸಹ ನೋಡುತ್ತಾರೆ. ಇದರೊಂದಿಗೆ ಪ್ರಚಾರದ ಅವಕಾಶಗಳೂ ಸೃಷ್ಟಿಯಾಗುತ್ತಿವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios